Sunday, December 7, 2008

ಆಫೀಸಿಗೆ ಹೊರಟಾಗ...

ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.

ಆಫೀಸಿಗೆ ಹೊರಟಾಗ...

ಮುಂಜಾನೆ ಏಳೂವರೆ ಆಗೋಷ್ಟೊತ್ತಿನಲ್ಲಿ ಸ್ನಾನ ಮುಗಿದಿರುತ್ತೆ. ತಲೆ ಒರೆಸಿಕೊಳ್ಳುತ್ತಾ ಅವಳ ಪಾಕಶಾಲೆಗೆ ಹೋಗಿ ಅವಳಿಗೊಂದಿಷ್ಟು ತಲೆಯಲ್ಲಿನ ನೀರು ಸಿಡಿಸಿ ಬೈಸಿಕೊಳ್ಳುತ್ತಿರುತ್ತೇನೆ. ಹೆಚ್ಚಿಟ್ಟ ತರಕಾರ್‍ಇಯಲ್ಲಿ ಒಂದು ಗಜ್ಜರಿಯೊ ಸೌತೆಕಾಯಿಯೊ ಎತ್ತಲು ಕೈ ಹಾಕಿ ಸೌಟಿನಲ್ಲಿ ಎಟು ತಿಂದು ಹೊರಗೆ ಬಂದು, ದೇವರಿಗೊಂದು ನಮಸ್ಕಾರ ಹೇಳಿ, ಇಂಥ ನೆಚ್ಚಿನ ಹುಡುಗಿ ಜೊತೆ ಮಾಡಿದ್ದಕ್ಕೆ ಥ್ಯಾಂಕ್ಸ್ ಅಂದು. ಆಫೀಸಿನಲ್ಲಿ ತಲೆ ತಿನ್ನುತ್ತಿರುವ ಕೋಡೊಂದು ಹೇಗಾದ್ರೂ ಮಾಡಿ ವರ್ಕ್ ಆಗೋ ಹಾಗೆ ಮಾಡಪ್ಪ ಅಂತಾನೊ, ಇಲ್ಲ ವೀಕೆಂಡಿಗೆ ಕೆಲಸ ಬರದಿರುವ ಹಾಗೆ ಮಾಡೊ ಅಂತಾನೊ ಏನೊ ಒಂದು ಬೇಡಿಕೆ ಸಲ್ಲಿಸಿ ಡ್ರೆಸ್ ಹಾಕಿಕೊಳ್ಳಲು ಬೆಡ್ ರೂಂಗೆ ಹೋಗುತ್ತ ಈ ವೀಕೆಂಡು ಕೆಲ್ಸ ಇದೆ ರಜೆ ಇಲ್ಲಾ ಅಂತ ಡಂಗುರ ಸಾರುತ್ತೇನೆ. "ಯಾಕ್ರೀ ಶಾಪಿಂಗ್ ಹೊಗೋಣ ಅಂತಾ ಕಾಡ್ತೀನಿ ಅಂತ ಆಫೀಸಿಗೆ ಹೊಗ್ತಿದಿರೊ ಹೇಗೆ" ಅಂತಾಳೆ, ಇಲ್ಲ ನಿಜ ಪ್ರೊಜೆಕ್ಟ್ ರಿಲೀಸು ಇದೆ ಅಂದ್ರೆ. ಏನ್ರಿ ಅದು ನಿಮ್ಮ ಪ್ರೊಜೆಕ್ಟ ಹೆಸ್ರು "ಬುಲ್ ಶಿಟ್ಟಾ" ಅಂತಾಳೆ. "ಲೇ ಇಂಗ್ಲೆಂಡಿನ ಮಹರಾಣಿ ನಿನ್ನ ಇಂಗ್ಲೀಶೋ ನೀನೊ ಎಲ್ಲಾ ಸರಿಯಾಗಿದೆ" ಅಂದ್ರೆ "ಮತ್ತಿನ್ನೇನ್ರಿ ಯಾವಾಗ್ಲೂ ಬುಲ್ ಶಿಟ್ ಪ್ರೊಜೆಕ್ಟ ಬುಲ್ ಶಿಟ್ ಪ್ರೊಜೆಕ್ಟ್ ಅಂತಿರ್ತೀರ ಅದಕ್ಕೆ ಅದೇ ಹೆಸ್ರೇನೊ ಅನ್ಕೊಂಡೆ" ಅಂತಾಳೆ. ಅದೂ ಕರೆಕ್ಟೆ ಬಿಡು ಅಂದು. ಹಾಸಿಗೆ ಮೇಲೆ ಅವಳು ತಾಸುಗಟ್ಟಲೆ ತಲೆ ಕೆಡಿಸಿಕೊಂಡು ತನಗಿಷ್ಟವಾದೊಂದು ಡ್ರೆಸ್ಸ್ ಆರಿಸಿ ತೆಗೆದಿಟ್ಟಿರುತ್ತಾಳೆ, ಅದರಲ್ಲಿ ತೂರಿಕೊಳ್ಳುತ್ತೇನೆ.

ಡಿಯೋಡ್ರಂಟ ಹಾಕಿಕೊಳ್ಳುತ್ತಿದ್ದಂತೇನೇ ಅದರ ಸುವಾಸನೆಗೆ "ಪರಿಮಳ" ನೆನಪಾಗಿ ಬಿಡ್ತಾರೆ, ಇವಳು ಸೇರಿಕೊಂಡಿರುವ ಸೊಷಿಯಲ್ ಕ್ಲಬ್ ಚೇರಮನ್ ಅವ್ರು, ಹೆಸ್ರೇನೊ ಬೇರೆ ಇದೆ, ಆದ್ರೆ ಅವರು ಹಾಕಿಕೊಳ್ಳೊ ಆ ಘಮ್ ಅಂತಿರೋ ಸೆಂಟ್ ವಾಸನೆ ನೋಡಿ "ಪರಿಮಳ" ಅಂತಾ ನಾವಿಟ್ಟಿರೊ ಹೆಸ್ರು, ಸೆಂಟು ಬಾಟಲಿನಲ್ಲೆ ಮುಳುಗಿ ಒಂದು ಡುಮುಕಿ ಹೊಡೆದು ಬಂದಿರ್ತಾರೆ ಅಂತ ಕಾಣುತ್ತೆ, ಇವ್ಳೊ ಮನೆಗೆ ಅವ್ರು ಬಂದಾಗ ಅದು ಇದು ತೊರಿಸ್ತೀನಿ ಅಂತ ಮನೆ ತುಂಬಾ ಸುತ್ತಾಡಿಸಿ ರೂಂ ಫ್ರೆಶ್ನರ್ ಖರ್ಚು ಉಳಿಸಿರ್ತಾಳೇ. ಲೇ ಪರಿಮಳ ಯಾವಾಗ ಬರ್ತಾರೇ ಅಂದ್ರೆ ಇನ್ನೇನು ಮುಂದಿನ ವಾರ ಕರೆಯೊಣಾ ಅಂತಿದೀನಿ ಅತ್ತೆ ಬರ್ತಿದಾರಲ್ಲ ಮನೆ ಘಮ್ ಅಂದ್ರೆ ಅವ್ರಿಗೂ ಖುಶಿಯಾಗುತ್ತೆ ಅಂದ್ಲು, ಒಳ್ಳೆ ಪ್ಲಾನೇ ಹಾಕಿರ್ತಾಳೆ ಅಮ್ಮನ್ನ ಇಂಪ್ರೆಸ್ ಮಾಡಿ ಅದೇ ಟೈಮಿನಲ್ಲಿ "ಲೇ ಕಂಜ್ಯೂಸಾ ಎರಡು ಸೀರೆ ಕೊಡ್ಸೊ ಅವ್ಳಿಗೆ" ಅಂತ ಬೈಸಿ ನಾಲ್ಕು ಸೀರೆ ತುಗೊಂಡು ನನ್ನ ಕ್ರೆಡಿಟ್ ಕಾರ್ಡ ಲಿಮಿಟ್ಟು ಮೀರಿಸಿ ಬಿಟ್ಟಿರ್ತಾಳೆ.

ಅಂತೂ ರೆಡಿಯಾಗಿ ಡೈನಿಂಗ್ ಟೇಬಲ್ಲಿಗೆ ಬಂದ್ರೆ, ತಿಂದು ಸ್ವಲ್ಪ ದಪ್ಪ ಆಗ್ಲಿ ಅಂತಾ ಅವಳು ನಾಲ್ಕು ಜನರಿಗಾಗುವಷ್ಟು ಹಾಕಿಟ್ಟ ಟಿಫಿನ್ನು ಅದೇ ಗಡಿಬಿಡಿಯಲ್ಲಿ ಹಾಗೆ ಹೀಗೆ ಮಾಡಿ ಮುಗಿಸಿ, ಇನ್ನೇನು ಮಧ್ಯಾನ್ಹ ಲಂಚ್ ಬೇಡವೇ ಬೇಡ ಅನ್ನಿಸಿದ್ರೂ, ಅದೊ ಅಲ್ಲಿ ಲಂಚ್ ಬಾಕ್ಸ ರೆಡಿ ಮಾಡಿರ್ತಾಳೆ. ನಾನೇನು ತಿಂದು ಹೃತಿಕ್ ರೋಷನ್ನು (ಅವಳ ಫೆವರಿಟ್ಟು!) ಆಗಲ್ಲಾ ಕಣೇ ಅಂದ್ರೂ ಅವ್ಳು ಕೇಳಲ್ಲ. ಮಾತಿಲ್ಲದೆ ಬಾಕ್ಸ್ ಬ್ಯಾಗಿಗೆ ಹಾಕಿಕೊಳ್ಳುತ್ತೇನೆ. ಹೊರಡಲು ಶೂ ಹಾಕಿಕೊಳ್ಳ ಹೋದ್ರೆ ಸಾಕ್ಸು ಸಿಗಲ್ಲ, "ಲೇ ತಗಡು ಸಾಕ್ಸ ಎಲ್ಲೇ" ಅಂತ ಚೀರುತ್ತೇನೆ, ಸಿಟ್ಟು ಎನ್ ಬಂದಿರಲ್ಲ, ತಗಡು ಅನ್ನೋದು ಅತೀ ಪ್ರೀತಿ ಬಂದಾಗ, ಯಾವಾಗ್ಲೊ ಚಿನ್ನಾ ಅಂದ್ರೆ ಹಳೆಯದಾಯಿತ್ರಿ ಅಂದ್ಲು, ಪ್ಲಾಟಿನಮ್ಮು ಅನ್ಲಾ ಅಂದ್ರೆ ಜಾಸ್ತಿ ಆಯ್ತು ಅಂದದ್ದಕ್ಕೆ ಪ್ರೀತಿಯಿಂದ ತಗಡು ಅಂತೀನಿ. ಸಾಕ್ಸು ಅಲ್ಲೇ ಬಿದ್ದಿರತ್ತೆ ನಂಗೆ ಮಾತ್ರ ಕಾಣಲ್ಲ ಬಂದು ಅವ್ಳು ಹುಡುಕಿ ಕೊಟ್ರೇ ಸಿಗ್ಬೇಕು.

ಅಪ್ಪಿ ಪಪ್ಪಿಯೊಂದು ಕೊಟ್ಟು ಹೊರಟರೆ, ಬಾಗಿಲಿ ಒರಗಿ ನಿಂತುಕೊಂಡು ನಾ ಬರುವುದು ರಾತ್ರಿಯೆಂದು ಗೊತ್ತಿದ್ರೂ "ಸಂಜೆ ಬೇಗ ಬನ್ರಿ" ಅಂತಿರುವ ಅವಳಿಗೆ ಕೈ ಮಾಡಿ ಬೈಕಿನ ಗೇರು ಹಾಕುತ್ತಿದ್ದರೆ ಕಿಟಕಿ ಸಂದಿಯಲ್ಲಿ ಪಕ್ಕದ ಮನೆ ಪದ್ದು ನೊಡುತ್ತಿರುತ್ತಾಳೆ. ಆಫೀಸಿನಲ್ಲಿ ಕೆಲಸ ಬಹಳ ಇದೆ, ಈ ಟ್ರಾಫಿಕ್ಕು ಬೇರೆ ಮತ್ತೊಂದಿನಾ ಸಿಗ್ನಲ್ಲಿನಲ್ಲಿ ಸಿಗುವ ಸುಂದರಿಯರೊಂದಿಗೆ ಭೇಟಿಯಾಗ್ತೇನೆ, ಬೈ ಬೈ...


ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

The PDF document can be found at http://www.telprabhu.com/officege-horataaga.pdf
you might as well like this
http://www.telprabhu.com/heegomdu-samje.pdf
http://www.telprabhu.com/nasukige.pdf

20 comments:

Anonymous said...

hi

nimma ee articles nange thumba ishta aythu.. naanu kooda ondu middle class family ya sose... kelavondu article nanna gandana nature holuthe....adu nange thumba ishta aythu.... odi thumba kushi aythu..... nammadu en love marriage alla adru........ navibru made for each other... thank you to reminding people that in day to day life what and all small happiness we are loosing.. but am really lucky how was my husband on first day we got married now also he is same..... and i love ur articles....nice...... From, Hema-Hemanth

Prabhuraj Moogi said...

Tamma comment odi kushiyaytu...I just wish, God keep you couple happy forever..
I am middle class family guy, still bachelor and just writing imaginations about my life with a dream girl... Keep reading
I hope you would like to read www.telprabhu.com/manasi.html ...

Anonymous said...

Chennagi barediddira.. nanu santhosh.. samaya sikkaga nan blog ge bheti kodi

Prabhuraj Moogi said...

Thank you! I visited your blog.. its very nice... keep visiting...

Nirgunjoshi said...

Neevu bachelor adru cheenagi imagination madidira...keep it up...nimma article resembles my life...Josh

Prabhuraj Moogi said...

May be bachelor aagirodrimdaanE ashTu chennagi imagine maaDteeni ansatte yaakaMdre reality is not so good!!! but you are very lucky to lead the life resembling like that.. be happy forever... if my imaginations added some more happy moments in you life then idu baredaddoo sarthaka aagatte!!

Anonymous said...

Prabhu.., tumba kushi aythu nim muuru articles odi.. kannadalli barediro ee lekhanagalu manasinalli ondu tara mudha nedutte... ennenu swalpa dinadalli maduve agtaa eddene nanu.. nanu matte nan hendthi (tagadu) este chennagi erbeku anta anisohaage ede ee kathegalu...

Kannadalli estu chennagi bardiddera... Continue maade.. kannada na aadu basheyanthe bareyoudu tumba sogasaagirutte odhokke... Continue maade.. kathe imagination adru parvagilla...! Aaa ha... ee rethe atmosphere India dalle alde bere kade sigolla..

Nanu India ge vapas barodakke ennodu spoorthi siktu ansutte..!!

Prabhuraj Moogi said...

Tumbaa thanks ashTu chennagi comment bediddeeralla adakke... maduve aaguvariddeeremdu heLidiralla, nimmibbara jeevan ee lekhanadlligiMta chenngiralemDU haarisuttEne... India ge baroke innoMdu spoorthi siktu amdaddu keLi bahaLa kushiyaaytu... matte matte bheTi koDtaa iri..

ಚಿತ್ರಾ ಸಂತೋಷ್ said...

ಮಸ್ತ್..ಮಸ್ತ್..! ಸೌಟಿನಲ್ಲಿ ಏಟು ತಿಂತೀರಾ! ಹಿಹಿಹಿ..
-ಚಿತ್ರಾ

Prabhuraj Moogi said...

ಸೌಟಿನಲ್ಲಿ ಏಟು ಕೊಡಲಿಕ್ಕೆ ಇನ್ನೂ ಲೈಫ್ನಲ್ಲಿ ಯಾರೂ ಬಂದಿಲ್ಲ, ಹುಚ್ಚು ಆಸೆ ಅಷ್ಟೇ... ಕಾಮೆಂಟ್ ಬರೆದದ್ದಕ್ಕೆ ಧನ್ಯವಾದ..

Anonymous said...

sooooooooooooooooper maraya.... kalpane meeri barididiya.. ninge inta hentine ssigle anta asshistini.... chennagi baritiya... keep it up...

Prabhuraj Moogi said...

tumbaa thanks... kalpanege elle (Limit) annodu illa... eshTu bekaadroo kaplisikollabahudu.. adare vastava limited.... heMDti haage siktaaLo ilvo gottilla, idanna odi avaLu ondu dinvaaadroo nannoMdige heegidre ashte saaku.. ade limittu, jaasti aase itkoLLOke aagallaa...

Arun said...

Just install Add-Kannada widget button on your blog. Then u can easily submit your pages to all top Kannada Social bookmarking and networking sites.

Kannada bookmarking and social networking sites gives more visitors and great traffic to your blog.

Click here for Install Add-Kannada widget

Prabhuraj Moogi said...

To Ram:
Thanks for the Information, Will check it out...

Anonymous said...

Hi

Nimma Lekhana nanage tumba hidisthu. Kalpaneyalli nimmadu etthida kai.All the best for your future

Prabhuraj Moogi said...

Anonymous ಅವರಿಗೆ
ಏನೊ ಸರ್, ಸ್ವಲ್ಪ ಹುಚ್ಚು ಕಲ್ಪನೆಗಳು... ಕನ್ನಡಕ್ಕಾಗಿ ಕಲ್ಪನೆಗಳಲ್ಲಿ ಕೈಎತ್ತಿದ್ದೇನೆ... ಕಲ್ಪವೃಕ್ಷವಾಗುತ್ತೊ ಇಲ್ಲಾ ಸತ್ವಪರೀಕ್ಷೆಯಾಗುತ್ತೂ ಯಾರಿಗೆ ಗೊತ್ತು... ನಿಮ್ಮ ಹಾರೈಕೆಗೆ ಧನ್ಯವಾದಗಳು...

Anonymous said...

Tumba hotthu ki etthabedi ki noyutthe ;-)

Prabhuraj Moogi said...

Anonymous ಅವರಿಗೆ
:) ಹ ಹ ಹ... ಮುಂದೆ ಗನ್ ಹಿಡಿದು ಹ್ಯಾಂಡ್ಸ ಅಪ್ ಅಂತ ನನ್ನಾk ನಿಂತಿದ್ದಾಳೆ ಏನು ಮಾಡಲಿ!

Deepa said...

Prabhuavare nimmak bagge ishtond baritheeralla avara hesru yake bareethilla(nimma kalpane hesaru).Nimma lekhanagalanna odidare tumba tarle & tamashi vyakthi anta ansatthe nimma close friends jothege mathra !!You are revealing your qualities in your articles because we reflect the same in our work as the way we are. Nan hesru anonymous alla Deepa(idu kalpaneya hesre);-)

Prabhuraj Moogi said...

@Deepa
ಹೆಸರು, ಅದು ಯಾಕೊ ನನಗೆ ಹೀಗೆ ಅಂತ ಒಂದು ಹೆಸರು ಆ ಕಲ್ಪನೆಗೆ ಇಡಲೇಬೇಕು ಅನ್ನಿಸಿಲ್ಲ, ಹಿಂದೆ "ಮಾನಸಿ" ಅಂತ ಪುಟ್ಟ ಪುಟ್ಟ ಕವನಗಳ ಸಾಲು ಬರೆಯುತ್ತಿದ್ದೆ, ಅದೇ ಮಾನಸಿಯಾ ಇದು ಅಂತ ಕೇಳುತ್ತಾರೆ ಕೆಲವರು, ಅದಕ್ಕೂ ನನ್ನ ಹತ್ತಿರ ಉತ್ತರವಿಲ್ಲ...ಏನೊ ಸಧ್ಯಕ್ಕಂತೂ ಹೆಸರೇ ಇಲ್ಲದ ಹೆಂಗಳೆ ನನ್ನಾk.

ಅತ್ಯಂತ ಕ್ಲೋಜ್ ಗೆಳೆಯರು ಇರುವುದು ಕೆಲವರೇ, ಅವರೊಂದಿಗೆ ಸ್ವಲ್ಪ ತಮಾಷೆ, ಹಾಸ್ಯ ಚಟಾಕಿ ಮಾಡುತ್ತಿರುತ್ತೇನೆ. ಅದು ಬಿಟ್ಟರೆ ತುಂಬಾ ಅಪರಿಚಿತರು ಮತ್ತೆ ಅನ್ಯರೊಂದಿಗೆ ಬಲು ಸಂಕೋಚದ ವ್ಯಕ್ತಿ, ರಿಜರ್ವಡ ಅಂತಾರಲ್ಲ ಹಾಗೆ. ನನ್ನ ವ್ಯಕ್ತಿತ್ವದ ಕೆಲ ಗುಣ ಅವಗುಣಗಳು ಲೇಖನದಲ್ಲಿ ಇಣುಕಿ ಹೋಗುತ್ತವೆ, ಆದರೂ ನನ್ನ ಲೇಖನಗಳಲ್ಲಿನ "ನಾನು" ಅನ್ನೋ ಕ್ಯಾರಕ್ಟರ ಅಷ್ಟು ಒಳ್ಳೆಯವ ನಾನಲ್ಲ, ಹಾಗೆ ಇರುವ ಬಯಕೆ ಮಾತ್ರ ನನ್ನದು ಮತ್ತು ಆ ಪ್ರಯತ್ನ ನಿರಂತರ.