Saturday, February 28, 2009

ಹಸಿರು ಕಾನನದೂರಿನಿಂದ...

ಈ ಲೇಖನದಲ್ಲಿ ಬರುವ ಕೆಲವು ಪಾತ್ರಗಳು ಕಾಲ್ಪನಿಕ, ಕೆಲವು ಮಾತ್ರ ನಿಜ, ಕಾಲ್ಪನಿಕ ಪಾತ್ರಗಳಲ್ಲಿ ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.

"ರೀ ಇಲ್ಲಿ ನೋಡ್ರಿ ಕಂಪನಿಗಳೂ ಕೆಲಸಗಾರರಿಗೆ ಲವ್ ಲೆಟರ ಕೊಡ್ತಿವೆ, ಪಿಂಕ್ ಸ್ಲಿಪ್ ಅಂತೆ" ಅಂತ ಚೀರಿದ್ಲು, ಕುಡಿಯುತ್ತಿದ್ದ ನೀರು ಗಂಟಲಿನಲ್ಲೇ ಸಿಕ್ಕಿಕೊಂಡು ಕೆಮ್ಮುತ್ತ ಹೊರಗೋಡಿ ಬಂದೆ... "ಲೇ ಎನೇ ಹೇಳ್ತಿದೀಯಾ" ಅಂದ್ರೆ "ಅದೇ ಪಿಂಕ್ ಚಡ್ಡಿ ಅಂತ ಇಷ್ಟು ದಿನಾ ಅದೇನೊ ಲವರ್ಸ್ ಡೇ ವಿರುಧ್ಧ ಮಾಡಿದರಲ್ಲ ಹಾಗೆ ಪಿಂಕ್ ಸ್ಲಿಪ್ ಅಂತ ಎನೋ ಮಾಡ್ತಿದಾರ್ರೀ" ಅಂದ್ಲು. "ಹೂಂ ಪ್ರೀತಿಯಿಂದ ಮನೆಗೆ ಹೋಗಿ ಅಂತ ಹೇಳ್ತಿದಾರೆ" ಅಂದೆ "ಒಹ್ ರಜೇನಾ, ನಿಮಗೂ ಸಿಗುತ್ತಾ" ಅಂದ್ಲು "ಹೂಂ ಅದೊಂಥರಾ ಪರಮನಂಟ್ ರಜೆ" ಅಂದೆ. ಕೈಲಿದ್ದ ಪತ್ರಿಕೆ ಅಲ್ಲೇ ಬೀಸಾಡಿ ಹತ್ತಿರ ಬಂದು ಕೂತು "ಎನ್ರೀ ಇದು, ನನಗೊಂದೂ ಅರ್ಥ ಆಗ್ತಿಲ್ಲ" ಅಂದ್ಲು. "ಎನ್ ಮಾಡೋದು ಕೆಲ್ಸ ಇಲ್ಲ ಮನೆಗೆ ಹೊಗಿ ಅಂತ ಹೊರದಬ್ಬತಾ ಇದಾರೆ, ಅದೇ ಪಿಂಕ ಸ್ಲಿಪ್ಪು ಅಂದೆ" "ಹಾಳಾದೋರಿಗೆ, ಕಲರು ಪಿಂಕೇ ಬೇಕಿತ್ತಾ, ರೆಡ್ಡು ಸ್ಲಿಪ್ಪು ಅನ್ನೊಕೇನಾಗಿತ್ತು" ಅಂತ ಬೈಕೊಂಡು ಒಳಗೆ ಹೋದವಳು ಮತ್ತೆ ಬಂದ್ಲು, "ಅಂದ ಹಾಗೆ ಕಂಪನಿಗಳಿಗೆ ಇಷ್ಟೊಂದು ಪ್ರೀತಿ ಯಾಕೆ ಬಂತು' ಅಂತ ಅಂದಿದ್ದಕ್ಕೆ "ಅದೊಂದು ದೊಡ್ಡ ಕಥೆ ಬಿಡು" ಅಂದ್ರೆ "ಒಹ್ ಕಥೇನಾ, ರೀ ಹೇಳ್ರಿ ಅದನ್ನ ಪ್ಲೀಜ" ಅಂಥ ಗೋಗರೆದಳು. "ಮುಂದೆ ಎನ್ ಕಥೆ ಅಂತ ನಾ ಕೂತಿದ್ದರೆ ಇವಳದೊಂದು ಕಥೆಯಾಯ್ತು" ಅಂತ ಬೈದಿದ್ದಕ್ಕೆ ಮುನಿಸಿಕೊಂಡು ಕೂತ್ಲು. ಇನ್ನು ಹೇಳದಿದ್ರೆ ಅಷ್ಟೇ ಇವಳು ಪಟ್ಟು ಸಡಲಿಸಲೊಳ್ಳಲು ಅಂತ "ಆಯ್ತು ಹೇಳ್ತೀನಿ ಕೇಳು" ಅಂತಿದ್ದಂಗೆ ಮಗ್ಗಲು ಬಂದು ಮಗುವಿನಂತೆ ಕೂತು ಕೂತಹಲಭರಿತ ಕಣ್ಣುಗಳನ್ನು ನನ್ನೆಡೆಗೆ ನೆಟ್ಟಳು. "ಒಂದಾನೊಂದು ಕಾಲದಲ್ಲಿ..." ಶುರುವಿಟ್ಟುಕೊಳ್ಳುತ್ತಿದ್ದಂತೆ "ರೀ ಕೆಲಸದ ಕಥೆ ಹೇಳು ಅಂದ್ರೆ ಇದೇನ್ರಿ ಅಡಗೂಲಜ್ಜಿ ಕಥೆ ಹೇಳ್ತಿದೀರಾ" ಅಂತ ಬಾಯಿ ಬಿಟ್ಲು. "ನಾ ಹೇಳಲ್ಲ ಹೋಗೇ, ನಡುನಡುವೆ ಬಾಯಿ ಹಾಕ್ತಿಯಾ ನೀನು, ಕಥೆ ಅಂದ್ರೆ ಒಂದಾನೊಂದು ಕಾಲದಲ್ಲೇ ಶುರುವಾಗೊದು" ಅಂತ ಸಿಡುಕಿದೆ. "ಪ್ಲೀಜ್ ಪ್ಲೀಜ ಹೇಳಿ" ಅಂತ ಕೊರಳಿಗೆ ಜೋತು ಬಿದ್ಲು. ಹೀಗೊಮ್ಮೆ ಸಿಟ್ಟಿನಿಂದ ನೋಡಿದೆ... "ಒಕೇ, ಒಕೇ, ನಡುವೆ ಮಾತಾಡಲ್ಲ, ಆಮೇಲೆ ಮಾತಾಡ್ತೀನಿ," ಅಂತ ಬಾಯಿ ಮೇಲೆ ಬಟ್ಟಿಟ್ಟುಕೊಂಡು ಕೂತ್ಲು.

ಅದೊಂದು ಹಳ್ಳಿಯೂರು, ಹಸು ಕರುಗಳು ಹಾಯಾಗಿ ಒಡಾಡಿಕೊಂಡಿದ್ದವು, ಹಸಿರು ಮೇಯಲು ಅಷ್ಟಕ್ಕಷ್ಟೇ ಇತ್ತು, ಮಳೆ ಬಂದರೆ ಜೊಳ ರಾಗಿ ಬೆಳೆದರೆ ಹೆಚ್ಚು, ಊಟ ಒಪ್ಪತ್ತು ಆದರೂ ಚೆನ್ನಾಗಿತ್ತು. ಅದೊಂದು ದಿನ ಹಸಿರು ಕಾನನದೂರಿನಿಂದ ಕೆಲವರು ಬಂದರು, ಇಲ್ಲಿನ ಹಸು ಕರುಗಳು ಚೆನ್ನಾಗಿವೆ, ಚೆನ್ನಾಗಿ ತಿನಿಸಿದರೆ ಹಾಲು ಹೆಚ್ಚು ಕೊಡುತ್ತವೆ, ಅಂದರು. ನಮ್ಮಲ್ಲಿ ಹಸಿರಿದೆ ಹಸುಗಳಿಲ್ಲ, ನಿಮ್ಮ ಹಸುಗಳಿಗೆ ನಾವು ಹಸಿರು ಹುಲ್ಲು ಕೊಡುತ್ತೇವೆ ನಮಗೆ ನಿಮಗೆ ಹಾಲು ಹಂಚಿಕೊಳ್ಳೋಣ ಅಂದರು. ಹಸುಗಳಿಗೂ ಹುಲ್ಲಿನ ಬಗ್ಗೆ ಕೇಳಿ ಬಾಯಲ್ಲಿ ನೀರೂರಿತು, ಒಣ ದಂಟು ಸೊಪ್ಪು ತಿಂದ ದನಗಳು ಹಸಿರು ಹುಲ್ಲು ತಿನ್ನಲು ತುದಿಗಾಲಿನ ಮೇಲೆ ನಿಂತವು.

ಒಂದು ದೊಡ್ಡಿ(ದನದಮನೆ, ದನ ಕರು ಕಟ್ಟುವ ಜಾಗ) ಶುರುವಾಯಿತು, ಹಸಿರು ಕಾನನದೂರಿನಿಂದ ಹುಲ್ಲು ಬಂತು, ಹುಲ್ಲಿನೊಂದಿಗೆ ಎರಡು ಹಸುಗಳೂ ಬಂದವು.
ಅವು ಹುಚ್ಚೆದ್ದು ಹುಲ್ಲು ತಿನ್ನುತ್ತಿದ್ದವು ಹಂಡೆಗಟ್ಟಲೆ ಹಾಲು ಕರೆಯುತ್ತಿದ್ದವು.ಅವನ್ನು ನೋಡಿ ಹಳ್ಳಿಯೂರಿನ ಹಸುಗಳು ಅವ್ವಾಕ್ಕಾದವು. ಹೆದರಿದ ಕೆಲವು ಹಸುಗಳು ದೊಡ್ಡಿ ಸೇರಲಿಲ್ಲ, ಕೆಲವು ಹಸಿರು ಹುಲ್ಲಿನಾಸೆಗೆ ಸೇರಿದವು. ಹಳ್ಳಿಯೂರಿನ ಹಸುಗಳಿಗೆ ಒಂದಿಷ್ಟು ಹುಲ್ಲು ಹಾಕಿದರು ಮೊದಮೊದಲು ಕಡಿಮೆ ಹಾಲು ಕರೆದರೂ, ಬರಬರುತ್ತಿದ್ದಂತೆ ಪೈಪೊಟಿಯಲ್ಲಿ ಹಾಲು ಕರೆಯತೊಡಗಿದವು. ಹಸಿರು ಕಾನನದೂರಿನವರು ಖುಶಿಯಾದರು ಕಡಿಮೆ ಹುಲ್ಲಿಗೆ ಹೆಚ್ಚು ಹಾಲು ಕರೆಯುವ ಹಸುಗಳಿಗೆ ಮೆಲ್ಲನೆ ಮೈ ಸವರಿ ಮತ್ತಷ್ಟು ಹುಲ್ಲು ಸುರಿದರು. ಅವರೆಷ್ಟು ಸುರಿದರೂ ಅದು ಹಸಿರು ಕಾನನದೂರಿನ ಹಸುಗಳಿಗಿಂತ ಕಡಿಮೆಯೇ. ಹಳ್ಳಿಯೂರಿನ ಹಸುಗಳು ಮತ್ತಷ್ಟು ಖುಶಿಯಾಗಿ ಹಾಲು ಕರೆದವು, ಹಸಿರು ಕಾನನದೂರಿನ ಹಸುಗಳು ಎರಡೇ ಎರಡು ಹೊತ್ತು ಸರಿಯಾಗಿ ಹಾಲು ಕರೆದರೆ, ಹಳ್ಳಿಯೂರಿನ ಹಸುಗಳು ಹಗಲು ರಾತ್ರಿಯೆನ್ನದೆ ಹಾಲು ಕರೆದವು. ಅವರು ಮತ್ತಷ್ಟು ಖುಶಿಯಾಗೆ ಒಮ್ಮೊಮ್ಮೆ ಹುಲ್ಲಿನೊಂದಿಗೆ ಧಾನ್ಯವನ್ನೂ ಹಾಕಿದರು ಅದರ ರುಚಿ ಹಚ್ಚಿಸಿದರು, ಧಾನ್ಯ ಬೇರೆ ಸಿಗುತ್ತದೆಂದು ಗೊತ್ತಾಗಿ ಹಸುಗಳು ಮತ್ತಷ್ಟು ಕರೆದವು.

ಹಸಿರು ಹುಲ್ಲು, ಧಾನ್ಯ ತಿಂದು ತಿಂದು ದೊಡ್ಡಿಯ ಹಸುಗಳು ದಷ್ಟಪುಷ್ಟವಾದವು, ಅವುಗಳ ನೋಡಿ ಮತ್ತಷ್ಟು ಹಸುಗಳು ದೊಡ್ಡಿ ಸೇರಲು ಬಂದವು, ಹೀಗೇ ಒಂದಿದ್ದ ದೊಡ್ಡಿ ಹತ್ತು ಹದಿನೈದು ದೊಡ್ಡಿಗಳಾದವು. ದೊಡ್ಡಿ ಸೇರುವ ಹಸುಗಳೂ ಹೆಚ್ಚಾದವು, ಹಸುಗಳಿಗೆ ದೊಡ್ಡಿ ಸೇರಲು ಮಾನದಂಡಗಳು ಜಾರಿಗೆ ಬಂದವು ಇಂತಿಷ್ಟು ಹಾಲು ಕರೆದರೆ ಮಾತ್ರ ಸೇರಿ ಅಂತ ಹೇಳಲಾಯ್ತು, ಹಸುಗಳು ಹಾಲು ಕರೆಯುವ ತರಬೇತಿ ಪಡೆಯತೊಡಗಿದವು, ಅದನ್ನು ಕಲಿಸುವ ಹಲವು ತರಬೇತಿ ಸಂಸ್ಥೆಗಳು ತಲೆಯೆತ್ತಿದವು. ಮಾಲೀಕರು ತಮ್ಮ ತಮ್ಮ ಹಸುಗಳನ್ನು ಅಲ್ಲಿ ಸೇರಿಸಿದರು, ಕಡಿಮೆ ಹುಲ್ಲು ತಿಂದು ಹೆಚ್ಚು ಹಾಲು ಕರೆಯುವ ಹಸುಗಳು ತಯ್ಯಾರಾದವು.

ಹಸುಗಳು ಹೆಚ್ಚು ಹುಲ್ಲು ಕೊಡುವ ದೊಡ್ಡಿಗೆ ಸೇರತೊಡಗಿದವು, ದೊಡ್ಡಿಗಳು ಪೈಪೊಟಿಗಿಳಿದು ನಾ ಹೆಚ್ಚು ನೀ ಹೆಚ್ಚು ಅಂತ ಹುಲ್ಲು ಕೊಡತೊಡಗಿದರು. ಹಸುಗಳೂ ದೊಡ್ಡಿಯಿಂದ ದೊಡ್ಡಿಗೆ ಜಿಗಿದಾಡಿದವು. ಹಸು ಹಿಡಿದು ಕೊಡುವ ಕಮೀಷನ್ನು ಏಜೆಂಟ್ರು ತಯ್ಯಾರಾದರು, ಹೆಚ್ಚು ಹಾಲು ಕರೆಯುವ ಹಸುಗಳನ್ನು ಹಿಡಿದು ತಂದು ದೊಡ್ಡಿಗೆ ದೂಡಿದರು. ಹಸುಗಳನ್ನು ಹುಲ್ಲುಗಾವಲಿಗೆ, ಹುಲ್ಲುಗಾವಲಿನಿಂದ ದೊಡ್ಡಿಗೆ ಸಾಗಿಸಲು ಗಾಡಿಗಳು ಬಂದವು, ಹಸು ಸಾಗಿಸುವ ಗಾಡಿಗಳ ಮಾಡಿ ಕೆಲವರು ಜೀವನ ಮಾಡಿದರು. ಹಸುಗಳನ್ನು ಅಲಂಕರಿಸಲು ಅಂಗಡಿಗಳು ಬಂದವು, ಅವುಗಳು ಕೋಡುಗಳಿಗೆ ಬಣ್ಣ ಬಳಿದದ್ದೇನು, ಬಾಲದ ಕೂದಲು ಕತ್ತರಿಸಿದ್ದೇನು, ಬಲು ಅಂದದಿ ಅವು ಬಳಕುತ್ತ ನಡೆದದ್ದೇನು. ಹಸುಗಳ ಹಾಲಿನ ಡೇರಿಗಳನ್ನು ಕೆಲವರು ತೆರೆದು ಲಾಭ ಮಾಡಿಕೊಂಡರೆ, ಕೆಲವರು ಹಾಲು ಕರೆದು ಬೇಸತ್ತ ಹಸುಗಳಿಗೆ ಸ್ವಚ್ಛಂದವಾಗಿ ತಿರುಗಾಡಲು ಪಾರ್ಕು ಕಟ್ಟಿದರು. ದೊಡ್ಡಿಯವರೂ ಹಸುಗಳನ್ನು ತಿಂಗಳು ಎರಡು ತಿಂಗಳಿಗೊಮ್ಮೆ ಇಂಥ ಪಾರ್ಕುಗಳಿಗೆ ಕರೆದೊಯ್ದರು. ಹಿರಿ ಹಿರಿ ಹಿಗ್ಗಿದ ಹಸುಗಳು ಇನ್ನಷ್ಟು ಹಾಲು ಕರೆದವು.

ಹಸುವಿಗೆ ಆರೋಗ್ಯ ಸರಿಯಿಲ್ಲದಿರೆ ನೋಡುವ ಡಾಕ್ಟರುಗಳು, ಗೆಜ್ಜೆ ಗಂಟೆ ಮಾರುವ ಅಂಗಡಿಗಳು, ಕಾಲಿಗೆ ನಾಲು ಬಡೆಯುವ ಜನರು, ಅವುಗಳಿಗೆ ಕುಡಿಯಲು ನೀರು ಸರಬರಾಜು ಮಾಡಲು ಟ್ಯಾಂಕರುಗಳು, ಕುಣಿಕೆ, ಕಟ್ಟುವ ಹಗ್ಗಗಳ ತಯ್ಯಾರಿಸುವವರು, ಕೊನೆಕೊನೆಗೆ ಅವು ಹಾಕಿದ ಸಗಣಿಯ ಬೆರಣಿ ತಟ್ಟಿ ಲಾಭ ಮಾಡಿಕೊಂಡರು. ಹೀಗೆ ಬೇರೆಯೂರಿಂದ ಮತ್ತಷ್ಟು ಹಸುಗಳು ಬಂದವು, ಆ ಹಸುಗಳು ತಂಗಲು ಇನ್ನಷ್ಟು ದೊಡ್ಡಿಗಳಿಗೆ ಜಾಗ ಮಾರಾಟವಾದವು. ಒಟ್ಟಿನಲ್ಲಿ ಹಸುಗಳ ಹಾಲಿನ ಕ್ರಾಂತಿಯಾಯಿತು, ಸರಕಾರ ಹಾಲಿನ ಮೇಲೆ ಸುಂಕ ಹೇರಿ ತೃಪ್ತಿಪಟ್ಟಿತು, ಕೆಲ ಪೇಪರು, ಪತ್ರಿಕೆಗಳು ಹಸುಗಳನ್ನು ಕೊಂಡಾಡಿದವು.
ನಮ್ಮ ಹಸು ಇಷ್ಟು ಹುಲ್ಲು ತಿನ್ನುತ್ತದೆ, ನಮ್ಮದು ಇಷ್ಟು ಹೊರೆ ತಿನ್ನುತ್ತದೆ, ನಮ್ಮದು ಹತ್ತು ಲೀಟರು ಹಾಲು ಕರೆಯುತ್ತದೆ, ಒಹ್ ನಿಮ್ಮದು ಆರೇ ಲೀಟರಾ...
ಅನ್ನೊ ಮಾತುಗಳು ಹೆಚ್ಚಾದವು ಹಸುಗಳು ಹೆಮ್ಮೆಯಿಂದ ಹಿರಿ ಹಿಗ್ಗಿದವು, ಗೂಳಿಯಂತೆ ಹೂಂಕರಿಸಿದವು, ದೊಡ್ಡಿ ಸೇರದ ಹಸುಗಳ ಮುಂದೆ ಹೊಟ್ಟೆಕಿಚ್ಚುಪಡುವಂತೆ ಒಡಾಡಿದವು. ಕೆಲವು ಹಸುಗಳನ್ನು ಆರಿಸಿ ಹಸಿರು ಕಾನನದೂರಿಗೆ ಕಳಿಸಲಾಯಿತು, ಹಸಿರು ಕಾನನದಲ್ಲಿ ಸುತ್ತಿ ಕೆಲವು ಮರಳಿ ಬಂದರೆ ಕೆಲವು ಅಲ್ಲೇ ಯಾವುದೊ ದೊಡ್ಡಿ ಸೇರ್‍ಇ ಸೆಟಲ್ಲು ಆದವು. ಅಲ್ಲಿ ಹೋಗಿ ಬಂದ ಹಸುಗಳು ಇಲ್ಲಿನ ಹಸುಗಳಿಗೆ ಅದರ ವರ್ಣನೆ ಮಾಡಿದ್ದೇ ಮಾಡಿದ್ದು, ಅಷ್ಟೊಂದು ಝರಿಗಳಿಗೆ, ಜಲಪಾತಗಳಿವೆ ಅಲ್ಲಿ, ಜುಳು ಜುಳು ಹರಿವ ಸ್ಪಟಿಕದಂತೆ ಶುಧ್ದ ನೀರಿನ ಹರಿವುಗಳಿವೆ, ಹಸಿರು ತುಂಬಿ ತುಳುಕುತ್ತಿದೆ, ಹಸಿರು ಬಿಡಿ ಹೂವು ಪುಷ್ಪಗಳ ಬನಗಳಿವೆ, ಬಣ್ಣ ಬಣ್ಣದ ಕಾಮನ ಬಿಲ್ಲು ಕಾಣುತ್ತೆ ಅಂತನ್ನುವ ಹಲವು ಬಣ್ಣದ ಕಥೆಗಳ ಹೇಳಿದವು. ಹಸುಗಳ ಕಣ್ಣ ತುಂಬ ಹಸಿರು ಕಾನನದೂರಿನ ಕನಸುಗಳೆ ತುಂಬಿಕೊಂಡವು. ಹಸುಗಳಿಗೆ ಕಾನನದೂರಿಗೆ ಹೋಗಲು ಕಾನೂನುಗಳದವು, ದೊಡ್ಡಿ ಮಾಲೀಕರು ತಮ್ಮತಮ್ಮ ಹೆಚ್ಚು ಹಾಲು ಕರೆಯುವ ಹಸುಗಳನ್ನು ಸುತ್ತಾಡಿಸಿಕೊಂಡು ಬಂದರು. ಹಳ್ಳಿಯೂರಿನಿಂದ, ಹಸಿರು ಕಾನನದೂರಿಗೆ ದೊಡ್ಡ ದೊಡ್ಡ ಪೈಪುಗಳನ್ನು ಹಾಕಿದರು, ಇಲ್ಲಿ ಹಾಲು ಕರೆದರೆ ಅಲ್ಲಿ ಬೀಳುವಂತೆ ವ್ಯವಸ್ಥೆ ಮಾಡಿದರು. ಅಲ್ಲಿ ಕುಳಿತೆ ಇಲ್ಲಿನ ಹಸುಗಳ ಹಾಲು ಕರೆಯುವಂತೆ ವ್ಯವಸ್ಥೆಗಳಾದವು. ಹಾಲು ಕರೆಯುವ ಮಶೀನುಗಳು ಬಂದವು, ಹುಲ್ಲು ಕತ್ತರಿಸಲು, ಹಂಚಲು, ಎಲ್ಲ ಮಶೀನುಗಳು ಹಸಿರು ಕಾನನದೂರಿನಿಂದ ಬಂದವು. ಎಲ್ಲರೂ ಹಾಲು ಕರೆದರೇ ಹೊರತು ಯಾರೂ ಹುಲ್ಲುಗಾವಲು ಬೆಳೆಸಲಿಲ್ಲ, ಹಾಲು ಕರೆಯುವ ಮಶೀನು ತಂದರೇ ಹೊರತು ತಯಾರಿಸಲಿಲ್ಲ... ಹೇಗೊ ಇದ್ದ ಹಳ್ಳಿಯೂರು ಹೇಗೊ ಬದಲಾಗಿ ಹೋಯಿತು.

ಹುಲ್ಲು ಬಂದು ಬೀಳುವುದು, ಹಸುಗಳು ಕರೆದ ಹಾಲು ಅಲ್ಲಿಗೆ ಹೋಗುವುದು, ಅಲ್ಲಿಂದ ಮತ್ತೆ ಹಾಲಿನ ಹಲವು ಉತ್ಪನ್ನಗಳಾಗಿ, ಮೊಸರು, ಮಜ್ಜಿಗೆ, ಬೆಣ್ಣೆ ತುಪ್ಪ ಬಂದವು, ಇಲ್ಲೂ ತಯ್ಯಾರಾದವು, ಖೋವ, ಪೇಡೆ, ಕುಂದಾ, ಹಲ್ವಾ, ಹಾಲಿನ ಪುಡಿ, ಕೆನೆ, ಕುಲ್ಫಿಗಳು ಒಂದೊ ಎರಡೊ ಸಾಕಷ್ಟು ಬಂದವು, ಎಲ್ಲರೂ ತಿಂದರು ತೃಪ್ತಿಪಟ್ಟರು. ಬೇಡಿಕೆ ಹೆಚ್ಚಾಯಿತು ಹಸುಗಳು ಹಾಲು ಹೆಚ್ಚು ಹೆಚ್ಚು ಕರೆಯಬೇಕಾಯಿತು, ಹಾಲು ಹಿಂಡಿ ಹೀರಿ ಹಿಪ್ಪೆಯಂತಾದವು, ಬೇರೆ ಗತ್ಯಂತರವಿಲ್ಲದೆ ಒತ್ತಡದಲ್ಲಿ ಹಾಲು ಹಿಂಡಿ, ಹಾಲಿನೊಟ್ಟಿಗೆ ರಕ್ತ ಹಿಂಡಿದವು. ಹಳೆಯ ಹಸುಗಳನ್ನು ಕಸಾಯಿಖಾನೆಗೆ ದೂಡಲಾಯಿತು. ಮತ್ತೆ ಹೊಸ ಹಸುಗಳು ಅಲ್ಲಿ ತುಂಬಿಕೊಂಡವು. ಹೊಸ ಹಸುಗಳೂ ಹುರುಪಿನಿಂದ ಹಾಲು ಕರೆದವು ಕುಣಿದು ಕುಪ್ಪಳಿಸಿದವು, ಜಂಬದಿಂದ ಜಿಗಿದಾಡಿದವು, ಹಸುಗಳ ಹಾರಾಟ ಹೆಚ್ಚಾಯಿತೆಂದು ಹಲವರು ತಗಾದೆ ತೆಗೆದರು, ಹೀಯಾಳಿಸಿದರು, ಹೀಗಳೆದರು, ಕೆಲ ಪತ್ರಿಕೆಗಳೂ ಬರೆದವು ಜರಿದವು. ಹಸಿರು ಕಾನನದೂರಿನಲ್ಲೂ ಹಳ್ಳಿಯೂರಿನ ಹಸುಗಳು ಜಾಸ್ತಿಯಾದವೆಂದೂ, ನಮ್ಮ ಹಸುಗಳಿಗೆ ಹುಲ್ಲಿಲ್ಲ ಅಂತ ಕೂಗು ಕೇಳಿಬಂದವು.

ಹೀಗೇ ಎಲ್ಲ ಸರಿಯಾಗಿ ಹೋಗುತ್ತಿರಬೇಕಾದರೆ, ಅದೊಂದು ಸಾರಿ ಹಸಿರು ಕಾನನದೂರಿಗೆ ಬರಗಾಲ ಅಪ್ಪಳಿಸಿಬಿಟ್ಟಿತು. ಹಸಿರಿಲ್ಲ, ಹುಲ್ಲಿಲ್ಲ, ಹಾಲೇನು ಮಾಡೋಣ ಅಂದವು ದೊಡ್ಡಿಗಳು. ಹುಲ್ಲು ತಿನ್ನುತ್ತ ಹಾಯಾಗಿದ್ದ ಹಸುಗಳಿಗೆ ನಡುಕ ಹುಟ್ಟಿತು. ಎಲ್ಲಿ ನೋಡಿದರೂ ಹಳ್ಳಿಯೂರಿನಲ್ಲಿ ಹಸಿರು ಕಾನನದ್ದೇ ಮಾತುಗಳು, ಕೊಲಾಹಲ ಶುರುವಾಯಿತು, ದೊಡ್ಡಿಗಳು ಹಳೆಯ ಹಸುಗಳನ್ನು ಹೊರದೂಡಿದವು, ಹೆಚ್ಚು ಹಾಲು ಕರೆಯುವ ಹಸುಗಳಿಗೆ ಮಾತ್ರ ಜಾಗ ಕಲ್ಪಿಸಲಾಯಿತು. ಇದೇ ಸಮಯದಲ್ಲಿ ಇದೇ ಗುಲ್ಲು, ಹುಲ್ಲು ಗದ್ದಲದಲ್ಲಿ ಕೆಲವು ದೊಡ್ಡಿಗಳು ಹುಲ್ಲಿದ್ದರೂ ಹಸುಗಳ ಹೊರದೂಡತೊಡಗಿದವು. ಹಲವು ದೊಡ್ಡಿಗಳು ಮುಚ್ಚಿದವು, ಕೆಲವು ಹುಲ್ಲು ಕಡಿಮೆ ಮಾಡಿದವು...

ಹಸುಗಳು ಹೊರಬರುತ್ತಿದ್ದಂತೆ ಹುಚ್ಚರಂತಾದವು, ಎಲ್ಲೊ ಸಿಕ್ಕ ಸಿಕ್ಕ ದೊಡ್ಡಿ ಸೇರಿದವು, "ಗೂಳಿ ಬಿದ್ದರೆ ಆಳಿಗೊಂದು ಕಲ್ಲಂತೆ". ಗೂಳಿ ಹೂಂಕರಿಸಿ ಮೆರೆದಾಡಿರುತ್ತಲ್ಲ, ಕೆಳಗೆ ಬಿದ್ದಿದೆ ಅಂತಂದರೆ ಪ್ರತಿಯೊಬ್ಬನೂ ಕಲ್ಲು ಒಗೆಯುತ್ತಾನೆ, ಈಗಲೇ ಸಿಕ್ಕಿದೆ ಬಾ, ಕೆಳಗೆ ಬಿದ್ದಿದೆ ನೆಗೆದು ಬರಲಿಕ್ಕಿಲ್ಲವೆಂದು. ಕೆಲ ಪತ್ರಿಕೆ ಪೇಪರುಗಳು ಹಸುಗಳನ್ನೇ ಜರಿದವು, ಆ ದೊಡ್ಡಿಯಲ್ಲಿ ಹತ್ತು ಹಸುಗಳನ್ನು ತೆಗೆಯಲಾಗಿದೆ, ಈ ದೊಡ್ಡಿಯಿಂದ ನೂರು ಹಸುಗಳ ತೆಗೆಯಲಿದ್ದಾರೆ ಅಂತ ದೊಡ್ಡ ದೊಡ್ದ ಸುದ್ದಿ ಮಾಡಿದರು, ಕೆಲ ಅಂಕಿಆಂಶಗಳ ಚಾರ್ಟು, ಟೇಬಲ್ಲುಗಳನ್ನು ಪ್ರಕಟಿಸಿದರು... ಹುಲ್ಲು ತಿಂದದ್ದೆ ತಪ್ಪೆಂದರು, ಹಸುಗಳಿಗೂ ಗೊತ್ತಿಲ್ಲ ಏನು ಮಾಡಬೇಕೆಂದು. ಇಷ್ಟು ದಿನ ಎಲ್ಲರಿಗೂ ಬೇಕಾಗಿದ್ದ, ಬಂದಾಗ ಲಾಭ ಮಾಡಿಕೊಂಡ ಎಲ್ಲರದೂ ಒಂದೇ ವರಾತ, ಎಲ್ಲರೂ ಬೀದಿಗೆ ಬಂದರು, ಹಸುಗಳೂ ಕೂಡ... ಯಾರ ತಪ್ಪು, ಯಾರನ್ನು ಬೈಯಬೇಕು, ಎಲ್ಲ ತಪ್ಪು ಹಸುಗಳದಾ, ಇಲ್ಲಿ ಯಾಕೆ ಯಾವುದೇ ಹುಲ್ಲುಗಾವಲು ಬೆಳೆಯಲಿಲ್ಲ, ಇಲ್ಲಿ ಹಳ್ಳಿಯೂರಲ್ಲೂ ಹಸಿರು ಕಾನನ ಬೆಳೆಸಬಹುದಿತ್ತಲ್ಲ, ಇಲ್ಲೇ ಹಾಲು ಕರೆಯಬಹುದಿತ್ತಲ್ಲ, ಹಾಲು ಕರೆಯುವ ಮಶೀನುಗಳ ನಾವೇ ರೆಡಿಮಾಡಬಹುದಿತ್ತಲ್ಲ. ಇಲ್ಲಿ ಯಾಕೆ ಅದಾಗಲಿಲ್ಲ ಎಲ್ಲದಕ್ಕೂ ಹಸಿರು ಕಾನನದೂರಿನ ಮೇಲೆ ಅವಲಂಬಿಸಿದೆವು, ಅಲ್ಲಿ ಬರಬಾರದ ಬರಗಾಲ ಬಂತು ಇಲ್ಲಿ ಎಲ್ಲ ಅಲ್ಲೊಲಕಲ್ಲೋಲವಾಯಿತು. ಈಗ ಹಸುಗಳು ಹೆಚ್ಚಾಗಿವೆ, ಹೆಚ್ಚು ಹುಲ್ಲು ತಿನ್ನುತ್ತವೆ ಅಂದರೆ... ಅದಕ್ಕೆ ಬೀದಿಗೆ ಬಂದಿವೆ ಅಂದರೆ... ಮನಸು ತೃಪ್ತಿಯಾಗುವವವರೆಗೆ ಕಲ್ಲು ಒಗೆಯಿರಿ, ಅಟ್ಟಿಸಿಕೊಂಡು ಹೋಗಿ ಚಾವಟಿಯಿಂದ ಬಾರಿಸಿ, ಬೀದಿಯಲ್ಲಿ ನಿಲ್ಲಿಸಿ ಗುಂಡು ಹಾಕಿ. ತಪ್ಪು ಹಸುಗಳದೆ ಅಂದಾದರೆ ಅದೇ ಸರಿ, ಅಲ್ಲಿಗೆ ಕಥೆ ಮುಗಿಯುತ್ತದೆ, ಮುಗಿಯಲ್ಲಿಲ್ಲವೆಂದಾರೆ ಮುಗಿದಿದೆ ಅಂದುಕೊಳ್ಳಿ...

"ಹೂಂ ನಿನಗೂ ಕಲ್ಲು ಒಗೆಯಬೇಕೆನಿಸುತ್ತಾ, ಒಗಿ, ಕೈಗೆ ಎನು ಸಿಗುತ್ತದೊ ಅದನ್ನೇ ತೆಗೆದುಕೊಂಡು ಒಗಿ, ಅದಕ್ಕೆ ಗುಂಡು ಹಾಕು" ಇನ್ನು ಎನೇನೊ ಅರಚುತ್ತಿದ್ದೆ, ಹುಚ್ಚುಹಿಡಿದಂತಾಗಿಬಿಟ್ಟಿತ್ತು... ಅವಳು ಬಾಯಿ ಮೇಲೆ ಬಟ್ಟಿಟ್ಟುಕೊಂಡು ಕೂತು ಕಥೆ ಕೇಳುತ್ತಿದ್ದವಳು... ನನ್ನ ಬಾಯಿಮೇಲೆ ಬಟ್ಟಿಟ್ಟಾಗಲೇ ಸುಮ್ಮನಾದೆ.. ಆದರೂ ಇನ್ನೂ ಜೋರಾಗಿ ಅರಚಬೇಕೆನಿಸುತ್ತಿತ್ತು... ಮನೆಯತುಂಬ ಸೂತಕ ಕಳೆ ಆವರಿಸಿತ್ತು, ಎಷ್ಟೊ ಹೊತ್ತು ಹಾಗೇ ಕುಳಿತಿದ್ದೆವು, ಭವಿಷ್ಯದಲ್ಲಿ ಇನ್ನೂ ಏನು ಕಾದಿದೆಯೊ.. ಸಮಯವೂ ಮುಂದೆ ಹೋಗದೇ ಹಾಗೆ ಕುಳಿತರೆ ಎಷ್ಟು ಚೆನ್ನಾಗಿರುತ್ತದೆ ಅನಿಸುತ್ತಿತ್ತು.

ಸಮಯ ನಿಲ್ಲಲ್ಲ... ನಿಲ್ಲ ಕೂಡದು... ಸಂಜೆಯಾಯಿತು... ರಾತ್ರಿಯೂ ಆಗುತ್ತದೆ, ಮತ್ತೆ ಬೆಳಗಿದೆ ಅಷ್ಟೇ...ಚಹ ಮಾಡಿ ತಂದಳು, ಹಾಲು ಜಾಸ್ತಿ ಹಾಕಿದ್ದಳು!. ಕುಡಿಯುತ್ತ ಕುಡಿಯುತ್ತ... "ಕಥೆ ಕಥೆಯೆನಿಸಲಿಲ್ಲ..." ಅಂದ್ಲು. "ಕಥೆಗಳೆಲ್ಲ ಹಾಗೇ, ವಾಸ್ತವದ ತಳಹದಿಯ ಮೇಲೆ ಕಟ್ಟಿದ ಮಂಜಿಲಗಳು" ಅಂದೆ. "ನಾಳೆ ಎನಾಗುತ್ತೊ ಗೊತ್ತಿಲ್ಲ, ಇಂದು ಖುಶಿಯಾಗಿರೊಣ, ಇಷ್ಟು ದಿನ ಯಾಕೆ ನನಗೆ ಹೇಳಲಿಲ್ಲ" ಅಂದ್ಲು. "ನನಗೇ ಗೊತ್ತಿರಲಿಲ್ಲ, ಗೊತ್ತಾದರೂ ಏನು ಅಗಬಹುದಿತ್ತು" ಅಂದೆ. "ಮತ್ತೆ ಬರಗಾಲ ಕಳೆದು, ಮಳೆ ಬರಬಹುದು ಆಗ ಇಲ್ಲೂ ಹುಲ್ಲು ಬೆಳೆಯಬಹುದು" ಅಂತಿದ್ದಳು ಏನೊ ಸಮಾಧಾನದ ಮಾತಿರಬೇಕು. "ಅದು ಬಿಡು ಎನಾದರಾಗಲಿ ನಾ ನಿನ್ನ ಚೆನ್ನಾಗಿ ನೋಡಿಕೊಳ್ಳುತ್ತೇನೆ, ಏನೊ ಮಾಡೊಣ" ಅಂದೆ. "ಏನೂ ವಿಚಾರ ಮಾಡಬೇಡಿ, ಎರಡು ಒಳ್ಳೆ ತಳಿ ಹಸು ಸಾಕಿ ಬಿಡೊಣ, ಜೀವನ ಹೇಗೊ ಸಾಗುತ್ತದೆ" ಅಂದ್ಲು ತರಲೆ. "ನಿನಗೇನು ಹಸು ಹಾಲು ಕರೆಯಲು ಬರ್ತದಾ" ಅಂದೆ "ನೀವಿದೀರಲ್ಲ, ನಾ ಚಹ ಮಾಡಿ ಕೊಡ್ತೇನೆ ಬೇಕಾದ್ರೆ" ಅಂದ್ಲು ನಗುತ್ತಿದ್ದೆ, "ಇನ್ನೊಂದು ಕಪ್ಪು ಹಾಲಿನಲ್ಲೇ ಮಾಡಿದ ಚಹ ಬೇಕಾ" ಅಂದ್ಲು, ತಲೆ ಸಿಡಿಯುತ್ತಿತ್ತು, "ಹಾಲು ಹಾಲಾಹಲವೆನಿಸುತ್ತಿದೆ, ಸ್ಟ್ರಾಂಗ ಚಹ ಮಾಡಿ ಕಡಿಮೆ ಹಾಲು ಹಾಕಿ ತಾ" ಅಂದೆ... ತರಲು ಓಳಗೆ ಹೋದ್ಲು... ಅಷ್ಟು ಸುಲಭ ಅಲ್ಲ ಹೇಳೊಕೇನು ಏನೊ ಹೇಳಬಹುದು... ಹೀಗೇ ಮತ್ತೆ ಎನೊ ಹೇಳುತ್ತ ಸಿಗೊಣ...


ಇತ್ತೀಚಿನ ವಿದ್ಯಮಾನಗಳನ್ನು ಕೆಲ ನೋಡಿ ಪತ್ರಿಕೆ, ಪೇಪರಿನಲ್ಲಿ ಬರುವ ಸುದ್ದಿಗಳ ಓದಿ ಅದೇ ಗುಂಗಿನಲ್ಲಿ ಮನಸಿಗೆ ತೊಚಿದ್ದು ಗೀಚಿದೆ... ಗೆಳೆಯ ಹೇಳುತ್ತಿದ್ದ ಅವನ ಮನೆಗೆ ಹಾಲು ಹಾಕುವವ ಕೇಳುತ್ತಿದ್ದನಂತೆ "ಏನ್ ಸಾಮಿ ಕಂಪ್ಯೂಟರು ಬಿದ್ದೊಗದಂತೆ" ಅಂತ ಅದಕ್ಕೆ ಇವ "ಹಾಂ ಬಿದ್ದಿತ್ತು ಈಗ ಎತ್ತಿ ಟೇಬಲ್ ಮೇಲೆ ಇಟ್ಟೀದೀನಿ" ಅಂದನಂತೆ. ಮೂವತ್ತು ನಲವತ್ತು ಸಾವಿರ ಸಂಬಳ ಅಂತ ಕೊಚ್ಚಿಕೊಳ್ಳುವವರನ್ನು, ಬ್ಯಾಕಪ್ಯಾಕ ಐಡಿ ಕಾರ್ಡು ನೋಡುತ್ತಿದ್ದಂತೆ, ಮಾರು ದೂರ ಹೋಗಲು ನೂರು ಕೇಳುವ ಆಟೊಗಳನ್ನು, ಗಾಯದ ಮೇಲೆ ಉಪ್ಪುಸವರುವಂತೆ ಕೆಲ ಪತ್ರಿಕೆಗಳು ಬರೆದಿರುವುದನ್ನು, ಎಲ್ಲವನ್ನೂ ನೋಡಿದ ಮೇಲೆ ಬರೆಯಬೇಕೆನಿಸಿತು. ತಪ್ಪು ಇದರಲ್ಲಿ ಯಾರದು ಅನ್ನುವುದಕ್ಕಿಂತ ಇದನ್ನು ಹೇಗೆ ಸರಿ ಮಾಡುವುದು ಅಂತ ಯೋಚಿಸಬೇಕೆನಿಸಿತು. ನನ್ನ ಕೈಲಿಂದ ಏನಾಗುತ್ತೊ ನಾ ಮಾಡುತ್ತೇನೆ, ನಾ ಪ್ರೀತಿಯಿಂದ ಆರಿಸಿಕೊಂಡ ವೃತ್ತಿ ಇದು, ನನಗೇನು ನಾ ಕೆಲಸ ಮಾಡುತ್ತಿರುವ ಬಗ್ಗೆ ಹೆಮ್ಮೆಯೂ ಇಲ್ಲ, ಹೆಮ್ಮೆ ಪಡುವಂಥದ್ದು ಮಾಡಿರುವೆನೆಂದೂ ಅನಿಸೋದಿಲ್ಲ, ಏನೊ ಕೆಲಸ ಮಾಡುತ್ತಿದ್ದೇನೆ, ಖಾಲಿ ಕೂತಿಲ್ಲ, ಮೋಸ ಮಾಡಿ ಗಳಿಸಿಲ್ಲ, ಹೆಚ್ಚು ಗಳಿಸುತ್ತಿದ್ದೇನೆಂಬ ಜಂಭವಂತೂ ಇಲ್ಲವೇ ಇಲ್ಲ, ಇಷ್ಟಕ್ಕೂ ಅಷ್ಟು ಗಳಿಸುತ್ತಲೂ ಇಲ್ಲ. ಏನೆನೊ ಕನಸುಗಳು, ಏನೊ ಸಾಧಿಸಬೇಕೆಂದುಕೊಂಡಿದ್ದು, ಎಲ್ಲ ಕಣ್ಣ ಮುಂದೆ ಕರಗಿಹೋಗುತ್ತಿರುವುದನ್ನು ನೋಡುತ್ತಿದ್ದೇನೆ. ಅದೇ ಅಂತಾರಲ್ಲ "ಎತ್ತು ಏರಿಗೆಳೆದರೆ, ಕೋಣ ಕೆರೆಗೆ ಎಳೆಯಿತಂತೆ" ಹಾಗೆ ಒಂದಕ್ಕೊಂದು ಸಂಬಂಧವಿಲ್ಲದವು ತಳಕು ಹಾಕಿಕೊಂಡು ಜೀವನದ ಬಂಡಿ ಎತ್ತೊ ಸಾಗುತ್ತಿದೆ ಅನ್ನೊ ಹಾಗಿದೆ. ಜೀವನದಲ್ಲಿ ಇನ್ನೇನು ಸೆಟಲ್ಲು ಆಗಬೇಕು ಅನ್ನೊ ಹೊತ್ತಿಗೆ, ಮತ್ತೆ ಸ್ಟ್ರಗಲ್ಲು ಶುರುವಾಗಿದೆ. ಜೀವನವೇ ಹಾಗೆ ಕಾಲಚಕ್ರ ತಿರುಗುತ್ತಿರುತ್ತದೆ, ಮೇಲೇರಿದ್ದು ಕೆಳಗಿಳಿಯಲೇಬೇಕು, ಕೆಳಗಿಳಿದದ್ದು ಮತ್ತೆ ಮೇಲೇರಲೇಬೇಕು ಅಲ್ಲಿಯವರೆಗೆ ಸಮಾಧಾನ ಸಹನೆ ಬೇಕು. ಎನೊ ನನಗನಿಸಿದ್ದು ಬರೆದಿದ್ದೇನೆ ನಿಮಗೂ ಸರಿಯೆನಿಸಬೇಕಿಲ್ಲ, ಸರಿಯೆನಿಸದೆ ಕಲ್ಲೆಸೆಯಬೇಕೆನಿಸಿದರೆ ಎಸೆಯಿರೆ ಅದರಿಂದಲೇ ಮನೆ ಕಟ್ಟಿಕೊಳ್ಳುತ್ತೇನೆ!...

ಕೊನೆಯಲ್ಲಿ ಎಂದೊ ಬರೆದ ಎರಡು ಸಾಲುಗಳು ನೆನಪಾದವು...

ಬದುಕೊಂದು ದಾರಿಯಂತೆ
ದೂರ ದೂರಕೆ ಹರಡಿದೆ.
ದಾರಿ ಪಕ್ಕದ ಮರದ ನೆರಳಲಿ ನಿಂತೆ
ಹಣ್ಣು ಕಿತ್ತು ತಿಂದು ಸಿಹಿಯೆಂದೆ.
ಸಿಹಿಯೆಂದು ಅಲ್ಲೇ ನಿಲ್ಲಲಾದೀತೆ
ಸಾಗಲಿನ್ನೂ ಸಾವಿರ ಮೈಲಿ ಕಾದಿದೆ.

ನಾಳೆ ದೀಪಾವಳಿಯೆಂದು ಇಂದು
ಕತ್ತಲೆಯಲ್ಲಿರಬೇಕೆ.
ಮೊನ್ನೆಯ ಅಮವಾಸ್ಯೆಯ ನೆನೆದು ಇಂದಿನ
ಬೆಳದಿಂಗಳಿಗೆ ಖುಷಿಯಾಗಬೇಕೆ.
ನಾಳೆ ಹೊಳೆಯುವ ನಕ್ಷತ್ರದ
ಕನಸು ಇಂದೇ ಯಾಕೆ.
ಇಂದು ಒಂದು ಮಿಣುಕು
ದೀಪವಾದರೂ ಇರದೇ ಇರಬೇಕೆ.



ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...


The PDF document can be found at http://www.telprabhu.com/hasiru-kaananadoorininda.pdf



ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದು

28 comments:

Ittigecement said...

ಪ್ರಭು ....

ತುಂಬಾ ಚಂದವಾದ ಬರಹ..
ಜ್ವಲಂತ ಸಮಸ್ಯೆಯನ್ನು ಹಸುಗಳ ಕಥೆಯ ಮೂಲಕ...
ಚಂದದ ಬರವಣಿಗೆಯಲ್ಲಿ ಬರೆದಿದ್ದೀರಿ..

ಓದಿದಮೇಲೆ..
ಖೇದ, ಬೇಸರ.. ಸ್ವಲ್ಪ ಹೆದರಿಕೆ ಕೂಡ ಆಯಿತು...

ಏನಾಗುತ್ತೋ ಆಗಲಿ..
ಎದುರಿಸಿ ಬಿಡೋಣ ಅಲ್ಲವಾ..?

"ಮುಂಬರುವ "ಅಮವಾಸ್ಯೆಗೆ..
ಇಂದಿನ ಬೆಳದಿಂಗಳ ಸೊಗಸನ್ನೇಕೆ ಬಿಡಬೇಕು.."

ನಿಮ್ಮ ಬರಹಗಳು..
ಇಷ್ಟವಾಗುತ್ತದೆ..

ಅಭಿನಂದನೆಗಳು...

ಮನಸು said...

ಪ್ರಭು,
ಬದುಕು ಏನೆಲ್ಲಾ ಅನುಭವಗಳನ್ನು ಮಾಡಿಸುತ್ತೆ.. ಇದ್ದಾಗ ಹಿಗ್ಗದೆ ಇಲ್ಲದಾಗ ಕುಗ್ಗದೆ ಜೀವನ ಸಾಗಿಸಬೇಕು.. ನೆನ್ನೆ ನೆನ್ನೆಗೆ ನಾಳೆ ನಾಳೆಗೆ ಇಂದು ನಮ್ಮಗೆ ಚಿಂತೆ ಏತಕೆ ..? ಬದುಕು ಜಟಕಾ ಬಂಡಿ ಇದು ವಿಧಿ ಓಡಿಸುವ ಬಂಡಿ .. ಇವೆಲ್ಲ ನೆನಪಾಗುತ್ತೆ ನಿಮ್ಮ ಬರಹ ನೋಡಿ.. ತುಂಬಾ ಚೆನ್ನಾಗಿದೆ.
ಕವನ ಅರ್ಥ ಗರ್ಭಿತವಾಗಿದೆ,

ಪಿಂಕ್ ಸ್ಲಿಪ್ ಸಿಗದಾಗೆ ನಾವು ಯಾರಿಗೂ ಸಹಾಯ ಮಾಡಲಾಗದು, ಆದರೆ ದೇವರಲ್ಲಿ ಪ್ರಾರ್ಥನೆಯನ್ನಾದರೂ ಮಾಡಬಹುದು.. ಎಲ್ಲರ ಜೀವನದಲ್ಲಿ ಪಿಂಕ್ ಸ್ಲಿಪ್ ಮಾತ್ರ ಬೇಡವೆಂದು.
ವಂದನೆಗಳು..

Prabhuraj Moogi said...

ಸಿಮೆಂಟು ಮರಳಿನ ಮಧ್ಯೆ ಅವರಿಗೆ:
ತುಂಬಾ ಧನ್ಯವಾದಗಳು, ಪ್ರತೀ ಬಾರೀ ನಿಮ್ಮ ಕಾಮೆಂಟು ವಿಭಿನ್ನ ಹಾಗೂ ಪೂರಕವಾಗಿರುತ್ತದೆ.
ಸಮಸ್ಯೆ ಬಗೆ ಹರಿಸಲು ಎಷ್ಟು ಸಾಧ್ಯವಿದೆ ಅನ್ನೊದು ಗೊತ್ತಿಲ್ಲ, ಆದರೂ ಸಮಸ್ಯೆ ಏನೆಂದು ಬಹಳ ಜನರಿಗೆ ಗೊತ್ತಿಲ್ಲ, ಅದಕ್ಕೆ ಸಮಸ್ಯೆಯನ್ನು ಹಸುಗಳ ಕಥೆಯಲ್ಲಿ ಬರೆಯಬೇಕಾಯಿತು.
ಹೆದರಿಕೆ, ಬೇಸರ, ಅಭದ್ರತೆಯಲ್ಲೇ ಸಿಲುಕಿರುವ ನಾನು ಅದನ್ನೇ ಬರೆದೆ, ಎಲ್ಲರೂ ಹೇಗೆ ಸ್ವೀಕರಿಸುವರೊ ಅನ್ನೋ ಗೊಂದಲ ಬೇರೆ... ಮುಂಬರುವ ಅಮವಾಸ್ಯೆ, ಇಂದಿನ ಬೆಳದಿಂಗಳನ್ನು ಅನುಭವಿಸಲು ಬಿಡುತ್ತಿಲ್ಲ, ಆದರೂ ಎದುರಿಸಿ ಬಿಡೋಣ, ಏನಾದರಾಗಲಿ, ನಿಮ್ಮ ಮಾತುಗಳು ಒಂದು ಧೈರ್ಯ್ ಕೊಡುತ್ತವೆ.

ಮನಸು ಅವರಿಗೆ:
ಬದುಕೇ ಒಂದು ಅನುಭವ, ಇದ್ದಾಗ ಹಿಗ್ಗದೇ, ಇಲ್ಲದಾಗ ಕುಗ್ಗದೇ ಅಂದಿರಲ್ಲ, ನಿವಂದದ್ದು ಸರಿ ಅದು ಗೊತ್ತಿಲ್ಲದೇ ಇದ್ದ ಕೆಲವರು ಹಿಗ್ಗಿ ಹೀರೇಕಾಯಿಗಳಾಗಿ ಹಾರಾಡಿದ್ದರಿಂದಲೇ ಜನ ಈಗ ಹಿಗ್ಗಾಮುಗ್ಗಾ ಬಯ್ಯುವಂತೆ ಮಾಡಿಬಿಟ್ಟಿದ್ದಾರೆ... ಏನ್ ಮಾಡೊದು ಬುಟ್ಟಿಯಲ್ಲಿ ನಾಲ್ಕು ಕೊಳೆತ ಹಣ್ಣುಗಳಿದ್ದರೆ ಎಲ್ಲ ಹಣ್ಣು ಕೊಳತಿವೆಯೆಂದೇ ಅನ್ನಿಸುತ್ತದಲ್ಲವೇ, ಹಾಗೆ ಜನ ಸಾಫ್ಟವೇರ್ ಅಂದ್ರೆ ಮೂಗು ಮುರಿಯುವಂತಾಗಿದೆ... ಎಲ್ಲ ಕೊಳೆತ ಹಣ್ಣುಗಳ ನಡುವೆ ಒಂದೇ ಒಳ್ಳೆಯ ಹಣ್ಣಿದ್ದರೂ ಗಮನಕ್ಕೆ ಬಂದು ಬಿಡುತ್ತದೆ, ಅದರೆ ಅದೇ ನಾಲ್ಕೇ ನಾಲ್ಕು ಕೊಳೆತ ಹಣ್ಣುಗಳು ಇಡೀ ಹಣ್ಣಿನ ಬುಟ್ಟಿಯನ್ನು ಕೊಳೆತದ್ದೆಂದಾಗಿಸಿಬಿಡುತ್ತವೆ...
ಯಾರಿಗೂ ಆ ಕೆಟ್ಟ ಘಳಿಗೆ ಬರದಿರಲೆಂದೆ ನನ್ನಾಸೆ ಕೂಡ.. ಯಾರಿಗೋ ಏನೋ ಆಯಿತು ಬಿಡು ಅನ್ನುವಂತಿಲ್ಲ, ಸಾಲಾಗಿ ಜೋಡಿಸಿ ನಿಲ್ಲಿಸಿರುವ ಸೈಕಲ್ಲುಗಳು... ಒಂದು ಬಿದ್ದರೆ...

SSK said...

Prabhu avare, nimma lekhana ellarigu artha aguva reetiyalli tumba simple aagide. Ee lekhana oodi modale mududidda manassu eega innashtu mududitu.
Matte adu araluva dinakkaagi kaayabeku ashte.....

Kaayona, devaralli prarthisona. Ellara jeevana chennagirabeku endu HARAISONA.!.!

sunaath said...

ಪ್ರಭು,
ಕತೆಯ ಮೂಲಕ ಮಾಡಿದ ಜ್ವಲಂತ ಸಮಸ್ಯೆಗಳ ವಿಶ್ಲೇಷಣೆ ಚೆನ್ನಾಗಿದೆ.
ನಮ್ಮ ಹಸುಗಳಿಗೆ ಹೆಚ್ಚಿನ ಹುಲ್ಲು ಸಿಗದೆ ಇದ್ದರೂ ಪರವಾ ಇಲ್ಲ, ಅವು ಬದುಕಿದರೆ ಸಾಕು ಅನ್ನಿಸುತ್ತೆ.

Prabhuraj Moogi said...

SSK ಅವರಿಗೆ
ಎಲ್ಲರಿಗೂ ಅರ್ಥವಾಗಲೆಂದೇ ಕಥೆಯಲ್ಲಿ ನಿರೂಪಿಸಿದೆ... ಹೂವುಗಳು ಅರಳುತ್ತವೆ ಬಾಡುತ್ತವೆ... ಮತ್ತೆ ಕೆಲವು ಕಾಯಾಗಿ, ಹಣ್ಣಾಗಿ ಉದುರಿ.. ಮತ್ತೆ ಹೂವಿನ ಗಿಡಗಳಾಗುತ್ತವೆ... ಎಲ್ಲ ಕಾಲಚಕ್ರ...

sunaath ಅವರಿಗೆ
ಹಸುಗಳಿಗೆ ಹುಲ್ಲು ಸಿಗುತ್ತದೊ ಇಲ್ಲವೋ ಗೊತ್ತಿಲ್ಲ ಆದರೆ ದೊಡ್ಡ ಗುಲ್ಲು ಮಾತ್ರ ಎದ್ದಿದೆ. ಹಸುಗಳು ತಾನೆ ಎಲ್ಲೋ ಹುಲ್ಲು ಹುಡುಕಿಕೊಳ್ಳುತ್ತವೆ ಬಿಡಿ... ಅವನ್ನು ನಂಬಿ ಬದುಕಿದವರ ಬದುಕು ಹೇಗೊ ಏನೊ... ಏನೊ ಎಲ್ಲರೂ ಒಂದು ದಾರಿ ಕಂಡುಕೊಳ್ಳುತ್ತಾರೆ...

maaya said...

hi,,
thumba chennagide nimma baraha... ivathina jeevana ade thane.. modalella kalpane ithu jeevanada bagge.. eega kalpanege avakashave illa.. nale office ge 10 clock hodre 10.30 kke return baruthiveno anno nijamsha nammalle hoodide.. Adaru nimma ee article Recession bagge chennagi thoriside.. adaru idu onthara namma kelavu mandigalige paataviddanthe..allave... Adeno heltharalla IDDARE HIRIYABBA ILDIDRE THIRYABBA antha hange nam jana.. JANA MARALO JATHRE MARALO anno haage.. nam kelavu jannake FOREIGN KELASA.. FOREIGN GANDU... EE ELLA HUCHCHU eega thane bidithide.. Eee huchchugale ee reethiya recesions ge onde reethiya karanavu haudu.. nimma article thumba hidisitu...

Thank u...
Hema.nth

Anonymous said...

ಪ್ರಭು :
ತುಂಬಾ ಚೆನ್ನಾಗಿ ಬರೆದಿದ್ದೀರ ..
IT ಜನಗಳು ಒಂದು ತರಹ Salary oriented ಆಗಿಬಿಟ್ರು.. ಅವರಿಗೆ ಆದ work Culture ಬರಲೇ ಇಲ್ಲ ..
ಕೆಲವರು ಸದ್ಯದ ಪರಿಸ್ತಿತಿ ಕಂಡು .. ಅವರಿಗೆ ಹಾಗೆ ಆಗಬೇಕಾಗಿತ್ತು , ಸಕತ್ ಎಗರಾಡ್ತಾ ಇದ್ರೂ ಅಂತ Rejoice ಮಾಡ್ತಾ ಇದ್ದಾರೆ ..

ಒಂದು ವೇಳೆ IT company ಬಿದ್ದು ಹೋದರೆ ಏನು ಮಾಡೋದು ಅಂತ ಅದರ ಮಾಲಿಕರಾಗಲಿ .. ಕೆಲಸಗಾರರಾಗಲಿ ಯೋಚನೆ ಮಾಡಲೇ ಇಲ್ಲ .
ಖಂಡಿತವಾಗಿಯೂ IT ಜನಗಳ ಮೇಲೆ ದ್ವೇಷ ಇಲ್ಲ ... ಈ recession ನಮ್ಮೆಲ್ಲರಿಗೂ ಖಂಡಿತ ಅಗತ್ಯ ಇತ್ತು ಅನ್ನಿಸುತ್ತದೆ

shivu.k said...

ಪ್ರಭು,

ನೀವು ಇದುವರೆಗೂ ಬರೆದಿರುವ ಲೇಖನಗಳಲ್ಲಿ ತುಂಟತನವಿತ್ತು...ಅದರೆ ಈ ಲೇಖನದಲ್ಲಿ ಒಂದು ಪ್ರಸ್ತುತ ಸ್ಥಿತಿ-ಗತಿಯ ಸಂಪೂರ್ಣ ಅನಾವರಣವಿದೆ....ಅದನ್ನು ಒಂದು ಪುಟ್ಟ ಕತೆಯ ಮೂಲಕ ಹೇಳಿಕೊಂಡು ಹೋಗಿರುವ ರೀತಿಯಂತೂ ನೀವು ಪಕ್ವವಾಗುತ್ತಿದ್ದೀರೆಂಬ ಸೂಚನೆ...ನನಗಂತೂ ತುಂಬಾ ಇಷ್ಟವಾಯಿತು..

ಕವನವೂ ಚೆನ್ನಾಗಿದೆ....ಹೀಗೆ ಬರೆಯುತ್ತಿರಿ.....

ಮತ್ತೆ ನಾಳೆ ನನ್ನ ಬ್ಲಾಗಿನಲ್ಲಿ ಹೊಸ ನಡೆದಾಡುವ ಭೂಪಟಗಳು ಬರುತ್ತಿವೆ...ನೋಡಲು ಬರುತ್ತಿರಲ್ಲ....

ಶಿವಪ್ರಕಾಶ್ said...

ಪ್ರಭು ಅವರೇ,
ನಿಮ್ಮ ಲೇಖನ ನಮ್ಮ ಪರಿಸ್ಥಿತಿಯನ್ನು ತುಂಬಾ ಚನ್ನಾಗಿ ಬಣ್ಣಿಸಿದೆ.
ಇದು ಇಂದಲ್ಲ ನಾಳೆ ಆಗುವುದಿತ್ತು, ಆದರೆ ಇಂದೇ ಆಗಿದೆ ಅಸ್ಟೆ.
ಭಯ ಅಂತು ಇದ್ದೆ ಇರುತ್ತದೆ..
ಆದ್ರೆ,
ಏನಾಗುತ್ತೋ ನೋಡೇ ಬಿಡೋಣಾ ....
lets show, how tough we are... :)

Prabhuraj Moogi said...

maaya ಅವರಿಗೆ
ಬಹಳ ಚೆನ್ನಾಗಿ ಕಾಮೆಂತು ಬರೆದಿದ್ದೀರಿ... ಫಾರಿನ್ ಕೆಲ್ಸ ಗಂಡು ಅಂತ ಇಷ್ಟು ದಿನಾ ಕೆಲವರು ಹಲುಬಿದ್ದೂ ಸರಿ, ಈಗ ಸಾಫ್ಟ್ವೇರ ಕೆಲ್ಸ ಅಂತಿದ್ದಂಗೆ ಹೆಣ್ಣು ಕೊಡಲ್ಲ ಹೋಗು ಅಂತಿದ್ದಾರೆ... ಏನ್ ಮಾಡೊದು ಎಲ್ಲ ಕಾಲ ನಿರ್ಧರಿಸತ್ತೆ...

Santhosh Chidambar ಅವರಿಗೆ
ಮೊದಲೇ ಹೇಳಿದಂತೆ ನಾಲ್ಕೇ ನಾಲ್ಕು ಕೊಳೆತ ಹಣ್ಣುಗಳು ಇಡೀ ಹಣ್ಣಿನ ಬುಟ್ಟಿಯನ್ನು ಕೊಳೆತದ್ದೆಂದಾಗಿಸಿಬಿಡುತ್ತವೆ... ಕೆಲಸದ ಬಗ್ಗೆ ಯೋಚನೆ ಮಾಡಲಿಲ್ಲ ಅಂತಲ್ಲ.. ಮಾಡಿದರೂ ಏನೂ ಮಾಡಲಾಗಲಿಲ್ಲ, ಈಗ ಎನಾದರಾಗಲಿ ನೋಡೊಣ...

shivu ಅವರಿಗೆ,
ತುಂಟತನ ಇನ್ನೂ ಇದೆ ಸರ್... ಅದು ಹೇಗೆ ಬಿಡಲಾಗುತ್ತದೆ... ಬಹಳ ಬೇಜಾರಾಗಿತ್ತು ಹಾಗೆ ಸೀರಿಯಸ್ಸಾಗಿ ಬರೆದೆ.. ಎನೊ ಸಧ್ಯದ ಪರಿಸ್ಥಿತಿಯಲ್ಲಿ ಎಲ್ಲರಿಗೂ ಸಮಸ್ಯೆ ಏನೆಂದು ತಿಳಿದಿರಲಿಲ್ಲ ಅನ್ನಿಸಿತು, ಕೆಲವರು ಸುಮ್ನೆ ಒಬ್ಬರನ್ನೊಬ್ಬರು ಟೀಕಿಸುತ್ತಿದ್ದರು ಅದಕ್ಕೆ ಪರಿಹಾರದ ಮೊದಲು ಸಮಸ್ಯೆ ಏನೆಂದು ತಿಳಿಸೊಣ ಅಂತ ಕಥೆಯ ರೂಪದಲ್ಲಿ ಬರೆದೆ... ನನ್ನ ಲೇಖನಗಳು ನನಗಿನ್ನೊ ತೃಪ್ತಿ ನೀಡಿಲ್ಲ ತಮ್ಮ ಸಲಹೆ ಸೂಚನೆಗಳು ಅತ್ಯಗತ್ಯ... ಭೂಪಟ ಹೇಗೆ ಮಿಸ್ ಮಾಡುತ್ತೇನೆ? ಬಂದೇ ಬರುತ್ತೇನೆ...

ಶಿವಪ್ರಕಾಶ್ ಅವರಿಗೆ
ಸರಿಯಾಗಿ ಹೇಳಿದಿರಿ ಇಂದಲ್ಲ ನಾಳೆ ಅಗುವುದಿತ್ತು ಈಗಲೇ ಆಗಿದೆ... ಎದುರಿಸೊಣ... ಆತ್ಮವಿಶ್ವಾಸವಿದ್ದರೆ ಸಾಕು...

Raghavendra said...

Prabhu article chennagide..
sadya IT alli irade irovru idanna odi artha madkondre saaku...
nanu monne pratap simha avara "kurudu kanchana kuniyuttalittu" odi tumba bejaar aitu..
ardha mardha tilidu ee patrikegalu namma bagge ee reeti bariyodu nodi tumba bejaar aitu.. neevu helid haage avarellaru kalleseyali naavu mane katkolona :)

keep writing

Raghavendra said...

the last poem was too good..

Prabhuraj Moogi said...

To: Raghavendra
Thanks for feedback... kelavu IT nalli irorigoo problem gottillaa... avaroo tiLidukoLLali... Pratapa Simha article swalp one sided aagittu.. adkke takka uttara koTTu obbaru Sandeep aMata chennagi bardeedaare bekaadre odi noDi... http://kadalateera.blogspot.com/2009/02/blog-post_21.html I personally liked the views of this article... I am not saying anyone is correct, but the points He maid were really good... I felt very happy...

Anonymous said...

Nobody is perfect in this world !
And I am NOBODY ...........!

ಕೆಲವರು ಹಸುಗಳು ಸಾಯೋದನ್ನೇ ಕಾಯ್ತಾ ಇದ್ರು ,ಹಸುಗಳು ಸತ್ತರೆ ಭರ್ಜರಿ ಮಾಂಸ ಸಿಗುತ್ತೆ ಅಂತ!
ಕೆಲವರು ’ಅವು’ ಹಸುಗಳೇ ಅಲ್ಲ ಗೋ ಮುಖ ವ್ಯಾಘ್ರರು ಅಂತ ವಾದಿಸಿದರು.
ಕೆಲವು ಜನರು ’ಹಸುಗಳು ಕೊಡುವ ಹಾಲಿನ ಪ್ರಮಾಣಕ್ಕಿಂತ ಹುಲ್ಲು ಹಾಕಿದ್ದು ಹೆಚ್ಚಾಯ್ತು ಅಂದ್ರು....

ಪ್ರಭು ಚೆನ್ನಾಗಿದೆ ಕಥೆ .

ಅದರೆ ಕಥೆ ಇನ್ನೂ ಮುಗಿದಿಲ್ಲ...... ಹಸುಗಳು ಮತ್ತೆ ಹಾಲು ಕೊಡುತ್ತವೆ ...ಪಾಪ ಹಸುಗಳಿಗೂ ಈಗ ಬುದ್ಧಿ ಬಂದಿದೆ ,ಇನ್ನು ಮುಂದೆ ಹಾಲು ಕೊಡುವಾಗ ಯೋಚಿಸಿ ಕೊಡುತ್ತೆ ...ಹಾಗೇ ಹುಲ್ಲು ತಿನ್ನುವಾಗಲೂ.....:)

Prabhuraj Moogi said...

ಸಂದೀಪ್ ಕಾಮತ್ ಅವರಿಗೆ:
I am also nobody... I didn't mean to say that you are not perfect or anything of that kind... I just said.. I wont say any one's view is correct, its up to the readers, because I don't want force anyone to believe what I liked..., but I said I liked the points made by you, because they are not the arguments, they are the points with reasonable explanation...and I liked that... ಬಹಳ ಚೆನ್ನಾಗಿ ಹೇಳಿದಿರಿ ಈ "ಕೆಲವರು" ಅನ್ನೋರು ಹಾಗೇನೇ.. ಕಥೆಯಲ್ಲಿ ಇನ್ನೊಂದು ತಿರುವು ಇರುವುದನ್ನು ತಿಳಿಸಿದ್ದೀರಿ.
ನೀವು ಸಮಸ್ಯೆಯನ್ನು ನೋಡುವ ದೃಷ್ಟಿಕೋನ ಬಹಳ ಇಷ್ಟ ಆಯ್ತು.. ನಿಜ ಕಥೆ ಇಲ್ಲಿಗೆ ಮುಗಿಯೋದು ಬೇಡ.. ಮುಂದುವರಿಸೋಣ. ಯಾರು ಪಾಠ ಕಲಿತಿದ್ದಾರೋ ಇಲ್ವೋ ಹಸು ಮಾತ್ರ ಇನ್ನು ಮೇಲೆ ಬುಧ್ಧಿಯಿಂದ ಹೆಜ್ಜೆಯಿಡುತ್ತದೆ... ಹೀಗೆ ಬರುತ್ತಿರಿ...

Greeshma said...

ನಿಮ್ಮ Analogical angle is excellent!

Prabhuraj Moogi said...

To:Greeshma
Thank you, I am just trying to view life with different angle than the usual. keep visiting...

shiva said...

ಸರಿ ಎನಿಸಿದರೆ ಕಲ್ಸೆಯಬೇಕೆನಿಸಿದರೆ ಎಸಇರೆ ಅದರಿಂದಲೇ ಮನೆ ಕಟ್ಟಿಕೊಳುಥೆನೆ

this line is super

Prabhuraj Moogi said...

shiva ಅವರಿಗೆ:
ನನ್ನ ಬ್ಲಾಗ್ ಗೆ ಸ್ವಾಗತ, ಮೊದಲು ಲೇಖನ ಬರೆದಾಗ ಬಹಳ ವಿರೋಧಗಳು ಬರಬಹುದು ಅನ್ನಿಸಿತ್ತು ಆಗ ಹಾಗೆ ಬರೆದಿದ್ದೆ, ಇಷ್ಟವಾದದ್ದು ನನ್ನ ಅದೃಷ್ಟ, ಹೀಗೆ ಬರುತ್ತಿರಿ

Umesh Balikai said...

ತುಂಬಾನೆ ಚೆನ್ನಾಗಿದೆ ಪ್ರಭು. ನಾವು ಸಾಫ್ಟ್‌ವೇರ್ ಇಂಜಿನಿಯರ್ ಗಳನ್ನು ಹಾಸುಗಳಿಗೆ ಹೋಲಿಸಿ, ಕಂಪನಿಗಳನ್ನು ದೊಡ್ಡಿಗಳಿಗೆ ಹೋಲಿಸಿ ಅದ್ಭುತ, ಅರ್ಥಪೂರ್ಣವಾದ ಕಥೆಯನ್ನು ಹೆಣೆದಿದ್ದೀರಿ. ಅಭಿನಂದನೆಗಳು.

Prabhuraj Moogi said...

ಉಮೇಶ ಬಾಳಿಕಾಯಿ ಅವರಿಗೆ:
ಸಧ್ಯದ ಪರಿಸ್ಥಿತಿಯಲ್ಲಿ ಎಲ್ಲರಿಗೂ ಸಮಸ್ಯೆ ಏನೆಂದು ತಿಳಿದಿರಲಿಲ್ಲ ಅನ್ನಿಸಿತು.. ಕಥೆಯ ರೂಪದಲ್ಲಿ ಬರೆದೆ... ಹೀಗೆ ಬರುತ್ತಿರಿ

Arun Yadwad said...

Dear friend Prabhu,

Hasisu kananadoorindaa is ver very emotional.. and brought tears in my eyes.

It is so effective that for the first time in life.. after some reading a write up , I became so emotional. The story is heart touching as well as heart breaking! I am in the industry for last 15 years and I know how much and what it means to all of us. The story speaks our voice so loudly.

Hats off to you for bringing out such a master piece!

But as you said, I too believe it is a passing wave .. and the silver is round the corner. This time the COWS will be much more intelligent, cautious and alert. It is all just a matter of time now.

Thanks for this wonderful blog.

Thank you,
-Arun Yadwad

Prabhuraj Moogi said...

To: Arun Yadwad.
First of all Thanks a lot for your views, ya its bit emotional, and a bit bitter truth. I felt very happy that you liked the article so much. Being a veteran in the industry, you have all the experience, like the 2000 dot com burst, and y2k mess and all, Industry has matured enough. we have to believe in our work and keep doing our best... Ya it means really lot to us, we have earned our bread and butter from this and we have to stand for what we do...

Yes I do agree with you here after Cows will be very careful, they will watch their each and every step, it just needs some time, lets hold on together for some more time... and lets hope for the better if not the best... I am worst affected by the situation and still have the hope.. because life is all about the hopes...

Thanks a lot for nice comment, it adds a weightage to the article, as you know the industry better than me.. Keep visiting...

Raj said...

simply superb !!!! Appreciated :)

Prabhuraj Moogi said...

To Raj:
Thanks a lot keep visiting.. lot more yet to come...

Anonymous said...

ತುಂಬಾ ಚೆನ್ನಾಗಿ ಬರ್ದಿದಿರಿ ... ಇದಕ್ಕೆ ಸಂಪದದಲ್ಲಿ ಲಿಂಕ್ ಕೊಟ್ಟಿದ್ದೆನೆ ...
ವ್ಯಾಸರಾಜ್

Prabhuraj Moogi said...

To Anonymous
ವ್ಯಾಸರಾಜ್ ಅವರೆ ತುಂಬಾ ಥ್ಯಾಂಕ್ಸ, ಲಿಂಕ್ ಜತೆಗೆ ನೀವು ಬರೆದಿರುವ ನಾಲ್ಕು ಅನಿಸಿಕೆಗಳ ಸಾಲುಗಳೂ ಬಹಳ ಹಿಡಿಸಿದವು ನನಗೆ, ನನ್ನ ಲೇಖನ ಸಂಪದದಲ್ಲಿ ಬರುವುದು ನನಗೂ ಹೆಮ್ಮೆ.