ಮುಂಜಾನೆ ಬ್ರೆಕ್‌ಫಾಸ್ಟ ಮಾಡ್ತಿದ್ದೆ, ಬ್ರೆಡ್ ಟೋಸ್ಟ ಮಾಡಿದ್ಲು ಫಾಸ್ಟ ಆಗಿ ಆಗುತ್ತಲ್ಲ ಅಂತ. ನಾ ಬೇಗ ಹೊರಟಿದ್ದೆ, ಎನಾದ್ರೂ ಬೇಗ ಮಾಡು ಅಂದಿದ್ದಕ್ಕೆ ಟೋಸ್ಟ ಸಿಕ್ಕಿತ್ತು, ಬಹಳಾನೇ ಬೇಗ ಆಯ್ತು ಅಂತ ಕಾಣುತ್ತೆ, ಆಫೀಸಿಗೆ ಹೋಗಲು ಇನ್ನೂ ಸಾಕಷ್ಟು ಟೈಮು ಇತ್ತು, ಡೈನಿಂಗ ಟೇಬಲ್ ಮೇಲೆ ಕೂತು ತಿನ್ನುತ್ತ ಹಾಗೆ ಮಾತಿಗೆಳೆದೆ...
"ರಾತ್ರಿ ಬರೋದು ಲೇಟ್ ಆಗಬಹುದು, ಪಾರ್ಟಿ ಇದೆ, ಊಟ ಅಲ್ಲೇ ಆಗುತ್ತೆ" ಅಂದೆ, "ಏನ್ ವಿಶೇಷ, ಯಾರದಾದ್ರೂ ಎಂಗೇಜಮೆಂಟು, ಮದುವೆ ಎನಾದ್ರೂ ಆಯ್ತಾ" ಅಂದ್ಲು. "ಛೇ, ಅಂಥ ದುಃಖಕರ ಸುದ್ದಿಗಳನ್ನೆಲ್ಲ ಸೆಲೆಬ್ರ್‍ಏಟ್ ಮಾಡೋಕಾಗಲ್ಲ ಹ ಹ ಹ, ಪ್ರೊಜೆಕ್ಟ ರಿಲೀಸ್ ಅಂದ್ರೆ ಒಂದು ಹಂತದ ಕೆಲ್ಸ ಮುಗಿದ ಖುಶಿಗೆ ಪಾರ್ಟಿ" ಅಂತ ಕಿಚಾಯಿಸಿದೆ. "ಯಾಕ್ರೀ, ಅದೆಲ್ಲ ದುಃಖಕರ ಸುದ್ದಿ ಅಂತೀರಾ" ಅಂತ ದುರುಗುಟ್ಟಿದ್ಲು," ಮತ್ತಿನ್ನೇನೆ ಮೊನ್ನೆ ಮೊನ್ನೆ ಎಂಗೇಜಮೆಂಟಾದ ಹುಡುಗನ ಮುಖ ನೋಡಿದ್ರೆ, ಆಕಾಶಾನೇ ಕಡಿದುಕೊಂಡು ತಲೆ ಮೇಲೆ ಬಿದ್ದಿದೆಯೇನೊ ಅನ್ನೊ ಹಾಗಿರ್ತಾನೆ"... ಮತ್ತೊಂದು ಟೊಸ್ಟ್ ಬಾಯಿಗಿಟ್ಟೆ.. ಸ್ವಲ್ಪ ಹೊತ್ತು ಮೌನ ಮತ್ತೆ ಮಾತು ಶುರುವಾಯ್ತು... "ಎಂಗೇಜಮೆಂಟ್ಗೆ ಬೇರೆ ಪಾರ್ಟಿ ಇದೆ, ಸತ್ಯನಲ್ಲಿ" ಅಂದೆ, "ಸತ್ಯ, ಏನೂ ರೆಸ್ಟೊರೆಂಟಾ" ಮರುಪ್ರಶ್ನೆ ಬಂತು. "ಅಲ್ಲ ಅಲ್ಲ.. ಬಾರ್ ಆಂಡ್ ರೆಸ್ಟೊರೆಂಟ್" ಅಂದೆ. "ಒಹೋ, ದುಃಖ ಎಲ್ಲ ಮರೆಯೋಕೆ ಅನ್ನಿ" ಅಂತಂದ್ಲು "ಹಂ.... ಅದೂ ಸರಿ ಆದ್ರೆ ಇಂದೂ ಇರುತ್ತೆ, ಪಾರ್ಟಿ ಅಲ್ವ, ಆದ್ರೆ ಇಂದು ಖುಶಿಯಲ್ಲಿ, ಒಟ್ಟಿನಲ್ಲಿ ಏನು ನೆಪ ಸಿಕ್ಕರೂ ಆಯ್ತು" ಅಂದೆ. "ಲೇಟು ಅಂದ್ರೆ ಎಷ್ಟೊತ್ತಿಗೆ ಬರ್ತೀರ" ಅಂದ್ಲು. "ನೋಡೋಣ ಫೋನು ಮಾಡ್ತೇನೆ" ಅಂತನ್ನುತ್ತ ಟಿಫಿನ್ನು ಮುಗಿಸಿ ಎದ್ದೆ.
ಬಿಸಿ ಬಿಸಿ ಟೀ ಹೀರುತ್ತ, "ಕೊಲೀಗು ಬರ್ತಾಳಲ್ಲ ಜತೆಗೆ, ಅವಳ ಮನೆಗೆ ಬಿಡಬೇಕು, ಬೇಗ ಬರ್ತೀನಿ ಬಿಡು" ಅಂದೆ, "ಹುಡುಗೀರು ಪಾರ್ಟಿಗೆ ಬರ್ತಾರ" ಅಂದ್ಲು, "ಲೇ ಪ್ರಾಜೆಕ್ಟ ಪಾರ್ಟಿ ಅಂದ್ರೆ ಎಲ್ರೂ ಬರ್ತಾರೆ" ಅಂದೆ. ಇನ್ನೂ ಅವಳ ಪ್ರಶ್ನೆಗಳು ಮುಗಿದಿರಲಿಲ್ಲ, "ಮತ್ತೆ ಮನೆಗೆ ಹೇಗೆ ಹೋಗ್ತಾರೆ?"... "ಲೇಟಾದ್ರೆ, ನಾನೀದಿನಲ್ಲ, ಎಲ್ರನ್ನೂ ಮನೆಗೆ ತಲುಪಿಸ್ತೀನಿ" ಅಂದೆ "ಒಳ್ಳೇ ನಿಮ್ಮನ್ನ ನಂಬ್ತಾರಲ್ಲ ಎಲ್ರೂ" ಅಂತ ಕೀಟಲೆಗಿಳಿದ್ಲು... ನಾ ದುರುಗುಟ್ಟಿ ನೋಡಿ ಹೊರಟು ನಿಂತೆ, "ನೀವು ಡ್ರಿಂಕ್ಸ ಮಾಡಿ ಟೈಟ ಆದ್ರೆ (ಭಾರಿ ನಶೆಯೇರೊದಕ್ಕೆ ಹಾಗೆ ಟೈಟಾಗೋದು ಅಂತಾರೆ)" ಅಂದ್ಲು, "ಅದಾಗಲ್ಲ ಬಿಡು" ಅಂದೆ.
"ರೀ ರೀ ಪ್ಲೀಜ್ ಒಂದು ಸಾರಿ ಡ್ರಿಂಕ್ಸ್ ಮಾಡಿ ಟೈಟಾಗಿ ಬನ್ರಿ" ಅಂದ್ಲು. ಅಯ್ಯೋ ಇದೊಳ್ಳೆ ರಗಳೆ ಆಯ್ತಲ್ಲ, ಎಲ್ರೂ ಕುಡೀದೇ ಗಂಡ ಮನೆಗೆ ಬರ್ಲಿ ಅಂದ್ರೆ ಹೋಗೀ ಹೋಗೀ ಇವಳು ಬರೀ ಕುಡಿದಲ್ಲ, ಟೈಟಾಗಿ ಬನ್ರೀ ಅಂತೀದಾಳಲ್ಲ. "ಯಾಕೇ ನಿಂಗೆ ಇಂಥ ದುರ್ಬುಧ್ಧಿ ಬಂತು" ಅಂದ್ರೆ ನಗುತ್ತ "ಏನಿಲ್ಲ ಕುಡಿದ್ರೆ ಎಲ್ರೂ ನಿಜ ಹೇಳ್ತಾರಂತೆ, ನಿಮಗೆಷ್ಟು ಗರ್ಲಫ್ರೆಂಡ್ಸು, ಅವರ ಹೆಸರೇನು, ಎಲ್ಲ ಬಯೊಡಾಟ ಹೊರಹಾಕಿಸಬಹುದು ಅಂತಾ..." ಅಂತಿದ್ದಂಗೆ "ತರಲೆ" ಅಂತ ಬಯ್ದು ಹೊರಬಿದ್ದೆ...
ಅದೇ ಯೋಚಿಸುತ್ತ ಅಫೀಸಿಗೆ ನಡೆದೆ, ಮದುವೆಗೆ ಮುನ್ನ ಹುಡುಗ ಇಂಜನೀಯರು ಅಂತಿದ್ದಂಗೆ ಯಾರೋ ಡ್ರಿಂಕ್ಸ ಮಾಡೇ ಮಾಡ್ತಾರೆ ಅಂತ ಇವಳ ಕಿವಿಯೂದಿದ್ದರು, ಇವಳೊ ನಾ ಮದುವೆಯಾಗಲ್ಲ ಹುಡುಗ ಕುಡಿತಾನಂತೆ ಅಂತ ರಚ್ಚೆ ಹಿಡಿದಿದ್ಲಂತೆ, ಅವಳಿಗೇನೊ ಗೊತ್ತಿತ್ತು ನಾ ಸುಪಾರಿ ತಿನ್ನಲೂ ಹಿಂದೆ ಮುಂದೆ ನೋಡ್ತೀನಿ ಅಂತ, ಹಾಗೂ ಹೀಗೂ ಇವಳಪ್ಪ, ಅದೇ ನಮ್ಮ ಮಾವ, ಈಗ ಯಾರು ಡ್ರಿಂಕ್ಸ್ ಮಾಡಲ್ಲ, ಎಲ್ಲ ಸೋಷಿಯಲ್ಲಾಗಿ ಪಾರ್ಟಿಗಳಲ್ಲಿ ಮಾಡ್ತಾರೆ, ಅದಕ್ಯಾಕೆ ಅಷ್ಟು ಯೊಚಿಸ್ತೀಯಾ ಅಂತ ಸಮಾಧಾನಿಸಿದಾಗಲೇ ಒಪ್ಪಿದ್ದಂತೆ, ಹೀಗಿದ್ದವಳು ಇಂದು ಟೈಟಾಗಿ ಬನ್ರೀ ಪ್ಲೀಜ ಅಂದ್ರೆ ಏನ್ ಕಥೆ ಅಂತೀನಿ... ಇವಳಿಗೆ ಇಂದು ಶಾಕ್ ಕೊಡಲೇ ಬೇಕು ಅಂತ ತೀರ್ಮಾನಿಸಿದೆ.
ಕೊಲೀಗಗೆ ಹೇಳಿದ್ರೆ, "ಒಹ್, ಗ್ರೇಟ್ ಈಗ್ಲೆ ಸತ್ಯಾಜಗೆ(ಬಾರ್) ಹೊರಡೋಣ್ವ" ಅಂದ, ನಾ ನಕ್ಕೆ, "ಮತ್ತಿನ್ನೇನು" ಅಂದ "ಎನಿಲ್ಲ ಸುಮ್ನೆ ಶಾಕ ಕೊಡಬೇಕು.. ಕರೆಂಟ ಇಲ್ದೇ" ಅಂದೆ "ಗೊತ್ತಾಯ್ತು ಬಿಡು, ಓಕೇಜ ನೊ ಪ್ರಾಬ್ಲಮ್ಸ" ಅಂದ. ಪಾರ್ಟಿಗೆ ಹೋಗಿ ಕೂತದ್ದಾಯ್ತು, ಒಂದು ರೌಂಡು, ಎರಡು, ಮೂರು... ಅಷ್ಟರಲ್ಲಿ ನಾನೂ ಎರಡು ಸ್ಪ್ರೈಟ್ (ಕೂಲಡ್ರಿಂಕ್ಸ್) ಖಾಲಿ ಮಾಡಿದ್ದೆ, ಲಾಸ್ಟ ಲಾಸ್ಟ
ಅನ್ನುತ್ತ ನಾಲ್ಕು ಐದು ಆಯ್ತು... ಈ ದೊಡ್ಡ ದೊಡ್ಡ ಹೊಟೆಲುಗಳಲ್ಲಿರುವ ಮೆನು ನನಗಂತೂ ಅರ್ಥ ಆಗಲ್ಲ, ಅದ್ಯಾವ ಹೆಸರಿನ ತಿಂಡಿಗಳಿರುತ್ತವೊ ದೇವರ್‍ಏ ಬಲ್ಲ, ಅಂತೂ ಎರಡು ರೋಟಿ, ಮೊಸರನ್ನ, ಮುಗಿಸಿ ಮೇಲೆದ್ದೆ.
ಶಾಕ ಕೊಡಬೇಕು ಕರೆಂಟು ಇಲ್ದೇ ಅಂದಿದ್ದೆನಲ್ಲ, ಅದಕ್ಕೇ ಪೂಜಾರಿ ತೀರ್ಥ ಪ್ರೋಕ್ಷಣೆ ಮಾಡುವ ಹಾಗೆ ವಿಸ್ಕಿನೊ ರಮ್ಮೋ ಯಾರಿಗೆ ಗೊತ್ತು, ತೀರ್ಥ ಶರ್ಟಿಗೆ ಸಿಂಪಡಿಸಿದರು, ಘಂಮ್ಮೆಂದು ವಾಸನೆ ಬಂತು, ವಾಸನೆ ಹೋಗದಂತೆ ಮೇಲೆ ಜಾಕೆಟ್ಟು ಹಾಕಿಕೊಂಡು, ಬಾಯಿಗೊಂದು ಪಾನ್(ಬೀಡ, ಎಲೆ ಅಡಿಕೆ) ಹಾಕಿ, ಕುಡಿದು ಮರೆಮಾಚುವವರಂತೆ ತಯ್ಯಾರಾದೆ. ಟೆಸ್ಟ ಮಾಡೋಣಾಂತ, ನಾನೆಂದೂ ಕುಡಿಯಲಿಕ್ಕಿಲ್ಲ ಎನ್ನುವ ಕೊಲೀಗ ಒಬ್ಬರಿದ್ದಾರೆ ಅವರ ಮುಂದೆ ಹೋಗಿ ನಿಂತೆ, "ಒಹ್ ಏನಿದು ನೀನೂ ಇವತ್ತು ಡ್ರಿಂಕ್ಸ ಮಾಡೀದೀಯಾ?" ಅಂತತಿದ್ದಂಗೆ ಅವಳೂ ಅನುಮಾನಿಸಿದಳೆಂದರೆ, ತಯ್ಯಾರಿ ಸರಿಯಾಗಿದೆ ಅಂತಾಯಿತು... ಮನೆಯ ದಾರಿ ಹಿಡಿದೆ.
ಮನೆ ತಲುಪುತ್ತಿದ್ದಂತೆ ಕಣ್ಣು ತೀಡಿ ಕೆಂಪು ಮಾಡಿಕೊಂಡು, ಗೇಟ್ ತೆರೆಯುತ್ತ ದೊಡ್ಡ ಸದ್ದು ಮಾಡಿದೆ, ಕುಡಿದರೆ ಹಾಗೆ ಏನೂ ಕಾಣಲ್ಲವಲ್ಲ ಹಾಗೆ... ನಟನೆ ಮನೆ ಹೊರಗಿನಿಂದಲೇ ಶುರುವಾಯ್ತು.. ಮನೆಯಲ್ಲಿನ ಲೈಟು ಉರಿಯಿತು, ಅವಳು ಕೇಳಿಸಿಕೊಂಡಿರಬೇಕು, ಹೊರಗೆ ಬಂದ್ಲು, ಬೈಕು ಅಡ್ಡಾದಿಡ್ಡಿಯಾಗಿ ನಿಲ್ಲಿಸಿದೆ, ಸರಿಯಾಗಿ ನಿಲ್ಲಿಸಿದರೆ ಹೇಗೆ, ಅವಳಿಗೆ ಅನುಮಾನ ಬರಬೇಕಲ್ಲ. ಮನೆಯೊಳಗೆ ನಡೆದೆ ಹಿಂಬಾಲಿಸಿದಳು, ಬಾಗಿಲು ತೆರೆಯಲು ಹಿಡಿದೆಳೆಯತೊಡಗಿದೆ... "ರೀ ನೂಕಿ" ಅಂದ್ಲು "ಒಹ್ ಇದು ಮನೆ ಅಲ್ವ, ಪುಷ್(ನೂಕುವ) ಡೋರು ಆಫೀಸು ಪುಲ್(ಎಳೆಯುವ) ಡೋರು" ಅಂದೆ ನಗುತ್ತ "ಯಾಕ್ರೀ ಏನಾಯ್ತು ನಿಮ್ಗೆ" ಅನ್ನುತ್ತ ಬಾಗಿಲು ನೂಕಿ ಮನೆಯೊಳಗೆ ಬಂದ್ಲು, ಈಗ ಅನುಮಾನ ಬಂದಾಗಿತ್ತು.
ನಿಲ್ಲಲಾಗದವರಂತೆ ಕುಸಿದು ಸೋಫಾದ ಮೇಲೆ ಕುಳಿತೆ, ಅವಳು ಹತ್ತಿರ ಬರುತ್ತಿದ್ದಂತೆ ಜಾಕೆಟ್ಟು ತೆಗೆದೆ, ಸುವಾಸನೆ ಹರಡಿತು, ಪಾನು ತಿಂದು ಕೆಂಪಾಗಿದ್ದ ಬಾಯಲ್ಲಿ ಮೂವತ್ತೆರಡೂ ಕಾಣುವಂತೆ ಹಲ್ಲು ಕಿರಿದೆ... ಮೂಗು ಮುಚ್ಚಿಕೊಂಡು ದೂರ ಸರಿದು ಕೂತಳು, ಅವಳ ಮುಖ ನೋಡಬೇಕಿತ್ತು ಆಗ, ಯಾಕಾದ್ರೂ ಮುಂಜಾನೆ ಕುಡಿದು ಟೈಟಾಗುವಂತೆ ಹೇಳಿದೆನೋ ಅಂತ ಯೋಚಿಸುತ್ತಿರಬೇಕು. ನಾ ಮತ್ತೆ ಶುರುವಿಟ್ಟುಕೊಂಡೆ "ಊಟ ಆಯ್ತಾ ಡಾರ್ಲಿಂಗ!!!" ಅಂದೆ ಜೀವನದಲ್ಲಿ ಮೊದಲ ಬಾರಿಗೆ ಡಾರ್ಲಿಂಗ ಅಂದಿರಬೇಕು, ಲೇ, ತಗಡು, ತರಲೇ, ತುಂಟಿ ಅಂತಾ ಕರೆಯೋನು ಈವತ್ತು ಸ್ಪೇಶಲ್ ಎಫೆಕ್ಟ ಕೊಟ್ಟಿದ್ದೆ. ಈಗಂತೂ ಅವಳಿಗೆ ಪಕ್ಕಾ ಖಾತ್ರಿಯಾಯ್ತು, ನಶೆಯೇರಿರಬೇಕೆಂದು. ಉತ್ತರ ಬರಲಿಲ್ಲ, ಬರುವುದಿಲ್ಲವೆಂದೂ ಗೊತ್ತಿತ್ತು.
"ಡ್ರಿಂಕ್ಸ ಮಾಡೀದೀರಾ ತಾನೆ" ಅಂದ್ಲು, ಹಾಗೇ ಒಪ್ಪಿಬಿಟ್ಟರೆ ಹೇಗೆ, ಅದಕ್ಕೆ "ಓ ಇಲ್ಲಪ್ಪಾ" ಅಂದೆ, "ಮತ್ತೇನು ಘಮ ಘಮ ಅಂತೀದೀರಲ್ಲ" ಅಂದ್ಲು. "ಪಾರ್ಟಿ ಇದ್ದದ್ದು ಬಾರ್ ಆಂಡ್ ರೆಸ್ಟೊರಂಟ ಅಲ್ವ ಅದಕ್ಕೆ.. ಹೀ ಹೀ ಹೀಹ್ ಹೀ" ಮತ್ತೆ ಹಲ್ಲು ಕಿರಿದೆ, "ಯಾಕ್ರೀ ಸುಳ್ಳು ಹೇಳ್ತೀರಾ ನಿಲ್ಲೊಕಾಗ್ತಾ ಇಲ್ಲ ನಿಮ್ಗೆ" ಅಂದ್ಲು ಸುಮ್ನೇ ವಾದ ಮಾಡುವರ ಹಾಗೆ "ನನಗೆ ನಿಲ್ಲೋಕೆ ಆಗ್ತಿಲ್ವಾ, ನನ್ನ ಕಾಲ ಮೇಲೆ ನಾ ನಿಂತ್ಕೊಂಡಿದೀನಿ, ಯಾರಿಗೂ ಭಾರ ಆಗಿಲ್ಲ..." ಅಂತೇನೇನೋ ಬಡಬಡಿಸಿದೆ... "ನನ್ನಾಣೆಗೂ..." ಅಂದ್ಲು "ಇದ್ಕೆಲ್ಲ ಆಣೆ ಯಾಕೆ" ಅಂತ ಮತ್ತಷ್ಟು ವಾದವಿಟ್ಟೆ. ಅವಳೇನೂ ಮಾತಾಡದೇ ಮೌನವಾಗಿ ಕೂತೊಡನೆ ನಿಜ ಹೇಳುವರ ಹಾಗೆ ಮೆಲ್ಲಗೆ ಉಲಿಯತೊಡಗಿದೆ.
"ಸ್ವಲ್ಪ ಮಾತ್ರ... ಜಾಸ್ತಿ ಇಲ್ಲ, ಫಸ್ಟ್ ಟೈಮ ಅಲ್ವಾ ಜಾಸ್ತಿ ಕಿಕ್ಕು(ನಶೆ) ಕೊಟ್ಟಿದ್ದೆ ಐ ಆಮ್ ಓಕೇ... ಓಕೆ" ಅಂತ ಇಂಗ್ಲೀಷನಲ್ಲೂ ಹೇಳಿದೆ. ಕುಡಿದಾಗ ಇಂಗ್ಲೀಷು ಜಾಸ್ತಿ ಬರುತ್ತೆ ಅಂತಾರಲ್ಲ ಅದಕ್ಕೆ.... ಹಾಗೆ ವಾದ ಸಮರ್ಥಿಸಿಕೊಳ್ಳಲು... "ನೀನೇ ಹೇಳಿದೆಯಲ್ಲ ಮುಂಜಾನೆ ಅದಕ್ಕೆ.. ಯು ಟೋಲ್ಡ್ ಮೀ..." ಅಂದು ಸುಮ್ಮನಾದೆ. "ನಾನ್ ಸುಮ್ನೇ ಜೋಕಿಗೆ ಹೇಳಿದ್ದು, ಹೀಗಾಗತ್ತೆ ಅಂತ ಗೊತ್ತಿರಲಿಲ್ಲ.." ಅನ್ನುತ್ತ ತಲೆಗೆ ಕೈ ಹಿಡಿದುಕೊಂಡು ಕೂತ್ಲು... ಈಗ ಒಂದು ಭಾಶಣ ಕೊಡಬಹುದು ಅಂತ ಅನ್ಕೊಂಡು "ಕುಡಿಯೊದು ತಪ್ಪಲ್ಲ, ಯಾಕೆ ತಪ್ಪು ಅಂತೀನಿ, ಕುಡಿದ್ರೆ ದುಡ್ಡು ಸರ್ಕಾರಕ್ಕೆ ಹೋಗುತ್ತೆ ಅದರಿಂದ ದೇಶ ಉಧ್ಧಾರ ಆಗ್ತಿದೆ, ಮಲ್ಯ ಅಂಕಲ್ಲು(ಅದ್ಯಾವಾಗ ನಮ್ಮ ಅಂಕಲ್ ಆದ್ರೊ), ಗ್ರೇಟ್ ಅಂಕಲ್ಲು!!! ಗಾಂಧಿಜೀ ಸಾಮಾನುಗಳನ್ನು ಕೊಂಡು ತಂದರಲ್ಲ ದುಡ್ಡು ಎಲ್ಲಿಂದ ಬಂತು...(ಮದ್ಯದ ಬಿಜಿನೆಸ್ ಮಾಡುವ ಮಲ್ಯ, ಇತ್ತೀಚೆಗೆ ಗಾಂಧೀಜಿಯವರ ಸಾಮಾನುಗಳನ್ನು ಹರಾಜಿನಲ್ಲಿ ಕೊಂಡು ತಂದರು) ದೇಶ ಪ್ರೇಮ ನಮ್ದು" ಅಂದು "ಜೈ ಕರ್ನಾಟಕ್ ಮಾತೆ, ವಂದೇಮಾತರಂ, ಟಿಪ್ಪುಸುಲ್ತಾನ" ಅಂತ ರಂಗಾಯಣ ರಘುರವರ ಫಿಲ್ಮ್ ಡೈಲಾಗೂ ಹಾಕಿದೆ... ಅಂತೂ ಒಳ್ಳೆ ಸೀನು ಮಾಡಿಟ್ಟೆ.
ಈಗ ವಾತಾವರಣ ರಂಗೇರಿತ್ತು, ಅವಳ ನೋಡಿದ್ರೆ ಎಲ್ಲ ಹೇಳಿಬಿಡೊಣ ಅನ್ನಿಸುತ್ತಿತ್ತು, ಆದರೂ ಮತ್ತೆ ಮುಂದುವರೆಸಿದೆ, "ಡಾರ್ಲಿಂಗ, ಗರ್ಲಫ್ರೆಂಡ್ಸ ಎಣಿಸೋಣ ಓಕೇ..." ಅಂದು... "ಒಂದು ಎರಡು ನಾಲ್ಕು (ಕುಡಿದಾಗ ಎಣಿಕೇನು ತಪ್ಪುತ್ತಲ್ಲ ಅದಕ್ಕೆ.. ಎರಡು ಆದ ಮೇಲೆ ಸೀದಾ ನಾಲ್ಕು)" ಅಂತ ಕೈ ಬೆರಳಲ್ಲಿ ಎಣಿಸತೊಡಗಿದೆ... "ಒಹ ಬಹಳ ಜನ ಇದಾರೆ, ನನ್ನ ಬೆರಳು ಸಾಕಗ್ತಿಲ್ಲ, ನಿನ್ನ ಬೆರಳೂ ಕೊಡು" ಅನ್ನುತ್ತ ಅವಳತ್ತ ಮುಂದುವರೆದೆ, "ಹತ್ತಿರ ಬಂದ್ರೆ ನೋಡಿ" ಅಂತ ಮತ್ತಷ್ಟೂ ದೂರ ಸರಿದಳು. "ನಿಮ್ಗೆ ಜೋಕು ಮಾಡೊದು ಅರ್ಥ ಆಗಲ್ವಾ ನಾ ಸುಮ್ನೆ ಹೇಳಿದ್ದು, ನಿಜವಾಗ್ಲೂ ಮಾಡಿಬಿಡೊದಾ.." ಅನ್ನುತ್ತ ಬೆಡ್‌ರೂಮಿಗೆ ಹೊರಟಳು... "ಒನ್ ಸೆಕೆಂಡ್... ಕೇಳಿಲ್ಲಿ... ನೀ ಹೇಳಿದ ಮೇಲೆ ಹೇಗೆ ಮಾಡದಿರಲಿ".... "ಐ ಲವ್ಸ್ ಯು" ಅಂತ ಪ್ರಕಾಶ ರಾಜ್(ರೈ) ಅವರ ಫಿಲ್ಮ ಡೈಲಾಗೂ ಎಸೆದೆ.... ಬೆಡ್‌ರೂಮಿನ ಬಾಗಿಲು ದಢ್ ಅಂತ ಸದ್ದಿನೊಂದಿಗೆ ಹಾಕಿದಳು. ಪ್ಲಾನು ಚೆನ್ನಾಗಿ ಕಾರ್ಯಗತವಾಗಿತ್ತು...
ಸ್ವಲ್ಪ ಹೊತ್ತು ಯಾವುದೊ ಹಳೆ ಚಿತ್ರ ಗೀತೆಗಳ ಗುನುಗುನಿಸುತ್ತಿದ್ದೆ, "ಸಾಕು ಅಲ್ಲೆ ಮಲಗಿ ಇನ್ನ, ಅಕ್ಕಪಕ್ಕ ಏನು ಅನ್ಕೊತಾರೆ, ಜಾಸ್ತಿ ಗಲಾಟೆ ಮಾಡಬೇಡಿ" ಅಂತಂದ್ಲು ಅಷ್ಟೇನೂ ಜೋರಾಗಿ ಸದ್ದು ಮಾಡುತ್ತಿರಲಿಲ್ಲ ಬಿಡಿ ಆದರೂ ಅವಳು ಸುಮ್ಮನಾಗಿಸಲು ಹಾಗೆ ಹೇಳಿದ್ದು... "ಯಾರು ಏನಂತಾರೆ, ನಮ್ಮ ಮನೆ ನಾ ಹಾಡ್ತಿದೀನಿ, ಯಾರ್ ಕೇಳ್ತಾರೆ ಈಗ್ಲೆ ಬಾಗಿಲು ತೆಗೆದು ಹೇಳಿ ಬರ್ತೀನಿ. ಧೈರ್ಯ ಇದ್ರೆ ಯಾರಾದ್ರೂ ಬರ್ಲಿ" ಅಂತ ಬಾಗಿಲೆಡೆಗೆ ನಡೆದ ಹಾಗೆ ಮಾಡಿದೆ.. ಅಯ್ಯೋ ಇನ್ನು ದೊಡ್ಡ ರಾಧ್ಧಂತ ಮಾಡಿಬಿಡುತ್ತೆ ಇದು, ಅಂತ ಹೊರಬಂದು ತಡೆದಳು, ಮತ್ತೆ ಅವಳ ಹೊರಗೆ ಕರೆತರುವಲ್ಲಿ ಸಫಲನಾದೆ. "ಮಲ್ಕೊಳ್ಳಿ ಇನ್ನ ಸಾಕು ನಾಳೆ ಮಾತಾಡೋಣ" ಅಂತಿದ್ದಂಗೆ "ಈಗ್ಲೆ ಮಾತಾಡೊಣ, ರಾತ್ರಿ ಎಲ್ಲ ಟೈಮಿದೆ... ಕೂಲ್ ಡ್ರಿಂಕ್ಸ ಎನಾದ್ರೂ ಇದೆನಾ" ಅಂತ ಫ್ರಿಡ್ಜ್ ತಡಕಾಡಲು ಹೋದೆ "ಕೂಲ್ ಡ್ರಿಂಕ್ಸ ಯಾಕೆ ಆ ಹಾಳು ಹಾಟ್ ಡ್ರಿಂಕ್ಸೇ ತುಗೊಂಬನ್ನಿ" ಅಂತ ಬಯ್ಯುತ್ತ ಒಳಗೆ ಹೋಗಿ ತಲೆದಿಂಬೂ ಒಂದು ಹೊದಿಕೆ ಎಸೆದು ಬಾಗಿಲು ಕುಕ್ಕಿಕೊಂಡ್ಲು... "ಲೇ ಡಾರ್ಲಿಂಗ.." ಅಂತ ಏನೋ ಹೇಳ ಹೋದ್ರೆ.. "ಈವತ್ತು ಸೋಫಾನೆ ಗತಿ, ಎನೂ ಕೇಳೊದಿಲ್ಲ, ಸೊಫಾನೆ ನಿಮ್ಮ ಡಾರ್ಲಿಂಗ್ ಹೋಗೀ" ಅಂತ ಒಳಗಿಂದಲೇ ರೇಗಿದ್ಲು...
ಇನ್ನು ಹೇಳದಿದ್ರೆ ಸೊಫಾನೇ ಗತಿ ಅನ್ನೊದು ಗೊತ್ತಾದ ಮೇಲೆ, ಹೇಳೊದು ವಾಸಿ ಅವಳ ಗೊಳು ಹೊಯ್ದುಕೊಂಡಿದ್ದು ಸಾಕಿನ್ನು, ಅಂದು ಬಾಗಿಲು ತಟ್ಟಿದೆ, "ರೀ ಸುಮ್ನೆ ಮಲಗ್ತೀರಾ ಇಲ್ಲ ಅತ್ತೆಗೆ ಫೊನು ಮಾಡ್ತೀನಿ ನೋಡಿ" ಅಂತ ಹೆದರಿಸಿದ್ಲು. ಅಮ್ಮನಿಗೆ ಗೊತ್ತಾದ್ರೆ ಅಷ್ಟೆ ನನ್ನ ಕಥೆ... ಅನ್ನುತ್ತ, ಹೇಗೆ ಅವಳ ಹೊರಗೆ ಕರೆಯುವುದು ಅಂತ ಯೊಚಿಸಿ ಅವಳ ಬಾಣ ಅವಳಿಗೇ ತಿರುಗಿಸಿದೆ, "ಅಮ್ಮನಿಗೆ ಫೊನು ಮಾಡ್ತೀಯಾ, ನಿಮ್ಮ ಅಪ್ಪನಿಗೆ ಫೋನು ಮಾಡಿ ತರಾಟೆಗೆ ತುಗೊತೀನೀ ತಾಳು, ಮೊಬೈಲು ಎಲ್ಲಿ ಸಿಕ್ತಾ ಇಲ್ಲ" ಅಂತ ಮೊಬೈಲು ಹುಡುಕುವವರ ಹಾಗೆ ಮಾಡಿದೆ, ಎಲ್ಲಿ ಫೋನು ಮಾಡಿ ಬಿಡ್ತೀನೊ ಅಂತ... ಓಡಿ ಬಂದು ಬಾಗಿಲು ತೆರೆದ್ಲು.
ಬಹಳ ಹೆದರಿದ್ಲು ಅನಿಸತ್ತೆ, ಅವಳ ಮುಖ ನೋಡಿದ್ರೆ... ನನಗೆ ನಗು ತಡೆಯಲಾಗಲಿಲ್ಲ, ಹೊಟ್ಟೆ ಹಿಡಿದು ಬಿದ್ದು ಬಿದ್ದು ನಗತೊಡಗಿದೆ... ಮತ್ತಿನ್ನೇನಾಯ್ತಪ್ಪ ಇದಕ್ಕೆ ಅಂತ ಅವಳು ಯೋಚಿಸುತ್ತಿರಬೇಕು... ಗೊತ್ತಾಯ್ತು ಅವಳಿಗೆ.. "ನೀವ್ ಡ್ರಿಂಕ್ಸ ಮಾಡಿಲ್ಲ ತಾನೆ, ಸುಳ್ಳು ಹೇಳ್ತೀರಾ... ನನ್ನ ಗೊಳಾಡಿಸ್ತೀರಾ!!!" ಅನ್ನುತ್ತ ಕೈಗೆ ಸಿಕ್ಕ ತಲೆದಿಂಬು ತೆಗೆದುಕೊಂಡು ಅಟ್ಟಿಸಿಕೊಂಡು ಬಂದು ಮನೆ ತುಂಬ ಓಡಾಡಿಸಿ ಕೊಟ್ಲು... ಓಡಾಡಿ ಓಡಾಡಿ ಸುಸ್ತಾಗಿ ಸೊಫಾದ ಮೇಲೆ ಕುಳಿತೆ, ತಲೆದಿಂಬು ಕಸಿದು ಬೀಸಾಡಿದೆ, ಇನ್ನೂ ಬರಿಗಯ್ಯಿಂದ ಬಡಿಯುತ್ತಿದ್ಲು, ಸ್ವಲ್ಪ ಸಮಯ ನಂತರ ಸುಮ್ಮನಾದ್ಲು, ಅವಳ ಕೈ ಬೆರೆಳು ಹಿಡಿದು ಗರ್ಲಫ್ರೆಂಡ್ಸ ಎಣಿಸೊಣ ಬಾ ಅಂದೆ... ಇನ್ನೊಂದು ಕೊಟ್ಲು...
ಏಳು ಮೊದಲು ಡ್ರೆಸ್ ಚೇಂಜ್ ಮಾಡ್ತೀನಿ ಅಂತ ಎದ್ದು ಮುಖ ತೊಳೆಯಲು ನಡೆದೆ... ಮೊದಲು ಆ ಶರ್ಟ್ ತೆಗೆದು ನೀರಲ್ಲಿ ಹಾಕಿ ಅಂತ ತಾಕೀತು ಮಾಡಿದ್ಲು. "ಹಾಟ ಡ್ರಿಂಕ್ಸ ಸಿಗುತ್ತಾ" ಅಂದೆ "ರೀ..." ಅಂತ ಗುರಾಯಿಸಿದ್ಲು, "ಲೇ ಹಾಟ್ ಟೀ ಕೇಳಿದ್ದು ಓಡಾಡಿ ಸುಸ್ತಾಗಿದೆ ಅದ್ಕೆ" ಅಂದೆ, ಖುಶಿ ಖುಶಿಯಾಗಿ ಪಾಕಶಾಲೆಗೆ ಓಡಿದ್ಲು... ಮುಖ ತೊಳೆದು ಟೀ ಕುಡಿದು ಸೋಫಾದ ಮೇಲೆ ಕುಳಿತೆ... ಬಂದು ಎದೆಗಾತು ಅಂಟಿಕೊಂಡು ಕೂತ್ಲು, "ಏನು ಇಷ್ಟೊತ್ತು ಹತ್ತಿರಾನೆ ಬರ್ತಿರಲಿಲ್ಲ" ಅಂದ್ರೆ ಇನ್ನಷ್ಟು ಹತ್ತಿರ ಬಂದ್ಲು, ನಾ ಮುಸಿ ಮುಸಿ ನಗ್ತಿದ್ದೆ, ಇಷ್ಟೊತ್ತು ಆಗಿದ್ದು ಮರು ಮೆಲಕು ಹಾಕುತ್ತ... "ನಗ್ತೀರಾ... ಬೆಕ್ಕಿಗೆ ಆಟ ಇಲಿಗೆ ಪ್ರಾಣ ಸಂಕಟ ಅಂತಾರಲ್ಲ ಹಾಗಾಯ್ತು, ಎಷ್ಟು ಬೇಜಾರಾಗಿತ್ತು ಗೊತ್ತಾ" ಅಂದ್ಲು "ಸೊರಿ.. ಸೊರಿ.. ಸುಮ್ನೆ ತಮಾಶೆಗೆ ಕಾಡಿಸೋಣ ಅಂತ ಹಾಗೆ ಮಾಡಿದೆ" ಅಂದೆ "ನಿಮ್ಗೆ ಎಲ್ಲ ತಮಾಷೇನೆ" ಅಂತನ್ನುತ್ತ ಇನ್ನೊಂದು ಗುದ್ದು ಕೊಟ್ಲು, ತರಲೆ ಮತ್ತೆ ಶುರುವಾಯ್ತು "ರೀ ಡ್ರಿಂಕ್ಸ್ ಟೇಸ್ಟ ಹೇಗಿರುತ್ತೆ" ಅಂತ ಕೇಳಿದ್ಲು "ಅಯ್ಯೊ ಒಳ್ಳೆ ನನ್ನ ಕೇಳ್ತಿದೀಯಲ್ಲ, ಒಂದು ಸಾರೀನು ಒಂದು ಹನಿ ಕೂಡ ಟೇಸ್ಟ ನೋಡಿಲ್ಲ, ಏನೋ ಓಂಥರಾ ಹುಳಿ ಒಗರು ಇದ್ದಂಗೆ ಇರ್ತದಂತೆ ಅಂತಾರೆ"... ಅಂದೆ
"ಒಂದು ಸಾರಿ ಟೇಸ್ಟ ನೋಡ್ಬೇಕ್ರಿ" ಅಂದ್ಲು... ಇಷ್ಟೊತ್ತು ನನ್ನ ಬಯ್ದವಳು ಈಗ ತಾನೇ ಟೇಸ್ಟ ನೋಡ್ಬೇಕು ಅಂತಾಳೆ, ಅರ್ಥಾನೇ ಆಗಲ್ಲ ಇವಳು... "ಹೂಂ ಒಂದು ಬಾಟಲ್ಲು ತರ್ತೀನಿ, ಇಬ್ರೂ ಕುಡಿದು ಟೈಟಾಗಿ ಬಿಡೋಣಾಂತೆ.. ಸರಿಯಾಗಿರತ್ತೆ ಜೋಡಿ ಆಗ" ಅಂದೆ...
"ಯಾಕ್ರೀ ಕುಡೀತಾರೆ ಅದನ್ನ ರುಚಿನೇ ಇರಲ್ಲ ಅಂದ್ರೆ" ಅಂತಂದ್ಲು. "ಏನೊ ಎಲ್ಲಾ ಮರೆತು ಹೋದ ಹಾಗಾಗಿ ಒಂಥರಾ ಮನಸು ರಿಲ್ಯಾಕ್ಸ ಆಗತ್ತಂತೆ ಅದಕ್ಕೇ... ಒಂಥರ ಕಿಕ್ಕು ಕೊಡತ್ತೆ ಅಂತಾರೆ ಯಾರಿಗೆ ಗೊತ್ತು ಏನಾಗತ್ತೆ ಅಂತ" ಅಂದೆ "ಕುಡಿದ್ರೆ ಸಮಸ್ಯೆ ಏನೂ ಪರಿಹಾರ ಅಗಲ್ಲ ಅಲ್ವಾ, ಮರೆತು ಹೋಗತ್ತೆ ಅದೂ ಕ್ಷಣಿಕ ಆಮೇಲೆ ಮತ್ತೆ ಅದೇ ಸಮಸ್ಯೆಯೊಂದಿಗೆ ಏಗಬೇಕಲ್ಲ" ಅಂದ್ಲು "ಅದೂ ಸರಿ ಆದ್ರೆ ಪಾಪ ಈ ದಿನಗೂಲಿ ಮಾಡೊರು, ಕಷ್ಟದ ಕೆಲಸ ಮಾಡಿ ಬಂದು ರಾತ್ರಿ ನಿದ್ದೆ ಹತ್ತಲ್ಲ, ಪಾಪ ನಿದ್ದೆ ಹತ್ತಲ್ಲ ಅಂತ ಕುಡೀತಾರೆ, ದೇವದಾಸನಂಥವರು ಪ್ರೇಯಸಿ ಮರೆಯಲು ಕುಡೀತಾರೆ, ಕೆಲವರು ದುಡ್ಡಿರತ್ತೆ ಸ್ಟೈಲಿಗೆ ಅಂತ ಕುಡೀತಾರೆ... ಅವರವರಿಗೆ ಅವರದೇ ಕಾರಣಗಳಿರುತ್ತವೆ, ದೇವರೇ ಸೊಮರಸ ಪಾನ ಮಾಡ್ತಿದ್ರು ಅಂತಾರೆ ಯಾವುದು ತಪ್ಪು ಯಾವುದು ಸರಿ ಎಂದು ಹೇಗೆ ಹೇಳೋದು, ನನಗೆ ಇಷ್ಟ ಇಲ್ಲ, ಮನೇಲೂ ಶಾಂತಿ, ನೆಮ್ಮದಿಯಿದೆ, ಅದು ಯಾವ ಸಮಸ್ಯೆಗೂ ಪರಿಹಾರ ಅಂತ ನನಗನಿಸಲ್ಲ, ಹಾಗಾಗಿ ನಾ ಮಾಡಲ್ಲ, ಮಾಡೊರಿಗೆ ಬೇಡ ಅನ್ನಲ್ಲ"... ನನ್ನ ಅಭಿಪ್ರಾಯ ಯಾರ ಮೇಲೋ ಒತ್ತಾಯದಿಂದ ನಾನು ಯಾಕೆ ಹಾಕಬೇಕು "ಆದ್ರೂ ಎಲ್ಲ ಮಿತಿಯಲ್ಲಿದ್ದರೆ ಸರಿ ಅತಿಯಾದ್ರೆ ಅಮೃತಾನೂ ವಿಷವಂತೆ" ಅಂದೆ...
"ಕರೆಕ್ಟು ಬಿಡಿ... ದಾರಿ ತಪ್ಪಿ ಪಕ್ಕದ ಪದ್ದು ಮನೆಗೆ ಹೋಗಿಲ್ಲ ಅಷ್ಟು ಸಾಕು... ಕುಡಿದ್ರೂ ನನಗೇನು ಓಕೆ... ಅಲ್ಲ ಆ ವಾಸನೆ ಬರೋ ಹಾಗೆ ಮಾಡಿಕೊಂಡು ಬಂದು ಸುಪರ ಆಗಿ ನಟಿಸಿದ್ರಲ್ಲ, ಹೇಗೆ" ಅಂದ್ಲು "ತೀರ್ಥ ಪ್ರೊಕ್ಷಣೆಯಿಂದ ಹಿಡಿದು ಮಾಡಿದ ಒಂದೊಂದು ವಿಚಾರಾನೂ ಹೇಳ್ತಿದ್ರೆ, ಮನಪೂರ್ತಿ ನಗ್ತಿದ್ಲು... ನಂಗೆ ಕಂಠಪೂರ್ತಿ ಕುಡಿದು ಬಂದಿದ್ರೂ ಇಷ್ಟು ನೆಮ್ಮದಿ ಸಿಕ್ತಿರಲಿಲ್ಲ ಅನಿಸ್ತು. "ಏನು ನನ್ನ ಹೊರಗೆ ಹಾಕ್ತೀಯಾ, ಸೊಫಾನೆ ಗತೀನಾ" ಅಂತ ತಲೆಗೆರಡು ಏಟು ಕೊಟ್ಟೆ, ಹೌದು ಸೊಫಾನೇ ಗತಿಯೆನ್ನುತ್ತ, ಇಕ್ಕಟ್ಟಿನಲ್ಲಿ ಜಾಗ ಮಾಡಿಕೊಂಡು ಅಲ್ಲೇ ಮಲಗಿದ್ಲು, ಇಕಟ್ಟಿದ್ದರೂ ಅದೇ ಇಷ್ಟವಾಯ್ತು ಮತ್ತೆ ಡೈಲಾಗು ಹಾಕಿದೆ "ಐ ಲವ್ಸ್ ಯು" ಅಂತ ನಗುತ್ತ. ಬಾಚಿ ತಬ್ಬಿಕೊಂಡ್ಲು, "ಟೈಟಾಗಿ!"... ನಶೆಯೇರತೊಡಗಿತು... ಮತ್ತೆ ಸಿಗೊಣ.. ಯಾವುದೋ ಬಾರಿನಿಂದ ಕುಡಿಯದೇ ಹೊರಗೆ ಬರುತ್ತ...
ಕುಡಿಯೊದು ತಪ್ಪೊ ಸರೀನೊ ನನಗೆ ಗೊತ್ತಿಲ್ಲ, ಬೇಡ ಅಥವಾ ಮಾಡಿ ಅಂತ ನಾನೇನು ಉಪದೇಶ ಕೊಡಲ್ಲ... ನಾ ಮಾಡಲ್ಲ ಅದು ನನ್ನ ವೈಯಕ್ತಿಕ ಆಯ್ಕೆ.. ಆದ್ರೆ ಮಿತಿಯಲ್ಲಿರಲಿ ಎನೇ ಆದ್ರೂ... ಕೆಲವರು ಕುಡಿದು ತೂರಾಡುವಾವರು, ಗಟರು, ಚರಂಡಿ ಪಕ್ಕ ಬಿದ್ದಿರುವವರು, ನಶೆಯೇರಿ ಹೆಂಡತಿ ಮಕ್ಕಳ ಹೊಡೆಯುತ್ತಿರುವವರನ್ನು ಎಲ್ಲ ಕಂಡಾಗ ಮನಸಿಗೆ ಬೇಜಾರಾಗುತ್ತದೆ. ಮನೆಯಲ್ಲಿ ಶಾಂತಿ ನೆಮ್ಮದಿ ವಾತಾವರಣ ಕಲ್ಪಿಸಿ, ಯಾರೂ ಬೇಕೆಂದಲೇ ಹಾಗೆ ಮಾಡಲ್ಲ(ಕೆಲವು ಅಪವಾದಗಳನ್ನು ಹೊರತುಪಡಿಸಿ), ಅದನ್ನ ಗೃಹಿಣಿಯರೂ ಅರ್ಥ ಮಾಡಿಕೊಂಡ್ರೆ ಅಷ್ಟೇ ಒಳ್ಳೆಯದು. ಸಮಸ್ಯೆಯ ಪರಿಹಾರ ಮಾಡಲು ಪ್ರಯತ್ನಿಸೋಣ ಕ್ಶ್ಯಣಿಕವಾಗಿ ಮರೆತು ಬಿಡಲಲ್ಲ. ಇದನ್ನು ಬರೆಯುವಾಗ ನೀವೆಲ್ಲ ಹೇಗೆ ಸ್ವೀಕರಿಸುವಿರೊ ಅನ್ನೊ ಅಳುಕು ನನ್ನ ಕಾಡಿದೆ, ಯಾಕೇಂದ್ರೆ ನನ್ನ ವೈಯಕ್ತಿಕ ಅಭಿಪ್ರಾಯಗಳು ಎಲ್ರಿಗೂ ಇಷ್ಟವಾಗಬೇಕೆಂದೇನಿಲ್ಲ.
ಹಾಗೆ ಒಬ್ಬರು ಪತ್ರ(ಇಂಚೆ) ಬರೆದು ಇಂಗ್ಲೀಷು ಪದಗಳನ್ನ ಬಹಳ ಉಪಯೋಗಿಸ್ತೀಯ ಅಂತ ಅಂದಿದ್ದರೂ, ಬೇಕೇಂತಲೇ ಪದಗಳನ್ನು ಉಪಯೊಗಿಸುವುದಿಲ್ಲ ಸಮಯ ಸನ್ನಿವೇಶಕ್ಕೆ ತಕ್ಕ ಹಾಗೆ ಕೆಲವು ಕಡೆ ಅದೇ ನೈಜ ಅನಿಸಿದಾಗ ಹಾಗೆ ಬರೆದಿರುತ್ತೇನೆ, ಹಾಗೆ ನನ್ನ ಪದ ಭಂಡಾರವೂ ಎಲ್ಲ ಭಾವನೆಗಳನ್ನು ಹಿಡಿದಿಡಿವಷ್ಟು ದೊಡ್ಡದಿಲ್ಲ ಏನು ಮಾಡಲಿ... ಆದರೂ ಪ್ರಯತ್ನಿಸುತ್ತೇನೆ ಕಂಗ್ಲೀಷು ಕಮ್ಮಿ ಮಾಡಲು... ಹೀಗೆ ಬರುತ್ತಿರಿ ಹಾಗೂ ಬರೆಯುತ್ತಿರಿ...
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...
The PDF document can be found at http://www.telprabhu.com/nasheyerade.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದು
25 comments:
ಪ್ರಭು ...
ತುಂಬಾ ಮಸ್ತ ಆಗಿ ಬರೆದಿದ್ದೀರಿ...
ನನ್ನಾಕೆಗೂ ಹೀಗೆ ಮಾಡಿ ಬಿಡೋಣ ಅನಿಸುತ್ತದೆ..
ನಿಮ್ಮವರ ಹಾಗೆ ಕ್ಷಮಿಸಿದರೆ ಓಕೆ..
ಇಲ್ಲಾಂದ್ರೆ...!?
ಚಂದದ.., ಲವಲವಿಕೆಯ ಬರಹ...
ಹೊಟ್ಟೆ ತುಂಬಾ ನಕ್ಕಿಸಿದ್ದಕ್ಕೆ..
ಧನ್ಯವಾದಗಳು...
ಸೂಪರ್!
ನಿಮ್ಮ ಮದುವೆ ಆದ ಮೇಲೆ ನಿಮ್ಮಾಕೆಯನ್ನು ಈ ರೀತಿ ಖಂಡಿತಾ ಗೋಳು ಹೊಯ್ಕೋಬೇಡಿ :-)
ನಿಮಗೆ ನಿಮ್ಮ ಕಲ್ಪನೆಯಲ್ಲಿರುವಂತಹ ಹುಡುಗಿ ಸಿಗಲಿ ಎಂದು ಹಾರೈಸುತ್ತೇನೆ.
ಮಿತಿಯಲ್ಲಿ ಕುಡಿಯೋದು ತಪ್ಪಲ್ಲ ಅಂತ ಹೇಳಿದ್ರೂ ಮುಂದೆ ಅದೇ ಅಭ್ಯಾಸ(addict) ಆಗೋ ಸಾಧ್ಯತೆ ಜಾಸ್ತಿ ಇದೆ ಆಲ್ವಾ?
ಪ್ರಭು,
ನಿಮ್ಮ ಲೇಖನ ಓದಿ ಎಲ್ಲರು ಅರ್ಥ ಮಾಡಿಕೊಳ್ಳಬೇಕಾದ ವಿಷಯವಿದೆ.. ಕುಡಿತದ ಇತಿಮಿತಿ ಅರಿತರೆ ಒಳಿತು.. ಇನ್ನು ನಿಮ್ಮಾಕೆ ಮುಗ್ಧೆ ಪಾಪ ಹೊಟ್ಟೆ ಹುರಿಸಬೇಡಿ... ಹ ಹ ಹ ... ನಶೆ ಹೆಚ್ಚಾದರೆ ನಷೆಯಹುಚ್ಚು ಬಿಡಿಸಿಬಿಟ್ಟರು ಹ...ಹ .. ವಾರಕ್ಕೊಂದು ಅನುಭವ ಆಗುತ್ತೆ ನಿಮಗೆ ಹ ಹ ಹ ... ಮುಂದಿನವರ ಇನ್ನು ಯಾವ ಅನುಭವ ಬರುತ್ತೋ ಕಾದು ನೋಡಬೇಕಿದೆ ಹ ಹ ಹ .....
ಸಿಮೆಂಟು ಮರಳಿನ ಮಧ್ಯೆ ಅವರಿಗೆ:
ಸಾರ್ ಹಾಗೆಲ್ಲ ಮಾಡಬೇಡಿ, ಬಹಳ ಬೇಜಾರು ಮಾಡಿಕೊಂಡಾರು... ಕಲ್ಪನೆಯಲ್ಲಿ ಮಾತ್ರ ಚೆನ್ನಾಗಿರುತ್ತದೆ... ಇನ್ನೂ ಬರೆಯತ್ತಿದ್ದೆ ಆದರೆ ಕೊನೆ ಕೊನೆ ಬಹಳ ಗೊಳಾಡಿಸಿದೆನೆಂದೆನಿಸಿ(ಕಲ್ಪನೆಯಲ್ಲಿ ಕೂಡ ಅಷ್ಟು ಗೊಳಾಡಿಸಲು ಮನಸು ಬರಲಿಲ್ಲ) ಕತ್ತರಿ ಹಾಕಿದೆ... ದಯವಿಟ್ಟು ಹಾಗೆ ಮಾಡಬೇಡಿ...
ಜ್ಯೊತಿ ಅವರಿಗೆ:
ನನ್ನ ಬ್ಲಾಗಗೆ ಸ್ವಾಗತ... ಸರಿ ನನ್ನಾಕೆಯನ್ನು ಹೀಗೆ ಗೊಳಾದಿಸಳಿಲಿಕ್ಕಿಲ್ಲ ಬಿಡಿ, ಬರೆದಾದ ಮೇಲೆ ಕಲ್ಪನೆಯ ನೊಡಿಯೆ ಬೇಜಾರಾಯಿತು... ಕಲ್ಪನೆಗೆ ಚೆನ್ನಾಗಿದೆ ಆದರೆ ನಿಜಕ್ಕೂ ಮಾಡಲ್ಲ... ನಿವಂದದ್ದು ಸರಿ ಮಿತಿ... ಹಂತ ಹಂತವಾಗಿ ಮಿತಿ ಮೀರಿ ಬಿಡುತ್ತದೆ...
ಮನಸು ಅವರಿಗೆ:
ಇತಿಮಿತಿಯಲ್ಲಿ ಎಲ್ಲವೂ ಚೆನ್ನ... ಇಷ್ಟೆಲ್ಲ ದಿನ ನನ್ನ ಗೋಳಾಡಿಸುತ್ತಿದ್ದಳಲ್ಲ ಅದಕ್ಕೆ ಈ ಸಾರಿ ನಾ ಗೊಳಾಡಿಸಿದೆ... ಮುಂದಿನವಾರ ಬರೆಯಲಿಕ್ಕಿಲ್ಲ... ಮದುವೆಯೊಂದಕ್ಕೆ ಹೋಗಬೇಕಿದೆ ಅಲ್ಲಿ ಏನು ಅನುಭವವಾಗುತ್ತೊ ಮತ್ತೆ ಬರೆಯುತ್ತೇನೆ...
Prabhu avare, yavude vishaya (article, story etc,.) oduvaaga aa sanniveshakke thakkante kalpisikolluvudaralli naa expert! Ade reeti neevu kalpisikondu bareda lekhanavannu naanu oduttaa, oduttaa kalpisikolluttidde. Tumbaa maja sikkitu mattu naguvannu tadeyalaagalilla, manasaare naukkubitte!! Nimma lekhana odi enjoy maadide!!! Nimma lekhanakke nannadondu pranaama/namana.
ಹ್ಹಾ ಹ್ಹಾ! ಚೆನಾಗಿದೆ ನಿಮ್ಮ ಪ್ಲಾನ್, ನಿಜವಾಗಲು ಆಗಬೇಕಿತ್ತು! ;)
ಈಗೀಗ ದುಃಖ ಮರೆಯೋದಕ್ಕೆ ಕುಡಿಯೋ ಜನಕ್ಕಿಂತ, ಟ್ರೆಂಡ್/ಸ್ಟೈಲ್ ಅಂತ ಕುಡಿಯೋ youngsters ಜಾಸ್ತಿ ಆಗ್ತಾ ಇದಾರೆ. Social ಆಗಿ ಕುಡಿಯೋದು ತಪ್ಪೇನಲ್ಲ ಅನ್ನೋ ಅಭಿಪ್ರಾಯನು ಜನರಲ್ಲಿ ಹೆಚ್ಚಾಗ್ತಾ ಇದೆ . ಅಲ್ವೇ?
ಪ್ರಭುರಾಜ,
ಒಳ್ಳೊಳ್ಳೆ tricks ಇಟ್ಕೊಂಡೀರಲ್ಲಾ!
ಜೈ ಹೋ!
ಕಲ್ಪನೆಯಾದರೂ ಸಕತ್ತಾಗಿದೆ ಬರಹ...
ನಾನು ನಿಜ ಅಂದ್ಕೊಂಡೆ ಓದಿದೆ, ಆಗಲೇ ಬಂದಿರುವ ಕಾಮೆಂಟುಗಳನ್ನು ಓದಿದ ಮೇಲೆ ಗೊತ್ತಾಯಿತು ನೀವಿನ್ನು bachelor ಅಂತ, ಬೊಂಬಾಟ್ ಬರಹ.
ಚೆನ್ನಾಗಿದೆ ಕತೆ.
ಒಂದೇ ಒಂದು ಸಲಹೆ- ಜನ ಬ್ಲಾಗ್ ಗಳಲ್ಲಿ ಇಷ್ಟು ಧೀರ್ಘ ಲೇಖನಗಳನ್ನು ಓದೋದು ಕಡಿಮೆ. ಪುಟಗಟ್ಟಲೆ ಓದುವಷ್ಟು ವ್ಯವಧಾನವಿರುವುದಿಲ್ಲ. ಇದು ನನ್ನ ಅಭಿಪ್ರಾಯ.ನಿಮ್ಮ ಆಸಕ್ತಿ ,ಅನುಕೂಲಗಳು ಬೇರೆ ಇರಬಹುದು.
ತುಂಬ ಚೆನ್ನಾಗಿದೆ :-)
Hi,,,,
Simply Superb... en barithirri neevu.. sakkathagi ide.. thumba ishta aythu...kudiyo gandandaru iro hengasaru nimma article nodidre eshtu kushi padtharo.. :-)
Hema.nth
SSK ಅವರಿಗೆ:
ನಾನೂ ಹಾಗೆ ಕಲ್ಪಿಸಿಯೇ ಬರೆಯೋದು... ಬರೆದ ಕೆಲವು ತುಂಟಾಟಗಳು ನಗು ಬರುವಂತೆ ಮಾಡಿದ್ದು ಕೇಳಿ ಖುಷಿಯೆನಿಸಿತು.. ಹಾಗೆ ಓದುತ್ತಿರಿ...
Greeshma ಅವರಿಗೆ:
Social ಆಗಿ ಕುಡಿಯೋದು ತಪ್ಪಿರಲಿಕ್ಕಿಲ್ಲ ಆದರೆ ಅದೇ ಚಟವಾಗದಿದ್ದರೆ ಸಾಕು..
sunaath ಅವರಿಗೆ:
ಇನ್ನೂ ಬಹಳ ಇವೆ ನಮ್ಮ ಬತ್ತಳಿಕೆಯಲ್ಲಿ ಇನ್ನೂ ಸಾಕಷ್ಟು ಬರಲಿವೆ ...
Rajesh Manjunath - ರಾಜೇಶ್ ಮಂಜುನಾಥ್ ಅವರಿಗೆ:
ಬಹಳ ಜನರಿಗೆ ಹಾಗೆ ಅನಿಸಿಬಿಡುತ್ತದೆ, ಹುಚ್ಚ್ಚು ಹುಡುಗನ ಕೆಲ ಕಲ್ಪನೆಗಳು... ಹೀಗೆ ಬರುತ್ತಿರಿ...
ಸಿಂಧು ಭಟ್ ಅವರಿಗೆ:
ಸಲಹೆ ಚೆನ್ನಾಗಿದೆ.. ಆದರೆ ನನಗೆ ಚಿಕ್ಕದಾಗಿ ಚೊಕ್ಕದಾಗಿ ಬರೆಯಲು ಬರುವುದಿಲ್ಲವಲ್ಲ.. ಏನು ಮಾಡೋದು ಪ್ರಯತ್ನಿಸುತ್ತೇನೆ ನೋಡೋಣ..
Annapoorna Daithota ಅವರಿಗೆ:
ಥ್ಯಾಂಕ್ಸ್, ಬರುತ್ತಿರಿ...
maaya ಅವರಿಗೆ:
ಏನೋ ಕಲ್ಪನೆಗಳು ಬಂದು ಕಾಡುತ್ತವೆ ಬರೆಯುತ್ತೇನೆ... ಖುಷಿಯಷ್ಟೇ ಪಡದೆ, ಕೊನೆ ಕೊಟ್ಟಿರುವ ಸಂದೇಶವನ್ನೂ ಅರ್ಥ ಮಾಡಿಕೊಂಡರೆ ಚನ್ನಾಗಿರುತ್ತದೆ...
Tumba chennagi barediddira. I too agree with Sindhu. Please try to write in short.
Regards,
Manuu
Hi
Nimma nasheya kalpane thumba chennagide. E nimma kalpanegalige sundaravada bannagalannu thumbuvantha sangathi aadastu bega sigali endu haraisuthene.
To Anonymous: As I said earlier to Sindhu, I may try to do so in future... but I can't write simple and short... I just go with the flow of imaginations and I can't cut it down... and if I start modifying to keep it short... it might loose the original feelings with which I wrote... I usually give PDF doc also so whoever can’t read online can download and read offline it in their leisure time...
To Nisha:
kalpanegaLige baNNa tuMBuva saMgaati sikkare jeevanave kaamanbillu(Rainbow) aagabahudu harikegaLige DhanyawaadagaLu..
It was just a suggestion. Your Wish. Thanks,
Manuu
To Anonymous:
Thanks you for suggestion, I just mentioned some other options for the offline reading... I might try but not sure about the result...
ಇದು ಕಲ್ಪನೆಯಾಗಿದ್ದರೆ, ನಿಮ್ಮ ಕಲ್ಪನೆಗೆ ಒಂದು ಸಾಷ್ಟಾಂಗ ನಮಸ್ಕಾರ. ಅದ್ಭುತವಾಗಿದೆ. ನಿಮ್ಮ ಬರವಣಿಗೆ ಶೈಲಿಯಂತೂ, ಓದುತ್ತಿದ್ದಾಗ ಮುಖದಲ್ಲಿ ನಗು ಮರೆಯಾಗುವುದೇ ಇಲ್ಲ. ಇನ್ನೂ ಹೆಚ್ಚು ಹೆಚ್ಚು ಬರಲಿ. ಕೊನೆಗೆ ಬರೆದಿರುವ ನಿಮ್ಮ ತತ್ವವೂ ವಿಚಾರ ಯೋಗ್ಯ!
guruve ಅವರಿಗೆ
ಕಲ್ಪನೆಯನ್ನೋದಂತೂ ನಿಜ... ಬರವಣಿಗೆ ಮೆಚ್ಚಿದ್ದಕ್ಕೆ ಧನ್ಯವಾದಗಳು...ಏನೋ ತತ್ವ ಅಂತ ಬರೆದಿರುತ್ತೀನೆ.. ಯಾವುದು ಸರಿ ಯಾವುದು ತಪ್ಪು ಓದುಗರಿಗೆ ಬಿಟ್ಟಿದ್ದು..
ಕುಡಿಯೋದು ಖಂಡಿತ ತಪ್ಪು !
ಅದ್ರೆ ........
ತಪ್ಪು ಮಾಡದೋರ್ ಯಾರವ್ರೆ?
ತಪ್ಪೇ ಮಾಡದೋರ್ ಎಲ್ಲವ್ರೆ?........
ಪ್ರಭು,
ಬ್ಲಾಗಿಗೆ ಬರಲು ಕೆಲಸದ ಒತ್ತಡದಿಂದ ತಡವಾಯಿತು....
ಲೇಖನ ಓದುತ್ತಿದ್ದಂತೆ... ನಗು ತಡೆಯಲಾಗಲಿಲ್ಲ.....ಸಿಕ್ಕಾಪಟ್ಟೆ ರೊಮ್ಯಾಂಟಿಕ್ ಆಗಿ ಬರೀತೀರಿ....
"ಒಹ ಬಹಳ ಜನ ಇದಾರೆ, ನನ್ನ ಬೆರಳು ಸಾಕಗ್ತಿಲ್ಲ, ನಿನ್ನ ಬೆರಳೂ ಕೊಡು"
ಇದಂತೂ ಸಕ್ಕತ್ ಮಜಾ ಕೊಡುತ್ತೇ...ನಾನು ಯಾವತ್ತಾದರೂ ಇದನ್ನು[ಕುಡಿತ ಅಲ್ಲ ಬೆರಳೆಣಿಕೆಯ ಕೆಲಸ ಮಾತ್ರ] ಪ್ರಯತ್ನಿಸಿ ಮಜಾ ತಗೋತೀನಿ...
ಸಂದೀಪ್ ಕಾಮತ್ ಅವರಿಗೆ:
ನೀವು ಲೇಖನ ಅಷ್ಟೇ ಅಲ್ಲ ಕಾಮೆಂಟು ಕೂಡ ಚೆನ್ನಾಗಿ ಬರೀತೀರೀ.. ಕುಡಿಯೋದು ತಪ್ಪು ಯಾಕೆ ಅಂತೀರಾ.. ತಪ್ಪು ಅನ್ಕೊಂಡ್ರೆ ತಪ್ಪು ಸರಿ ಅನ್ಕೊಂಡ್ರೆ ಸರಿ...
shivu ಅವರಿಗೆ:
ಕೆಲಸದ ಒತ್ತಡದಲ್ಲೂ ಬ್ಲಾಗಿಗೆ ಬಂದಿದ್ದು ಓದಿ ಕಾಮೆಂಟು ಹಾಕಿದ್ದು.. ನೋಡಿ ಖುಷಿಯಾಯ್ತು.. ನನ್ನವಳು ಸಿಕ್ಕಾಪಟ್ಟೆ ರೊಮ್ಯಾಂಟಿಕ್ ನಾನಾದರೂ ಏನು ಮಾಡಲಿ.. ಬೆರಳೆಣಿಕೆ ಪ್ರಯತ್ನಿಸಿ.. ಏನಾಯ್ತು ಅಂತ ತಿಳಿಸಿ..
prabu.
nasheyerade lekana oodi tumba kushiyaithu..
papa nim manasi na estu sataisteera ri....haha
olle message ide ee nimma lekhanadalli
To shiva:
ಅವಳೇನು ಕಮ್ಮಿ ಸತಾಯಿಸುತ್ತಾಳಾ, ಪ್ರತೀ ಬಾರಿ ಬರೆದಾಗಲೂ ಏನಾದರೂ ಮೆಸೇಜ್ ಕೊಡಲು ಪ್ರಯತ್ನಿಸುತ್ತೀನಿ ಇಷ್ಟವಾದದ್ದು ಕೇಳಿ ಕುಶಿಯಾಯ್ತು..
hai.
Sir thumba super agide nim barahagalu.hosadagi barediro baraha edre tilisi sir pls.
Post a Comment