ಮುಂಜಾನೆ ಏಳಾಗಿತ್ತು, ಅಪ್ಪನಿಗೆ ಎಂಟಾದ ಮೇಲೆ ಸೂರ್ಯೊದಯ, ಅದರೂ ನಾವು ಬಂದಿದ್ದೀವಲ್ಲ ಅಂತ ಬೇಗ ಎದ್ದು ಪೇಪರ್ ಓದುತ್ತ ಕುಳಿತಿದ್ರು, ಇವಳು ಪಾಕಶಾಲೆಯಿಂದ ಹೊರಬಂದು ಅಪ್ಪನಿಗೆ ಚಹ ಕೊಟ್ಲು, ನನಗೇ ಅಂದಿದ್ದಕ್ಕೆ, ಮಾಡ್ತಿದೀನೀ ತಾಳಿ ಅಂತ ಗದರಿದಳು. ಅಪ್ಪ ಚಹ ಒಂದು ಸಿಪ್ಪು ಹೀರಿ, ಪಕ್ಕಾ ಉತ್ತರಕರ್ನಾಟಕದ ಸ್ಟೈಲಿನಲ್ಲಿ "ಚಾ ಭಾಳ ಚಲೋ ಮಾಡೀವಾ! ಸಕ್ರೀ ಗಿಕ್ರೀ ಅಗ್ದೀ ಕರೆಕ್ಟ ಹಾಕೀ" ಅಂತ ಹೊಗಳುತ್ತಿದ್ದಂತೇ, "ಅಲ್ಲ ಹಾಕಿ ಮಾಡೀನ್ರಿ ಕೆಮ್ಮಾ ಕಫಾ ಎಲ್ಲ ಕ್ಲಿಯರ ಆಗತೈತ್ರಿ" (ಅಲ್ಲ ಅಂದ್ರೆ, ಅದ ಶುಂಟಿ, ಅದರಕ್, ಜಿಂಜರ್ ಅಂತಾರಲ್ಲ ಅದು) ಅಂತ ಕೊಚ್ಚಿಕೊಂಡ್ಲು. ಮುಖ ಇಷ್ಟಗಲಾ ಮಾಡಿಕೊಂಡು ಹೆಮ್ಮೆಯಿಂದ ಈಕಡೆ ಬರ್ತಿದ್ದಂಗೆ ಅಮ್ಮ ಹಾಲು ಖಾಲಿ ಮಾಡಿದ್ದಕ್ಕೆ ಇವಳ ಬಯ್ಯದೇ, "ಹಾಲಿನ್ಯಾಗ್ ಚಾ ಬೇಕ ನಿಮ್ಮ ಮಾವಾರಿಗೆ, ನೀನರ ಎನ್ ಮಾಡಿ ಬಿಡ" ಅಂತ ಸಪೊರ್ಟ್ ಮಾಡಿದ್ದು ಕೇಳ್ತು. ಶುಧ್ಧ ಪೆಕರನಂತೆ ನಾ ಕೂತಿದ್ದು ನೋಡಿ ತಂಗಿ ಇವ್ಳ ಕಿವಿಯಲ್ಲಿ ಏನೊ ಊದಿ ನಕ್ಕದ್ದು ಕಂಡಿತು... ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...
ಊರಲ್ಲಿದ್ದೆ, ಅಪ್ಪ ಅಮ್ಮ ಎಲ್ಲ ನೋಡಿ ಮಾತಾಡಿ ಬರಲು ಹೊಗಿದ್ದೆ. ಇತ್ತೀಚೆಗೆ ನಾನೇ ಹೊರಗಿನವನೇನೋ ಅನ್ನುವಷ್ಟು ನನ್ನವಳು ಅವರೊಂದಿಗೆ ಬೆರೆತು ಹೋಗಿದ್ದಾಳೆ. ಅಮ್ಮ ಅವಳ ಸಪೊರ್ಟ್ ಮಾಡೋದೇನು, ಅಪ್ಪ ಅವಳ ಹೊಗಳುವುದೆನೋ, ತಂಗಿ ಅವಳು ಗೆಳತಿಯರಂತೆ ಗುಸುಗುಸು ಮಾತಾಡಿಕೊಳ್ಳೊದೇನು... ಒಂದೇ ಎರಡೇ... ಇದೆಲ್ಲ ಢಿಡೀರೆಂದು ಆದ ಬದಲಾವಣೆಯೇನಲ್ಲ... ಹೆಚ್ಚು ವರದಕ್ಷಿಣೆ ತಂದ ಸೊಸೆಗೆ ತೋರುವ ನಾಟಕದ ಪ್ರೀತಿಯಲ್ಲ... ಇದಕ್ಕೆಲ್ಲ ಕಾರಣ ನಾನು... ಹೌದು ನಾನೇ ಅಂತ ಹೆಮ್ಮೆಯಿಂದ ಬೇಕಾದರೆ ಜಂಭದಿಂದ ಹೇಳಿಕೊಳ್ಳುತ್ತೇನೆ.
ಮದುವೆಯಾದ ಹೊಸತರಲ್ಲಿ ಮೊದಲ ರಾತ್ರಿಗೆ ಎಲ್ಲರೂ ಸಾಕಷ್ಟು ಮಾತಾಡಿ ತಯ್ಯಾರಿ ಮಾಡಿಕೊಳ್ಳೊದು, ಆದ್ರೆ ನಾನು ಮೊದಲು ಬಿಟ್ಟು ಮುಂಬರುವ ಹಲವು ರಾತ್ರಿಗಳಿಗೆ ನಿದ್ರೆ ಬರದಂತೆ ಚಿಂತೆ ಹಚ್ಚಿ ಕಾಡುವ ಸಾಂಸಾರಿಕ ಗೊಂದಲಗಳು ಹುಟ್ಟದಂತೆ ಮಾಡಲು ಸಿದ್ದತೆ ಮಾಡುತ್ತಿದ್ದೆ... ಎಷ್ಟೊ ಮದುವೆಗಳ ನೋಡಿದ್ದ ನನಗೆ ನಾನೂ ಅವಲ್ಲೊಬ್ಬನಾಗಬಹುದು ಅನ್ನೊ ಭಯ ಬೇರೆ ಇತ್ತು. ಅದಕ್ಕೆ ಮದುವೆಗೆ ಮುಂಚೆ ನಾವಿಬ್ಬರೂ ಮಾತಾಡಿದಾಗಲೆಲ್ಲ, ಮನೆಯ ಪ್ರತೀ ಚಿಕ್ಕ ಪುಟ್ಟ ವಿಷಯಗಳು ಪ್ರಸ್ತಾಪವಾಗುತ್ತಿದ್ದವು. ಶುಗರ್ ಕಾಯಿಲೆ ಇಲ್ದಿದ್ರೂ ಅಪ್ಪನ ಸಕ್ಕರೆಯಿಲ್ಲದ ಚಹ, ಅಮ್ಮನ ಇಷ್ಟದ ಧಾರಾವಾಹಿಗಳು, ತಂಗಿಯ ಫೆವರಿಟ್ ಸ್ಟಾರುಗಳು, ಅಷ್ಟೇ ಅಲ್ಲ ಮನೆಗೆ ಕೆಲಸಕ್ಕೆ ಬರುವ ಪ್ರತೀ ಮನೆಗೆಲಸದವರು, ಅವರ ಇಷ್ಟಾನಿಷ್ಟಗಳು ಅವಳಿಗೆ ಗೊತ್ತಾಗಿತ್ತು, ಅವಳೊ ಬೆರಳು ಕೊಟ್ರೆ ಕೈ ನುಂಗೊ ಜಾಯಮಾನದವಳು, ಚಹಕ್ಕೆ ಜಿಂಜರ ಸೇರಿಸಿ ಅಪ್ಪನ ಫುಲ್ ಇಂಪ್ರೆಸ್ ಮಾಡಿಬಿಟ್ಟಿದ್ಲು... ಹೌದು ಇದರಲ್ಲಿ ಅವಳ ಪಾತ್ರವೂ ಇದೆ, ನಾನು ಹೇಳಿದ್ದೆಲ್ಲ ಅರ್ಥ ಮಾಡಿಕೊಂಡು ಹೊಂದಾಣಿಕೆ ಮಾಡಿಕೊಂಡಿದ್ದು ಅವಳೇ ತಾನೆ...
ಇನ್ನೂ ನೆನಪಿದೆ, ಇವಳ ನೋಡಲು ಹೋಗಿದ್ದು, ಹುಡುಗಿ ನೋಡಿಯಾದ ಮೇಲೆ ನೀವಿಬ್ಬರೂ ಏನಾದ್ರೂ ಮಾತಾಡೋದು ಇದ್ರೆ ಅಂತಿದ್ದಂಗೆ ಅವಳು ಕೈಗೊಂದು ಪುಟಾಣಿ ಮರಿ(ಮಗು) ಎತ್ಕೊಂಡು ಮನೆಯ ಟೆರ್ರೆಸ್ಸಿಗೆ ಬಂದ್ಲು, ಆ ಪುಟಾಣಿ ಕಾವಲಿಗೆ ಬಂದಿದ್ದು, ಸೆಕ್ಯೂರಿಟಿ!, ಏನು ಇವಳ ತಿಂದು ಬಿಡ್ತಿದ್ನಾ!!! ನನಗೆ ಎಂಥ ಹೆಂಡತಿ ಬೇಕೆಂದು ನಾ ಕೊರೆಯದೆ, ನಿಮಗೆ ಎಂಥ ಗಂಡ ಬೇಕು ಅಂತದಿದ್ದಕ್ಕೆ, ನಿಮ್ಮಂತಿದ್ದರೆ ಸಾಕು ಅಂತ ಬಾಂಬ್ ಹಾಕಿ ಬಿಟ್ಟಿದ್ಲು, ಅವಳಿಗೆ ಇಂಥದ್ದೇ ಆದ ಕಲ್ಪನೆಗಳೇನಿಲ್ಲ ಅಂತ ಗೊತ್ತಾಗಿ ಹೋಗಿತ್ತು. ನಿಮಗೆ ಎಂಥ ಹೆಂಡತಿ ಬೇಕು ಅಂತ ಮರು ಪ್ರಶ್ನೆಯೊಂದು ತೂರಿ ಬಂದಿತ್ತು. ನನಗೆ ಹೆಂಡತಿಗಿಂತ ನಮ್ಮನೆಗೆ ಸೊಸೆ ಬೇಕು ಅಂತ ಸೂಚ್ಯವಾಗಿ ಹೇಳಿದ್ದಕ್ಕೆ, ನನಗೆ ಮನೆ ಮಗಳಾಗಿ ಬರುವ ಆಸೆ ಅಂತ ಜಾಣ ಉತ್ತರ ನೀಡಿ ಮನಸ ಗೆದ್ದು ಬಿಟ್ಟಿದ್ಲು.
ಮದುವೆಯಾಗಿ ಬಂದ ಮೊದಲ ದಿನದಿಂದಲೇ ಎಲ್ಲರ ಮೋಡಿ ಮಾಡಿ ಬಿಟ್ಲು, ಅಮ್ಮ ಮಾಡುತ್ತಿದ್ದ ಚಹಕ್ಕೆ ಎರಡು ನಿಂಬೆಯ ಎಳೇ ಎಲೆ ಹಾಕಿದ್ಲು ಅಷ್ಟೇ, ಎಲ್ರೂ ಲೆಮನ್ ಫ್ಲೇವರ್ ಟೀ ಮೆಚ್ಚಿದ್ದಕ್ಕೆ ಅಮ್ಮ ಸೊಸೆ ಮಾಡಿದ್ದು, ಸೊಸೆ ಮಾಡಿದ್ದು ಅಂತಾ ಹೇಳುತ್ತ ಹೆಮ್ಮೆಯಿಂದ ತಿರುಗಿದ್ದು ನೋಡಿ, ನನಗೇ ನಂಬಲಾಗಿರಲಿಲ್ಲ... ಆವತ್ತಿನ ಆ ಲೆಮನ್ ಟೀನಿಂದ ಇಂದಿನ ಈ ಜಿಂಜರ ಟೀವರೆಗೂ ಅವಳೊಂದಿನಿತೂ ಬದಲಾಗಿಲ್ಲ, ಅವಳ ಮೇಲಿನ ಎಲ್ಲರ ಪ್ರೀತಿ ಡಬಲ್ ಟ್ರಿಬಲ್ ಆಗುತ್ತ ಹೊರಟಿದೆ.
ಊರಿಗೆ ಹೋಗಿದ್ದೆ ತಡ ಅವಳು ಬಂದಿದ್ದು ಎಲ್ಲರಿಗೂ ಗೊತ್ತಾಗಿರುತ್ತೆ, ಮನೆಗೆಲಸದವರೂ ಮಗ ಸೊಸೆ ಬಂದಿದ್ದಾರೆ ಅವರ ಮನೆಗೆ ಬೇಗ ಹೋಗಬೇಕು ಅಂತ ಬೇರೆ ಮನೆ ಕೆಲಸ ಬಿಟ್ಟು ಓಡೊಡಿ ಬರ್ತಾರೆ. ಕೆಲಸದವರ ಮಗ ಮಗಳ ಹೆಸರಿನಿಂದ ಹಿಡಿದು ಯಾರು ಯಾವ ಕ್ಲಾಸಲ್ಲಿ ಓದ್ತಿದಾರೆ ಅನ್ನೋದು ಕೂಡ ನೆನಪಿಟ್ಟುಕೊಂಡು ಕೇಳ್ತಾಳೆ, ಕ್ಲಾಸಿಗೆ ಫಸ್ಟ್ ಬಂದ್ರೆ ಕೊಡಿಸ್ತೀನೆಂದ ಹೇಳಿ ಉಬ್ಬಿಸಿ ಓದುವಂತೆ ಮಾಡಿದ ಅವರ ಮಗನಿಗೆ ಬ್ಯಾಗು ಮರೆಯದೆ ತಂದಿರ್ತಾಳೆ, ಅದಕ್ಕೆ ಕೊಟ್ಟಿದ್ದು ನೂರೈವತ್ತೇ ಆದ್ರೂ, ಮನೆಗೆಲಸದವಳು ಊರಿಗೆಲ್ಲ ಟಾಂ ಟಾಂ ಅಂತಾ ಬೆಂಗಳೂರಿನಿಂದ ಬ್ಯಾಗು ತಂದು ಕೊಟ್ಟಿದ್ದಾರೆ ಅಂತ ಸಾರಿಕೊಂಡು ಬಂದಿರುತ್ತಾಳೆ. ನಿಜವಾಗ್ಲೂ ಕೆಲಸದವರ ಬಗ್ಗೆ ಕಾಳಜಿವಹಿಸಿ ನೋಡಿ ಮನೆಯ ನೆಮ್ಮದಿಯಲ್ಲಿ ಅವರ ಪಾಲೂ ಇರುತ್ತೆ, ಅದಕ್ಕೆ ಅಲ್ವೆ ನಾ ಮನೆಗೆಲಸದವರ ವಿವರವನ್ನೂ ಇವಳಿಗೆ ಹೇಳಿದ್ದು.
ಅಮ್ಮ ಎಣ್ಣೆ ಬಿಸಿ ಮಾಡಿ ತಲೆ ತುಂಬ ಹಚ್ಚಿ ಅವಳ ಎಣ್ಣೆ ಸ್ನಾನಕ್ಕೆ ರೆಡಿ ಮಾಡುತ್ತಿದ್ರು, ಹೋಗಿ ಕೂದಲ ಹಿಡಿದೆಳದು ತವರು ಮನೆಲೂ ನಿನಗಿಷ್ಟು ಆರೈಕೆ ಮಾಡ್ತಾರಿಲ್ಲೊ ಅಂತ ಛೇಡಿಸಿ ಬಂದೆ, ಅಮ್ಮನೂ ಅಷ್ಟೇ ಅವಳ ಮಗಳಂತೇ ನೋಡಿಕೊಂಡಿದಾರೆ, ಮದುವೆಗೆ ಹುಡುಗಿ ಹುಡುಕುವಾಗಲೇ ಈಗೆಲ್ಲ ಒಳ್ಳೆ ಸೊಸೆ ಸಿಗೊದು ಕಷ್ಟ ಅಂತ ಹೇಳ್ತಾ ಹೇಳ್ತಾ ಸೊಸೆ ಮೇಲಿನ ಅವರ ನಿರೀಕ್ಷೆ (ಎಕ್ಸಪೆಕ್ಟೇಶನ್) ಕಮ್ಮಿ ಮಾಡುತ್ತ ಬಂದಿದ್ದೆ, ಹೀಗಾಗಿ ಅವರೂ ಹೊಂದಾಣಿಕೆ ಮಾಡಿಕೊಳ್ಳಲು ಅಣಿಯಾಗಿದ್ರು. ಅದಕ್ಕೆ ಕೆಲವು ಸಾರಿ ಅವಳ ತಪ್ಪುಗಳನ್ನೂ ಕೂಡ ಅವರು ಸಮರ್ಥಿಸಿಕೊಳ್ಳೊದು.
ಸ್ನಾನ ಮುಗಿದು, ಅಮ್ಮನ ಕೈಯಡಿಗೆ ರುಚಿ ನೋಡಿ, ಬಾಯಿ ಚಪ್ಪರಿಸುತ್ತ ಹೊರ ಬಂದೆ, ಏನೇ ಅನ್ನಿ ಹೆಂಡತಿ ಎಷ್ಟೇ ಪಂಚ ಪಕ್ವಾನ್ನ ಮಾಡಿ ಹಾಕಲಿ ಅಮ್ಮನ ಕೈ ರುಚಿಯೇ ಬೇರೆ, ಇದು ಎಲ್ಲರೂ ಒಪ್ಪಲೇ ಬೇಕು. ಇಲ್ಲಿ ನೊಡಿದ್ರೆ ತಂಗಿ ಇವಳು ನನ್ನ ಲ್ಯಾಪಟಾಪ್ ತೆಗೆದು ಯಾವುದೊ ಫಿಲ್ಮ್ ನೊಡುತ್ತ ಕುಳಿತಿದ್ರು, ಇವಳು ನೊಡಿರ್ತಾಳೆ ಆದ್ರೂ ತಂಗಿಗೆ ಕಂಪನಿ ಕೊಡಲು ಕೂತಿದ್ಲು, ಮೇಲ್ ಚೆಕ್ ಮಾಡ್ಬೇಕು ಲ್ಯಾಪಟಾಪ್ ಕೊಡು ಅಂತಂದಿದ್ದಕ್ಕೆ ತಂಗಿ ಕೊಟ್ಟಿರೋಳು, ಇವಳು ನಡುವೆ ಬಾಯಿ ಹಾಕಿ "ರೀ ಇಂಜನೀಯರ್ರು ಸಾಹೇಬ್ರೆ, ಊರಿಗೆ ಬಂದಾಗ್ಲಾದ್ರೂ ಕಂಪ್ಯೂಟರ್ ಕುಟ್ಟೊದು ಬಿಡಿ" ಅಂತ ಬೈದು, ನನ್ನ ಲ್ಯಾಪ್ ಮೇಲೆ ಎರ್ಇ ಕುಳಿತು ಕಿವಿಯಲ್ಲಿ "ನಿಮಗೆ ಲ್ಯಾಪಟಾಪ್ ಬೇಕಿದ್ರೆ ನಾನಿದೀನಲ್ಲ" ಅಂತ ಉಸಿರಿದ್ಲು. ತಂಗಿ ಮುಸಿ ಮುಸಿ ನಗುತ್ತಿದ್ದು ನೋಡಿ ನಾಚಿ, ಅಪ್ಪನೊಂದಿಗೆ ಹರಟಲು ಹೊರಗೆ ಬಂದು ಕಟ್ಟೆ ಮೇಲೆ ಕುಳಿತೆ, ಇನ್ನು ಅಪ್ಪನೊಂದಿಗೆ ಹರಟೆ ಅಂದ್ರೆ ನಾ ತಾಸು ಎರಡು ತಾಸು ಆಕಡೆ ಸುಳಿಯಲ್ಲ ಅಂತ ಗ್ಯಾರಂಟಿಯಾಗಿ, ಅವರಿಬ್ರೂ ಕರೀನಾಳ ಹೊಸ ಬಾಯಫ್ರೆಂಡ ಯಾರು ಅಂತಾ ಚರ್ಚಿಸುತ್ತ ಫಿಲ್ಮ್ ನೋಡತೊಡಗಿದ್ರು.
ಸಂಜೆಯಾಗುತ್ತಿದ್ದಂತೆ ಟೀವೀ ನೊಡುತ್ತ ಕುಳಿತವನನ್ನು ರೀ ಧಾರಾವಾಹಿ ಟೈಮ್ ಆಯ್ತು ರಿಮೊಟು ಕೊಡಿ ಅಂದ್ಲು, ಅಮ್ಮನ ಫೇವರಿಟ್ಟು ಧಾರಾವಾಹಿ ಹತ್ತೋದಿರಬೇಕು, "ಧಾರಾವಾಹಿ ಯಾವುದು, ಮನೆಯೊಂದು ಮುರಿದ ಬಾಗಿಲಾ" ಅಂತ ಕೇಳಿದೆ ಅಲ್ಲ ಅಂತ ರಿಮೊಟು ಕಸಿದುಕೊಂಡು, "ಅತ್ತೆ ಮನೆಯೊಂದು ಮೂರು ಬಾಗಿಲು ಧಾರಾವಾಹಿ ಹತ್ತಿತು ಬನ್ನಿ" ಅಂತ ಚೀರಿದ್ಲು, "ಸ್ವರೂಪಾ ಬಂದ್ರೆ ಕರೀ" ಅಂತ ಎದ್ದು ಬಂದೆ, ಅದೇ "ಈ ಟೀವೀ" ಮನೆಯೊಂದು ಮೂರು ಬಾಗಿಲು ಧಾರಾವಾಹಿ ಕ್ಯಾರೆಕ್ಟರ್ರು ಸ್ವರೂಪಾ ನೊಡೋಕೆ ಚೆನ್ನಾಗಿದಾಳೆ, ಕಣ್ಣಲ್ಲೇ ನಟಿಸಿಬಿಡ್ತಾಳೆ, ಅದ್ಕೆ ಅಲ್ವೆ ನಾ ರಾತ್ರಿ ಒಂಬತ್ತರ ಮುಂದೆ ಅಮ್ಮ ನೊಡದಿದ್ರೂ ಆ "ಮುಕ್ತ ಮುಕ್ತ" ಧಾರಾವಾಹೀಲಿ ಕಲ್ಯಾಣಿಯಾಗಿಯೂ ಬರುವ ಅವಳ ನೋಡಲು ಕೂತ್ಕೊಳ್ಳೊದು, ಅದು ಇವಳಿಗೂ ಗೊತ್ತು, ಆಗ ಇವಳು ಅಮ್ಮ ಸೇರಿ ನನಗೆ ರಿಮೊಟು ಕೊಡದೆ ಸತಾಯಿಸಿ ಮಜಾ ತೊಗೊಳ್ಳೊದು ಕೇಳಲೇಬೇಡಿ...
ಹೀಗೆ ಬಂದುಳಿದು ಐದು ದಿನಗಳಾಗಿದ್ದು ಗೊತ್ತೇ ಆಗ್ಲಿಲ್ಲ, ಮತ್ತೆ ಬೆಂಗಳೂರಿಗೆ ಹೊರಡುವಾಗ ಅಮ್ಮ ಮಾಡಿದ ಉಪ್ಪಿನಕಾಯಿ ಶೇಂಗಾ(ನೆಲಗಡಲೆ, ಕಳ್ಳೆಕಾಯಿ) ಚಟ್ನಿ, ಬೆಳಗಾವಿ ಕುಂದಾ(ಸ್ವೀಟ್, ಪೇಡ ಹಾಗೆ ಇರುತ್ತೆ) ಎಲ್ಲ ಕಟ್ಟಿಸಿಕೊಂಡು ಒಂದು ದೊಡ್ಡ ಬ್ಯಾಗು ಮಾಡಿಕೊಂಡಿರ್ತಾಳೆ, ಇದೆಲ್ಲ ಹೊರೋಕೆ ಕತ್ತೆನೇ ಬೇಕು ಅಂದ್ರೆ ನೀವಿದೀರಲ್ಲ ಅಂತ ಕಾಂಪ್ಲಿಮೆಂಟು ಕೊಟ್ಟು ನನ್ನ ಕತ್ತೆ ಮಾಡಿರ್ತಾಳೆ. ಎಲ್ಲ ಹೊತ್ತುಕೊಂಡು ಬಸ್ಸು ಏರಿ ಕುಳಿತ್ರೆ, "ಅವ್ಳು ನಮ್ಮ ಇವರ ಸೊಸೆ ಅಲ್ವಾ, ಬಹಳ ಓಳ್ಳೆಯವ್ರು ಅಂತಾ ಕೇಳೀದೀನಿ" ಅಂತಾ ಇವಳ ಕಂಡು ಹಿಂದಿನ ಸೀಟಿನಲ್ಲಿ ಯಾರೊ ಮಾತಾಡಿದ್ದು ಕೇಳಿ, ಪ್ರೀತಿ ಉಕ್ಕಿ ಬಂದು ಸ್ಲೀಪರ ಕೊಚ್ನ ಪರದೆ ಎಳೆದು ಇವಳ ಬರಸೆಳೆದು ಮುತ್ತಿಡ್ತೀನಿ, ಈ ಬಸ್ಸಿನವ್ರು ಸ್ಲೀಪರ ಕೊಚ್ ಮಾಡಿ ದೊಡ್ಡ ತಪ್ಪು ಮಾಡಿದ್ರು ನೋಡಿ ಅಂತ ಗೊಣಗುತ್ತ ಕೊಸರಿಕೊಂಡು ಆ ಪಕ್ಕ ಜರುಗಿದ್ರೂ ಮತ್ತೆ ಸರಿದು ನನ್ನ ಸುತ್ತ ಒಂದು ಕೈ ಹಾಕಿ ನಿದ್ದೆ ಹೊದ್ಲು, ಎಷ್ಟೋ ಹೊತ್ತು ಮಲಗಿದವಳ ಮುಖ ಹಾಗೇ ನೊಡುತ್ತಿದ್ದೆ. ರಾತ್ರಿಯೆಲ್ಲ ಬಸ್ಸಿನ ಸದ್ದಿನಲ್ಲಿ ನಿದ್ದೆ ಹತ್ತದಿದ್ರೂ ಯಾಕೋ ಮನಸ್ಸಿಗೆ ನೆಮ್ಮದಿಯಿತ್ತು...
ಇಷ್ಟೆಲ್ಲ ನಾ ಮಾಡುತ್ತಿರುವುದು ನನ್ನವರಿಗೊಸ್ಕರ, ಮಾಡಿಸುತ್ತಿರುವುದೂ ನನ್ನವರಿಂದ, ಇದೆಲ್ಲ ನನ್ನವರದ್ದೇ... ಅದಕ್ಕೇ ಅಬ್ರಾಹ್ಂ ಲಿಂಕನ್ ಹೇಳಿದ್ದು ಜನರ, ಜನರಿಂದ, ಜನರಿಗೊಸ್ಕರ ಇರುವ ಸರ್ಕಾರವೇ ಪ್ರಜಾಪ್ರಭುತ್ವ ಅಂತಾ, ಅದೇ ನಾ ತಿರುಚಿ ಬರೆದದ್ದು ನನ್ನವರ ನನ್ನವರಿಂದ ನನ್ನವರಿಗೋಸ್ಕರ ನಾ ನಡೆಸುತ್ತಿರುವ ಸಂಸಾರವೇ ಈ ನನ್ನ ಪ್ರಭುತ್ವ... ಹೆಸರೇ ಪ್ರಭು ಅಲ್ವೆ ಅಂತ ಇವಳು ಟೀಕಿಸಿದ್ದಕ್ಕೂ ಸರಿ ಹೊಯ್ತು...
ಮತ್ತೊಂದಿಷ್ಟು ಮಾತಿನೊಂದಿಗೆ ಮತ್ತೆ ಸಿಕ್ತೀನೀ... ನಿಮ್ಮನಿಸಿಕೆ ಬರೀರಿ...
The PDF document can be found at http://www.telprabhu.com/nannavara.pdf
ಬಹಳ ಜನ ಕೇಳ್ತಾ ಇದಾರೆ, ಮದುವೇನೆ ಆಗಿಲ್ಲ ಇಂಥ ಲೇಖನ ಯಾಕೆ ಮತ್ತು ಹೇಗೆ ಬರೀತಿದೀಯಾ ಏನು ಮದುವೆಗೆ ಅರ್ಜೆಂಟಾ ಅಂತಾ, ನಾ ಹೀಗೆ ಬರೆದ ಹಲವು ಲೇಖನ ಓದಿ, ರೀ ನಿಮ್ಮ ಅಡ್ಡ ಹೆಸರೂ ಸರೀ ಇದೆ ಮೂಗಿ ಅಂದ್ರೆ ಮಾತು ಬರಲ್ಲ ಅದಕ್ಕೆ ಬರವಣಿಗೆ ಮೂಲಕ ನಿಮ್ಮ ಆಸೆ ಕಲ್ಪನೆ ವಿವರಣೆ ಎಲ್ಲ ಕೊಡ್ತಾ ಇದೀರ ಎನು ಅಂತಾ ಒಬ್ರು ಛೇಡಿಸಿದ್ರು, ನಿಜ ಇದೆಲ್ಲ ನಾ ಮಾತಿನಲ್ಲಿ ಹೇಳಲಾಗದೆ ಬರೀತಿರೊದು, ಬರೆದದ್ದು ನನ್ನವಳಾಗುವವಳಿಗೆ ಅರ್ಥವಾಗಿ ಕಲ್ಪನೆಗಳಲ್ಲಿ ಕಿಂಚಿತ್ತು ನಿಜವಾದ್ರೂ ಬರೆದದ್ದು ಸಾರ್ಥಕ...
ಹಾಗೇ ಬ್ಲಾಗಿನ ಎಲ್ಲ ಅಭಿಮಾನಿ ಓದುಗರಿಗೆ, ಅಭಿಮಾನವಿಲ್ಲದೆಯೂ ಓದುವವರಿಗೆ, ಪ್ರೀತಿಯಿಂದ ಪತ್ರ (ಇ-ಅಂಚೆ -> ಇಂಚೆ) ಬರೆದವರಿಗೆ, ಕಾಮೆಂಟು ಕೊಟ್ಟವರಿಗೆ, ನನ್ನ ಹಾಗೂ ನನ್ನವಳ, ಪಕ್ಕದ ಮನೆ ಪದ್ದು, ಹಾಲಿನಂಗಡಿ ಹಾಸಿನಿ, ಹೂವು ಮಾರುವ ಗುಲಾಬಿ, ಪರಿಚಯದ ಪರಿಮಳ, ಕಿರಾಣಿ ಅಂಗಡಿಯ ಕೀರ್ತಿಯ ಪರವಾಗಿ ಹೊಸ ವರ್ಷದ ಹಾರ್ದಿಕ ಶುಭಾಶಯಗಳು
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದು
13 comments:
Very Intresting article to read. I loved and enjoyed it.
Thank you very much for the comment Anonymous reader [ha ha ha :)], It would have been better if you could have written your name at least. keep visiting...
Hey very nice article Prabhu, i keep checking blog always looking for new article..... became so addicted :)
Excellent imagination and a right message for readers though
Thank you very much for comment Aradhya, I am not getting enough personal time now a days because of hectic work, that is the reason articles are getting delayed... otherwise I am also addicted to writing...
I am thrilled much more to write more as the message is reaching the people and you said addicted to read, what else a writer can expect more than this...
Thanks a lot keep visiting...
ತುಂಬಾ ಚೆನ್ನಾಗಿದೆ ಪ್ರಭು,
"ಹುಡುಗಿ ನೋಡಿಯಾದ ಮೇಲೆ ನೀವಿಬ್ಬರೂ ಏನಾದ್ರೂ ಮಾತಾಡೋದು ಇದ್ರೆ ಅಂತಿದ್ದಂಗೆ ಅವಳು ಕೈಗೊಂದು ಪುಟಾಣಿ ಮರಿ(ಮಗು) ಎತ್ಕೊಂಡು ಮನೆಯ ಟೆರ್ರೆಸ್ಸಿಗೆ ಬಂದ್ಲು, ಆ ಪುಟಾಣಿ ಕಾವಲಿಗೆ ಬಂದಿದ್ದು, ಸೆಕ್ಯೂರಿಟಿ!, ಏನು ಇವಳ ತಿಂದು ಬಿಡ್ತಿದ್ನಾ!!!"-ಈ ವಾಕ್ಯ ನನ್ನ ಮದುವೆ ಮುಂಚಿನ ದಿನಗಳನ್ನು ನೆನಪು ಮಾಡಿಸಿತು ಹ ಹ ಹ ಏಕೆಂದರೆ ನಾನು ಮೊದಲ ಭಾರಿ ನನ್ನ ಪತಿರಾಯರೊಂದಿಗೆ ಮಾತನಾಡಲು ಹೋದಾಗ ಸೆಕ್ಯೂರಿಟಿ ಕರ್ಕೊಂಡು ಹೋಗಿದ್ದೆ ಹ ಹ ಹ
ಪ್ರತಿಕ್ರಿಯೆಗೆ ತುಂಬಾ ಧನ್ಯವಾದ...
ನೀವೂ ಸೆಕ್ಯೂರಿಟಿ ಅಂತ ಪುಟಾಣಿ ಕರ್ಕೊಂಡು ಹೋಗಿದ್ದು ಕೇಳಿ ನಗು ಬಂತು...
ಅದೇನೊ ಗೊತ್ತಿಲ್ಲ, ಹಲವು ಬಾರಿ ಹುಡುಗಿಯರು ಹಾಗೆ ಮಾಡುವುದು ನೊಡಿದ್ದೆ ಅದಕ್ಕೆ ಬರೆದೆ...
ಮತ್ತೆ ಮತ್ತೆ ಭೇಟಿ ಕೊಡ್ತಾ ಇರಿ...
hiiiiiiiiiiii
its fantastic..........nice.....
i read it ur article.. tdy i have lot of work still i couldn control so i read full article its fantastic... u know first time i went meet my hubby i took my mom.... ha ha ha... but he wasnt know that.. finally i told him..ha ha ha... ok i wil tel my comments tomo....
Thank you very much for the feedback, Sorry for the late response as I'm bit busy with lot of work, I didn't get time.
Providing some insights about the such real life incidents was very helpful for me in writing this...
keep visiting...
Very good i enjoyed reading it with flow...Keep the good work.
Visit my blog
http://kannadamalli.blogspot.com
Thank you very much for the feedback, I am very much thrilled to get a nice comment from a veteran blogger like you.
your blog is very nice, I am yet to read many posts there, It's really a big collection...
keep visiting...
Ri nivu estondu channagi baradre hudganna aarisodu kasta agatte ;)
Anonymous ಅವರಿಗೆ
ರೀ, ಹುಡುಗ ಹಾಗೆ ಇರಬೇಕು ಅಂತ ಯಾಕೆ ಭಾವಿಸಬೇಕು... ಹುಡುಗಿಯೇ ಮನೆಯ ಸೂಕ್ಷ್ಮ ವಿಚಾರಗಳನ್ನು ತಿಳಿದುಕೊಂಡರೆ ಅದೂ ಚೆನ್ನಾಗಿರಲ್ವೇ... ಈಗೀಗ ಮೊದಲೇ ಸೊಸೆಯಂದಿರು ಅತ್ತೆ ಮೇಲೆ ಯುಧ್ಧ ಸಾರಿಕೊಂಡೇ ಬರ್ತಾರೆ ಅಲ್ಲೆ ತೊಂದ್ರೆ ಆಗೋದು :)
ನನ್ನ ಮದುವೆ ಆಗೊ ಹುಡುಗಿಗೆ ನಾ ಹೀಗೆ ಸ್ವಲ್ಪ ಹೆಲ್ಪ್ ಮಾಡಬಹುದೇನೊ ಆದರೆ ಎಲ್ಲಾ ಅವಳು ಹೇಗೆ ಸ್ಪಂದಿಸುತ್ತಾಳೊ ಅನ್ನುವುದರ ಮೇಲೆ ಅವಲಂಬಿಸಿದೆ ಅಲ್ವೇ...
I started reading your articles from 3 days, started with your very first one. Cant stop reading these :) So addictive. And the way you have written is really very cute and its not easy to leave the smile on face while reading. People who do not know what I am reading might think I am crazy smiling so much looking at my laptop :)
Its long since i read anything in Kannada. PUC was last as far as I remember. With your first article I struggled reading it, but mow i can read it fluently :)
Just wanna say, its a nice stress buster too as I am a Hardware and Software Engineer.
Thanks a lot for sharing such good articles with us :)
Post a Comment