ಸಂಜೆ ಆಫೀಸಿನಿಂದ ಬೇಗ ಬಂದಿದ್ದೆ, ಇವಳು ಮನೆಯಲ್ಲಿರಲಿಲ್ಲ, ಅದೇ ಯಾರದೋ ಮನೇಲಿ ಮಗುವಿನ ಹುಟ್ಟು ಹಬ್ಬವಿದೆ ಅಂತ ಮೊದಲೇ ಹೇಳಿದ್ದರಿಂದ ಅವಳಿಗೇನು ಫೊನು ಮಾಡಿರಲಿಲ್ಲ, ಸೀದಾ ಮನೆಗೆ ಬಂದವನೇ ನನಗೆ ನಾನೇ ಒಂದು ಕಪ್ಪು ಟೀ ಮಾಡಿಕೊಂಡು ಸೊಫಾದ ಮೇಲೆ ಇತ್ತ ಮಲಗಿದ ಹಾಗೂ ಇಲ್ಲ, ಇತ್ತ ಕೂತ ಹಾಗೂ ಅಲ್ಲ ಹಾಗೆ ಬಿದ್ದುಕೊಂಡು ಟೀ ಹೀರುತ್ತಿದ್ದೆ. ಪಕ್ಕದ ಟೀಪಾಯಿ ಮೇಲೆ ಏರಟೆಲ್ ಮೊಬೈಲು ಬಿಲ್ಲು ಪೊಸ್ಟ್ ಬಿದ್ದಿತ್ತು. ಎನೂ ಕೆಲಸವಿಲ್ಲದ ತಲೆ ದೆವ್ವದ ಮನೆಯೆನ್ನುವಂತೆ ಎಂದೂ ನೋಡದ ಬಿಲ್ಲು ನೋಡತೊಡಗಿದೆ, ಇತ್ತೀಚೆಗೆ ಮೊಬೈಲು ಬಿಲ್ಲುಗಳು ಪ್ರತೀ ಕರೆಯ ವಿವರವನ್ನೂ ಕೂಡ ಕೊಡತೊಡಗಿರುವುದರಿಂದ, ಕಂಪನಿಗಳಿಗೆ ಆಫರ್ ಎಂದು ನೂರಾರು ನಿಮಿಷ ಫ್ರೀ ಬೇರೇ ಇರೊದ್ರಿಂದ ಪುಕ್ಕಟೆ ಫೊನು ಮಾಡಿದ್ದೆ ಮಾಡಿದ್ದು ನಾಲ್ಕೈದು ಪುಟ ನಂಬರುಗಳೇ ತುಂಬಿದ್ದವು, ಎಲ್ಲಿಗೆ ಮಾಡಿದ್ದು, ಯಾವಾಗ, ಎಷ್ಟೊತ್ತು ಮಾತಾಡಿದ್ದು, ಎಲ್ಲ ಇತ್ತು. ಹಾಗೇ ನೋಡುತ್ತಿದ್ದವನಿಗೆ ಕಾಣಿಸಿದ್ದೊಂದು ಗೊತ್ತಿಲ್ಲದ ಮೊಬೈಲು ನಂಬರು ಒಂದೇ ದಿನದಲ್ಲಿ ಮೂರು ಗಂಟೆ ಮೂವತ್ತೈದು ನಿಮಿಷ ಮಾತಾಡಿದ್ದು....
ಇವಳು ನಾನು ಮದುವೆಗೆ ಮುಂಚೆ ಮಾತಾಡಿದಾಗ ಬಂದ ಬಿಲ್ಲುಗಳು ಸೇರಿಸಿದ್ದರೆ ಎಷ್ಟು ಕೇಜಿ ರದ್ದಿಯಾಗಿರುತ್ತಿತ್ತೊ ಏನೋ, ಈಗ ನಾನು ನನ್ನ ಕೆಲಸದಲ್ಲಿ ಬಿಜಿ, ಹೇಗೂ ಮನೆಯಲ್ಲಿದ್ದಾಳಲ್ಲ ಅಂತ ಉದಾಸೀನ ಬೇರ್ಏ, ಫೊನಿನಲ್ಲಿ ಮಾತೇ ಕಮ್ಮಿಯಾಗಿ ಹೋಗಿದೆ. ಅದರೂ ಇದ್ಯಾರು ಇವಳು ಯಾರ ಜೊತೆ ಇಷ್ಟೊತ್ತು ಮಾತಾಡಿದ್ದು, ನನಗೇ ಗೊತ್ತಿಲ್ಲದೇ ಅನುಮಾನದ ಎಳೆಯೊಂದು ಹೊರಹೊಮ್ಮಿತು... ಇಲ್ಲ ಇಲ್ಲ ಅಂತ ಮನಸು ಹೇಳುತ್ತಿದ್ದರೂ, ಮನೆಯ ಫೊನಿನಿಂದ ಒಂದು ಸಾರಿ ಫೊನು ಮಾಡಿದೆ, ಆಕಡೆಯಿಂದ ಅದ್ಯಾವುದೋ ದನಿ, ಅವನ್ಯಾರೋ ಗೊತ್ತಿಲ್ಲ, ಸುಮ್ಮನೆ "ವಿ ಅರ್ ಕಾಲಿಂಗ್ ಫ್ರಾಮ್ ಕಂಟ್ರಿ ಕ್ಲಬ್ ಸರ್.." ಅಂತ ಏನೊ ಬಡಬಡಿಸಿದೆ, ಆಕಡೆಯಿಂದ ಅದೇ ನಾ ಇಂಥ ಕರ್ಎಗಳಿಗೆ ಉತ್ತರಿಸುವಂತೆ "ನಾಟ್ ಇಂಟ್ರೆಸ್ಟೆಡ್.." ಮಾಮೂಲಿ ಉತ್ತರ ಬಂತು.
ಯಾರಿರಬಹುದು?, ಅದ್ಯಾಕೆ ಅವನ ಜೊತೆ ಅಷ್ಟೊತ್ತು ಮಾತಾಡಿದ್ದು? ಎಷ್ಟು ದಿನದಿಂದ ಹೀಗೆ? ಎಷ್ಟೊ ಪ್ರಶ್ನೆಗಳ ತಾಕಲಾಟ ನಡುನಡುವೆ ಇವಳು ಹಾಗಿಲ್ಲ, ಏನೊ ಬೇರೆ ಇರಬೇಕು, ಅಂತ ನನಗೆ ನನ್ನ ಮನಸೇ ಸಮಾಧಾನಿಸುವಂತಿತ್ತು...
ಇದೆಲ್ಲ ತಲೆ ತುಂಬಿ, ಕೊಲಾಹಲವೆದ್ದು ಕಲಸುಮೇಲೊಗರವಾಗಿ, ಟೆನ್ಷನ್ ನಿಂದ ತಲೆನೊವು ಶುರುವಾಗಿ ಇನ್ನೊಂದು ಕಪ್ಪು ಟೀ ಮಾಡಿ ಕುಡಿಯತೊಡಗಿದೆ, ಆದರೂ ಅದ್ಯಾಕೊ ರುಚಿಸಲಿಲ್ಲ, ಒಂದು ಯೊಚಿಸಹೋಗಿ ಇನ್ನೊಂದು ತಿಳಿಯುವಂತೆ, ಇನ್ನೂ ಮನೆಗೆ ಯಾಕೆ ಬಂದಿಲ್ಲ, ಈಗ ಎಲ್ಲಿ ಹೋಗಿದ್ದಾಳೆ, ಇಷ್ಟೊತ್ತಿಗೆಲ್ಲ ಬರಬೇಕಿತ್ತಲ್ಲ ಅಂತೆಲ್ಲ ತಲೆ ಚಚ್ಚಿಕೊಳ್ಳತೊಡಗಿದೆ.
ಅವಳು ಮನೆಗೆ ಬಂದಾಗ ಎಂಟೂವರೆ, ಅಷ್ಟೊತ್ತಿಗೆಲ್ಲ ನಾನು ಏನೇನೊ ಯೋಚಿಸಿಯಾಗಿತ್ತು. ಬರ್ತಿದ್ದಂಗೆ "ಏನು ಇಷ್ಟೊತ್ತು ಎಲ್ಲಿ ಹೋಗಿದ್ದೆ, ಬೇಗ ಬರಬೇಕಿತ್ತು" ಅಂತ ಹರಿಹಾಯ್ದೆ. ಎಂದೂ ಇಲ್ಲದ ನನ್ನ ಸಿಟ್ಟು ನೋಡಿ ಅವಳು ದಂಗುಬಡಿದಂತಿತ್ತು, "ಏನು ನೀವು ದಿನಾಲು ಬೇಗ ಬರೋ ಹಾಗೆ ಹೇಳ್ತಿದೀರಲ್ಲ, ಒಂದು ದಿನ ನಾನಿಲ್ಲದೇ ಕಾಯೋಕೆ ಬೇಜಾರಾ, ನಾನು ದಿನಾಲೂ ಕಾಯ್ತೀನಲ್ಲ" ಅಂತ ತಿರುಗಿಬಿದ್ಲು. ಸುಮ್ಮನಾದೆ, ಆದರೇನು ತಲೆಯಲ್ಲಿ ಇನ್ನೂ ಹುಳು ಕೊರೆದಂಗೆ ಆ ನಂಬರ್ರು ಕೊರೆಯುತ್ತಿತ್ತು. ಎಂದೂ ಶಾಂತವಾಗಿ ಊಟ ಮಾಡದ ನಾವಿಬ್ಬರೂ ಸುಮ್ಮನೆ ಊಟ ಮುಗಿಸಿ ಎದ್ದೆವು, ಮಾತನಾಡಲೇನು ಇರಲಿಲ್ಲ, ಎಲ್ಲ ತಲೆ ತುಂಬ ಹಲವು ಯೋಚನೆಗಳ ಕೊಲಾಹಲ ಮಾತ್ರ, ನನ್ನಲ್ಲಾದ ಬದಲಾವಣೆ ಅವಳು ಗಮನಿಸಿದ್ಲು, ಅವಳೂ ಮಾತಿಗಿಂತ ಮೌನ ಲೇಸು ಅಂದುಕೊಂಡಂತಿತ್ತು. ಇಲ್ಲಾಂದ್ರೆ ಸಾರು ಹೇಗಿದೆ ಅಂತಾನೊ, ಆಫೀಸಿನಲ್ಲಿ ನಿಮ್ಮ ಪಕ್ಕ ಕೂರೊ ಹುಡುಗಿ ಈವತ್ತು ಯಾವ ಡ್ರೆಸ ಹಾಕಿದ್ಲು ಅಂತಾನೊ, ಏನೊ ಒಂದು ಸುದ್ದಿ ತೆಗೆದು ಕೆದಕಿ ಮಾತಾಡೋಳು, ಅವಳಿಗೆ ಮಾತಾಡೋಕೆ ಮಾತು ಬೇಕು ಅಷ್ಟೇ. ಈಗ ಅವನ್ಯಾರೋ ಸಿಕ್ಕೀದಾನಲ್ಲ, ನನ್ನೊಂದಿಗೇನಿದೆ ಮಾತಾಡೋಕೆ ಅಂದುಕೊಂಡೆ.
ಕೇಳಿ ಬಿಡಲೇ ಯಾರದು ಅಂತ, ನಿಜವಾಗಲೂ ಅವನ್ಯಾರೋ ಇದ್ರೆ, ಇವಳ ಬಿಟ್ಟುಕೊಡಲಾಗುತ್ತಾ, ಯಾರೂ ಇಲ್ಲಾಂದ್ರೆ, ನಾನು ಅವಳ ಬಗ್ಗೆ ಹೇಗೆ ಯೊಚಿಸಿದೆನಲ್ಲ ಅಂತ ಏನಂದುಕೊಂಡಾಳು, ಹೀಗೆ ಏನೇನೊ ಯೋಚಿಸುತ್ತ ಹಾಸಿಗೆಯಲ್ಲಿ ಉರುಳಿದೆ. ನಿದ್ದೆಯಂತೂ ಯಾವಾಗಲೋ ಹಾರಿ ಹೋಗಿತ್ತು. ಇನ್ನೂ ಅವಳು ಏನೊ ಕೆಲಸದಲ್ಲಿದ್ಲು ಅಂತ ಕಾಣುತ್ತೆ ಬರುವುದು ಸ್ವಲ್ಪ ಹೊತ್ತಾಯಿತು, ಅದರೂ ನಾನಿನ್ನೂ ಏನೂ ನಿರ್ಣಯಕ್ಕೆ ಬಂದಿರಲಿಲ್ಲ, ಕೇಳುವುದೊ ಬೇಡವೊ ಅನ್ನೊ ತಾಕಲಾಟದಲ್ಲೇ ಇದ್ದೆ. ಬಂದು ಪಕ್ಕದಲ್ಲೇ ಸುಮ್ಮನೆ ಮಲಗಿದಳು, ನನಗೀಗ ಅವಳ ಮೌನ ಸಹಿಸಲಸಾಧ್ಯವಾಯ್ತು. ಸದಾ ಚಟಪಟ ಅಂತ ಮಾತಾಡುವ ಅವಳ ಕೆಲವೊಂದು ಸಾರಿ ನಾನೇ ಬೈದು ಸುಮ್ಮನಾಗಿಸಬೇಕು, ಅದೇಕೊ ಮನೆ ಭೂತಬಂಗಲೆಯಂತೆ ನಿಶಬ್ದವಾದಂತನಿಸಿತು. ಅವಳಿಗೂ ನಿದ್ರೆ ಬಂದಂತಿರಲಿಲ್ಲ, ನನ್ನ ಕಾಡದೇ ಅದೆಂದು ಮಲಗಿಯಾಳು, ತವರುಮನೆಗೆ ಹೋದಾಗಲೂ ಫೊನು ಮಾಡಿ ತಲೆ ತಿಂದಾಗಲೇ ಸಮಾಧಾನ.
ಮಗ್ಗಲು ಬದಲಿಸಿದೆ, ಯೊಚನೆಯೂ ಮಗ್ಗಲು ಬದಲಿಸಿದಂತಿತ್ತು, ಮತ್ತೆ ಮಂಥನ ಶುರು, ಆದರೆ ಈ ಸಾರಿ ತರ್ಕದ ತಕ್ಕಡಿಯಲ್ಲಿ ಪ್ರತಿಯೊಂದು ತೂಗುತ್ತಿದ್ದೆ, ಮದುವೆಯಾಗಿ ಇಷ್ಟು ವರ್ಷವಾಯ್ತು, ಎಂದಾದರೂ ಅವಳು ನನ್ನ ಯಾವತ್ತಾದರೂ ಹಾಗೆ ಅನುಮಾನದಿಂದ ನೋಡಿದ್ದಾಳಾ, ನನ್ನೀ ಚೆಲುವೆಯರ ಚೆಲ್ಲಾಟಗಳ ಬಗ್ಗೆ ಚಕಾರವೆತ್ತಿದ್ದಾಳಾ, ಹೋಗ್ಲಿ ಯಾರಯಾರಿಗೊ ಅಪ್ಸರೆ, ಅಪ್ಪಟ ಗೊಂಬೆಯಂತಿದ್ದಾಳೆ ಅಂದಾಗ ಅಸೂಯೆ ಪಟ್ಟಿದ್ದಾಳಾ. ಇಲ್ಲವಲ್ಲ ಅನುಮಾನ ಪಡಲು ಹಲವು ಅವಕಾಶಗಳಿದ್ದಾಗಲೂ ಅವಳಿಗೆಷ್ಟು ನಂಬಿಕೆ, ನಾನೋ ಯಾವುದೋ ಒಂದು ನಂಬರು, ಮಾತಾಡಿದ್ದು ಮೂರು ತಾಸು ಅಷ್ಟಕ್ಕೆ ಅನುಮಾನ ಪಟ್ಟೆನಲ್ಲ, ಛೀ... ಅನ್ನಿಸಿತು, ಪಕ್ಕದ ಮನೆ ಪದ್ದು, ಹಾಸಿನಿ ಎನ್ನುತ್ತ ಸುತ್ತುವ ನಾನು ಅವಳಿಗೆ ಯಾವ ಸಮ... ಅವಳಿಟ್ಟಿರುವ ಅಷ್ಟು ಪ್ರೀತಿಗೆ ನಾ ನಾಲಾಯಕ್ಕು ಅನ್ನಿಸಿ ಪಾಪಪ್ರಜ್ನೆ ಕಾಡತೊಡಗಿತು... ಹೇಳೊಕೂ ಆಗದೆ, ಬಿಡೊಕೂ ಆಗದೇ ನನ್ನಷ್ಟಕ್ಕೆ ನಾನೇ ಬೆವರಿದೆ... ಅವಳೆಡೆಗೆ ನೋಡಲೂ ಕೂಡ ನನಗೆ ನನ್ನಷ್ಟಕ್ಕೆ ನಾಚಿಕೆಯಾಯ್ತು, ಮತ್ತೆಂದೂ ಅವಳ ಬಗ್ಗೆ ಹಾಗೆ ಯೋಚಿಸೊಲ್ಲ ಅಂತನ್ನಕೊಳ್ಳತೊಡಗಿದೆ. ಅದ್ಯಾಕೊ ಇನ್ನು ತಡೆಯಲಾಗಲಿಲ್ಲ, ಕೈ ಹಿಡಿದು ಎಳೆದೆ, ಕೈ ಕೊಸರಿಕೊಂಡ್ಲು... ಅಯ್ಯೊ ಅವಳಿಗೆ ಸಿಟ್ಟು ಬಂದಂತಿದೆ, ಏನು ಮಾಡ್ಲಿ ಅಂತ ಯೊಚಿಸುವುದರಲ್ಲಿ, ನೀರವ ಮೌನ ಮುರಿದು ಅದೊ ಆಕಡೆಯಿಂದ ಪ್ರಶ್ನೆಯೊಂದು ತೂರಿ ಬಂತು "ನೀವೇನೊ ಮುಚ್ಚಿಡ್ತೀದೀರ..." ತಕ್ಷಣ ತಡವರಿಸುತ್ತ "ಇಲ್ಲ ಹಾಗೇನಿಲ್ಲ" ಅಂತಿದ್ದಂಗೆ " ಇದೊ ಸುಳ್ಳು ಬೇರೆ..." ಅಂತಂದ್ಲು. ಅಷ್ಟೇ ಮಾತೇ ಹೊರಡಲಿಲ್ಲ, ಬಿಸಿತುಪ್ಪ ಬಾಯಲ್ಲಿ ಬಿದ್ದಿತ್ತು, ಉಗುಳುವುದಾ, ನುಂಗುವುದಾ, ಎರಡೇ ಆಯ್ಕೆಗಳು.
ನಂಗೆ ಸುಳ್ಳು ಹೇಳೋಕೆ ಬರೊಲ್ಲ, ಬಂದರೂ ಅವಳ ಮುಂದೆ ಅಂತೂ ಅಸಾಧ್ಯ, ಮುಖ ನೊಡೇ ಗುರುತು ಹಿಡಿದು ಬಿಡ್ತಾಳೆ. ಈಗಂತೂ ಎಕ್ಸಪರ್ಟ್ ಆಗೀದಾಳೆ ಮುಖ ನೊಡದೇ ದನಿಯಲ್ಲೇ ಗೊತ್ತಾಗಿದೆ. ನಾ ಬಾತರೂಮಿನಲ್ಲಿದ್ದು ಬರುವುದು ತಡವಾಗಿಹೊದರೆ ಕರೆದಳೆಂದ್ರೆ, ಲೇ ಬನಿಯನ್ನು ಹಾಕೊತಿದೀನಿ ಬಂದೆ ಅಂದ್ರೆ, "ಆ ನಂಗೊತ್ತು ನಿಮ್ಮ ಬಾಡಿ ಮಸಲ್ಲು ನೊಡಿಕೊಂಡಿದ್ದು ಸಾಕು, ನೀವೇನೂ ಹೃತಿಕ್ ರೊಶನ್ನು ಆಗೊಲ್ಲ ಬನ್ನಿ" ಅಂತದಿರ್ತಾಳೆ "ನಿನಗೆ ಹೇಗೆ ಗೊತ್ತಾಯ್ತು ಬಾಗಿಲ ಸಂದಿಯಲ್ಲಿ ನೊಡ್ತಿದ್ಯಾ" ಅಂದ್ರೆ, "ನಿಮ್ಮ ಬಗ್ಗೆ ನಂಗೆ ಗೊತ್ತಿಲ್ವಾ, ಇಲ್ಲೆ ಕೂತ್ಕೊಂಡು ಎಲ್ಲ ಹೇಳ್ತೀನಿ" ಅಂತ ಸವಾಲೂ ಹಾಕಿರುತ್ತಾಳೆ... ಅದು ನಿಜಾನೆ ಅವಳ ನನ್ನ ಪ್ರತಿಯೊಂದು ನಡೆಯನ್ನೂ ಅರೆದು ಕುಡಿದಿದ್ದಾಳೆ.
"ಏನು ಯೋಚಿಸ್ತಿದೀರಾ, ಏನೊ ಕೇಳಬೇಕಿದೆ, ಆದರೆ ಆಗಲಿಂದ ಕೇಳುತ್ತಿಲ್ಲ" ಅಂತ ಮತ್ತೆ ಉಸುರಿದ್ಲು, ಬಿಸಿತುಪ್ಪ ಉಗುಳುವುದೇ ಸರಿಯೆನ್ನಿಸಿತು, ಗಂಟಲು ಸುಟ್ಟರೆ ತೊಂದ್ರೆ, ತುಪ್ಪ ಮತ್ತೆ ಕೊಂಡುಕೊಳ್ಳಬುದಲ್ವೆ. "ನಾನೀಗ ಹೇಳುವುದ ಕೇಳಿ ನೀನೇನು ಅಂದ್ಕೊತಿಯೇನೊ, ಏನಾದ್ರೂ ತಪ್ಪೆಲ್ಲ ನಂದೆ" ಅಂದ್ರೆ "ರೀ ಪುರಾಣ ಸಾಕು, ವಿಷಯಕ್ಕೆ ಬನ್ನಿ" ಅಂದ್ಲು, ಅವಳ ಕೈ ಗಟ್ಟಿಯಾಗಿ ಹಿಡಿದು ಒಂದೇಟಿಗೆ ಚಹ ಕುಡಿಯುವಾಗ ನೋಡಿದ ನಂಬರಿನಿಂದ, ಇದೊ ಈಗ ಪಕ್ಕದಲ್ಲಿ ಬಿಡ್ಕೊಂಡು ಯೊಚಿಸುತ್ತಿದ್ದದ್ದನ್ನೆಲ್ಲ ವರದಿ ಸಲ್ಲಿಸಿದೆ. ಎಲ್ಲಿ ಬಿಟ್ಟು ಓಡಿ ಹೋಗಿಯಾಳೆಂದು ಕೈಯಿನ್ನೂ ಬಿಗಿಯಾಗಿ ಹಿಡಿದಿದ್ದೆ, "ಬಿಡ್ರೀ ಕೈನಾ" ಚೀರಿದ್ಲು, ಸಿಟ್ಟು ಬಂದಿದೆ, ಇನ್ನು ಇವಳಿಲ್ಲಿರಲ್ಲ, ಅಷ್ಟೇ ಅಂತ ಪೆಚ್ಚು ಮೋರೆ ಹಾಕಿ ನೋಡಿದೆ. "ಇಷ್ಟೇನಾ?" ಅಂತ ನಿಟ್ಟುಸಿರು ಬಿಟ್ಟು "ಆ ನಂಬರ್ರು ಸುಧಾಕರಂದು" ಅಂದ್ಲು. ನಾನಿನ್ನು ಯಾರೀ ಸುಧಾಕರ ಏನು ಎತ್ತ ಎಂದು ಮತ್ತೆ ಯೋಚಿಸುವುದರೊಳಗೆ "ಅದೇ ನಮ್ಮ ಸೊಷಿಯಲ್ಲು ಕ್ಲಬ್ ಹುಡುಗಿ, ಸುಧಾ, ಆ ಸುಧಾ ತರಂಗ ಪತ್ರಿಕೆಯಲ್ಲೇ ತಲೆ ಹುದುಗಿಸಿ ಕೂಡುತ್ತಿದ್ದ ಹುಡುಗಿ, ನಾವೇ ಅಲ್ವೆ ಹೆಸರಿಟ್ಟಿದ್ದು, ಅವಳ ಕೈ(ಕರ) ಹಿಡಿಯಲಿರುವ ಹುಡುಗ, ಹೆಸರು ಗೊತ್ತಿಲ್ಲ ಅದ್ಕೆ, ಅವ್ನು ಸುಧಾ-ಕರ" ಅಂದ್ಲು, ಎನಿಲ್ಲ ಅವಳು ಮೊನ್ನೆ ಮನೆಗೆ ಬಂದಿದ್ದಾಳೆ, ಮದುವೆಗೆ ಮೊದಲು ಹುಡುಗ ಹುಡುಗಿ ಗಂಟೆಗಟ್ಲೆ ಮಾತಾಡೊಲ್ವೆ, ಮೊಬೈಲು ಬಿಲ್ಲು ಜಾಸ್ತಿ, ಅದ್ಕೆ ಇವಳು, ನನಗೆ ತಿಂಗಳಿಗೆ ಹತ್ತು ಗಂಟೆ ಫ್ರೀ ಮಾತಾಡು ಅಂತಾ ತನ್ನ ಮೊಬೈಲು ಕೊಟ್ಟೀದಾಳೆ, ಸಿಕ್ಕಿತು ಚಾನ್ಸು ಅಂತ ಸುಧಾ ಬರೊಬ್ಬರಿ ಮೂರೂವರೆ ಗಂಟೆ ಮಾತಾಡಿದ್ದಾಳೆ, ಅದೇ ನಾ ನೋಡಿ ಇಷ್ಟೆಲ್ಲ ರಾಧ್ಧಾಂತ ಮಾಡಿಕೊಂಡಿದ್ದು.
"ಸಮಾಧಾನ ಆಯ್ತಾ" ಅಂದ್ಲು ನನ್ನ ಕಣ್ಣಲ್ಲಿ ನೀರಾಡಿತು, ಮುಖ ತೋರಿಸಲಾಗದೆ ಮುಚ್ಚುತ್ತಿದೆ. "ರೀ ಯಾಕೆ" ಅಂದ್ಲು, "ಅಷ್ಟು ಒಳ್ಳೆಯವಳಾಗಬೇಡ ನನ್ನ ಮನ ಪೂರ್ತಿ ಬೈದು ಬಿಡು" ಅಂದೆ, "ರೀ ತಪ್ಪು ನಿಮ್ಮದಲ್ಲ, ನೀವು ನನ್ನ ಅಷ್ಟೊಂದು ಹಚ್ಚಿಕೊಂಡಿದೀರ" ಅಂದ್ಲು, ನನಗೇನೂ ತಿಳಿಯಲಿಲ್ಲ, ತಲೆಯ ಮೇಲೊಂದು ಪ್ರಶ್ನಾರ್ಥಕ ಚಿಹ್ನೆ ಎದ್ದಿರಬೇಕು, ಅವಳೇ ಹೇಳತೊಡಗಿದಳು. "ಮಗುವಿಗೊಂದು ಗೊಂಬೆ ಕೊಡಿ ಅದನ್ನ ಅದು ಹಚ್ಚಿಕೊಂಡು ಬಿಡುತ್ತೆ, ಅದೊಂಥರ ಅಟ್ಯಾಚ್ಮೆಂಟ್, ಅದಕ್ಕೆ ಅಷ್ಟು ಪ್ರೀತಿ, ಬೇರೆ ಮಗು ಬರಲಿ ನೋಡಿ ಅದು ಗೊಂಬೆ ಕೊಟ್ರೆ ಕೇಳಿ! ಎಲ್ಲೊ ಕಳೆದುಕೊಂಡು ಬಿಡ್ತೀನಿ ಅನ್ನೊ ಭಯ, ಅದೇ ನೀವು... ಅದೇ ಮಗುವಿನ ಅಮ್ಮ ನೋಡಿ, ಮಗು ಅಪ್ಪನ ಹತ್ತಿರ ಹೋಗ್ಲಿ, ಇಲ್ಲ ಅಕ್ಕ, ಮಾಮನ ಹತ್ರ ಹೋಗ್ಲಿ ಬೇಜಾರಿಲ್ಲ, ಮತ್ತೆ ತನ್ನೆಡೆ ಬಂದೆ ಬರುತ್ತೆ ಅನ್ನೊದು ನಂಬಿಕೆ, ಅದು ನಿಜ ಕೂಡ ಮಗುವಿನ ಮೇಲೆ ಅವಳ ಪ್ರೀತಿ ಕಮ್ಮಿಯೇನಾಗಲ್ಲ. ಅದೇ ನಮಗೂ ಅನ್ವಯಿಸುತ್ತೆ" ಏನೊ ಪಕ್ಕಾ ಸಿಧ್ಧಾಂತ ಮಂಡಿಸಿದ್ಲು, ಕರ್ರೆಕ್ಟೆ ಅಲ್ವಾ. ಇನ್ನೂ ಮುಂದುವರೆಸಿ "ಇಲ್ಲಿ ನೀವು ಅನುಮಾನಿಸಿದಿರಿ ಅನ್ನೋದು ಮುಖ್ಯ ಅಲ್ಲ, ನಿಮಗೇ ಗೊತ್ತಿಲ್ಲದೆ ನಿಮ್ಮ ಮನಸು ಹಾಗೆ ಮಾಡಿಸಿತು, ಮನೆಯೆ ಗೊಡೆ ಬಿರುಕು ಬಿಡುವುದು ಸಹಜ, ಬಿರುಕು ಕಂದಕವಾಗುವ ಮುಂಚೆ ಬಿರುಕು ತುಂಬಿ ಬಣ್ಣ ಬಳಿದು ಬಿಡಬೇಕು, ಬೆಳೆಯ ಬಿಡಬಾರದು, ಮನಸಲ್ಲೆ ಹಾಗೆ ತೊಳಲಾಡುತ್ತಿರದೆ ಕೇಳಿ ಬಿಡಬೇಕಿತ್ತು" ಅಂದ್ಲು "ನೀನೇನೊ ಸರಿ ಎನೂ ಅಂದುಕೊಳ್ಳದೇ ಹೃದಯ ವೈಶಾಲ್ಯದಿಂದ ಒಪ್ಪಿಕೊಂಡೆ, ಆದ್ರೆ ಎಲ್ರೂ ಹಾಗೆ ಇರಲ್ಲಾ ಆದ್ರೆ ನನಗೆ ನಿನ್ನ ಮೇಲೆ ನಂಬಿಕೆ ಇರಬೇಕಿತ್ತು, ಅನುಮಾನಿಸಿದ್ದು ನನ್ನ ಮೊದಲ ತಪ್ಪು" ಅಂದೆ "ಅದೂ ಸರಿ ಬಿಡಿ, ಕೇಳಿದರೂ ವಿಕೋಪಕ್ಕೆ ಹೋಗೊ ಚಾನ್ಸುಗಳೂ ಇರ್ತವೆ, ಆದ್ರೆ ನನ್ನ ಮುಂದೆ ನೀವೇನು ಮುಚ್ಚಿಡಬೇಕಿಲ್ಲ" ಅಂತ ಫುಲಟೈಂ ಪರಮಿಷನ್ನು ಕೊಟ್ಲು, ಎನು ಕೇಳಲೂ ಲೈಸನ್ಸು ಸಿಕ್ಕಂತಾಯ್ತು, ಅದ್ರೂ ನಾನಿನ್ನೆಂದೂ ಕೇಳಲಿಕ್ಕಿಲ್ಲ.
ವೀಕೆಂಡಿನ ಸುಂದರ ಸಂಜೆಯೊಂದು ನಂಬರಿನಿಂದ ಹಾಳಾಗಿ ಹೋಗಿತ್ತು, ಆದರೂ ಬಿರುಕು ತುಂಬಿ ಸಂಭಂದ ಮತ್ತಷ್ಟು ಗಟ್ಟಿಯಾಗಿತ್ತು. ಕ್ಷಣ ಮಾತ್ರದಲ್ಲೆ ಆಕಡೆಯೆಲ್ಲೊ ಮುಖ ಸಿಂಡರಿಸಿಕೊಂಡು ಬಿದ್ದವಳು, ಕೊರಳಿಗೆ ಸುತ್ತಿಕೊಂಡಿದ್ಲು, ಹುಚ್ಚು ಯೊಚನೆಗಳ ಹೊಯ್ದಾಟದಲ್ಲಿ ತಲೆ ಹುಚ್ಚೆದ್ದು ನೋಯುತ್ತಿತ್ತು. ಅದರೂ ಏಕೊ ಮನಸು ಏನೊ ಭಾರ ಇಳಿಸಿದಂತೆ ನಿರಾಳವಾಗಿತ್ತು, ತಲೆ ನೋವಿದೆಯೆಂದದ್ದಕ್ಕೆ ಇವಳ ಬೆರಳುಗಳು ಹಣೆಯ ಮೆಲೆ ಪರ್ಏಡು ನಡೆಸಿದ್ದವು. ಬೊಂಬೆ ಸಿಕ್ಕ ಮಗುವಿನಂತೆ ಬಾಚಿ ಅಪ್ಪಿಕೊಂಡಿದ್ದೆ, ಯಾರೂ ಕಿತ್ತುಕೊಳ್ಳದಂತೆ. ಬಹಳ ಹೊತ್ತು ಅವಳು ಸುಮ್ಮನಿರುವುದಿಲ್ಲ... "ರೀ ನಾಳೆ ಫಿಲ್ಮಗೆ ಕರ್ಕೊಂಡೊ ಹೊಗ್ತೀರಾ" ಅಂದ್ಲು..."ಹೂಂ 'ಗಜಿನಿ' ಹೊಗೋಣಾ" ಅಂದೆ ಎನ್ ಬೇಡ ಅವನ ಹಾಗೆ ನೀವು ನನ್ನ ಮರೆತುಬಿಟ್ರೆ ಅಂತಾ ಕಿಚಾಯಿಸಿದ್ಲು, "ಸರೀ ನಾವಿಬ್ಬರೂ ಪರಫೆಕ್ಟು ಜೋಡಿ ಅಲ್ವಾ 'ರಬ್ ನೆ ಬನಾ ದಿ ಜೊಡಿ' ಹೊಗೊಣಾ" ಅಂದಿದ್ದಕ್ಕೆ " ರೀ ಯಾವುದಾದ್ರೂ ಕನ್ನಡ ಫಿಲ್ಮ ಹೊಗೋಣ 'ಗುಲಾಮ' ಹೇಗೆ" ಅಂದ್ಲು ನಾನೇನು ನಿನ್ನ ಗುಲಾಮ ಅಲ್ಲ ಬರಲ್ಲ ಹೋಗು ಅಂದೆ, ಕೊನೆಗೆ "ಸರಿ 'ನೀನ್ಯಾರೆ' ಹೊಗೋಣ" ಅಂದ್ರೆ..."ರೀ ನಾನ ಕಣ್ರಿ ನಿಮ್ ಹೆಂಡ್ತಿ ನೀನ್ಯಾರೆ ಅಂತ ಕೇಳ್ತಿದೀರಲ್ಲ" ಅಂತ ತುಂಟಾಟಕ್ಕಿಳಿದಳು, ಫಿಲ್ಮ ನಾಳೆ ನೋಡಿದ್ರಾಯ್ತು ತುಂಟಿ ಬಿಟ್ಟರೆ ಮಾತಾಡ್ತಾನೇ ಇರ್ತಾಳೆ ಅಂತ ತುಟಿಗೆ ತುಟಿ ಲೊಕ್... ಅಹಾ ಏನ್ ಇನ್ನೂ ನೊಡ್ತಿದೀರ... ನಮ್ಮನೆ ನಮ್ಮ ಸಂಸಾರ, ಏನೊ ಸ್ವಲ್ಪ ಜಗಳ ಆಗ್ತಿರತ್ತೆ... ಗಂಡ ಹೆಂಡ್ತಿ ಜಗಳ ಉಂಡು ಮಲಗೊ ತನಕ ಅಂತಾರೆ... ನೀವು ಅನುಮಾನಿಸಿ ನಿಮ್ಮನೇಲಿ ಬಿರುಕು ಬಿಡದಂದೆ ನೋಡಿಕೊಳ್ಳ ಹೋಗಿ... ಹ ಹ ಹ ಹ...
ಮತ್ತೊಂದಿಷ್ಟು ಮಾತಿನೊಂದಿಗೆ ಮತ್ತೆ ಸಿಕ್ತೀನೀ... ನಿಮ್ಮನಿಸಿಕೆ ಬರೀರಿ...
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...
The PDF document can be found at http://www.telprabhu.com/biruku.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು
8 comments:
ಏನ್ರೀ ಪ್ರಭು, ಎಷ್ಟು ವರ್ಷದ ಅನುಭವ ಮದುವೆ ಎಂಬ ಜೀವನದಲ್ಲಿ, ತುಂಬಾ ಚೆನ್ನಾಗಿದೆ ಈ ಆರ್ಟಿಕಲ್, ಏನ್ ತಲೆನ್ರಿ ನಿಮ್ಮದು, ನಾನ್ ನಿಜವಾಗ್ಲೂ ನಿಮ್ಮ ದೊಡ್ಡ ಫ್ಯಾನ್,,,,ಆಗಿ ಬಿಟ್ಟಿದ್ದೀನಿ.... ಈ ಆರ್ಟಿಕಲ್ ನಿಂದ ತುಂಬಾ ಕಲಿಬಹುದು, ದಿನ ನಿತ್ಯದ ಜೀವನವನ್ನು ಸುಗಮವಾಗಿಸಬಹುದು, ಎಲ್ಲದಕ್ಕೂ ತಾಳಿಮೆ ಇರಬೇಕು, ಎನೆಅದ್ರು ಈ ಆರ್ಟಿಕಲ್ ನೋಡಿ ತುಂಬಾ ಕುಷಿಯಾಯ್ತು, ತುಂಬಾ ಧನ್ಯವಾದಗಳು,
ಹೇಮಾ-ಹೇಮಂತ್
ತುಂಬಾ ಚೆನ್ನಾಗಿದೆ, ಮುಂಬರುವ ಸಂಸಾರ ಸಾಗರವೆಂಬ ಜೀವನಕ್ಕೆ ಕಿವಿಮಾತುಗಳನ್ನು ಈಗಿಂದಲೇ ಅನುಭವಿಸಿ, ರುಚಿಸಿರೀ ಹ ಹ ಹ ... ನಿಮಗೆ ಒಳ್ಳೆಯದಾಗಲಿ ಹಾಗು ನಮ್ಮಂತವರಿಗೋ ಕಿವಿಮಾತು ತಿಳಿಸಿದಕ್ಕೆ ಧನ್ಯವಾದಗಳು.
ಗಂಡ ಹೆಂಡತಿ ಇಬ್ಬರಲ್ಲಿ ನಂಬಿಕೆ, ಪ್ರೀತಿ, ವಿಶ್ವಾಸ ಇದ್ದರೆ ಸಂಸಾರ ಎಂಬ ಗಾಡಿ ಸುಲಲಿತವಾಗಿ ಸಾಗುತ್ತೆ.
Nice article prabhu
Good writing!
ಕಥೆ ತುಂಬ ಚೆನ್ನಾಗಿ ಇಧೆ.........
ಕೆಲಸದ ಒತ್ತಡದಲ್ಲಿ ಪ್ರತಿಕ್ರಿಯೆ ಬರೆಯಲಾಗಿರಲಿಲ್ಲ, ಅದಕ್ಕೆ ತಡವಾಗಿ ಪ್ರತಿಕ್ರಿಯಿಸಿದ್ದಕ್ಕೆ ಕ್ಷಮೆ ಇರಲಿ
To:Maaya
ಅನುಭವ ಎಲ್ಲಾ ಏನೂ ಇಲ್ಲಾ ಆದ್ರೆ ಸುಮ್ನೆ ಏನೋ ಕಲ್ಪನೆ ಕಟ್ಟಿ ಬರೀತೀನಿ ಇಷ್ಟ ಆಗಿದ್ದು ಕೇಳಿ ಖುಷಿಯಾಯ್ತು, ಫ್ಯಾನ್ ಎಲ್ಲ ಆಗ್ಬೇಡಿ ನಾನೇನು ಅಷ್ಟು ದೊಡ್ಡ ವ್ಯಕ್ತಿ ಅಲ್ಲ.
To :ಮನಸು
ಯಾರದೋ ಜೀವನದಲ್ಲಿ ಕಂಡ ಘಟನೆಗಳಿಂದ ಕಲಿತದ್ದು ಬಹಳ ಇದೆ, ಲೇಖನದ ಸ್ಸಾರ್ ಅರ್ಥವಾಗಿದ್ದಕ್ಕೆ ತೃಪ್ತಿಯಾಯ್ತು.
To: ಶಿವಪ್ರಕಾಶ್
Thank you very much keep visiting.
To: VidyaShankar Harapanahalli
Thank you, lot more yet to come, your feebacks helps to write more...
To:manu
ಇದು ಕಥೆಯಾಗಿದ್ದರೆ ಚೆನ್ನ, ನಿಜ ಜೀವನದಲ್ಲಿ ಇಂಥ ಅನುಮಾನಗಳು ಬರದಿರಲೆಂದೇ ಆಶಿಸುತ್ತೇನೆ
tumba chennagi baridira.. sannivesha mattu sodarbhavannu tumba swarasyakaravaagi upgisidira..
neevu valle barahagaar... office nalli bejaar aadag sanje nimma article nodi takshana tumba khushiyagutte...keep writing n will visiting ur blog
To:Raghavendra
tuMbaa thanks sir, enO bareeteeni, elroo chenngide aMtaare, naMgoo kushiyaagatte, baredaddakke samaadhaanaanoo aagutte.. bartiri...
Post a Comment