ಮುಂಜಾನೆ ಆರು ಘಂಟೆಗೇ ಎಬ್ಬಿಸಿದ್ಲು, ಊರಿಗೆ ಹೊರಟಿದ್ಲು, ಅವರ ಚಿಕ್ಕಪ್ಪನ ಮಗನ ಮದುವೆ ಅಂತೆ ಮದುವೆಗೆರಡು ದಿನ ಮೊದಲೇ ಬರುವಂತೆ ಹೇಳಿ ಹೋಗಿದ್ದರು, ಅಲ್ಲದೇ ಬೇರೆ ನಿನ್ನೆ ಫೋನು ಮಾಡಿ ಹೇಳಿದ್ರು. ಹೋಗಲೇಬೇಕಿತ್ತು. ಅಲ್ಲೇ ಮುಸುಕು ತೆಗೆದು "ಹೋಗಲೇಬೇಕೇನೆ?" ಅಂದೆ, "ಅದೇ ರೀ, ನಾನೂ ಬರೊಕಾಗಲ್ಲ ಅಂತ ಎಷ್ಟೊ ಹೇಳಿದೆ, ಅವರು ಕೇಳ್ತಿಲ್ಲ, ಫೋನು ಮಾಡಿ ಹೇಳಿಬಿಡ್ಲ" ಅಂದ್ಲು. "ಲೇ ನಿಮ್ಮ ಚಿಕ್ಕಪ್ಪನ ಮಗ, ಮದುವೆ ಎಲ್ಲಾ ಒಂದೇ ಸಾರಿ ಆಗೋದು, ಮತ್ತೆಲ್ಲಿ ಹೊಗೋಕಾಗುತ್ತೆ, ಹೋಗಿ ಬಾ" ಅಂದೆ. " ಅಯ್ಯೊ! ಅದೇನ್ರಿ ಹಾಗಂತೀರ ಒಂದೇ ಸಾರಿ ಮದುವೆ ಅಂತಾ... ಇನ್ನೇನು ಎಲ್ರೂ ನಾಲ್ಕೈದು ಸಾರಿ ಆಗ್ತಾರಾ ನಂಗೂ ಗೊತ್ತು" ಅಂತ ಸಿಡುಕಿದ್ಲು. "ಎನು ಗೊತ್ತು ಬದನೆಕಾಯಿ, ನೀನು ಪರ್ಮಿಷನ್ನು ಕೊಟ್ರೆ ಸಾಕು ಈಗಲೇ ಇನ್ನೆರಡು ಮದುವೆ ಆಗಿ ಬಿಡ್ತೀನಿ ಎನಂತೀಯಾ" ಅಂತ ಕಿಚಾಯಿಸಿದೆ. ಪಾಕಶಾಲೆಯಲ್ಲಿ ಎನೊ ಮಾಡ್ತಿದ್ದೊಳು ಕೈತೊಳೆದು ಬಂದು ತಲೆದಿಂಬಿನಿಂದ ನಾಲ್ಕು ಬಾರಿಸಿದ್ಲು. ತಲೆದಿಂಬು ಕಸಿದುಕೊಂಡು "ಆಯ್ತು ಸರೀ ಬೇರೆ ಯಾರೂ ಬೇಡ ಬಿಡು, ನಿಮ್ಮಪ್ಪನ್ನ ಕೇಳು, ಮದುವೆ ಇನ್ನೊಮ್ಮೆ ಮಾಡ್ತಾರೆ ಅಂದ್ರೆ ನಿನ್ನೇ ಇನ್ನೊಮ್ಮೆ ಮದುವೆ ಆಗ್ತೀನಿ" ಅಂದೆ. ಮುಖ ಕೆಂಪಗಾಗಿ ಸಾಕ್ಷಾತ ಚಂಡಿ ಚಾಮುಂಡಿ ದೇವಿ ದರ್ಶನ ಆಯ್ತು, ಕೈಮುಗಿದು.. ಇಲ್ಲೇ ಇದ್ರೆ ಇನ್ನೇನು ಕೈಗೆ ಸಿಗುತ್ತೊ ಅದನ್ನೇ ತುಗೊಂಡು ಬಾರಿಸ್ತಾಳೆ ಅಂತ ಅಲ್ಲಿಂದ ಪಲಾಯನ ಮಾಡಿದೆ. ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಓದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...
ಯಾವಾಗಲೂ ಹೀಗೆ ಸಿಟ್ಟಾಗಲ್ಲ, ಅವಳಿಗೂ ಹೋಗೊ ಮನಸಿಲ್ಲ, ಆದ್ರೂ ಹೋಗಬೇಕಿದೆ ಅದ್ಕೆ ಬೇಜಾರು ಅಷ್ಟೆ. ಇನ್ನೆರಡು ನಿಮಿಶಗಳಲ್ಲಿ ಮತ್ತೆ ಮಾಮೂಲಿ ತರಲೆ ಶುರು.. ಬ್ರಶು ಮಾಡುತ್ತಿದ್ದೊನಿಗೆ ಆಕಾಶವಾಣಿ ಆಯ್ತು!!! ಅಲ್ಲಲ್ಲ.. ಅವಳೇ ಇನ್ನೆರಡು ದಿನಗಳಿಗೆ ಏನೇನು ಅಂತ ಹೇಳುತ್ತಿದ್ಲು. "ರೀ, ಅಡುಗೆಮನೆ ಶೆಲ್ಫಿನ ಮೂರನೇ ಖಾನೇಲಿ ನಾಲ್ಕನೇ ಡಬ್ಬಿಲೀ ಚುರುಮುರಿ(ಮಂಡಕ್ಕಿ) ಇದೆ, ಅದು ಬೇಡ ಅಂದ್ರೆ ಎರಡನೇ ಡಬ್ಬೀಲಿ ಅವಲಕ್ಕಿ(ಪೋವೆ) ಇದೆ, ಸಂಜೆ ಟೀ ಜತೆ ತಿನ್ನೊಕೆ" ಇನ್ನೂ ಹೇಳೊಳಿದ್ಲು ನಾನೇ ತಡೆದು, "ಚೀಟಿ ಬರೆದು ಹಚ್ಚಿ ಬಿಡು ಅದೆಲ್ಲಿ ನೆನಪಿರತ್ತೆ" ಅಂದೆ, ಹೇಗೂ ಎಲ್ಲ ಡಬ್ಬಿ ಕಿತ್ತಾಡೊದು ಗ್ಯಾರಂಟಿ..."ಅರವತ್ತಕ್ಕೆ ಅರೆವು ಮರೆವು ಅಂತಾರೆ, ನಿಮ್ಗೆನು ಅರವತ್ತು ವಯಸ್ಸಾಯ್ತಾ?" ಅಂದ್ಲು, "ಹೂಂ ಮತ್ತೆ, ನಿನ್ಗಿಂತ ಎರಡೇ ವರ್ಷ ದೊಡ್ಡೊನು" ಅಂದೆ. "ಯಾಕ್ರೀ, ನಾನೇನು ಅಜ್ಜಿ ಆಗೊದ್ನಾ, ನಾನು ಚಿರಯೌವನೆ ಗೊತ್ತ" ಅಂದ್ಲು, "ಎಲ್ಲಾ ಹುಡುಗೀರು ಹೀಗೆ ಬಿಡು, ವಯಸ್ಸು ಕೇಳಿದ್ರೆ ಇಪ್ಪತ್ತೇ ಅಂತಾರೆ, ಎಲ್ಲ ಚಿರಯೌವನೆಯರೇ" ಅಂದೆ. "ಅದ ಬಿಡಿ, ನೀವ್ ವಾದ ಮಾಡೋಕೆ ಜಾಣರು... ಸಾಕ್ಸು ಕಬೊರ್ಡನಲ್ಲಿದೆ, ಇಲ್ಲ ಅಂತ ಅದೆ ಸಾಕ್ಸು ಹಾಕೊಂಡು ಹೊಗ್ಬೇಡಿ, ಎರಡು ಜತೆ ಶರ್ಟು ಪ್ಯಾಂಟು ತೆಗೆದು ಹೊರಗೇ ಇಟ್ಟೀದೀನಿ, ಬೀರು ಏನೂ ಕಿತ್ತಾಕೋದು ಬೇಕಿಲ್ಲ. ಅಡುಗೆ ಮಾಡೊ ಸಾಹಸ ಮಾಡ್ಬೇಡಿ, ಕೈ ಕುಯ್ದುಕೊಂಡ್ರೆ, ಆ ನಿಮ್ಮ ನರ್ಗೀಸ್!(ನರ್ಸ್) ಹತ್ರ ಬ್ಯಾಂಡೇಜು ಮಾಡ್ಸಕೊಂಡು ಬರೋಕೆ ನಾನಿರಲ್ಲ, ಅಡುಗೆಮನೆ ಬಚ್ಚಲುಮನೆ ಮಾಡಿ ಬಿಡ್ತೀರಿ ಸುಮ್ನೆ... ಇಂದು ರಾತ್ರಿವರೆಗೆ ಅಡುಗೆ ಇದೆ, ನಾಳೆ ಶಾಂತಿನೇ(ಶಾಂತಿ ಸಾಗರ ಹೊಟೆಲು) ಗತಿ" ಇನ್ನೂ ಉಪದೇಶ ಸಾಗಿರೊದು... ನಾನೇ ತಡೆದು "ಮೇಡಮ, ಎರಡೇ ದಿನದಲ್ಲಿ ಬರ್ತೀರ, ಹೊರಡಿ ಲೇಟಾಗುತ್ತೆ" ಅಂದೆ. ಮುಖ ತೊಳೆದು ಕಾಫೀ ಹೀರಿ, ಮೆಜೆಸ್ಟಿಕ್ಗೆ(ಬೆಂಗಳೂರಿನ ಬಸ್ ನಿಲ್ದಾಣ) ಬಿಟ್ಟು ಬಂದೆ.
ಬಸ್ಸಿನಲ್ಲು ಕೂತು, ನೀವೂ ಮದುವೆಗೆ ಬಂದಿದ್ರೆ ಚೆನ್ನಾಗಿತ್ತು ಅಂತಿದ್ಲು, ಒಂದು ಕುರೀನಾ ಬಲಿ ಕೊಡೋದು ಇನ್ನೊಂದು ಕುರೀಗೆ ನೋಡೊಕಾಗಲ್ಲ ಕಣೆ.. ಅಂತಂದು ಬೈಸಿಕೊಂಡು, ತಲುಪಿದ ಮೇಲೆ ಫೋನು ಮಾಡು ಅಂತ ಹೇಳಿ ಓಡಿದ್ದೆ... ಇನ್ನೂ ನಿಂತಿದ್ರೆ ಬಾರಿಸಿರೊಳು. ಮನೆಗೆ ಬಂದು, ಕೀಲಿ ತೆಗೆದು ಒಳ ಹೊಕ್ಕೆ, ಭೂತ ಬಂಗಲೆ ಹೊಕ್ಕಂತಾಯಿತು, ಮನೆಗೆ ದೀಪ ಹಚ್ಚೊಕೆ ಒಂದು ಹೆಣ್ಣಿರಬೇಕು ಅಂತ ಹಿರಿಯರು ಹೇಳಿದ್ದು ಇದಕ್ಕೆ ಇರಬೇಕು ಅನಿಸಿತು, ಯಾವಾಗಲೂ ಮನೆಗೆ ಬಂದ್ರೆ, ಮೊದಲು ಪ್ರತ್ಯಕ್ಷ ಆಗ್ತಾಳೆ, ಅದೇ ಮುಗುಳ್ನಗು, ತುಟಿಯಲ್ಲೊಂದು ತುಂಟ ಪ್ರಶ್ನೆ, ಎಲ್ಲಿದ್ದರೂ ಮನೆಗೆ ಓಡಿ ಬರಬೇಕೆನ್ನಿಸುತ್ತೆ. ಏನು ಮಾಡೋದು ಅಂತಿದ್ದವನಿಗೆ ಪೇಪರು ಕಣ್ಣಿಗೆ ಬಿತ್ತು, ಅಬ್ಬ ಸಧ್ಯ ಟೈಮ್ ಪಾಸ್ ಆಗುತ್ತೆ ಅಂತ ಓದಲು ಕುಳಿತೆ.
ಓದಲು ಕುಳಿತು ಘಂಟೆ ಆಗಿರಲಿಲ್ಲ, ಬೇಜಾರಾಯ್ತು. ಹಿಂದಿನಿಂದ ಬಂದು ತಲೆ ತೂರಿಸುವವಳು.. ನೀ ಓದಿ ಕೊಡೆ, ನಾನಾಮೇಲೆ ಓದ್ತೀನಿ ಅಂದ್ರೂ, ಕೇಳಲ್ಲ, ಎದೆಗಾತುಕೊಂಡು ಕೂತೊ, ಇಲ್ಲ ಹಿಂದಿನಿಂದ ಬಂದು ಹೆಗಲ ಮೇಲೆ ಗದ್ದ ಆಣಿಸಿಕೊಂಡು ಕೂತು ಜತೆಗೆ ಓದಿದಾಗಲೇ ಸಮಾಧಾನ. ಒಬ್ಬನೇ ಓದಲಾಗದೇ ಪೇಪರು ಬೀಸಾಕಿ ಮೇಲೆದ್ದೆ. ಎಲ್ಲಿದ್ದಾಳೆ ಕೇಳೋಣ ಅಂತ ಫೋನು ಮಾಡಿದೆ, "ಎಲ್ಲಿದೀಯ, ಫೋನೆ ಮಾಡಿಲ್ಲ" ಅಂದೆ... "ರೀ, ಇನ್ನೂ ಹೋಗಿ ತಲುಪಲು ಎರಡು ಘಂಟೆ, ಆಮೇಲೆ ಫೋನು ಮಾಡ್ತೀನಲ್ಲ" ಎಂದು ಮುನಿಸು ತೋರಿಸಿದೊಳು ಮರುಕ್ಷಣ, "ಯಾಕೆ ಒಬ್ರಿಗೆ ಬೇಜಾರಾ, ಅದ್ಕೆ ನಾನು ಹೋಗಲ್ಲ ಅಂದಿದ್ದು" ಅಂತ ಪ್ಲೇಟು ಚೇಂಜ ಮಾಡಿದ್ಲು "ಇಲ್ಲ, ತಲುಪಿದ್ಯಾ ಇಲ್ವಾ ಅಂತ ಮಾಡ್ದೆ ಬಿಡು" ಅಂದೆ ಅವಳಿಗೆ ಗೊತ್ತು, ಅದ್ಕೆ "ಯಾವುದಾದ್ರೂ ಫಿಲ್ಮಗೆ ಹೊಗ್ರಿ, ಟೈಮ್ ಪಾಸ ಆಗುತ್ತೆ" ಅಂತ ಸಲಹೆ ಬೇರೆ ಕೊಟ್ಲು, "ಆಯ್ತು" ಅಂತಿಟ್ಟೆ. ಎನು ಫಿಲ್ಮು ನೊಡ್ತೀರ ಹೇಳಿ, ಮನೇಲೆ ನೂರು ಟೀವೀ ಚಾನಲ್ಲಿನಲ್ಲಿ ಫಿಲ್ಮ ಬರ್ತವೆ ಅದೆ ಡಬ್ಬಾ ಸಾರವಿಲ್ಲದ ಪ್ರೀತಿ ಪ್ರೇಮ ಫಿಲ್ಮಗಳು, ಹೊಸತನ ಅನ್ನೊದೆ ಇಲ್ಲ, ಆ ಪ್ರೇಮಿಗಳಿಗಿಂತ ನಾವಿಬ್ಬರೇ ಎಷ್ಟೊ ವಾಸಿ, ದಿನಾ ಹೊಸ ಹೊಸ ಡೈಲಾಗು ಹೇಳುತ್ತ, ಮನೆಲೇ ಲೈವ್ ಫಿಲ್ಮ ನಮ್ದು. ಹಳೆ ಹಾಡು ನೆನಪು ಬಂತು "ವಿರಹಾ ನೂರು ನೂರು ತರಹ... ಕಹಿ ಬರಹ" ಅಂತಿದ್ದಂಗೆ ಬ್ಲಾಗಿಗೆ ಬರಹ ಬರೆಯೊದು ನೆನಪಾಗಿ, ತೊಚಿದ್ದು ಗೀಚಿ ಬೀಸಾಕಿದ್ದು ಆಯ್ತು.
ಹಾಗೂ ಹೀಗೂ ಮಾಡಿ ಮಧ್ಯಾಹ್ನದವರೆಗೆ ಕಾಲ ಕಳೆದದ್ದಾಯ್ತು, ಹೊಟ್ಟೆ ಹಸಿವಿಲ್ಲದೆ ಮೊಸರನ್ನ ಹಾಕಿಕೊಂಡು, ಉಪ್ಪಿನಕಾಯಿ ಹುಡುಕಿ ಹುಡುಕಿ ಬೇಸತ್ತು, ಸರಿಯಾಗಿ ಅದೇ ಸಮಯಕ್ಕೆ ತಲುಪಿದ್ದೀನೆಂದು ಹೇಳಲು ಫೊನು ಮಾಡಿದವಳ ಕೇಳಿ, ಎಲ್ಲಿದೆಯಂತ ಪತ್ತೆ ಹಚ್ಚಿ, ಉಪ್ಪಿನಕಾಯಿ ಜತೆ ಅವಳ ತರಲೆ ಮಾತುಗಳನ್ನೂ ನಂಜಿಕೊಂಡು, ಅನ್ನದ ಜತೆ ಅವಳ ತಲೆನೂ ತಿಂದು ತೇಗಿದ್ದಾಯ್ತು, ಮಾಡಲೇನೂ ಬೇರೆ ಕೆಲಸವಿಲ್ಲದ್ದರಿಂದ ಸಂಜೆ ಐದರವರೆಗೆ ಭರಪೂರ ನಿದ್ದೆ ಆಯ್ತು. ಎದ್ದು ಮುಖ ತೊಳೆದು, ಟೀ ಮಾಡಲಿಟ್ಟು, ತಿಂಡಿ ಹುಡುಕತೊಡಗಿದೆ, ಅದೊ ಅಲ್ಲಿ ಕನ್ನಡ ಮುದ್ದು ಮುದ್ದು ಅಕ್ಷರಗಳಲ್ಲಿ "ಅವಲಕಿ" ಅಂತ ಕಾಣಿಸಿತು, ಅಯ್ಯೊ, "ಕ" ಒತ್ತು ಕೊಡೊದು ಮರೆತು ಬಿಟ್ಟೀದಾಳೆ, ಇಲ್ಲ ಹಾಗೇ ಬರೆದಿರೊದೋ, ಏನೊ "ಅವ-ಲಕಿ" ಅಂದ್ರೆ... ಯಾರು ಲಕಿ(ಅದೃಷ್ಟವಂತ)... ಅವನ್ಯಾರೂ ಅಲ್ಲ ನಾನೇ!...
ಮನೆಯ ನಿಶಬ್ದ ನೋಡಿ ಚೀರಿ ಬಿಡಲೇ ಅನ್ನಿಸಿತು... ಹೋಗ್ಲಿ ಗೆಳೆಯನೊಂದಿಗೆ ಮಾತಾಡಿ ಬಹಳ ದಿನ ಆಯ್ತು ಸಂಜೆ ಮನೆಗಾದ್ರೂ ಬರ ಹೇಳೊನ ಅಂತ ಫೋನು ಮಾಡಿದೆ. ಒಬ್ನೆ ಬೇಜಾರಾಗ್ತಿದೆ, ಹೆಂಡ್ತಿ ಮನೇಲಿಲ್ಲ ಅಂದ್ರೆ, ಹೆಂಡ್ತಿ ಇಲ್ಲಾಂದ್ರೆ ಎಂಜಾಯ ಮಾಡೊ ಗೂಬೆ ಅಂತ ಬೈದ, ಅವನಿಗೇನು ಗೊತ್ತು ನನ್ನವಳ ಬಗ್ಗೆ, ಅವನಂತ ಹೆಂಡ್ತಿ ಇದ್ದಿದ್ರೆ ನಾನೂ ಹಾಗೆ ಅನಬಹುದಿತ್ತು, ಆದ್ರೆ ನನ್ನವಳಿಗಾರು ಸಾಟಿ.
ಯಾವುದೇ ಒಂದು ವಸ್ತು ಇರಲಿ, ಇಲ್ಲ ವ್ಯಕ್ತಿ ಇರಲಿ ಅದು/ಅವರು ಇಲ್ಲದಾಗಲೇ ಅದರ ಬೆಲೆ ತಿಳಿಯೋದು, ಅದಕ್ಕೆ ಅಲ್ವೆ ದೂರವಿದ್ದಷ್ಟು ಪ್ರೀತಿ ಜಾಸ್ತಿ ಅನ್ನೊದು. ಮನೆಗೆ ಫೊನು ಮಾಡಿ ಅಪ್ಪಾಜಿ ಅಮ್ಮನ ಒಂದು ಘಂಟೆ ಕೊರೆದದ್ದಾಯ್ತು, ಅದಾದ ಹತ್ತು ನಿಮಿಷಕ್ಕೇ ಇವಳ ಫೋನು ಬಂತು, ಅಮ್ಮ ಇವಳಿಗೆ ಫೊನು ಮಾಡಿರಬೇಕು... "ರೀ ಅತ್ತೆ ಫೋನು ಮಾಡಿದ್ರು, 'ಅದನ್ನೊಂದೆ' ಬಿಟ್ಟು ಯಾಕೇ ಹೊಗೀದೀಯಾ... ನೀನಿಲ್ಲದೆ ಒಂದುದಿನ ಇರಲ್ಲ ಅದು... ಅಂತ ನನ್ನ ಕಾಡಿಸಿದ್ರು, ಏನ್ ಬೇಜಾರಾ... ಪಕ್ಕದ ಮನೆ ಪದ್ದುಗೆ ಕಂಪನಿ ಕೊಡು ಅಂತ ಹೇಳ್ಲಾ" ಅಂತ ಕಿಲಕಿಲ ನಕ್ಳು... "ಏನ್ ಬೇಕಾಗಿಲ್ಲ, ಹಾಲು ತರಬೇಕು, ಹಾಲಿನಂಗಡಿ ಹಾಸಿನಿ ನೋಡ್ಕೊಂಡು ಬರ್ತೀನಿ" ಅಂದೆ, "ಅದ್ಯಾಕೆ, ಫ್ರಿಡ್ಜನಲ್ಲಿ, ಗುಡ್ಲೈಫ ಹಾಲು ಪ್ಯಾಕೆಟ್ ಎರಡು ಇದೆ" ಅಂತಂದು ಆ ಆಸೆಗೂ ತಣ್ಣೀರೆರೆಚಿ ಕಿಸಿ ಕಿಸಿ ನಗತೊಡಗಿದ್ಲು...
ಆ ಚಾನೆಲ್ಲು, ಈ ಚಾನೆಲ್ಲು ಅಂತ ರಿಮೊಟು ಬಟನ್ನು ಕಿತ್ತು ಬರೊ ಹಾಗೆ ಟೀವೀ ಚಾನೆಲ್ಲು ಬದಲಾಯಿಸಿ ನೋಡಿದ್ದಾಯ್ತು. ಯಾವುದೊ ಹಾಸ್ಯ ಕಾರ್ಯಕ್ರಮದ ಜೋಕಿಗೆ ನಕ್ರೆ, ನನ್ನದೇ ದ್ವನಿ, ಪ್ರತಿದ್ವನಿಯಾಗಿ ಮಾರ್ದನಿಸಿದಂತಾಯಿತು. ನಿದ್ದೆ ಬಂದಿರದಿದ್ರೂ ಹಾಸಿಗೆಯಲ್ಲಿ ಬಿದ್ದುಕೊಂಡೆ, ಅಬ್ಬಾ ನಾಳೆ ಆಫೀಸಿದೆ ಹೇಗೊ ದಿನ ಕಳೆದು ಹೋಗುತ್ತೆ, ಅಂತ ಖುಷಿಯಾಯ್ತು. ಅವಳು ಬಂದ ಮೇಲೆ ನೀನಿಲ್ಲದಾಗ ಹೀಗೆಲ್ಲ ಆಯ್ತು ಅಂತ ಹೇಳಿಕೊಂಡು ನಗಬಹುದು ಅನಿಸಿತು. ನನ್ನ ತಲೆದಿಂಬು ಆಕಡೆ ಬೀಸಾಡಿ, ಅವಳ ತಲೆದಿಂಬಿಗೆ ಒರಗಿದೆ, ಕಿವಿಯಲ್ಲಿ ಜೊಗುಳ ಹಾಡಿದಂತಾಗಿ ನಿದಿರೆಗೆ ಜಾರಿದೆ...
ಮತ್ತೆ ಸಿಗೊಣ...
pdf document can be found here http://www.telprabhu.com/neenilladaaga.pdf
ಸಾಧ್ಯವಾದಷ್ಟು, ತಪ್ಪದೇ ವಾರಕ್ಕೊಂದು ಬಾರಿ ಬರೆಯುತ್ತಿದ್ದೇನೆ. ಇದೋ ಈ ಲೇಖನ ಮುಗಿಯುವ ಹೊತ್ತಿಗೆ ಮುಂಜಾವು ನಾಲ್ಕು ಘಂಟೆಯಾಗಿದೆ, ಬರೆಯುವ ಗೀಳು ಬೆಳೆದುಬಿಟ್ಟಿದೆ, ಬಿಡಲಾಗದು, ಹಾಗೆ ಓದುಗರೂ ಕೂಡ ನಿರೀಕ್ಷೆಯಲ್ಲಿರುತ್ತಾರೆ, ಕೆಲವೊಮ್ಮೆ ಬರೆಯಲಾಗದಿದ್ರೆ ಬೇಜಾರಾಗದೆ, 'ಹೊಸದಿಲ್ಲದಾಗ' ಹಳೆಯವನ್ನೆ ಮತ್ತೆ ಮೆಲಕು ಹಾಕಿ... ನೀವಿತ್ತ ಪ್ರೊತ್ಸಾಹಕ್ಕೆ ಚಿರಋಣಿ...
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದು
24 comments:
Kathe channagide
DhanyavaadagaLu Anonymousravarige... hesaru baredidre chennagittu.
ಪ್ರಭು,
ಲೇಖನ ಹಾಸ್ಯದ ದಾಟಿಯಲ್ಲಿ ಚೆನ್ನಾಗಿದೆ...ಇದು ಕಾಲ್ಪನಿಕ ಅಂದಿರಿ....ಆದರೆ ನನಗನ್ನಿಸುತ್ತೆ.....ಇಂಥ ನನ್ನ ಮನೆಯಲ್ಲೂ ನನ್ನಾಕೆ ಊರಿಗೆ ಹೋದಾಗ ಹೀಗೆ ಆಗುತ್ತೆ.....ಅಲ್ಲಲ್ಲಿ ಸ್ವಲ್ಪ ಬದಲಾವಣೆ ಬಿಟ್ಟರೆ ಬೇರೇನು ಇಲ್ಲ......ಮುಂದುವರಿಸಿ.....
ಹ ಹ ಹ ......... ಚೆನ್ನಾಗಿದೆ...... ನಿಮ್ಮ ವಿರಹ ವೇದನೆ.. ಯಾವುದೇ ಒಂದು ವಸ್ತು ಇರಲಿ, ಇಲ್ಲ ವ್ಯಕ್ತಿ ಇರಲಿ ಅದು/ಅವರು ಇಲ್ಲದಾಗಲೇ ಅದರ ಬೆಲೆ ತಿಳಿಯೋದು ಈ ಮಾತು ನೂರಕ್ಕೆ ನೂರು ಸತ್ಯ...
ವಂದನೆಗಳು...
chennagide!!
ಶಿವು ಅವರಿಗೆ
ಶಿವು ಸರ್, ಬ್ಲಾಗಿಗೆ ಭೇಟಿ ಕೊಟ್ಟಿದ್ದಕ್ಕೆ ಧನ್ಯವಾದ... ನನಗಿನ್ನೂ ಮದುವೆಯಾಗಿಲ್ಲ ಹಾಗಾಗಿ ನನಗಿದು ಕಲ್ಪನೆ...
ಮನಸು ಅವರಿಗೆ,
ಧನ್ಯವಾದ, ವಿರಹ ವೇದನೆಯ ಕಲ್ಪನೆ ಅಷ್ಟೆ...
TO: Anonymous
mattobba hesaru hELada Anonymousravarige Dhanyavaada... bhEti KoDtaa iri..
Prabhu avare, ee dinave nanage antha ondu prsanga bandu, naanu manovedanege olagaagidde.! Aadare illi nodidare neevu saha ade vishayada bagge lekhana barediddira.
Ottare lekhana chennagide.
HI,,,,,,
Thumbaa chennagide... idenu kalpanika alla.. nimma ee kalpane kanditha vasthavada anubhava nimage kaadide... nice article.....
hema.nth
ಪ್ರಭು ಅವರೇ,
ತುಂಬಾ ಚೆನ್ನಾಗಿದೆ. ಇದನ್ನು ಓದಿದರೆ ಇದೆಲ್ಲ ನಿಮ್ಮ ಕಲ್ಪನೆ ಅಂತ ಅನ್ನಿಸೋದೇ ಇಲ್ಲ. ಬರೆಯುತ್ತಿರಿ.
ನಿಮ್ಮಲ್ಲಿ ಒಂದು ನಿವೇದನೆ. ನೀವು ವಾರಕ್ಕೊಂದು ಕಥೆ ಬರೆಯಲೇಬೇಕು ಅಂತ ಬರೆದರೆ ಎಲ್ಲಿ ಕಥೆಯ ಸಾರದಲ್ಲಿ ಕಡಿಮೆ ಆಗಿಬಿಡುವುದೋ. ಅದಕ್ಕೆ ಬರೆಯಬೇಕೆನಿಸಿದಾಗ ಬರೆಯಿರಿ.
ಅನಾಮಧೇಯ ಅವರಿಗೆ
ನಿಮ್ಮ ಹೆಸರೇ ಅನಾಮಧೇಯ ಅಂತ ಓದಿ ವಿಚಿತ್ರ ಅನ್ನಿಸಿತು!! ನಿಮ್ಮ ನಿವೇದನೆ ಅತ್ಯಂತ ಪ್ರಸ್ತುತ ಬರೆಯಲೇ ಬೇಕೆಂದು ಬರೆದರೆ ಸಾರವಿರುವುದಿಲ್ಲ, ಯಾವಾಗ ಸರಿಯಾದ ವಿಚಾರಗಳು ಸಿಗುತ್ತವೋ ಆಗ ಮಾತ್ರ ಬರೆಯುತ್ತೇನೆ, ಹೀಗೆ ಸಲಹೆ ಸೂಚನೆಗಳ ಕೊಡುತ್ತಿರಿ ತುಂಬಾ ಧನ್ಯವಾದಗಳು
ಅದಕ್ಕೇ... ಕೆಲವೊಮ್ಮೆ ಬರೆಯಲಾಗದಿದ್ರೆ ಬೇಜಾರಾಗದೆ, 'ಹೊಸದಿಲ್ಲದಾಗ' ಹಳೆಯವನ್ನೆ ಮತ್ತೆ ಮೆಲಕು ಹಾಕಿ... ಅಂತ ಬರೆದದ್ದು
To:SSK,
Sorry SSK avarE, nimma commentge aagalE uttara koDalu maretu hode... eno gaDibiDiyalli haage aaytu...
neevu koodDa adE prasangadalliddaddu kevala kaakataaLeeya... aadaroo nimma pratikriye Odi kushiyenisitu...
ಪ್ರಭು...
ಬಹಳ ಚೆನ್ನಾಗಿ ಬರೆದಿದ್ದೀರಿ...
ಇಷ್ಟವಾಯಿತು...
ನಿಮ್ಮ ಬ್ಲಾಗ್ ವೈವಿಧ್ಯಮಯವಾಗಿದೆ...
ಅಭಿನಂದನೆಗಳು...
ನಿಮ್ಮ ಅನುಮತಿಯಿಲ್ಲದೆ ನಿಮ್ಮ ಬ್ಲಾಗು ಅನುಸರಿಸುತ್ತಿದ್ದೇನೆ..
Prabhu avarige nannadondu salahe/manavi. Adenendare nimma hesarannu swalpa PRABHURAJ MOOGI badalu PRABHURAJ MODI endu badalaayisikolli. Yaakendare aatharadalli nimma followers/abhimaanigala sankhye beleyuttide!! Andare ashtu cennagi nimma lekhanagalu ellarannu modi maadive!!! (Yes Prabhu i mean it. Accept this as my complement.)
ಸಿಮೆಂಟು ಮರಳಿನ ಮಧ್ಯೆ ಅವರಿಗೆ:
ಬ್ಲಾಗ್ ಅನುಸರಿಸಲು ಅನುಮತಿಯೇಕೆ ಬೇಕು ಹೇಳಿ, ನೀವೆಲ್ಲ ಅನುಸರಿಸುತ್ತಿರುವಿರೆನ್ನುವುದು ನನಗೊಂದು ರೀತಿ ಹೆಮ್ಮೆಯ ವಿಷಯ...
ಬ್ಲಾಗ ಬರೆಯೋಕೆ ಇತ್ತೀಚಿಗೆ ಶುರು ಮಾಡಿಕೊಂಡಿದ್ದು, ಹಾಗಾಗಿ ನಿಮ್ಮಷ್ಟು ಅನುಭವಿಯಲ್ಲ... ತಮ್ಮ ಸಲಹೆ ಸೂಚನೆಗಳು ಅತ್ಯಂತ ಅವಶ್ಯಕ..
To: SSK
ಸಲಹೆಯೇನೋ ಚೆನ್ನಾಗಿತ್ತು... ಮೋಡಿ ಅಂತ ಓದುವ ಬದಲಿಗೆ ಮೋದಿ ಅಂತ ಓದಿದರೆ ತೊಂದ್ರೆ... ಏನೋ ತೋಚಿದ್ದು ಗೀಚೋದು ಇಷ್ಟು ಇಷ್ಟ ಆಗುತ್ತೆ ಅಂತ ನನಗೆ ಗೊತ್ತಿರಲಿಲ್ಲ, ಗೊತ್ತಿದ್ದರೆ ಇನ್ನೂ ಮೊದಲೇ ಯಾವಾಗಲೋ ಬರೆಯಲು ಶುರು ಮಾಡಬಹುದಿತ್ತು. (I just blushed out with happiness after reading your compliment)
Prabhu,
soooper guru.. chennagi baritiya.. keep it up... kelasadalli biduvaadaag nimma blog odta irtini...tumba khushi aagutte neevu bariyo articles nodi... maduvege munche yellaru manasallu vablu henti irtaale aadre helkolakke anta baayi athava bariyoke kai iralla aste... adu mooru ninagide.. ( i mean kalpane, bhasheya melina hidita & bariyuva kale )... so keep writing.
To: Raghavendra
Thank you very much sir... neevannOdu sari ellaa huDugara manassinalloo tamma tamma bhaavi sangaatiya bagge ondondu taraha vichitra kalpnaegaLiruttave... aMtha vichitra kalpanegaLannu nanage bareyalaaguttiruvudu, haagooo adu nimagellrigoo ishTavaaguttiruvudu kELi kushiyaaguttade... heege bhETi koDtiri...
Hi Prabhu,
Amazing article!!!!
Could you please gimme the PDF link for this article?
Regards,
XYZ
To: XYZ
First of all it would have been very nice if you would have put your name, XYZ!!! anyway I have put the PDF link, you can check the article. Thanks keep visiting.
Tumba chennagi barediddiri. Neevu bayasuvanthaha hendathiye nimage bega sigali endu haraisuthene.
To: Nisha
Eno manasige tOchiddu geechiddu... baysuvaMtha heMDati siguttaaLo illavo gottilla... aadare kalpane maatra shashwata... tamma haraikege dhanyawaadagaLu...
prabhu,
almost yela article nu odimugiside :)
idu superrrrrr kanri
ಪ್ರೀತಿಯಿ೦ದ ವೀಣಾ :)ಅವರಿಗೆ:
ಅಯ್ಯೋ ಅಷ್ಟೊಂದು ಸಮಯ ನನ್ನ ಬ್ಲಾಗಗೆ ಮೀಸಲಿರಿಸಿದಿರಾ... ಅದೇ ನಿಮ್ಮ ಕಾಮೆಂಟುಗಳು ಎಲ್ಲ ಲೇಖನಗಳಿಗೆ ಬರುತ್ತಿರುವಾಗಲೇ ಅಂದುಕೊಂಡೆ, ಎಲ್ಲಾ ಓದುತ್ತಿದ್ದೀರೆಂದು...ತಂಬಾ ಧನ್ಯವಾದಗಳು... ಹೀಗೆ ಬರ್ತಾ ಇರಿ ಇನ್ನೂ ಸಾಕಷ್ಟು ಬರುವುದಿದೆ...
Even I am also an anonymus reader till you say all these blogs are not kalpanik but vastavika kategalu!!
A very good reading.thank you Prabhu
To Anonymous:
Even she is also anonymous, till the time I experience the same things in my life... blaaganalli barediruvudellavoo kaalpanika.. vastavavaagalu innnoo timide baruttiri alleevarege Eno Omdu kalpaneya heasarannaadaroo iTTukoLLi... nanage hEge gottaagabEku neevE baruttiruvureMdu...
Thanks lot for views, keep visiting...
Post a Comment