ಮುಂಜಾನೆ ಆರೂವರೆಯಾಗಿರಬೇಕು ಫೋನು ಕಿರುಚಿತು, ಮಸ್ತ ಮುಸುಕು ಹಾಕಿಕೊಂಡು ಮೈಮರೆತು ನಿದ್ದೆಯಲ್ಲಿದ್ದವನು ತಡಬಡಿಸಿ ಎದ್ದೆ, ಇವಳದೇ ಫೋನು, ಅದೇನು ಮನೇಲಿ ಇಲ್ಲ ಅಂದುಕೊಂಡಿರಾ, ತವರುಮನೆಗೆ ಹೋಗಿಬರ್ತೀನಿ ಅಂತ ಹೋಗಿದ್ಲು ಇವತ್ತು ಬರ್ತಾ ಇದಾಳೆ... ಆಕಡೆಯಿಂದ ದನಿ ಬಂತು, ಹಲೊ ಗಿಲೋ ಏನಿಲ್ಲ "ಎದ್ದೇಳು ಮಂಜುನಾಥಾ... ಸತಿ ಬಂದು ಕಾಯುತಿರುಹಳು ನಿನ್ನ ದರುಶನಕೆ ಎದ್ದೇಳು..." ಹಾಡು ಇನ್ನೂ ಸಾಗಿರೋದು, "ರೀ ಮಂಜುನಾಥ ಅಂತ ಯಾರೂ ಇಲ್ಲ ಇಲ್ಲಿ ರಾಂಗ ನಂಬರು ಇದು" ಅಂದೆ, "ನಾವೂ ಕರೆಕ್ಟ ನಂಬರು ಬೇಕು ಅಂತ ಫೋನು ಮಾಡಿಲ್ಲ, ನಮ್ಗೂ ರಾಂಗ ನಂಬರೇ ಬೇಕಿತ್ತು, ಅಲ್ಲ ಇಷ್ಟ ಮಧುರವಾದ ದನಿಯ ಒಬ್ಳು ಹುಡುಗಿ ಫೋನು ಮಾಡಿದ್ರೆ ರಾಂಗ ನಂಬರಾದ್ರೂ ಮಾತಾಡಬೇಕ್ರಿ" ಅಂದ್ಲು, "ಒಹೊ ಅದೆಲ್ಲಾ ನಾವು ಎಕ್ಸಪರ್ಟು, ನೀನು ಅಂತ ಗೊತ್ತಾಗಿದ್ದಕ್ಕೆ ರಾಂಗ ನಂಬರು ಅಂದಿದ್ದು, ಇಲ್ಲಾಂದ್ರೆ ನಾವೇ ರೈಟು ಆಗಿರ್ತಿದ್ವಿ" ಅಂದೆ "ನಿಮ್ಮ ಬುದ್ಧಿ ನಂಗೊತ್ತಿಲ್ವಾ, ಬನ್ರಿ ಬೇಗ ಈಗ ಬೆಂಗಳೂರ ಹತ್ರ ಬಂದಾಯ್ತು, ಇನ್ನೇನು ನವರಂಗ(ಬೆಂಗಳೂರಿನಲ್ಲಿ ಒಂದು ಏರಿಯಾ) ಬಸ್ ಸ್ಟಾಪಗೆ ಬಂದು ಕಾಯ್ತೀನಿ" ಅಂದ್ಲು. "ಆಯ್ತು ಬಂದೆ ಮೇಡಮ್" ಅಂತಂದು ನಾನೇನು ಕಮ್ಮಿ ಅಂತ ನಮ್ಮ ಸಾಹಿತ್ಯದಲ್ಲಿ ನಾನೊಂದು ಹಾಡು ಗುನುಗುನಿಸಿದೆ "ಭಾಗ್ಯದಾ ಲಕ್ಷ್ಮೀ ಬಾರಮ್ಮ, ಗಂಡನಮನೆಗೆ... ಶನಿವಾರದ ಬ್ರೆಕ್‌ಫಾಸ್ಟ ವೇಳೆಗೆ.."
ಅತ್ತಿತ್ತ ನೋಡುತ್ತ ಸೆರಗಿನ ತುದಿಯನ್ನು ಸುತ್ತಿ ಸುರುಳಿ ಮಾಡುತ್ತಾ ನಿಂತಿದ್ಲು, ನಾ ಕಾಣುತ್ತಿದ್ದಂತೆಯೆ ಕ್ಲೊಜಅಪ್ ಸ್ಮೈಲ್ ಕೊಟ್ಲು, ನಾನೂ ಪ್ರತಿಯಾಗಿ ಹಲ್ಲು ಕಿರಿದೆ, ಪಕ್ಕದಲ್ಲಿ ನೋಡಿದ್ರೆ ಒಂದೇ ಬ್ಯಾಗು, ಅಬ್ಬಾ ಈ ಸಾರಿ ಭಾರೀ ಲಗೇಜು ಇಲ್ಲ ನಾ ಅದನ್ನೆಲ್ಲ ಹೊತ್ತು ಕತ್ತೆಯಾಗಲ್ಲ ಬಚಾವು ಅಂತಿದ್ದರೆ, "ಈ ಬ್ಯಾಗು ತುಗೊಳ್ಳಿ, ಉಳಿದವು ಅಲ್ಲಿ ಟ್ರಾವೆಲ್ ಏಜನ್ಸಿನಲ್ಲಿವೆ" ಅಂದ್ಲು ಪಿಳಿಪಿಳಿ ಕಣ್ಣು ಬಿಡ್ತಾ ಅವಳ ಮುಖ ನೋಡಿದ್ದಕ್ಕೆ, "ಎಲ್ಲ ಅಮ್ಮ ಹಾಕಿದ್ದು ನಾನಾದ್ರೂ ಏನ್ ಮಾಡ್ಲಿ" ಅಂತ ಅಸಹಾಯಕತೆ ಪ್ರದರ್ಶಿಸಿದಳು... ಎಲ್ಲ ಅಮ್ಮ ಹಾಕಿದ್ದು ಅಂತ ಹೇಳೋಕೆ ಮಾತ್ರ, ಅವರು ಹಾಕೊದಲ್ದೇ, ಇವಳೂ ಆ ಉಪ್ಪಿನಕಾಯಿ ಚೆನ್ನಾಗಿದೆ, ಹಪ್ಪಳ ನೀನೇ ಮಾಡಿದ್ದಾ ಅಂತೆಲ್ಲ ಕೇಳಿ ಹೇಳಿ, ಅದೆಲ್ಲ ಕಟ್ಟಿಸಿಕೊಂಡು ಬಂದಿರ್ತಾಳೆ. ಗತ್ಯಂತರವಿಲ್ಲದೇ, ಎಲ್ಲ ಎತ್ತಿ ಆಟೊಗೆ ಹಾಕಿಕೊಂಡು ಮನೆಗೆ ಬಂದಿದ್ದಾಯ್ತು. ಅಟೊನನವನೂ ಹತ್ತು ಜಾಸ್ತಿ ಕೇಳಿದ, ಅದೂ ಸರಿಯೇ ಅಂತ ತೆತ್ತು ಬಂದೆ.
ಲಗೇಜು ಇಳಿಸಿಕೊಳ್ಳಬೇಕಾದ್ರೆ, ಪಕ್ಕದ ಮನೆ ಪದ್ದು ಬಂದು "ಈಗ್ ಬಂದ್ರಾ, ಬಹಳ ದಿನ ಹೋಗಿದ್ರಿ" ಅಂದ್ಲು, ನಾನು ಕೈಯಲ್ಲಿ ಇನ್ನೆರಡು ಬ್ಯಾಗು ತೆಗೆದುಕೊಂಡು ವಿಧೇಯ ಪತಿಯಂತೆ ಅವಳ ಮುಂದೆ ಫೋಸು ಕೊಟ್ಟೆ, ಇವಳು "ಹಾಂ ತವರುಮನೆಗೆ ಹೋಗಿದ್ದೆ, ಎಲ್ಲಿ ನಾಲ್ಕೇ ದಿನ ಆಯ್ತು ಹೋಗಿ" ಅಂದ್ಲು ನಾನು ನಡುವೆ ಬಾಯಿ ಹಾಕಿ "ಇನ್ನೆರಡು ದಿನಾ ಇದ್ದು ಬಾ ಅಂದ್ರೂ ಬೇಗ ಬಂದೀದಾಳೆ" ಅಂತಂದೆ, ಪದ್ದು "ನಿಮ್ಮನ್ನು ಬಿಟ್ಟು ಇರೋಕೆ ಆಗಲ್ಲ ಅನ್ಸತ್ತೆ" ಅಂತ ಛಿಡಾಯಿಸಿದಳು, ನನ್ನಾಕೆ ಕಣ್ಣು ಕೆಕ್ಕರಿಸಿ ನನ್ನ ನೋಡಿದ್ಲು, ಬ್ಯಾಗು ಇಡಲು ಮನೆಯೊಳಗೆ ನುಗ್ಗಿದೆ, ಕೆಕ್ಕರಿಸಿ ನೋಡದೇ ಇನ್ನೇನು, ಹೋಗಿ ಎರಡು ದಿನ ಆಗಿಲ್ಲ, ಆಗಲೇ ನಾಲ್ಕು ಸಾರಿ ಫೋನು ಮಾಡಿ ಕೇಳಿದ್ದೆ ಯಾವಾಗ ಬರ್ತೀಯಾ ಅಂತ. ಈಗ ಹೀಗಂದ್ರೆ ಸಿಟ್ಟಾಗದೇ ಇರ್ತಾಳಾ, ನಾಲ್ಕೇ ದಿನ ಅಂತಾಳೆ ಸರಿಯಾಗಿ ಹದಿನೈದು ದಿನಾ ಆಗಿರಬೇಕು ಅವಳು ಹೋಗಿ ಆದ್ರೂ ಅದು ಕಮ್ಮಿಯೇ ಅವಳಿಗೆ. ಪದ್ದು ಇನ್ನೂ ಹೇಳ್ತಾ ಇದ್ಲು "ನಾವೆಲ್ಲ ಇಲ್ವಾ ಇಲ್ಲಿ ಈ ಕಡೆ ಯಾಕೆ ಚಿಂತೆ ನಿಮಗೆ" ಅಂತೇನೇನೋ... ಅವಳು ಇದ್ದದ್ದೇ ಚಿಂತೆ ನನ್ನವಳಿಗೆ ಅಲ್ವಾ.
ಇನ್ನೂ ಸಿಟ್ಟು ಇಳಿದಿರಲಿಲ್ಲ, ಒಳಗೆ ಬಂದವಳೆ, "ಎಲ್ಲ ಮನೆ ಹರವಿ ಇಟ್ಟೀದೀರಾ ಎರಡು ದಿನ ಇರದಿದ್ರೆ ಮನೇನಾ ಯಾವ ರೀತಿ ಮಾಡಿಡ್ತೀರಾ, ಎರಡು ದಿನಾ ತವರುಮನೇಲಿ ಹಾಯಾಗಿ ಇದ್ದು ಬರೋಣ ಅಂದ್ರೂ ಬಿಡಲ್ಲ" ಅಂತ ಬಯ್ದಳು, ನಾನು ಈಗ್ ಮಾತಾಡುವುದು ಸರಿಯಲ್ಲ ಅನಿಸಿತು ಸುಮ್ಮನಾದೆ. ಅಡುಗೆಮನೆಗೆ ಟೀ ಮಾಡ ಹೋದವಳು ನನ್ನ ಟೂತಬ್ರಷನೊಂದಿಗೆ ಹೊರಬಂದ್ಲು "ಇದು ಬಾತರೂಮಿನಲ್ಲಿಇರಬೇಕಾದ್ದು ಅಡುಗೆ ಮನೇಲಿ ಏನ್ ಮಾಡ್ತಾ ಇತ್ತು" ಅಂತ ಮತ್ತೆ ಶುರುವಾಯ್ತು... "ಇಲ್ಲ ಮುಂಜಾನೆ ಬ್ರಷ್ ಮಾಡ್ತಾ ಟೀ ಮಾಡಿ ಅಲ್ಲೇ ಇಟ್ಟೆ" ಅಂತ ತಲೆ ತುರಿಸಿಕೊಂಡೆ. ಬೆಡರೂಮ ಹೊಕ್ಕವಳಿಗೆ ರಾಶಿ ರಾಶಿಯಾಗಿ ಬಟ್ಟೆಗಳು ಬಿದ್ದಿರುವುದು ಕಾಣಿಸಿತು, ಅವಳು ಕೇಳುವ ಮುಂಚೆಯೇ "ಬೆಳಗ್ಗೆ ಕರವಸ್ತ್ರ ಸಿಗಲಿಲ್ಲ ಅಂತ ಹುಡುಕ್ತಾ.... ಇದ್ದೆ" ಅಂದೆ ನಿಧಾನವಾಗಿ, ಅವಳು ಒಂದೊಂದೇ ಮಡಚಿ ಕೊಟ್ರೆ ಎತ್ತಿ ಬೀರುವಿನಲ್ಲಿಟ್ಟೆ. ಹಾಸಿಗೆ ಹತ್ರ ಹರಡಿಕೊಂಡು ಬಿದ್ದಿರುವ ನಾಲ್ಕು ದಿನದ ದಿನಪತ್ರಿಕೆಗಳು, ಸೊಫಾ ಮೇಲೆ ಒಣಗಿ ಹಾಕಿರುವ ವಸ್ತ್ರಗಳು, ಹಾಲ್‌ಗೆ ಬಂದಿರುವ ಬೂಟುಗಳು ಒಂದೇ ಎರಡೆ ಎಲ್ಲದಕ್ಕೂ ಹರಿಹಾಯ್ದಳು.
ತವರುಮನೆಯಿಂದ ತಂದ ಅದ್ಯಾವುದೊ ಸುವಾಸನೆ ಅಕ್ಕಿ ಅನ್ನ, ಅವರಮ್ಮನ ಕೈ ಹಪ್ಪಳ ಎಲ್ಲ ಚಪ್ಪರಿಸಿದ್ದಯ್ತು, ಅದೇನೊ ದೊಡ್ಡ ಖುಷಿ ಅವಳಿಗೆ, ಸಾರು ಚೆನ್ನಾಗಿದೆ ಅಂದ್ರೆ ಅಮ್ಮ ಕೊಟ್ಟ ಸಾಂಬಾರು ಪುಡಿಯ ಗುಣಗಾನ, ಅಮ್ಮ ಇದು ಮಾಡಿಕೊಟ್ಲು, ಅಮ್ಮ ಅದ ಚೆನ್ನಾಗಿ ಮಾಡ್ತಾಳೆ ಇನ್ನೂ ಏನೇನೊ ಹೇಳ್ತಾನೇ ಇದ್ಲು... ಅಪ್ಪ ಕೊಡಿಸಿದ ಸೀರೆ, ಅಮ್ಮ ಅದಕ್ಕೆ ಗೊಂಡೆ ಕಟ್ಟಿದ್ದು, ಅಣ್ಣ ಕೊಡ್ಸಿದ ಹೊಸ ಸೆಂಟು ಬಾಟಲಿ, ನೇಲಪಾಲಿಶ, ಎಲ್ಲ ನೋಡಿದ್ದಾಯ್ತು. ಚಿಕ್ಕ ಮಗೂ ತನ್ನ ಪೀಪಿ ಬಲೂನು ತೋರಿಸಿ ಸಂಭ್ರಮಿಸಿದಂತಿತ್ತು. ನಾನು ಅದಕ್ಕಿಂತ ಹೆಚ್ಚಿನದನ್ನು ಕೊಡಿಸಿದ್ದರೂ ಅವಳಿಗೆ ಅದರಷ್ಟು ಆನಂದ ಸಿಗುತ್ತಿರಲಿಲ್ಲ ಬಹುಶ:.
ಈ ಹೆಣ್ಣು ಮಕ್ಕಳಿಗೆ ತವರು ಮನೆಯಂದ್ರೆ ಹಾಗೇನೆ ಏನೊ ಒಂದು ಅಕ್ಕರೆ, ತನ್ನ ಮನೆಯವರನ್ನೆಲ್ಲ ಬಿಟ್ಟು ಹೊಸ ಪರಿವಾರದಲ್ಲಿ ಸೇರಿಕೊಂಡರೂ ಬಿಡದಿರುವ ಹಳೆಯ ನಂಟು ಅದು, ಅತ್ತೆ ಮಾವ ಎಷ್ಟೇ ಪ್ರೀತಿ ಮಾಡಿದರೂ ಅಪ್ಪ ಅಮ್ಮ ನೆನಪಿಗೆ ಬಂದೇ ಬರುತ್ತಾರೆ, ಇನ್ನು ಕಾಡುವ ಅತ್ತೆ ಮಾವ ಇದ್ದರಂತೂ ಮುಗಿದು ಹೋಯ್ತು ಅನುದಿನ ನೆನಪಾಗದಿದ್ರೆ ಕೇಳಿ. ಕೆಲವು ಕಡೆಯಂತೂ ಮನೆ ಅಳಿಯನನ್ನಾಗಿಸಿಕೊಂಡು ತವರುಮನೆಯಲ್ಲೇ ಉಳಿದಿರುವವರೂ ಏನು ಕಮ್ಮಿಯಿಲ್ಲ. ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಅಂತಂದರೂ ಅದರಿಂದ ಹೊರಗೆ ಬರುವುದು ಸಲೀಸಲ್ಲ. ಆದರೂ ಮದುವೆಯಾದ ಮೇಲೆ ಹೆಣ್ಣು ಮಕ್ಕಳಿಗೆ ಮನೆ ಬಿಟ್ಟು ಬರುವುದು ಅನಿವಾರ್ಯ, ಅದನ್ನರಿತುಕೊಂಡರೆ ಆ ಮಟ್ಟಿಗೆ ದೂರ ಇರುವ ನೋವು ಕಮ್ಮಿಯಾದೀತು.
ಊಟವಂತೂ ಆಯ್ತು ಅಂತ ಹಾಗೆ ಏನೊ ಯೋಚಿಸುತ್ತ ಸೊಫಾದಲ್ಲಿ ಬಿದ್ದುಕೊಂಡಿದ್ದೆ, ತಲೆ ತನ್ನ ತೊಡೆಮೇಲಿರಿಸಿಕೊಂಡು ಜಾಗ ಮಾಡಿಕೊಂಡು ಬಂದು ಕುಳಿತಳು, ಕೈ ಬೆರಳಲ್ಲೇ ಬಾಚಣಿಕೆಯಂತೆ ಬಾಚುತ್ತ "ಮುಂಜಾನೆ ಬಹಳ ರೇಗಿದೆ" ಅಂದ್ಲು "ಏನ್ ಮಾಡೀಯಾ ಬಿಡು ಎಲ್ಲ ಹರವಿ ದನದ ಕೊಟ್ಟಿಗೆ ಮಾಡಿಟ್ಟಿದ್ದೆ, ಬಯ್ಯದೆ ಏನು.." ಅಂದೆ, "ಇನ್ನೂ ನಾಲ್ಕು ದಿನಾ ನಾ ಅಲ್ಲೇ ಇದ್ದಿದ್ರೆ ಅಷ್ಟೇ" ಅಂದ್ಲು "ಅದಕ್ಕೇ ನಾನು ಬಾ ಬಾ ಅಂತ ಕರೆದದ್ದು" ಅಂದೆ ಮತ್ತದೇ ಗೋಳು "ಎರಡು ದಿನ ಹಾಯಾಗಿ ತವರುಮನೇಲಿ ಇರೋಣ ಅಂದ್ರೂ ಆಗಲ್ಲ" ಅಂತ ರಾಗ ತೆಗೆದಳು "ಎಷ್ಟು ದಿನ ಇರ್ತಿದ್ದೆ, ಇನ್ನೆರಡು ದಿನ, ನಾಲ್ಕು, ಇಲ್ಲ ವಾರ, ತಿಂಗಳು ಮತ್ತೆ ಬರಲೇಬೇಕಿತ್ತಲ್ಲ", ಅದಕ್ಕವಳು "ಅದೂ ಸರಿ ಆದ್ರೆ ಏನೊ ಸೆಳೆತ ಬಿಟ್ಟು ಬರಲೇ ಆಗಲ್ಲ" ಅಂದ್ಲು. "ನಾನೂ ಇಲ್ಲಿ ಒಬ್ಬನೇ, ನನ್ನ ಅಪ್ಪ ಅಮ್ಮನೂ ನನ್ನ ಜತೆ ಇಲ್ಲ, ಹಾಗಂತ ನಾನೂ ಅಲ್ಲೇ ಹೋಗಿ ಇದ್ರೆ, ಕೆಲಸ ಮಾಡೋರು ಯಾರು ಇಲ್ಲಿ, ಬೆಂಗಳೂರು ನನ್ನ ನೆಚ್ಚಿನ ಊರು, ಏನೆಲ್ಲ ಕೊಟ್ಟಿದೆ ಈ ಊರು ನನಗೆ, ಆದ್ರೆ ತವರೂರು ನೆನಪಿಗೆ ಬಾರದಿರುತ್ತ ಇಲ್ಲ, ಬೆಂಗಳೂರು ಬಿಟ್ಟು ಹೋಗಲು ಆಗುತ್ತ, ಆಗಬಹುದು ಕೆಲಸ ಎಲ್ಲ ಬಿಟ್ಟು ಹೋಗುತ್ತೀನಿ ಅಂದ್ರೆ ಆದ್ರೆ... ಕೆಲವು ಸಂಗತಿಗಳು ಬದುಕಿನಲ್ಲಿ ಅನಿವಾರ್ಯ, ಅನುಸರಿಸಿಕೊಳ್ಳಬೇಕು ಆಗಲೇ ಬದುಕು. ಬೆಂಗಳೂರು ನಾ ನೆಚ್ಚಿ ಬಂದಿದ್ದು, ಈಗ ಖುಷಿಯಾಗಿಯೇ ಇಲ್ಲಿದ್ದೇನೆ, ನೆನಪಾದಾಗ ಎರಡು ದಿನ ಊರಿಗೆ ಹೋಗಿ ಬರುತ್ತೀನಿ, ಹಾಗೇ ನನ್ನ ನೆಚ್ಚಿ ಮದುವೆಯಾದ ನೀನು ನನ್ನೊಂದಿಗಿರದೇ ಅಲ್ಲಿದ್ದರೆ" ಅಂದೆ "ಹೂಂ ಹದಿನೈದು ದಿನಾ ಆಯ್ತು, ಅದೇ ಹೊಗ್ತೀನಿ ಅಂದ್ರೂ ಅಮ್ಮ ಬಿಡ್ಲಿಲ್ಲ, ಎಷ್ಟು ದಿನಾ ಆದಮೇಲೆ ಬಂದೀದೀಯಾ ಇರು ಅಂತ, ಅಣ್ಣ ಇನ್ನೆರಡು ದಿನಾ ಅಂತ ಹಾಗೆ ಮದುವೆಯೊಂದು ಇದೆ ಅದನ್ನು ಮುಗಿಸಿ ಹೋಗು ಅಂತ ಅಪ್ಪ ಹೀಗೆ ತಡವಾಯ್ತು" ಅಂದ್ಲು "ಒಬ್ನೇ ಬೇಜಾರಾಯ್ತು, ಅಮ್ಮ ಇಲ್ಲಿದ್ದಿದ್ರೆ ನಿಂಗೆಷ್ಟು ದಿನಾ ಬೇಕೊ ಇರು ಅಂತಿದ್ದೆ" ಅಂದೆ "ತವರುಮನೆ ನಾಲ್ಕು ದಿನಾ ಚೆನ್ನ, ಆಮೇಲೆ ಎಲ್ಲ ಏನಿಲ್ಲ" ಅವಳೇ ಅಂದ್ಲು ನಾ ಹೇಳಿದ್ದು ಅವಳಿಗೆ ತಿಳಿದಂತಿತ್ತು.
ತವರುಮನೇಲಿ ತಿಂದು ತಿಂದು ಉಬ್ಬೀದೀಯಾ ನೀನು ಅಂತ ಗಲ್ಲ ಕಿವಿಚಿದೆ, ಚೀರಿದ್ಲು, "ನೀವೊ ಹೊರಗೆ ತಿಂಡಿ ತಿಂದು ಸೊರಗಿ ಸಣಕಲಾಗಿದೀರಾ" ಅಂದ್ಲು "ಇನ್ನೆರಡು ದಿನಾ ಆಗಿದ್ರೆ ಬೇರೆ ಹೆಂಡ್ತಿ ನೊಡ್ಕೊಂಡು ಬಿಡ್ತಿದ್ದೆ" ಅಂದೆ, "ಹಾಗೇನಾದ್ರೂ ಮಾಡಿದ್ರೆ ನಮ್ಮಪ್ಪನಿಗೆ ಹೇಳಿ ಕೇಸು ಹಾಕಿಸ್ತಿದ್ದೆ ನಾನೂ" ಅಂದ್ಲು ಇನ್ನೂ ಸ್ವಲ್ಪ ತವರುಮನೆ ಗುಂಗಿನಿಂದ ಹೊರಬಂದಿರಲಿಲ್ಲ ಅಂತ ಕಾಣ್ತದೆ... "ಅಮ್ಮ ಫೋನು ಮಾಡಿದ್ಲು" ಅಂದೆ, "ಅಯ್ಯೊ, ಅತ್ತೆಗೆ ಮನೆಗೆ ಬರ್ತಿದ್ದಂಗೆ ಫೋನು ಮಾಡ್ತೀನಿ ಅಂದಿದ್ದೆ, ಒಳ್ಳೆದಾಯ್ತು ನೆನಪಿಸಿದ್ದು, ಮನೆಯೊಂದು ಮೂರು ಬಾಗಿಲು ಧಾರವಾಹಿ ಎಲ್ಲಿಗೆ ಬಂತು ಕೇಳ್ಬೇಕು" ಅಂತ ನನ್ನ ಮೊಬೈಲು ಕೈಗೆ ತೆಗೆದುಕೊಂಡಳು, ನಾ ತವರುಮನೆ "ತ" ಅವಳ ತಲೆಯಿಂದ ತೆಗೆದು ourಮನೆ ಬಾಗಿಲು ಹಾಕಿ ಭದ್ರ ಮಾಡಲು ಮೇಲೆದ್ದೆ...
ಕೊನೆಗೆ ಅದ್ಯಾವಗಲೋ ಬರೆದ ಕೆಲವು ಸಾಲುಗಳು...
ನಮಗೆಂದಿದ್ರೂ ourಮನೆ
ಅತಿ ಸುಂದರ ಅರಮನೆ.
ನೆಂಟರಲ್ಲಿ ಹೋದ್ರೆ ಅಂತಾರೆ oh!! urಮನೆ.
ಅದರೆ ಅದೆಂದಿದ್ರೂ ಅವರ ಮನೆ.
ಅವಳಿಗೆ ಪ್ರೀತಿ ತವರುಮನೆ.
ಅದೆಂದೂ ಅವ್ವಾರ ಮನೆ.
ಅವ್ವ ಇಲ್ಲದಿರೆ ಹೋದಾಗೊಂದು hourಮನೆ.
ಮರೆಯಲೇಬೇಕು ತಾಯಿ और ಮನೆ.
ಯಾಕೆಂದರಾಗ ಅದು ಅಣ್ಣಾರ ಮನೆ.
ಅದಕ್ಕೆ ಅದೆಂದೂ ಅನ್ಯರ ಮನೆ.
ಹೆಣ್ಣುಮಕ್ಕಳಿಗೆ ತವರೆಂದರೆ ಬಹಳ ಪ್ರೀತಿ ಮೊದಲಿನಿಂದಲೂ, ಅದು ಒಂದು ಲಿಮಿಟ್ಟಿನಲ್ಲಿ ಇದ್ದರೆ ಒಳ್ಳೆಯದು, ನಮ್ಮೂರ ಕಡೆ ಹಳ್ಳಿಗಳಲ್ಲಿ ಹೀಗೆ ತವರುಮನೆ ವ್ಯಾಮೋಹದಲ್ಲಿ ಬಂದು ಅಲ್ಲೇ ತಳವೂರುವ ಹೆಣ್ಣುಮಕ್ಕಳ ಉದ್ದೇಶಿಸಿ ಬರೆದದ್ದು ಇದು ಎಲ್ಲರಿಗೂ ಅನ್ವಯವಾಗಬೇಕೆಂದೇನಿಲ್ಲ.
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...
PDF format www.telprabhu.com/tavarumane.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದು
27 comments:
ನಿಮ್ಮ ಲೇಖನ ಮತ್ತೊಂದು ಮಾಹಿತಿಯೂಂದಿಗಿದೆ...ಒಳ್ಳೆಯದೆ ನಿಮ್ಮ ಮಾತು. ತವರು ಮನೆ ವ್ಯಾಮೋಹ ಎಲ್ಲರಲ್ಲೂ ಇರುತ್ತೆ ಅದು ಹೊಸದರಲ್ಲಿ ಹೆಚ್ಚು ಅವರದೇ ಸಂಸಾರ ಮಕ್ಕಳು ಆದಂತೆಲ್ಲಾ ಎಲ್ಲವೂ ಕಡೆಮೆಯಾಗುತ್ತೆ.
ವಂದನೆಗಳು
ಅಹಾ, ತವರು ಮನೆ, ತour ಮನೆ, our ಮನೆ, ur ಮನೆ ಎಷ್ಟೆಲ್ಲಾ ಚೆನ್ನಾಗಿ
ಪಟ್ಟಿ ಮಾಡಿ ಬರೆದಿದ್ದೀರಿ, ಪ್ರಭುರಾಜ!
ಪ್ರಭು
ಎ೦ದಿನ೦ತೆ ನಿಮ್ಮ ಸರಸ ಶೈಲಿ ಮನಗೆಲ್ಲುವ೦ತಿದೆ. ಕೊನೆಗೆ ಕವನದ ಮೂಲಕ ಪ್ರಸ್ತುತ ಪರಿಸ್ಥಿತಿಗೆ ಚೆನ್ನಾದ ಪ೦ಚ್ ಕೊಟ್ಟಿದ್ದಿರಿ
ಪ್ರಭು ಅವರೇ, ಪ್ರತಿಯೊಬ್ಬರೂ ತಮ್ಮ ಅನುಭವದಿಂದಲೇ ಎಲ್ಲವನ್ನು ತಿಳಿದುಕೊಳ್ಳುವ ಅವಶ್ಯಕತೆ ಇಲ್ಲ, ಕೆಲವೊಮ್ಮೆ ಬೇರೆಯವರ ಅನುಭವಗಳಿಂದ ಅಥವಾ ಅವರೊಂದಿಗೆ ನಡೆದ ಪ್ರಸಂಗದಿಂದ ಮಿಕ್ಕವರಿಗೆ ಪಾಠ/ಬುದ್ಧಿ ಕಲಿಯುವ ಅವಕಾಶ ದೊರೆಯುತ್ತದೆ. ಇದುವೇ ಜೀವನ! ಇದನ್ನು ಆಧಾರಿಸಿ (ನಿಮ್ಮ ಊರಿನ ಹೆಣ್ಣುಮಕ್ಕಳನ್ನು ಕುರಿತು) ಬರೆದಿರುವ ತour ಮನೆ ಲೇಖನ ಅದ್ಭುತವಾಗಿದೆ!!!
ನಿಮ್ಮಿಬ್ಬರ ಸರಸ ಸಲ್ಲಾಪಗಳ ಪ್ರಸಂಗವನ್ನು ಇನ್ನಷ್ಟು ಈ ಲೇಖನದಲ್ಲಿ ಸೇರಿಸಬೇಕಿತ್ತೆಂದು ನನ್ನ ಅನಿಸಿಕೆ.
{ಏಕೆಂದರೆ ಹದಿನೈದು ದಿನಗಳ ಅಂತರವಿತ್ತಲ್ಲ ನಿಮ್ಮಿಬ್ಬರ ನಡುವೆ! (ತಪ್ಪು ತಿಳಿಯಬೇಡಿ, ತಮಾಷೆಗೆ ಹೇಳಿದೆ ಅಷ್ಟೇ!)}
ಮನಸು ಅವರಿಗೆ
ಹೊಸತರಲ್ಲಿ ಬಹಳ, ತಮ್ಮದೇ ಆದ ಸಂಸಾರ ಅಂತ ಆದಮೇಲೆ ಸ್ವಲ್ಪ ಕಮ್ಮಿಯಾಗುತ್ತದೆ.. ಆದರೂ ಹಳ್ಳಿಗಳ ಕಡೆ ಬಂದು ಹಾಗೆ ಅಲ್ಲೇ ತಳವೂರುವವರಿಗೇನು ಕಮ್ಮಿಯಿಲ್ಲ...
sunaath ಅವರಿಗೆ
ಸುನಾಥ ಸರ್, ಅವು ನಾಲ್ಕು ವರ್ಷದ ಹಿಂದೆ ಬರೆದ ಸಾಲುಗಳು ಹಾಗೆ ಅದನ್ನು ಓದುತ್ತಲೇ ಈ ಲೇಖನ ಬರೆದದ್ದು.
PARAANJAPE K.N. ಅವರಿಗೆ
ಪ್ರಸ್ತುತ ಪರಿಸ್ಥಿತಿಯಲ್ಲಿ ಮನೆಯಲ್ಲಿ ತಾಯಿಯಿರುವವರೆಗೆ ತವರುಮನೆ ಆದಮೇಲೆ ಅಣ್ಣ ಅತ್ತಿಗೆ ಅಂತ ಆದಮೇಲೆ ಒಂದು hourಮನೆ ಅಷ್ಟೇ... ಅದರೂ ಕೆಲವು ಕಡೆ ಅಮ್ಮನಿಗಿಂತ ಪ್ರೀತಿ ತೋರಿಸುವುವ ಅಣ್ಣ ಅತ್ತಿಗೆಯರಿದ್ದಾರೆ ಅದನ್ನು ಅಲ್ಲಗಳೆಯುವಂತಿಲ್ಲ.
SSK ಅವರಿಗೆ
ಹೌದು ಮತ್ತೊಬ್ಬರ ಅನುಭವಗಳಿಂದ ತಿಳಿಯಬೇಕಾಗಿದ್ದು ಬಹಳ ಇದೆ, ಎಲ್ಲ ನಾವೆ ಅನುಭವಿಸಿ ತಿಳಿಯಲಾಗಲ್ಲ. ಹದಿನೈದು ದಿನಗಳ ಅಂತರದಲ್ಲಿ ಆದ ಘಟನೆಗಳು ಬಹಳ ಇರಲೇಬೇಕಿತ್ತು, ನನಗೂ ಸ್ವಲ್ಪ ಕಮ್ಮಿಯಾಯಿತೇನೊ ಅನಿಸಿತ್ತು ನಿಮ್ಮ ಅನಿಸಿಕೆ ಓದಿದ ಮೇಲೆ ನಿಜ ಅನಿಸಿದೆ.. ಮುಂದಿನ ಲೇಖನದಲ್ಲಿ ಸುಧಾರಿಸುತ್ತೇನೆ... ಹೀಗೆ ಅನಿಸಿಕೆ ತಿಳಿಸುತ್ತಿರಿ.
ಪ್ರಭು ಅವರೆ,
ನಿಮ್ಮ ಬ್ಲಾಗಿಗೆ ನನ್ನ ಮೊದಲ ಭೇಟಿ. ನಿಮ್ಮ ತour ಮನೆ ಲೇಖನ ಸೊಗಸಾಗಿದೆ!! ನಿಮ್ಮಿಬ್ಬರ ಸರಸ ಸಲ್ಲಾಪಗಳ ಮಾತು, ಕೊನೆಯಲ್ಲಿ ಬಂದ ಆ ಕವನ ಎಲ್ಲವೂ ಇಷ್ಟವಾಯಿತು:)ಒಂದೇ ಊರಿನಲ್ಲಿ ಅಮ್ಮನ ಮತ್ತು ಅತ್ತೆಯ ಮನೆಯಿದ್ದರಿಂದ ನನಗೆ ಈ ರೀತಿ ಅನುಭವಗಳು ಮಿಸ್ಸ್ ಆಯ್ತು..
ಪ್ರಭು,
ನಿಮ್ಮ ಮೇಲೆ ಕೇಸ್ ಹಾಕಬೇಕು ಅನ್ನಿಸುತ್ತಿದ್ದೆ. ನನ್ನ ಮನೆ ಕತೆಯನ್ನೇ ಕದ್ದು ಇಲ್ಲಿ ಬರೆದುಬಿಟ್ಟಿದ್ದೀರಲ್ಲ....[ಭಯಪಡಬೇಡಿ..ತಮಾಷೆಗೆ ಹೇಳಿದೆ.]ನೀವು ಹೇಳಿದಂತೆ ನನ್ನಾಕೆ ತವರು ಮನೆಯಿಂದ ಬರುತ್ತಾ ನವರಂಗ್ ಬಳಿಯೇ ಇಳಿಯುವುದು..ದೇವಯ್ಯ ಪಾರ್ಕ್ ಬಳಿಯೇ ನಮ್ಮ ಮನೆ. ಮತ್ತೆ ಇಲ್ಲಿಂದ ಬರಿಕೈಯಲ್ಲಿ ಹೋದರೂ ಅಲ್ಲಿಂದ ಒಂದು ರಾಶಿ ವಸ್ತುಗಳನ್ನು ತರುವುದು...ಅದಕ್ಕಾಗಿ ನನಗಾಗಿ ಫೋನ್ ಮಾಡುವುದು....[ಟಿ.ವಿ. ಧಾರವಾಹಿಯ ವಿಚಾರವೊಂದನ್ನುಬಿಟ್ಟು]ಮತ್ತೆ ಮನೆಯ ಅಸ್ತವ್ಯಸ್ತತೆಯನ್ನು ಕಂಡು ಮಾತಾಡುವುದು...ವಸ್ತುಗಳ ಸ್ಥಾನಪಲ್ಲಟಗಳ ಬಗ್ಗೆ ಖಾರವಾದ ಮಾತುಗಳು ಎಲ್ಲಾ ನಿಮ್ಮ ಬರಹದಂತೆಯೇ..[ಕಳೆದ ತಿಂಗಳು ಅವಳ ಅಣ್ಣನ ಮದುವೆಗೆ ಅಂತ ಹೋಗಿ ಹತ್ತು ದಿನದ ನಂತರ ಬಂದಮೇಲೆ ಹೀಗೆ ಆಗಿತ್ತು.].
ತವರಿನ ಕವನ ಚೆನ್ನಾಗಿದೆ...
ಧನ್ಯವಾದಗಳು.
Hi prabhu,
chennagide tavarumane katte.
avariladiruvaga tooth brushne soutu, spoon agi upyogisibitira husaru ha ha ha :)
inmundhe yadru avru baruva modalu
maneya yala samanu galanu saripadisiri.....
ಪ್ರಭು....
ಅಹಾ... ಸೊಗಸು... ಸೊಗಸು...!!
ತುಂಬಾ ಸಲಿಸಾಗಿ ಶ್ರಂಗಾರವಾಗಿ..
ಸರಸ ದಾಂಪತ್ಯವನ್ನು ಚಿತ್ರಿಸುತ್ತೀರಿ ನೀವು...
ದಾಂಪತ್ಯದ ಇತಿಮಿತಿಯನ್ನು ಸರಳವಾಗಿ ಬಿಡಿಸಿಡುತ್ತೀರಿ...
ಅಭಿನಂದನೆಗಳು...
ಕವನ ಕೂಡ ಸೂಪರ್...!!
Your ಮನೆ ಸುದ್ದಿ ಮತ್ತು your ಮನದೊಡತಿಯ ತour ಮನೆ ಸುದ್ದಿ ಎರಡನ್ನೂ ಪಸಂದಾಗಿ cover ಮಾಡಿದ್ದೀರಿ.
sogasaada baraha ... "naanu Enu koDisidaru I KuShi avaLige siguvudilla" ... I vaakya nanage tu0ba iShTavaayitu. haagU yochisuva0te maaDitu .. tavarina mOha haage e0du samaadaanisiko0De.... :-) :-) dEvi daakShayiNige tavarina mOha haage iruvaaga naavu bari hulumaanavaru ... :- :-) ...
Hello Prabhu,
Chennagide nimma aritcle.. hauda sahaja elrigu taurmane andre jasthi preethi... neevu ene vajra vaidurya kodsidru amma mane chakli kolbade super.... chennaigde nimma baravanige shaili....
hema
ನಾನು ನಿಮ್ಮಾ ಕಥೇನ ಪೂರ್ತಿ ಓದಿದೆ..ತುಂಬ ಚೆನ್ನಗಿತು , ಕನ್ನಡ ಭಾಷೆ ಮೇಲೆ ತುಂಬ ಹಿಡಿತ ಇದೆ ನಿಮಗೆ..ನೀವು ವಸ್ತ ಕಥೆಗೆ ಸರಿಯಾಗಿ ಚುಟುಕುಗಳನ್ನ ಉಪಯೌಗಿಸಿದ್ದಿರಿ...ಕೀಪ್ ಇಟ್ ಅಪ್
"ಅವ್ವ ಇಲ್ಲದಿರೆ ಹೋದಾಗೊಂದು hourಮನೆ." ಈ ಸಾಲು ೧೦೦% ನಿಜ. ತಾಯಿ ಇದ್ದರೇನೆ ಅದು ತವರು. ಕಥೆ ಎಂದಿನಂತೆ ತುಂಬ ಚೆನ್ನಾಗಿದೆ.
ರೂpaश्री ಅವರಿಗೆ
ನನ್ನ ಬ್ಲಾಗನ ಕಲ್ಪನಾಲೊಕಕ್ಕೆ ಸ್ವಾಗತ, ಅವಳು ಸ್ವಲ್ಪ ತುಂಟಿ, ನಮ್ಮಿಬ್ಬರ ಮಾತುಗಳು ಹೀಗೆ ಇರುತ್ತವೆ, ಬರುತ್ತಿರಿ...ಅಮ್ಮ ಅತ್ತೆ ಮನೆ ಒಂದೇ ಊರಲ್ಲಿದ್ದರೆ ಈ ತವರಿನ ಅನುಭವ ಅಷ್ಟಾಗಿ ಆಗಿರಲಿಕ್ಕಿಲ್ಲ, ಆದರೂ ತವರು ತವರೇ ಅಲ್ವೇ ಎಲ್ಲಿದ್ದರೇನಂತೆ..
shivu ಅವರಿಗೆ
ಅಯ್ಯೊ ಮೊದಲೇ ನನ್ನಾಕೆ ಅವರಪ್ಪನಿಗೆ ಹೇಳಿ ಕೇಸು ಹಾಕಲಿದ್ದಾಳೆ, ನೀವು ಕೂಡ ಹೀಗನ್ನುತ್ತೀರಿ, ಬೇಡ ಸಾರ್.. ನೀವು ಯಾವ ವಕೀಲರನ್ನು ಸಂಪರ್ಕಿಸುತ್ತೀರೊ ಅವರ ನಂಬರು ನನ್ನಾಕೆಗೆ ಬೇಕಂತೆ ಅವಳು ಕೇಳಿದರೆ ಕೊಡಬೇಡಿ ಪ್ಲೀಸ್..(ತಮಾಷೆಗೆ)..
ನಿಮ್ಮನೆ ಕಥೆ ಕೂಡ ಇದೇನಾ, ನವರಂಗ ನಿಲುಗಡೆ ಬಹಳ ಪ್ರಸಿದ್ಧ ಬೇರೆ ಊರುಗಳ ಬಸ್ಸು ಬರುವುದು ಜಾಸ್ತಿ ಅಲ್ಲಿಯೆ ಅದಕ್ಕೆ ಅದೇ ನಮ್ಮ ನಿಲುಗಡೆ ಕೂಡ. ನಿಮ್ಮ ಅನುಭವ ಹಂಚಿಕೊಂಡಿದ್ದು ಲೇಖನಕ್ಕೆ ಒಳ್ಳೆ ಪೂರಕ ಪುರಾವೆಯಂತಿದೆ...
ಕವನ ಅಂತಂದುಕೊಳ್ಳಲು ನನಗೆ ಹಿಂಜರಿಕೆ ಅದಕ್ಕೆ ಸಾಲು ಅನ್ನೊದು, ಕವನಕ್ಕೆ ಬಹಳ ರೀತಿ ಪದ್ದತ್ತಿಗಳಿದ್ದು ನಮ್ಮದೇನಿದ್ದರೂ ಬರೀ ಪ್ರಾಸದ ಸಾಲುಗಳು.
ಪ್ರೀತಿಯಿ೦ದ ವೀಣಾ :) ಅವರಿಗೆ
ಟೂಥಬ್ರಷ ಸೌಟಾದರೂ ಪರವಾಗಿಲ್ಲ ವೀಣಾ, ಎಲ್ಲಿ ನನ್ನ ರೆಡ ಕ್ಲೊಸ್‌ಅಪ್ ಪೇಸ್ಟ ಫ್ರೂಟ್ ಜಾಮ್ ಅಂತ ಉಪಯೋಗಿಸ್ತೀನೊ ಅಂತ ಭಯ ಆಗಿದೆ ನಂಗೆ!!! ಹೀ ಹೀ ಹೀ... ಹುಟ್ಟು ಗುಣ ಬಿಡೊಕಾಗುತ್ತಾ, ಸಾಮಾನುಗಳು ಯಾವಾಗಲೂ ಚಲ್ಲಾಪಿಲ್ಲಿಯೇ ಆಗುತ್ತವೆ, ಅವಳಿಂದ ಬಯ್ಯಿಸಿಕೊಳ್ಳೊದು ಒಂಥರಾ ಖುಷಿ ಕೊಡುತ್ತೆ ಅಂತೀನಿ.
ಸಿಮೆಂಟು ಮರಳಿನ ಮಧ್ಯೆ ಅವರಿಗೆ
ಎನೊ ಸ್ವಲ್ಪ ಕಲ್ಪನೆಗಳು, ಮತ್ತೆ ಇನ್ನೊಬ್ಬರ ಅನುಭವಗಳ ನೋಡಿದ್ದು ಎಲ್ಲ ಸೇರಿಸಿ ಮಿಕ್ಷರ ಮಾಡಿ ಮಸಾಲೆ ಹಾಕಿ ನಿಮ್ಮ ಮುಂದಿಡೊದು ಅಷ್ಟೇ... ನಿಮ್ಮ ಪ್ರೊತ್ಸಾಹ ಹೀಗೆ ಇರಲಿ.
ಎಚ್. ಆನಂದರಾಮ ಶಾಸ್ತ್ರೀ ಅವರಿಗೆ
ನನ್ನ ಬ್ಲಾಗಗೆ ಸ್ವಾಗತ ಸರ್, our ಬ್ಲಾಗಗೆ your ಕಾಮೆಂಟು ನೋಡಿ ಖುಶಿಯಾಯ್ತು ಹೀಗೆ ಬರ್ತಾ ಇರಿ over and over..
roopa ಅವರಿಗೆ
ತವರಿನ ಉಡುಗೊರೆಗಳೇ ಹಾಗೆ, ನಾವೇನು ಕೊಡಿಸಿದರೂ ಅದಕ್ಕೆ ಸಮನಾಗಲಿಕ್ಕಿಲ್ಲ, ದೇವ ದೇವತೆಯರ ತವರಿನ ಮೋಹದ ಬಗ್ಗೆ ಪ್ರಸ್ತಾಪಿಸಿದ್ದು ನಿಜಕ್ಕೂ ನನ್ನನ್ನೂ ಯೋಚಿಸುವಂತೆ ಮಾಡಿದೆ, ದೇವರೇ ಹಾಗಂದಮೇಲೆ ನಾವು ಯಾವ ಲೆಕ್ಕ ಬಿಡಿ.
maaya ಅವರಿಗೆ
ಅದೂ ಸರಿ ಅನ್ನಿ ನಮ್ಮ ವಜ್ರ ವೈಢೂರ್ಯಗಳ ಮುಂದೆ ತವರು ಮನೆ ಕೊಡುಬಳೆ ಚಕ್ಕಲಿಯೇ ಜಾಸ್ತಿ, ಅದಕ್ಕೆ ನಿಮ್ಮ ಕಾಮೆಂಟು ತೋರಿಸಿ ಬಂಗಾರದ ಬಳೆ ಬೇಡ ಕೋಡುಬಳೆ ಹಾಕಿಕೊ ಅಂದೆ ನನ್ನಾಕೆಗೆ, ತಲೇ ಮೇಲೆ ಕುಟ್ಟಿದಳು, ಏನೊಪ್ಪ ಹೆಣ್ಣಿನ ಮನಸು ಅರ್ಥಾನೇ ಆಗಲ್ಲ.
Jagadeesh ಅವರಿಗೆ
ಚಿಕ್ಕೋನಿರೋವಾಗ ಶಾಲೇಲಿ ಕನ್ನಡ ಕಲಿತದ್ದು, ಗುರುಗಳು ಹೇಳಿಕೊಟ್ಟದ್ದು ಸ್ವಲ್ಪ ಸಾರ್ಥಕ ಆಗಿದೆ, ನಮ್ಮಲ್ಲಿ ಕಂದ ಪದ್ಯ, ಷಟ್ಪದಿ, ಗುರು, ಲಘು, ಮಾತ್ರೆ, ಏನೆಲ್ಲ ಹೇಳಿಕೊಟ್ಟಿದ್ರು, ಎಲ್ಲ ಮರೆತೇ ಹೋಗಿದೆ. ಅದರೂ ಇಷ್ಟಾದರೂ ಬರೀತೀನಲ್ಲ ಅದೆ ಖುಷಿ, ನನ್ನ ಬ್ಲಾಗಗೆ ಸ್ವಾಗತ ಹೀಗೆ ಬರ್ತಿರಿ.
Nisha ಅವರಿಗೆ
ಅವ್ವ ಇಲ್ಲದಿದ್ರೆ ತವರು ಬಣ ಬಣ ಅನಿಸದೇ ಇರಲಿಕ್ಕಿಲ್ಲ, ಅಪ್ಪ ಅಮ್ಮನ ಪ್ರೀತಿಯೇ ತವರಲ್ಲವೇ, (ಕೆಲವು ಕಡೆ ಒಳ್ಳೇ ಅಣ್ಣ ಅತ್ತಿಗೆಯರೂ ಇದಾರೆ) ಹಾಗಾಗಿ ಹೋದಾಗೊಂದು hourಮನೆ...
nimma maneya suddi, maneyodathiya thavaru maneya suddi chennagittu!!!
ತವರುಮನೆ ಚನ್ನಾಗಿದೆ ಪ್ರಭು :)
ಬಾಲು ಅವರಿಗೆ
ಹಾಗೆ ನಮ್ಮ ಬ್ಲಾಗ್ ಪೋಸ್ಟಿಗೆ ನಿಮ್ಮ ಕಾಮೆಂಟು ಚೆನ್ನಾಗಿತ್ತು.
ಶಿವಪ್ರಕಾಶ್ ಅವರಿಗೆ
ಥ್ಯಾಂಕ್ಸ್ ಶಿವಪ್ರಕಾಶ್.
chennagide nimma tavara mane kathe :)
konege barediruva padya tumba ishta aitu..
heege barita iri :)
ಹೆಣ್ಣುಮಕ್ಕಳ ತವರರಿನ ಸೆಳೆತವನ್ನು ಚೆನ್ನಾಗಿ ಪದಗಳಲ್ಲಿ ಹಿಡಿದಿದ್ದೀರಿ. ಸದ್ಯಕ್ಕ೦ತೂ ತour ಮನೆ, our ಮನೆ ಎಲ್ಲಾ ಒ೦ದೇ, ಅದಕ್ಕೆ ಅದರ ತೀವ್ರತೆ ಅಷ್ಟೊ೦ದು ಗೊತ್ತಾಗದೆ ಇರಬಹುದು, ಕಲ್ಪಿಸಿಕೊಳ್ಳಲು ಇಷ್ಟವಿಲ್ಲ. ಆದರೆ ಅಮ್ಮನ ಸ೦ಭ್ರಮ ನೋಡಿದಾಗ ಅರಿವಾಗುತ್ತದೆ.
ಭಾಳ ಚೆಂದ ಬರೆದಿದ್ದರಾ..ಓದಿಸಿಕೊಂಡು ಹೋಗುತ್ತೆ
-ಧರಿತ್ರಿ
Raghavendra ಅವರಿಗೆ
ಏನೋ ಹಾಗೆ ಬರೆಯಲು ಕುಳಿತೆ, ಯಾವಾಗಲೋ ಬರೆದ ಸಾಲುಗಳ ಸೇರಿಸಿ ಈ ಲೇಖನ ತಯಾರಾಯಿತು.
ವಿನುತ ಅವರಿಗೆ
ತವರುಮನೆ ಸಂಭ್ರಮ ಹಾಗೇನೇ, your ಮನೆ ಅಂತ ಆದ ಮೇಲೆ ತವರಿನ ಅನುಭವ ಆಗುತ್ತೆ.. ತವರಿನ ಕೇಂದ್ರ ಬಿಂದು ಅಮ್ಮ ಅಲ್ವೇ...
ಧರಿತ್ರಿ ಅವರಿಗೆ
ಥ್ಯಾಂಕ್ಸ್ ಧರಿತ್ರಿ ಬರ್ತಾ ಇರಿ...
ಪ್ರಭು ಅವರೇ
ನಾನು ನಿಮ್ಮ ಬ್ಲಾಗ್‌ಗೆ ಕಣ್ಣಾಡಿಸಿದ ಮೊದಲ ಲೇಖನವೇ ತುಂಬಾ ಚೆನ್ನಾಗಿದೆ
ಹೌದು ಮದುವೆಯಾದ ಹೆಂಗಸರಿಗೆತವರು ಮನೆ ಎಂದರೆ ಸ್ವರ್ಗದ ಹಾಗೆ.
ತವರು ಮನೆ ತಾಯಿ, ಅಕ್ಕ, ಅಣ್ಣಾ ಇವರೆಲ್ಲರ ಹಾಗೆಯೇ ತವರು ಮನೆಯ ಒಂದೊಂದು ವಸ್ತುವೂ ಜೀವಂತ , ಆತ್ಮೀಯ ಅದಕ್ಕಾಗಿಯೇ ಏನೋ ಗಂಡನ ಮನೆಯವರು ಕೊಡಿಸಿದ ಚಿನ್ನಕ್ಕಿಂತ ತವರು ಮನೆಯ ಮಾಮೂಲಿ ಉಡುಗೊರೆ ಹೆಚ್ಚು ಇಷ್ಟವಾಗುತ್ತದೆ ಬೆಲೆಯಿಂದಲ್ಲ ಅದರ ಅಮೂಲ್ಯತೆಯಿಂದ.
ತವರುಮನೆ ಪ್ರೀತಿ ಹಾಗೇನೇ, ಅಷ್ಟು ದಿನ ಹುಟ್ಟಿ ಬೆಳೆದ ಮನೆಯನ್ನ ಯಾರಿಗೆ ತಾನೇ ಮರೆಯಲಾದೀತು ಹೇಳಿ, ಅಲ್ಲಿನ ಪ್ರೀತಿಗೆ ಬೆಲೆ ಕಟ್ಟಲಾಗಲ್ಲ, ಆದರೂ ಗಂಡನ ಮನೆಯಲ್ಲೂ ಪ್ರೀತಿಯಿಂದ ಕೊಡಿಸಿದ್ರೆ ಅದೂ ಅಮೂಲ್ಯ ಅಲ್ವೇ, ಅಪ್ಪನ ಕಾರು ಬಂಗಲೆ ಬಿಟ್ಟು ಪತಿಯ ಬೈಕು ಬಾಡಿಗೆಮನೆ ಪ್ರೀತಿಸುವವರೂ ಇರುತ್ತಾರೆಯನ್ನುವುದೂ ಸತ್ಯ...
ಪ್ರಭು,
ನಿಮ್ಮ ಪೋಸ್ಟುಗಳನ್ನು ನೋಡಿದ್ರೆ ನಂಗೆ ಹೊಟ್ಟೆಕಿಚ್ಚಾಗುತ್ತೆ, ಬಹಳ ಚನ್ನಾಗಿ ನವಿರು-ಗಾಢ ಸಂಬಂಧಗಳ ಸೂಕ್ಷ್ಮಗಳನ್ನು ಮನ ಮುಟ್ಟುವಂತೆ ಬರವಣಿಗೆಗೆ ಇಳಿಸುತ್ತೀರಿ.
ಸಂಸಾರದ ಸರಿಗಮವನ್ನು ಕೆಲೆವೊಮ್ಮೆ ನಿಮ್ಮ ಹಾಡಿನ ಮೂಲಕ ಮಗದೊಮ್ಮೆ ನಿಮ್ಮ ಮನೆಯವರ ಮೂಲಕ ಚಿತ್ರಿಸುತ್ತೀರಿ, ಹೀಗೇ ನಡೆಯಲಿ...ನಿಮ್ಮ ಸಂಗೀತ ಮುಂದುವರೆಯಲಿ...
ನಿಮ್ಮ ಕಾಮೆಂಟುಗಳೂ ಹಾಗೇ ಚೆನ್ನಗಿರುತ್ತವೆ(ಅಪಘಾತ ಆಘಾತ ಲೆಖನಕ್ಕೆ ಬರೆದ ಕಮೆಂಟು ಅಂತೂ ಸೂಪರ). ಬದುಕೇ ನವಿರು ಗಾಢ ಸಂಬಂದಗಳ ಕೂಟ ಅಂದರೆ ತಪ್ಪೇನಿಲ್ಲ.
nim ella barahagalu thumbha thumbha channagivi
Post a Comment