Sunday, July 12, 2009

ಹುಡುಕಾಟ ಹುಡುಗಾಟ...

ರಾತ್ರಿ ಬಂದದ್ದೇ ಲೇಟು, ಊಟ ಆಯ್ತು ಇನ್ನೇನು ಮಲಗಬೇಕು ಅಂತಿದ್ದೆ, ಆಗಲೇ ನೆನಪಾಗಿದ್ದು ಒಹ್ ನಾಳೆ ಕನ್ಯಾ ನೋಡೊಕೆ ಹೋಗಬೇಕಲ್ವಾ ಅಂತಾ, ಪಕ್ಕದಲ್ಲೇ ಇವಳು ಮಲಗಿದ್ದಳು, "ನಾಳೆನೇ ಅಲ್ವಾ ಹೋಗೋದು ಕನ್ಯಾ ನೋಡೋಕೆ" ಅಂದೆ, "ಹೂಂ ಇನ್ನೂ ನಾಳೆ... ಈಗಿಂದಲೇ ಏನೋ ತಯ್ಯಾರಿ ಮಾಡುತ್ತಿರುವ ಹಾಗಿದೆ..." ಅಂತಂದಳು. ಅಲ್ಲ ನಿಮಗೂ ಕುತೂಹಲ ಕಾಡುತ್ತಿರಬೇಕು ನನ್ನಾಕೆಯೊಂದಿಗೆ ನಾನ್ಯಾವ ಕನ್ಯೆ ನೋಡಲು ಹೊರಟಿದ್ದೇನೆಂದು, ಸಂಶಯವೇ ಬೇಡ, ಅತ್ತ ಸರಿದು ಮಲಗಿದ್ದವಳು, ನನ್ನೆಡೆಗೆ ತಿರುಗಿ "ರೀ ಕನ್ಯೆ ನೋಡೊಕೆ ಹೊರಟಿರೋದು ನನ್ನ ತಮ್ಮನಿಗೆ ನಿಮಗಲ್ಲ, ನೆನಪಿರಲಿ" ಅಂತ ಖಚಿತ ಮಾಡಿದಳು. "ಹೇಗೂ ನೋಡಲು ಹೊರಟಿದ್ದೇವೆ ಅದರಲ್ಲೇ ನನಗೂ ಇನ್ನೊಂದು ನೋಡಿಕೊಂಡು ಬರೊಣ ಅಂತಿದ್ದೆ" ಅಂದೆ. "ಏನು... ರಾತ್ರಿ ಅಲ್ಲಿ ಸೊಫಾ ಮೇಲೆ ಮಲಗೊ ಇರಾದೆ ಏನಾದ್ರೂ ಇದೆಯಾ" ಅಂತ ಧಮಕಿ ಹಾಕಿದ್ಲು, ಗುಮ್ಮನ ಹೆದರಿಕೆ ಹಾಕಿದಾಗ ಮಲಗುವ ಮಗುವಿನಂತೆ ತೆಪ್ಪಗೆ ತಲೆದಿಂಬಿಗೆ ಒರಗಿದೆ.

ಬೆಳಗಿನ ಜಾವ ನಾಲ್ಕೊ ಐದೋ ಆಗಿರಬೇಕು, ಬಾಗಿಲ ಬೆಲ್ ಸದ್ದಾಯಿತು, "ಯಾರಿರಬಹುದು" ಅಂತ ಏಳಬೇಕನ್ನುವಷ್ಟರಲ್ಲಿ ಇವಳು ಎದ್ದು ಹೊರಟಾಗಿತ್ತು, ಬೆಲ್ ಸದ್ದಿಗೇ ಕಾಯುತ್ತ ಮಲಗೇ ಇರಲಿಲ್ಲವೇನೊ, "ಅಮ್ಮ ಅಪ್ಪ ಬಂದಿರಬೇಕು" ಅನ್ನುತ್ತ, ಎನು ಉತ್ಸಾಹ ನೋಡಿ, "ಹೂಂ... ಹಾಗಿದ್ದರೆ ಸರಿ ಬಿಡು" ಅನ್ನುತ್ತ ಮತ್ತೆ ಮುಸುಕೆಳೆದೆ. ಮಾವ ಸಕುಟುಂಬ ಪರಿವಾರ ಸಮೇತರಾಗಿ ಆಗಮಿಸಿದ್ದರು, ಮದುವೆಗೆ ಬಂದಂತೆ. ಬಾಗಿಲು ತೆಗೆದು ಅವರ ಕೂರಿಸಿ ಬಂದವಳು. "ರೀ, ಏಳ್ರೀ, ಅಪ್ಪ ಅಮ್ಮ ಬಂದೀದಾರೆ ಇನ್ನೂ ಏನು ಮಲಗೀದೀರ" ಅಂತ ಮುಸುಕೆಳೆದಳು, "ಈಗಲೇ ಏಳಬೇಕಾ, ಸೂರ್ಯ ಕೂಡ ಕಣ್ಣು ತೆರೆದಿಲ್ಲ" ಅಂದೆ. ಇವಳ ಕಣ್ಣು ಇನ್ನಷ್ಟು ತೆರೆದು ಸೂರ್ಯನಂತೆ ಕೆಂಪಾಗಿ ಮಿನುಗಿದವು.. ಇನ್ನು ಏಳದಿದ್ರೆ ಮುಕ್ಕಣ್ಣನ ಮೂರನೇ ಕಣ್ಣು ಇವಳಿಗೂ ಇದ್ರೆ ಅದನ್ನೂ ತೆರೆದಾಳು ಅನ್ನುತ್ತಾ "ಅವರಿಗೆ ಕಾಫಿ ಟೀ ಏನಾದ್ರೂ ಮಾಡು ಹೋಗು" ಎಂದು ಹೇಳಿ ಎದ್ದೆ.

ವರಾಂಡದಲ್ಲಿ ಇವಳಪ್ಪ ಅಲಿಯಾಸ ನನ್ನ ಮಾವ, ಇವಳ ತಮ್ಮ ಕೂತಿದ್ದರು ಭಾರತ ಪಾಕಿಸ್ತಾನ ಪ್ರಧಾನಿಗಳಂತೆ ಒಬ್ಬರು ಒಂದೊಂದು ವಿರುದ್ಧ ದಿಕ್ಕಿಗೆ ನೋಡುತ್ತ. ನಾ ಸಂಧಾನಕಾರರಂತೆ ಅಲ್ಲಿ ಪ್ರವೇಶಿಸಿದೆ, ಮಾವ ಎದ್ದು "ಅಯ್ಯೊ ಇನ್ನೂ ಬೆಳಗಿನ ಜಾವ ಬೇಗ ಯಾಕೆ ಏಳೋಕೆ ಹೋದಿರಿ" ಅಂತ ಸಂಕೋಚ ಪಟ್ಟುಕೊಂಡರು, ಇಷ್ಟು ಬೇಗ ಬಂದು ಎಬ್ಬಿಸಿದಮೇಲೆ ಯಾಕೆ ಎದ್ದಿರಿ ಅಂತ ಕೇಳಿದ್ರೆ ಏನ್ ಹೇಳಬೇಕು, "ನಿಮ್ಮ ಮಗಳು ಬಿಡಬೇಕಲ್ಲ, ನನಗೇನು ಇನ್ನೂ ಹೊತ್ತೇರುವವರೆಗೆ ಮಲಗಿರ್ತಿದ್ದೆ" ಅನ್ನುತ್ತ ಪ್ರಯಾಣ ಚೆನ್ನಾಗಿತ್ತಾ ಅಂತ ಕುಶಲೋಪರಿಗಿಳಿದೆ... ಅದೇ ಅವಳ ತಮ್ಮ ಅಲ್ಲೇ ಕೂತಿದ್ದ ಒಂದು ಸಾರಿ ದುರುಗುಟ್ಟಿ ನೋಡಿದೆ, ನನ್ನ ನೀಲವೇಣಿಯ nil ವೇಣಿ ಮಾಡಿದ ಕೋಪ ಇನ್ನೂ ಇತ್ತಲ್ಲ ಮತ್ತೆ ನನ್ನವಳ ಜಡೆ ಕತ್ತರಿಸಲು ಕಾರಣನಾದ ಅವನ ಮೇಲೆ ಸಿಟ್ಟಿರದೇ ಬಿಟ್ಟೀತೇ, ಅವನಿಗೂ ಗೊತ್ತಾಗಿರಬೇಕು "ಭಾವ ಸಾರಿ... ಅದು ಅಕ್ಕನ ಜತೆ ಆಟ ಮಾಡ್ತಾ, ಅವಳ ಜಡೆ..." ಅಂತ ತಲೆ ಕೆಳಗೆ ಮಾಡಿದ. ಸ್ವಲ್ಪ ಗಂಟಲು ಸರಿ ಮಾಡಿಕೊಂಡೆ ಮಾತಾಡಲಿಲ್ಲ ಅಳಿಯ ಅಂತ ಗತ್ತು ತೋರಿಸಬೇಕಲ್ಲ. ಮಾವ "ಏನೊ ಹುಡುಗಾಟ ಹಾಗಾಯ್ತು, ಬೇಜಾರ ಮಾಡ್ಕೋಬೇಡಿ" ಅಂತಂದರು. ಪಾಪ ಎಲ್ಲಿ ಅಳಿಯಂದ್ರಿಗೆ ಬಹಳ ಸಿಟ್ಟು ಬಂದಿದೆಯೇನೊ ಅನ್ನುವಂತೆ.
"ಮದುವೆ ಆಗೊ ವಯಸ್ಸಾಯ್ತು ಇನ್ನಾದ್ರು ಹುಡುಗಾಟ ಕಮ್ಮಿ ಆಗಬೇಕಲ್ಲ" ಅಂತನ್ನುತ್ತ ಮಾವ ಅವರಿಗೆ ಫ್ರೆಷ್ ಆಗಿ ಅಂತ ಬಾತರೂಮ ಅಲ್ಲಿದೆ ಅಂತಿದ್ದೆ. ಇವಳು ಬಂದು "ಮದುವೆ ಆಗೀನೇ ನಿಮ್ಮ ಹುಡುಗಾಟ ಇನ್ನೂ ಕಮ್ಮಿಯಾಗಿಲ್ಲ, ಅವನಿಗೇನು ಹೇಳ್ತಿದೀರ" ಅಂತನ್ನುತ್ತ ಚಹ ಕಪ್ಪುಗಳ ತೆಗೆದುಕೊಂಡು ಬಂದಳು, ಎಷ್ಟೇ ಅಂದರೂ ತಮ್ಮನ ಮೇಲೆ ಪ್ರೀತಿ, ಅವನ ಪರ ವಹಿಸಿ ಮಾತಾಡದಿರುತ್ತಾಳಾ. ಹಾಗೇ ಒಮ್ಮೆ ವಾರೆ ನೋಟದಲ್ಲಿ ಅವಳತ್ತ ಸಿಟ್ಟಿನಿಂದ ನೋಡಿದೆ, ಗಂಭೀರವಾಗಿ ಹೇಳಿದ್ದನ್ನು ಅಷ್ಟು ಸಲೀಸಾಗಿ ತಳ್ಳಿಹಾಕುತ್ತಿದ್ದಳಲ್ಲ ಅನ್ನುವಂತೆ. ಅವಳಿಗೆ ಅರ್ಥವಾಗಿರಬೇಕು, ಅವನಿಗೆ ಟೀ ಕೊಡುತ್ತ "ನಿನ್ನ ಒಳ್ಳೆದಕ್ಕೇ ಹೇಳ್ತಿರೊದು ಅವರು... ಏನು?" ಅಂದ್ಲು ತಮ್ಮನಿಗೆ, ಅವನೂ ತಲೆಯಲ್ಲಾಡಿಸಿದ. ಪಾಕಶಾಲೆಯಿಂದ ಅವಳ ಅಮ್ಮ ಬಂದರು, ಆ ಹಸನ್ಮುಖಿ ಮುಖ ನೋಡುತ್ತಿದ್ದಂತೆ ಬಂದಿದ್ದ ಸಿಟ್ಟೆಲ್ಲ ಜರ್ರನೇ ಇಳಿದು ಹೋದಂತಾಯಿತು. ಎಂಥ ಪರಿಸ್ಥಿತಿಯಲ್ಲೂ ಆ ನಗು ಹಾಗೆ ಇದ್ದೆ ಇರುತ್ತದೆ, ಬಹುಶ: ಇವರಿಗೆ ಫೊಟೊ ತೆಗೆಯುವಾಗ ಯಾರೋ ಸ್ಮೈಲ್ ಪ್ಲೀಜ ಅಂತ ಹೇಳದೇ ಕೀಪ್ ಸ್ಮೈಲಿಂಗ್ ಪ್ಲೀಜ್ ಅಂದಿರಬೇಕು, ಮಾತಾಡಿದರೆ ಎಲ್ಲಿ ಮುತ್ತು ಉದುರೀತು ಅಂತ ಎಲ್ಲೊ ಎರಡು ಮಾತು ಮತ್ತೆ ಚಿಕ್ಕ ಕಿರುನಗು, ನನ್ನಾಕೆ ಥೇಟ ಇದೇ ಹೋಲಿಕೆ ಅದಕ್ಕೇ ಅಲ್ವೇ ನನಗೇ ಇಷ್ಟವಾಗಿದ್ದು. ಅವರ ನೋಡುತ್ತಿದ್ದಂತೆ ನನ್ನ ಮುಖದಲ್ಲೂ ಒಂದು ಮುಗುಳ್ನಗು ಮಿಂಚಿತು ಪರಿಸ್ಥಿತಿ ತಿಳಿಯಾಯ್ತು.

ಚಹ ಎಲ್ಲ ಆಯ್ತು, ಸ್ನಾನಕ್ಕೆ ಹೊರಟ ತಮ್ಮನಿಗೆ, "ಕಡಲೇ ಹಿಟ್ಟು ಇಟ್ಟೀದೀನಿ, ಅದನ್ನೇ ಹಚ್ಕೋ ಮುಖ ಸ್ವಲ್ಪ ಖಳೆ ಬರತ್ತೆ" ಅಂದ್ಲು. ಮುಸಿ ಮುಸಿ ನಕ್ಕೆ... "ಯಾಕ್ರೀ" ಹುಬ್ಬು ಗಂಟಿಕ್ಕಿದಳು, "ಆ ಮುಖಕ್ಕೆ ಏನು ಹಚ್ಚಿದರೂ ಅಷ್ಟೇ" ಅಂದೆ . "ಯಾಕ್ರೀ ನನ್ನ ತಮ್ಮನಿಗೆ ಏನಾಗಿದೆ" ಅಂತ ಜಗಳಕ್ಕೆ ಬಂದಳು, "ಎಯ್ ನಿನ್ನ ತಮ್ಮ ಹೃತಿಕ, ಹೃತಿಕ ಇದ್ದ ಹಾಗೇ ಇದಾನೆ" ಅಂದೆ. "ಹೃತಿಕ ಅಂತ ಹೇಳಿದ್ರೆ ಬಿಡ್ತೀನಿ ಅಂತ ಅನ್ಕೊಂಡಿದೀರಾ, ನನ್ನ ಮುದ್ದಿನ ಹೃತಿಕ್ ನೀವೇ ಮಾತ್ರ" ಅಂತನ್ನುತ್ತ ಹತ್ತಿರ ಬಂದಳು, ಅದ್ಯಾವ ಆಂಗಲ್ಲಿನಲ್ಲಿ ಅವಳಿಗೆ ಹಾಗೆ ಕಂಡೆನೊ ದೇವರೇ ಬಲ್ಲ. ಅವರಮ್ಮ ಅಲ್ಲಿ ಬಂದದ್ದರಿಂದ ಅಲ್ಲಿಂದ ಕಾಲು ಕಿತ್ತಳು, "ಅತ್ತೆ, ಮತ್ತೇನು ಸೊಸೆ ಬರ್ತಾಳೆ ಮನೆಗೆ ಇನ್ನ" ಅಂತ ಮಾತಿಗೆಳೆದೆ "ಹೂಂ ಏನು ಎಲ್ಲಾ ಹೊಂದಿಕೊಂಡು ಹೋದ್ರೆ ಸಾಕು, ಎಲ್ಲಾ ಅವನಿಷ್ಟ, ನೀವೆ ಮುಂದೆ ನಿಂತು ಮಾಡಬೇಕು" ಅಂತ ನಮ್ಮ ಮೇಲೆ ಭಾರ ಹಾಕಿದ್ರು. ಸ್ನಾನ ಮುಗಿಸಿ ಅವನೂ ಹೊರಬಂದ, "ನಿನ್ನ ತಮ್ಮ ಲಕ ಲಕ ಹೊಳೀತಾ ಇದಾನೇನು ನೋಡು" ಅವಳ ಕರೆದೆ, ಅತ್ತೇ ಸೋಫಾ ಮೇಲೆ ಆಸೀನರಾದರು ಮತ್ತದೇ ಮುಗುಳ್ನಗುವೊಂದಿಗೆ. "ಅತ್ತೆ, ನನಗೊಬ್ಳು ಬಾಬ ಕಟ್ ಮಾಡಿದ ಹುಡುಗಿ ಗೊತ್ತೀದ್ದಾಳ ನೋಡ್ತೀರಾ" ಅಂತ ಕಾಲೆಳೆದೆ, ಅಲ್ಲಿಂದಲೇ, ಅವ ಕೂಗಿದ "ಭಾವ ಬೇಡ ಭಾವ", ಇವಳು ಬಂದು "ರೀ ನಿಮ್ದು ಅತಿಯಾಯ್ತು, ಅವನ ಮೇಲೆ ಯಾಕ್ರೀ ನಿಮಗೇ ಅಷ್ಟು ಸಿಟ್ಟು, ಪಾಪ" ಅಂದಳು. "ಏನೊಪ್ಪಾ ನನಗೆ ಗೊತ್ತಿರೊ ಹುಡುಗಿ ಬಗ್ಗೆ ಹೇಳಿದೆ" ಅಂದೆ. "ಸಂಪ್ರದಾಯ ಮನೆತನದ ಸುಲಕ್ಷಣ ಹುಡುಗಿ ಯಾರಾದ್ರೂ ಗೊತ್ತಿದ್ರೆ ಹೇಳಿ" ಅಂದ್ಲು "ಹೂಂ ಸ್ವಲ್ಪ ಸ್ಮಾರ್ಟ್ ಆಗಿರೊ ಕೆಲಸ ಮಾಡ್ತಿರೋ ಹುಡುಗಿ ನೋಡ್ತಿದೀವಿ" ಅಂತ ಅವರಪ್ಪ ಬೇರೆ ದನಿಗೂಡಿಸಿದರು, "ಸ್ಮಾರ್ಟ್ ಹುಡುಗೀ ಬೇಕೇನೊ" ಅಂದೆ "ಹೂಂ" ಅನ್ನುತ ನಾಚಿದ "ಐಷ್ವರ್ಯಾ ರೈ ಗೆ ಕೇಳಬೇಕೆಂದ್ರೆ ಮದುವೆ ಆಗೊಯ್ತು." ಅಂತಿದ್ದಂಗೆ "ಪಾಪ ನಿಮಗಾಗೇ ಕಾಯ್ತಾ ಇದ್ಲು, ನೀವ್ ನನ್ನ ಮದುವೆ ಆದದ್ದು ಗೊತ್ತಾದ ಮೇಲೆ ಅವಳು ಬೇರೆ ಮದುವೆ ಆಗಿದ್ದು.. ಪ್ಚ್!" ಅಂತ ಇವಳಂದಳು, ಎಲ್ರೂ ನಕ್ರು.

ರೆಡಿಯಾದೆ, ಅವಳ ತಮ್ಮನಿಗಿಂತ ನಾನೇ ಟಿಪ್ ಟಾಪ್ ಆಗಿ, ಇವಳು ಅಸಹನೆಯಿಂದಲೇ ನೋಡುತ್ತಿದ್ದಳು ನಾ ಒಳಗೊಳಗೇ ನಗುತ್ತಿದ್ದೆ, ಮೊದಲ ಮನೆಯಲ್ಲಿ ಬರ್ಜರಿ ಸ್ವಾಗತವಾಯಿತು, ಭಲೇ ಶ್ರೀಮಂತರು ಅನಿಸತ್ತೆ ಒಬ್ಬಳೆ ಮಗಳು ಕಾರು ಬಂಗಲೆ ಎಲ್ಲ ಇದೆ ಅಂತ ಮೊದಲೇ ಕೇಳಿದ್ದೆ, ಯಾಕೊ ಅಷ್ಟು ಶ್ರೀಮಂತರು ಅಂದಿದ್ದಕ್ಕೆ ಎಲ್ಲ್ ಸಪೊರ್ಟ ಇರತ್ತೆ ಭಾವ ಅಂತ ಬೇರೆ ಇವನು ಹೇಳಿದ್ದ, ಮದುವೇ ಆಗೊನು ಅವನು ತಾನೆ ನನಗೇನು ಅಂತ ಹೊರಟಿದ್ದೆ, ಹುಡುಗಿ ಬಂದು ಕೂತಳಂತೆ ಕಾಣತ್ತೆ "ಎಲ್ಲೇ ಹುಡುಗಿ ಅಂದೆ", ಅದೋ ಅಲ್ಲಿ ಅಂತ ತೋರಿಸಿದಳು ಶ್ರೀಮಂತರು ತಿನ್ನೋಕೆ ಏನೂ ಕಡಿಮೆ ಮಾಡಿದಂತಿರಲಿಲ್ಲ, ಹುಡುಗಿಗೆ ಪಾಪ ಕೂರಲು ಚೇರು ಕೂಡ ಸಾಲುತ್ತಿರಲಿಲ್ಲ.
"ನಾನಂತೂ ಹುಡುಗಿಯ ಅಮ್ಮ ಇರಬೇಕು ಅನ್ಕೊಂಡಿದ್ದೆ" ಅಂದೆ, ಇವಳು ಬಂದ ನಗು ತಡೆದುಕೊಂಡು "ರೀ ಸುಮ್ನಿರಿ" ಅಂದ್ಲು "ಅಲ್ಲ ಕಣೆ ಹುಡುಗೀ ಜತೆ ಕ್ರೇನ ಒಂದು ಫ್ರೀಯಾಗಿ ಕೊಡ್ತಾರಾ ಕೇಳು ನಿನ್ನ ತಮ್ಮ ಅಡಿಯಲ್ಲಿ ಸಿಕ್ರೆ ಎತ್ತೋಕೇ ಬೇಕಾಗತ್ತೆ" ಅಂದೆ. ಮಾವನಿಗೆ ಇಷ್ಟ ಇತ್ತು ಆಸ್ತಿ ಪಾಸ್ತಿ ಎಲ್ಲ ನೋಡಿ, ಅವಳಿಗಾಗೇ ಮನೆ ತುಂಬಾ ಸೊಫಾಗಳನ್ನೇ ಹಾಕಲು ಕೂಡ ಯೋಚಿಸಿರಬೇಕು!, ಇವನಿಗೆ ಹುಡುಗಿ ಹೇಗೆ ತಾನೇ ಇಷ್ಟವಾದಾಳೂ.

ಎರಡನೇ ಮನೆ ಎಲ್ಲಿ ಅಂದೆ, ಮನೆ ಅಲ್ಲ ಹೊಟೇಲು ಅಂದ್ಲು "ಹಾಂ ಹೊಟೇಲಾ" ಅಂದೆ "ರೀ ಹುಡುಗೀ ಒಬ್ಳೇ ಬರ್ತಾ ಇದಾಳೆ ಅವಳಿಗೆ ಓಕೇ ಆದ್ರೆ ಆಮೇಲೆ..." ಅದೂ ಸರಿ, ಅಂತ ಅಲ್ಲಿ ಹೋದರೆ ಕಾಲ ಮೇಲೆ ಕಾಲು ಹಾಕಿ ಮೊಬೈಲು ಅತ್ತಿಂದಿತ್ತ ತಿರುಗಿಸುತ್ತ ಕೂತ ಹುಡುಗಿ ಕಾಣಿಸಿತು, ಹುಡುಗ ಅವಳ ಮಾತಾಡಿಸುವ ಮುಂಚೆ ಅವಳೇ ಅವನ ಮೇಲೆ ಪ್ರಶ್ನೆಗಳು ಸುರಿಮಳೆಗರೆದಳು, ನನ್ನ ಕೆಲಸದ ಇಂಟರವೀವ್ ಕೂಡ ಅದಕಿನ್ನ ಪಾಡು. ನಮಗೇನು ಕೆಲಸ ಅಲ್ಲಿ ಅನ್ನುವಂತೆ ಟೆನ್ನಿಸ ನೋಡುವ ಹಾಗೆ ಅವಳನ್ನೊಮ್ಮೆ ಅವನನ್ನೊಮ್ಮೆ ನೋಡುತ್ತ ಕೂತದ್ದಾಯಿತು, ಅವರದೇ ಮಾತುಕತೆ ಮುಗಿದಾದ ಮೇಲೆ ಇನ್ನು ನೀವೇನಾದ್ರೂ ಮಾತೋಡೊದು ಇದೆಯಾ ಅಂತ ಕೇಳಿದ್ದಕ್ಕೆ, ಇವಳು "ಹೊರಡೋಣವಾ" ಅಂತಂದಳು. "ಐ ವಿಲ ಗೆಟ್ ಬ್ಯಾಕ ಟು ಯು(ನಾ ನಿಮಗೆ ಆಮೇಲೆ ಏನಂತ ಹೇಳ್ತೀನಿ)" ಅಂತ ಅ ಹುಡುಗಿ ಹೊರಟಳು ಥೇಟ್ ನಮ್ಮ ಕೆಲಸದ ಇಂಟರವೀವಗಳು ಆದ ಮೇಲೆ ಹೇಳುವ ಮ್ಯಾನೇಜರಗಳಂತೆ. ಅವನೋ ಹಿರಿ ಹಿರಿ ಹಿಗ್ಗಿದ್ದ, "ಭಾವ ಏನ್ ಕಾನ್ಫಿಡೆನ್ಸ(ಆತ್ಮವಿಶ್ವಾಸ) ಇತ್ತು ಅವಳಲ್ಲಿ ನೋಡಿದ್ರಾ" ಅಂತಂದ. ನಾನೇನೋ ಹೇಳೊ ಮುಂಚೆ ಅವರಮ್ಮ "ನಮ್ಮನೆಗೆ ಸರಿ ಹೋಗಲ್ಲ ಬಿಡು" ಅಂತ ತಳ್ಳಿಹಾಕಿದ್ರು.

"ಇನ್ನೆಲ್ಲಿ ಮನೆ ಹೊಟೇಲು ಆಯ್ತು ಪಾರ್ಕಾ" ಅಂದೆ. ಅವಳು "ನೀವು ನಿಮಗೆ ಬೇಕಿದ್ರೆ ಅಲ್ಲೇ ಹುಡುಕಿಕೊಳ್ಳಿ" ಅನ್ನುತ್ತಲೇ ಮತ್ತೊಂದು ಮನೆ ಮುಂದೆ ನಿಂತಿದ್ದೆವು ಪಕ್ಕ ಸಂಪ್ರದಾಯಸ್ತ ಕುಟುಂಬವಂತೆ, ಮನೆಗೆ ಹೋಗುತ್ತಲೇ ಕಾಲು ತೊಳೆಯಲು ನೀರು ಕೊಟ್ಟರು, ಇವನು ಸಾಕ್ಸ ಬಿಚ್ಚಲ್ಲ ಅಂತ ಹಾಗೆ ಒಳ ನಡೆದ. ಹಳೆ ಕಾಲದ ಮನೆ, ನನ್ನ ಮುಂದೆ ಒಂದು ಚೇರು ತಂದಿಟ್ಟರು, ಅದು ನನಗಲ್ಲ ಅನ್ನುವಂತೆ ಆ ಕಡೆ ದೂರ ಸರಿದು ನಿಂತೆ, ಮತ್ತೆ ಅಲ್ಲಿ ನನ್ನ ಮುಂದೆ ತಂದು ಪ್ರತಿಷ್ಟಾಪಿಸಿದ್ರು, ನನಗೋ ಗೊತ್ತಾಗಿ ಹೋಯ್ತು ನನ್ನೇ ವರ ಅಂತ ತಿಳಿದಿದ್ದಾರೆ ಅಂತ, "ಬಾರೋ ಕೂತ್ಕೊ ಅಂತ ಅವನ ಕರೆದೆ". "ಅವರು ಅಲ್ಲಿ ಕೂರ್ತಾರೆ, ನೀವು ಕೂತ್ಕೋಳ್ಳಿ" ಅಂತ ಹುಡುಗಿಯ ಅಪ್ಪ. ವರನ ಜತೆ ವರನ ಗೆಳೆಯ ಯಾರೊ ಬಂದಿರಬೇಕು ಅಂತ ಅವರನಿಸಿಕೆ, ಮತ್ತಿನ್ನೆನು, ಜೀನ್ಸು ಹಾಕಿಕೊಂಡು ಸಾಕ್ಸು ಕೂಡ ಕಳೆಯದೆ ಹಾಗೆ ಅವರ ಮನೆಗೆ ನುಗ್ಗಿದ ಇವನ್ಯಾರೊ ಬೇರೆ ಇರಬೇಕು ಅಂತ ಎಣಿಸಿದ್ದರೆ ಅವರದೇನು ತಪ್ಪು, ಅಷ್ಟರಲ್ಲಿ ಇದನ್ನು ಗಮನಿಸಿದ ನನ್ನಾಕೆ "ಏನ್ರೀ ಇಲ್ಲಿ ಬನ್ರಿ" ಅಂತ ಕರೆದಳು, "ನನ್ನ ಹೆಂಡತಿ ಕರೀತಿದಾಳೆ ಬಂದೆ" ಅಂತ ಅವನ ಕೂರಿಸಿ ಅವಳ ಪಕ್ಕ ಹೋಗಿ ಕೂತೆ ಆಗಲೇ ಅವರಿಗೆ ಗೊತ್ತಾಗಿದ್ದು, ಅಕ್ಕ ಭಾವ ಅಂತ. ಅಂತೂ ನೋಡಿಯಾದ ಮೇಲೆ, ಹೊರಬಂದರೆ, ಇವಳು ನನ್ನ ತಿವಿಯುತ್ತಾ "ಮೊದಲೇ ಹೇಳಿದೆ ನೀವ್ ಜಾಸ್ತಿ ಏನ್ ಟಿಪ್ ಟಾಪ್ ಆಗಿ ತಯ್ಯರಾಗೋದು ಬೇಡ ಅಂತ, ನೀವ್ ಕೇಳಬೇಕಲ್ಲ" ಅಂತ ಬಯ್ಯುತ್ತಿದ್ಲು, "ನೋಡಿದ್ಯಾ ನನಗಿನ್ನೂ ಮದುವೆಯಾಗಿದೆ ಅಂತ ಯಾರಿಗೂ ಅನಿಸಲ್ಲ" ಅಂತ ನಾ ಖುಷಿಯಾಗುತ್ತಿದ್ದೆ, ಆದರೆ ಇನ್ನು ಮುಂದೆ ನಾನು ಅವರೊಂದಿಗೇನು ಬರ್‍ಒದು ಬೇಡ ಅಂತ ಅವಳು ತೀರ್ಮಾನ ಮಾಡಿ ಆಗಿತ್ತು. ಒಳ್ಳೆದೇ ಅಯ್ತು ಅಂತ ಮನೆ ಕಡೆ ಹೊರಟೆ, ಅವರಮ್ಮನಿಗೆ ಬಹಳ ಹಿಡಿಸಿತ್ತು ಈ ಸಂಬಂಧ, "ಮನೇನಾ ಸರ್ಕಸ್ ಕಂಪನೀನ ಅದು" ಅಂತ ಆ ಅವಿಭಕ್ತ ಕುಟುಂಬ ಒಲ್ಲದಾಗಿದ್ದ ಮಗ. ನಾನನ್ಕೋತಾ ಇದ್ದೆ ಎಲ್ರಿಗೂ ಹಿಡಿಸಿದ್ರೂ ಅವರೇ ಮೊದಲು ಒಪ್ಪೋದಿಲ್ಲ ಹುಡುಗನ್ನ ಅಂತ...

ಇನ್ನೂ ನಾಲ್ಕೈದು ನೋಡಿ ಇವರು ಮನೆಗೆ ಬಂದಾಗ ರಾತ್ರಿಯಾಗಿತ್ತು, ಒಂದೂ ಇಷ್ಟವಾಗಿರಲಿಲ್ಲ, ಒಬ್ಬಳ ಮೂಗು ಸರಿ ಇಲ್ಲ ಅಂದ್ರೆ ಇನ್ನೊಬ್ಬಳ ನಡೆ ಸರಿ ಇಲ್ಲ, ಎಲ್ಲ ಸರಿ ಇದೆ ಎಂದಾದರೆ ಮನೆ ಚೆನ್ನಾಗಿಲ್ಲ, ಇನ್ನೇನು ಇಷ್ಟವಾದ್ರೆ ಅವರ ಒಪ್ಪಲಿಕ್ಕಿಲ್ಲ. ಅಂತೂ ಹುಡುಕಾಟ ಇನ್ನೂ ಜಾರಿಯಾಗಿರುವಂತೆ ಕಂಡಿತು.

ಈ ಒಳ್ಳೆ ಕನ್ಯೆಗಾಗಿ ಹುಡುಕಾಟದ ಕಾಟ ಯಾರಿಗೂ ತಪ್ಪಿದ್ದಲ್ಲ, ಎಲ್ಲೊ ಮೊದಲೇ ಮನೆಯಲ್ಲೆ ಸಂಬಂಧಿಕರ ಹುಡುಗಿ ಅಂತ ನಿರ್ಧರಿಸಿದ್ದರೆ, ಇಲ್ಲ ಹುಡುಗ ತಾನೆ ಯಾರನ್ನೋ ಹುಡುಕಿಕೊಂಡ ಹೊರತು ಇದೆಲ್ಲ ಆಗೋದೆ. ಎಲ್ಲರ ಇಷ್ಟ ಕಷ್ಟಗಳ ಹೊಂದಾಣಿಕೆ ಮಾಡಿ ಹೆಂಡತಿ ಅಂತ ಹುಡುಗನಿಗೆ ಸಿಗುವ ಹೊತ್ತಿಗೆ ರಾಮಾಯಣ ಮಹಾಭಾರತ ಕಥೆಗಳಾಗಿರುತ್ತವೆ ಮನೆಗಳಲ್ಲಿ, ಯಾಕೆಂದರೆ ಮನೆಗೆ ಬರುವವಳು ಬರೀ ಅವನ ಹೆಂಡ್ತಿಯಾಗಿರದೇ ಮನೆಯ ಸೊಸೆ ಕೂಡ ಆಗಿರುವುದರಿಂದ. ಈಗೇನು ಮ್ಯಾಟ್ರಿಮೋನಿಯಲ ಅಂತ ವೆಬಸೈಟುಗಳು, ಬ್ರೋಕರಗಳು ಬಂದೀದಾರೆ ಅವರಿಗೆ ದುಡ್ಡು ಸುರಿದರೆ ಸಾಕು ನಿಮ್ಮ ಎತ್ತರ, ತೂಕ, ಅಳತೆ, ಸ್ಟೇಟಸ್ಸು, ಜಾತಿ, ಊರು ಎಲ್ಲ ಸೇರಿ ಹೊಂದಿಕೆಯಾಗುವಂಥ ಹತ್ತಿಪ್ಪತ್ತು ಹುಡುಗಿಯರ ಹುಡುಕಿ ಕೊಟ್ಟುಬಿಡುತ್ತಾರೆ, ಅದರಲ್ಲೇ ಅಳೆದು ಸುರಿದು ಒಂದು ಆಯ್ಕೆ ಮಾಡಿಕೊಂಡು ಬಿಟ್ಟರೆ ಮದುವೆ ಕೂಡ ಅವರೇ ಮಾಡಿಸಿಬಿಡುತ್ತಾರೆ, ಸಧ್ಯ ಮಕ್ಕಳು ಕೂಡ ಹುಟ್ಟಿಸಿ ಕೊಡುತ್ತಿಲ್ಲ!. ಮೊದಲೇನೊ ಒಂಥರಾ ಚೆನ್ನಾಗಿತ್ತು ತಮ್ಮ ಮುಂದೆ ಬೆಳೆದ ಹುಡುಗ ಹುಡುಗಿಯರಲ್ಲಿ ಯಾರಿಗೆ ಯಾರು ಸರಿ ಹೋಗಬಹುದು ಅಂತ ಹಿರಿಯರು ನಿರ್ಧರಿಸಿ ಮದುವೆ ಮಾಡಿ ಬಿಡುತ್ತಿದ್ದರು (ಅದೇ ಚೆನ್ನಾಗಿತ್ತು ಅಂತಲ್ಲ, ಅದರಲ್ಲೂ ಸಾಧಕ ಬಾಧಕಗಳಿದ್ದವು).
ಈಗೇನೊ ಚಾಟಿಂಗನಲ್ಲಿ ಸಿಕ್ಕು, ಒರ್ಕುಟನಲ್ಲಿ ಫೋಟೊ ನೋಡಿ, ಫೋನಲ್ಲಿ ಫಿಕ್ಸ್ ಮಾಡಿ, ಹೊಟೇಲಲ್ಲಿ ಮದುವೆಯಾಗಿ ಬಿಡ್ತಾರೆ.

ಅವರು ಮತ್ತೆ ಊರಿಗೆ ಹೊರಟು ರೆಡಿಯಾಗಿದ್ದರು, ಅಲ್ಲಿ ಮತ್ತಿನ್ನೂ ನೋಡೊದಿದೆ ಅಂತ. "ಹೀಗೇ ಹುಡುಕುತ್ತ ಹೋದ್ರೆ ಮುದುಕ ಆಗ್ತೀಯ, ನೀನೇ ಎಲ್ಲೊ ಒಂದು ನೋಡ್ಕೊಂಡು ಬಿಡು" ಅಂತಂದೆ "ಅದೇ ಒಳ್ಳೆದು ಅನಿಸ್ತಿದೆ" ಅಂದ, ಇವಳು "ರೀ ನಾನಿಲ್ವಾ ಹುಡುಕಿ ಮದುವೆ ಮಾಡ್ತೀನಿ ನನ್ನ ತಮ್ಮನಿಗೆ, ನೋಡ್ತಿರಿ" ಅಂದ್ಲು. ಅವರ ಬೀಳ್ಕೊಟ್ಟು ಮನೆಯೊಳಗೆ ಬಂದ್ವಿ ಸುಸ್ತಾಗಿತ್ತು ಹಾಗೆ ಹಾಸಿಗೆಗೆ ಜಾರಿದಳು, ಪಕ್ಕದಲ್ಲೇ ಕೂತ ನನ್ನ ಕೈ ಹಿಡಿದು "ರೀ ಏನೊ ಹೇಳ್ಬಿಟ್ಟೆ ನಾನಿದೀನಿ ಹುಡುಕ್ತೀನಿ ಅಂತ, ಎಲ್ರೀ ಹುಡುಕೋದು" ಅಂತ ಆತಂಕದಿಂದ ನುಡಿದಳು, ಅವಳಿಗೆ ನಿಜವಾಗಲೂ ಅದೊಂದು ಚಿಂತೆಯಾಗಿತ್ತು. "ಯಾಕೇ" ಅಂದೆ, "ಅಲ್ಲ ಈಗಾಗಲೇ ಹತ್ತಿಪ್ಪತ್ತು ನೋಡಿ ಆಯ್ತು ಯಾವುದು ಸರಿಹೋಗಿಲ್ಲ" ಅಂದ್ಲು. ಒಂದು ಹೇಳ್ತೀನಿ ಕೇಳ್ತೀರ ಅಂದೆ, ಏನು ಅನ್ನುವಂತೆ ನನ್ನೆಡೆಗೆ ಬಂದಳು ತೊಡೆ ಮೇಲೆ ತಲೆಯಿರಿಸಿದಳು, "ಮೊದಲು ನಿಮ್ಮ ಅಗತ್ಯ ಬೇಡಿಕೆಗಳನ್ನು ಕಡಿಮೆ ಮಾಡಿಕೊಳ್ಳಿ ಎಲ್ಲಾ ಸರಿ ಹೊಂದುವ ಹುಡುಗಿ ಸಿಗಲಿಕ್ಕಿಲ್ಲ, ಎರಡನೇದಾಗಿ ಸಿಕ್ಕ ಸಿಕ್ಕ ಹಾಗೆ ಗೊತ್ತಾದ ಎಲ್ಲವನ್ನೂ ನೋಡುತ್ತ ತಿರುಗಿದ್ರೆ, ಹೀಗೆ ಬ್ರೋಕರಗಳ ಹಿಂದೆ ಸುತ್ತುತ್ತಲೇ ಇರುತ್ತೀರಿ, ಅಲ್ಲೆ ಪರಿಚಯಸ್ತರ, ಸಂಬಂಧಿಗಳಲ್ಲಿ ಯಾರಾದರೂ ಮೊದಲಿಂದಲೂ ಗೊತ್ತಿರುವವರು ಇದ್ದರೆ ಪೂರ್ವ ತಪಾಸಣೆ ನಂತರ ಮುಂದುವರೆಯಿರಿ, ಸಿಕ್ತಾರೆ ಬ್ರಹ್ಮ ಎಲ್ಲೊ ಒಂದು ಜೋಡಿ ಸೃಷ್ಟಿ ಮಾಡಿಟ್ಟಿರ್ತಾನೆ" ಅಂದೆ "ನಿಮಗೆ ಮಾತ್ರ ನಾನು ಎಷ್ಟು ಸಲೀಸಾಗಿ ಸಿಕ್ಕೆ" ಅಂದ್ಲು "ಏನ್ ಮಾಡೊಡು ಬಾ ಇನ್ನೂ ಹುಡುಕಿದ್ರೆ ಮಿಸ್ ಇಂಡಿಯಾನೇ ಸಿಕ್ಕಿರೋಳು" ಅಂದೆ, "ಕನ್ನಡೀಲಿ ಮುಖಾ ನೊಡ್ಕೊಳ್ಳಿ, ನಾನೇ ಇರಲಿ ಕ್ಯೂಟ್ ಟೆಡ್ಡಿಬಿಯರ ಇದ್ದ ಹಾಗೆ ಇದೀರ ಅಂತ ಒಪ್ಕೊಂಡಿದ್ದು" ಅಂದ್ಲು. ನಿಜ ಹೇಳ್ಬೇಕು ಅಂದ್ರೆ ನನ್ನ ಪಾಲಿಗೆ ಸಿಕ್ಕ ಇವಳೆ ವಿಶ್ವ ಸುಂದರಿ ನನಗೆ. "ಅದಾಯ್ತು ನೋಡು ನಿನ್ನ ತಮ್ಮನಿಗೆ ಎಲ್ಲೂ ಸಿಗದಿದ್ರೆ ಹೇಳು ಆ ಬಾಬ್ ಕಟ ರೋಸಿನಾ ಬೇಕಾದ್ರೆ ಒಪ್ಸೊದು ನನ್ನ ಜವಾಬ್ದಾರಿ" ಅಂದೆ. "ಅವನಿಗೆ ನೀಲವೇಣಿನಾ ತಂದು ಮದುವೆ ಮಾಡಿಸ್ತೀನಿ" ಅಂದ್ಲು. "ತಿರುಪತಿಗೆ ಮುಡಿ ಕೊಡು ಅಂತ ಅವಳ ತಲೆ ನಾ ತುಂಬ್ತೀನಿ" ಅಂದೆ. "ರೀ ಯಾಕ್ರೀ ಅವನ ಮೇಲೆ ಅಷ್ಟು ಸಿಟ್ಟು, ಅವನ ತಪ್ಪಿಂದ ನನ್ನ ಜಡೆ ಕಟ ಆಗಿದ್ರೂ ಈಗ ಮತ್ತೆ ಬೆಳೆದಿದೆ ಗೊತ್ತ" ಅಂತ ನನ್ನ ಮುಖಕ್ಕೆ ಅದರಲ್ಲಿ ಕಚಗುಳಿಯಿಟ್ಟಳು, ವೇಣಿಯೊಂದಿಗೆ ಆಟಕ್ಕಿಳಿದೆ. ಹೀಗೇ ಎಲ್ಲೊ ಹುಡುಕಾಟದಲ್ಲಿ ಮತ್ತೆ ಸಿಗೋಣ..


ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.

ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

PDF format www.telprabhu.com/hudukaata.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದು

16 comments:

Anonymous said...

hi...Hudukata tumba chennagide...Nimmake ge neevu kotta suggestion kooda nija.Nanna obru frnd gu haage haagtide...hhudgine sigta illa..avara bedike tumbane jasti.adu chend idre idu chenda illa anta heltare..Nan ammana frnds ibbaru hudgirige madve ne aagilla.Haage idare.avaru hudukta-hudukta avara madve age mugide hogittu.aamele avarige yyaru sigale illa.Haaganta sikka takshana matte inthavaru siktato ilvo anta gantu haaksod kooda olledalla alva?.E MADVE ANNODU HOTEL NALLI IRO TINDI TARA.MUNCHE NAAV 1 TARISTEEVI.AAMELE NAMMA PAKKAD TABLE NAVANU ENARA BERE SPECIAL TARSIDRE AYYO NAAVU ADANNA(ADARA TARA IRODU) TARISBEKITTU ANSUTTALVA???(PAPER NALLI 1 SALA E JOKE PRAKATA AAGITTU).Any way nan frnd gu aadashtu bega olle hudgi sikku madve aagli anta wish maadta nimmake tammanigu 1 olle hudgi sigli anta haaraisuva.
bye..
REGARDS
VEENASHREE

ಜಲನಯನ said...

ಸೂಪರ್, ಪ್ರಭು...ಹ..ಹಹ, ಸ್ವಲ್ಪ ತಡಿಯಿರಿ ಇದು ನಿಮ್ಮ ಹಿಂದಿನ ‘ಗೇ‘ ಪೋಸ್ಟ್ ಗೆ... ನೀವು ನನ್ನ ಪ್ರತಿಕ್ರಿಯೆಗೆ ಬಹಳ ಚನ್ನಾಗಿ ಅದೇ ಭಾಷಾಶೈಲಿಯಲ್ಲಿ ಉತ್ತರಿಸಿದ್ದೀರಿ..
ಇನ್ನು ಈ ಪೋಸ್ಟ್...ಅಲ್ಲ ನಿಮಗೆ ಸಮಯ ಹೇಗೆ ಸಿಗುತ್ತೆ ಅಂತ..? ಅದೂ ಸಿಕ್ಕ ಸಮಯದಲ್ಲಿ...ಬಹಳ ಸುಲಲಿತವಾಗಿ...ಸರಾಗಶೈಲಿಯಲ್ಲಿ ಬರೀತೀರ...ಇದು ನಿಮ್ಮ ಬಹುದೊಡ್ಡ ಪ್ಲಸ್ ಪಾಯಿಂಟ್...ಹೀಗೇ ಉಣುಸ್ತಾಯಿರಿ ..ನಾವು ಉಂಡು ತೇಗ್ತೇವೆ....ಹ್ರಾಂಂಂ ...‘ಅನ್ನದಾತ ಸುಖೀಭವ‘

Prabhuraj Moogi said...

To Anonymous:
ವೀಣಶ್ರೀ.. ಸುಂದರ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು.
ನನ್ನಾಕೆಗೆ ಅದು ಸಜೇಷನ ಅನ್ನೊಕಿಂತ ಇದ್ದದ್ದು ಹೇಳಿದೆ ಎಲ್ರಿಗೂ ಸರಿಯಾಗಬೇಕಿಲ್ಲ, ಬಹಳ ಸಾರಿ ನಮ್ಮ ಸಂಗಾತಿಯಾಗುವವರ ಬಗ್ಗೆ ನಮಗೆ ಜಾಸ್ತಿ ಆಸೆ ಆಕಾಂಕ್ಷೆಗಳು ಇರುತ್ತವೆ, ಬರುತ್ತವೆ ಕೂಡ ಆದರೆ ಆಸೆಗಳಿಗೆ ಲಿಮಿಟ್ಟು ಇದ್ರೆ ಸರಿ.. (ಇದನ್ನೆಲ್ಲ ಬರೆಯುವುದ ನೋಡಿ ನನಗೇ ಜಾಸ್ತಿ ಅಂತ ಎಲ್ರಿಗೂ ಅನಿಸಬಹುದು, ಆಸೆಗಿಂತ ಇವೆಲ್ಲ ಕಲ್ಪನೆಗಳು, ನನ್ನಾಕೆ ಹೀಗೇ ಇರಲಿ ಅಂತ ಆಸೆ ಅಲ್ಲ, ಹೀಗಿದ್ದರೆ ಅಂತ ಕಲ್ಪನೆ ಮಾತ್ರ, ಹೀಗಿಲ್ಲದಿದ್ರೂ, ನಾನು ಮಾತ್ರ ಇಲ್ಲಿ ಬರುವ "ನಾನು" ಅನ್ನೊ ಪಾತ್ರದ ಹಾಗೆ ಇರಲು ಪ್ರಯತ್ನ ಮಾಡುತ್ತೇನೆ.)
ಆ ಹೊಟೇಲಿನ ತಿಂಡಿ ಉದಾಹರಣೆ ಬಹಳ ಚೆನ್ನಾಗಿತ್ತು, ನಿಜ ಅಲ್ವಾ ಪಕ್ಕದ ಟೇಬಲ್ಲು ನೋಡಿ ಅದನ್ನ ಆರ್ಡರ್ ಮಾಡಿದ್ದರೆ ಚೆನ್ನಾಗಿತ್ತು ಅಂತ ಅನಿಸದೇ ಇರಲ್ಲ.. ಆದರೆ ಜೇಬಿನಲ್ಲಿ ಹತ್ತುರೂಪಾಯಿ ಇಟ್ಟುಕೊಂಡು ಇಪ್ಪತ್ತು ರೂಪಾಯಿ ದೊಸೆ ಬೇಕೆನ್ನಲಾಗಲ್ಲ, ಬೇಕೆಂದರೆ ಇಪ್ಪತ್ತು ಗಳಿಸಬೇಕು... ಆದ್ರೆ ದೋಸೆಯ ಆಸೇನೂ ಇರ್ಬಾರದು ಅಂತಲ್ಲ, ಇದ್ದರೆ ಸಾಧಿಸಿ... ಆಗದಿದ್ದರೆ ಹತ್ತು ರೂಪಾಯಿಗೆ ಸಿಗುವ ಇಡ್ಲಿಗೂ ಸಂತೋಷ ಪಡಬೇಕು... ಇದರ ಬಗ್ಗೆ ಇನ್ನೊಂದು ಸಲ ದೀರ್ಘವಾಗಿ ಬರೀತೀನಿ...
ನಿಮ ಫ್ರೆಂಡಗೆ ಬೇಗ ಒಳ್ಳೆ ಸಂಗಾತಿ ಸಿಗಲಿ, ನನ್ನಾಕೆ ತಮ್ಮನಿಗೆ ಯಾರು ಇಲ್ಲ ಅಂದ್ರೂ ಬಾಬ್ ಕಟ ರೋಸಿಯನ್ನ ಒಪ್ಪಿಸ್ತೀನಿ ಬಿಡಿ ಚಿಂತೆಯಿಲ್ಲ...

ಜಲನಯನ ಅವರಿಗೆ:
ತುಂಬಾ ಥ್ಯಾಂಕ್ಸ ಸರ್ ಪ್ರತಿಕ್ರಿಯೆಗೆ, ಪ್ರತೀ ಸಾರಿ ನಿಮ್ಮ ಪ್ರತಿಕ್ರಿಯೆಗಳು ಅಷ್ಟು ಸುಂದರವಾಗಿರುತ್ತವೆ ಅದಕ್ಕೆ ನಾನು ಕೂಡಾ ಹಾಗೆ ಚೆಂದವಾಗಿ ಮಾರುತ್ತರ ಬರೆಯದಿರಲಾಗುತ್ತದೆಯೇ... ನನಗೆ ಬರುವ ಪ್ರತೀ ಪ್ರತಿಕ್ರಿಯೆಯೂ ನನಗೆ ಅಷ್ಟು ಮಹತ್ವದ್ದು ಎಲ್ಲದಕ್ಕೂ ಮರೆಯದೇ ಮರುಪ್ರತಿಕ್ರಿಯೆ ಕೊಟ್ಟೆ ಕೊಡುತ್ತೇನೆ, ಅಜಾಗರೂಕತೆಯಿಂದ ಎಲ್ಲೂ ತಪ್ಪಿದ ಹೊರತು. ನನಗೇನು ಹಾಗೆ ನೂರಿನ್ನೂರು ಪತ್ರಗಳೇನೂ ಬರುವುದಿಲ್ಲ ಅಲ್ವಾ, ಬಂದ ಎಲ್ಲದಕ್ಕೂ ಸಾಧ್ಯವಿರುವವರೆಗೆ ವೈಯಕ್ತಿಕವಾಗಿ ಬರೆಯಬೇಕೆಂದು ನನ್ನ ಆಸೆ, ಬರೆಯುತ್ತೇನೆ ಕೂಡ ಹೆಚ್ಚುಗಾರಿಕೆಗೆ ಹೇಳುತ್ತಿಲ್ಲ, ನಮಗೆ ಜೀವನ್ದಲ್ಲಿ ಕೆಲವೊಂದು ಮೌಲ್ಯಗಳು ಇರಬೇಕು ಅದನ್ನ ಸಾಧ್ಯವಾದಷ್ಟು ತಪ್ಪದೆ ಪಾಲಿಸಬೇಕು ಅನಿವಾರ್ಯ ಕಾರಣಗಳನ್ನು ಹೊರತುಪಡಿಸಿ...
ಸಮಯದ ಬಗ್ಗೆ ಹೇಳಬೇಕೆಂದರೆ, ಸಧ್ಯಕ್ಕೆ ಬ್ಯಾಚುಲರ ಖಾಲಿ ಸಮಯ ಅಂತ ಒಂದಿಷ್ಟು ವೀಕೆಂಡನಲ್ಲಿ ಸಿಗುತ್ತದೆ, ಪ್ರತೀ ಪೋಸ್ಟ್ ಬರೆಯಲು ಏನಿಲ್ಲವೆಂದ್ರೂ ಐದಾರು ಘಂಟೆಯಾಗುತ್ತದೆ, ಆದರೂ ವಿನಿಯೋಗಿಸಿದ ಸಮಯ ವ್ಯರ್ಥ ಅಂತ ಅನಿಸಲ್ಲ, ಇವೆಲ್ಲ ನನ್ನ ಮುಂದಿನ ಜೀವನಕ್ಕೆ ನಾನೇ ಬರೆದಿಟ್ಟುಕೊಂಡ ಟಿಪ್ಸಗಳ ಹಾಗೆ, ಎಲ್ಲರಿಗೂ ಉಪಯೋಗ ಆಗ್ಲಿ ಅಂತ ಪಬ್ಲಿಷ ಮಾಡ್ತಾ ಇದೀನಿ ಅಂದ್ರೆ ಸರಿ ಅಲ್ವಾ...
ಎಲ್ಲೋ ಯಾರೊ ಮನೆಗೆ ಬರುತ್ತಿದ್ದಂತೆ ಪತಿಯೊಂದಿಗೆ ಜಗಳಕ್ಕಿಯುತ್ತಿದ್ದೆ ಈಗ ಲೇಖನ ಓದಿ ನನ್ನ ಮನಸ್ಥಿತಿ ಬದಲಾಗಿದೆ ಅವರ ಭಾವನೆಗಳೂ ಅರ್ಥವಾಗಿವೆ ಈಗ ಜಗಳ ಕಮ್ಮಿಯಾಗಿದೆ, ಅಂತ ಬರೆದರೆ ಆ ಪತಿಗೆ ಒಂದಿಷ್ಟು ಸುಂದರ ಕ್ಷಣಗಳನ್ನು ಕೊಟ್ಟ ಖುಷಿ ನನಗೆ...
ಮತ್ಯಾರೊ ಮನೆಯಲ್ಲಿ ನಮ್ಮ ಜೀವನ ಇನ್ನೂ ಸರಸಮಯವಾಗಿದೆ, ನಿಮ್ಮ ಲೇಖನಗಳಿಂದಾಗಿ ಅಂತ ಬರೆದರೆ ಒಂದು ಸುಂದರ ಸಂಸಾರಕ್ಕೆ ಇನ್ನಷ್ಟು ಬಣ್ಣ ತುಂಬಿದ ಖುಷಿ ನನಗೆ.
ಇನ್ನೊಬ್ಬರು ನನ್ನ ಬಿರುಕು ಲೇಖನ ಓದಿ ಕಣ್ಣಿರಿಟ್ಟೆ ಅಂತ ಬರೆದಿದ್ದರು ಆ ಒಂದು ಭಾವನಾತ್ಮಕ ಜೀವಿಗೆ ಆ ಒಂದು ಭಾವನೆ ತಂದು ಕೊಟ್ಟ ತೃಪ್ತಿ ನನಗೆ... ಇದೇ ನಾನು ಬರೆಯಲು ಕಾರಣ ನೀವು ಕೇಳಿದ್ದಕ್ಕೆ ಬಹಳೇ ಜಾಸ್ತಿ ಬರೆದೆ ಅನ್ಸತ್ತೆ ಏನೊ ಮನಸಿಂದ ಹಾಗೆ ಏನೇನೊ ಬಂತು ಗೀಚಿದ್ದೇನೆ...
ಹೀಗೇ ಎಷ್ಟು ದಿನ ಬರೆಯುತ್ತೀನೊ ಗೊತ್ತಿಲ್ಲ, ನನಗೂ ಕುಟುಂಬ ಅದು ಇದು ಅಂತ ಅನಿವಾರ್ಯ ಕಾರಣಗಳು ಬರುವವರೆಗೆ ಹೀಗೆ... ಬರುತ್ತಿರಿ ಪ್ರತಿಕ್ರಿಯಿಸುತ್ತಿರಿ...

sunaath said...

ಪ್ರಭುರಾಜ,
‘ಹುಡುಕಾಟ’ದಾಗ ನಿಮಗ ಛಲೋ ಅನುಭವ ಇದ್ದ್ಹಂಗ ಬರದೀರಲ್ಲಾ?
ನನಗಂತೂ ಪ್ರತಿ ಒಂದು ಸಾಲು ಓದಿದಾಗೂ ನಕ್ಕು ನಕ್ಕು ಸಾಕಾತು.
ಭಾರೀ ಖುಶಿ ಕೊಡೋ ಲೇಖನ!

ಬಾಲು said...

ನಿಮ್ಮ ಮಾತು ನಿಜ, ಒಂದಿಷ್ಟು ಬೇಡಿಕೆ ಗಳನ್ನ ಕಡಿಮೆ ಮಾಡಿಕೊಳ್ಳಲೇ ಬೇಕು, ಆಮೇಲೆ ಮದುವೆ ಆದಮೇಲೆ ಒಂದಿಷ್ಟು ಹೊಂದಾಣಿಕೆ ನು ಮಾಡಿಕೊಳ್ಳಬೇಕು. ಇಲ್ಲದೆ ಹೋದಲ್ಲಿ ಸಂಸಾರ ಹೋಗಿ, ಸಮ್ಮಿಶ್ರ ಸರಕಾರ ಆಗಿ ಬಿಡುತ್ತದೆ.

ಕೆಲ ಹುಡುಗರು ಹೀಗೆ ಕನ್ಯೆ ಹುಡುಕುತ್ತಲೇ ಇರುತ್ತಾರೆ, ಹುಡುಗಿಯ ಮನೆಗೆ ಹೋಗುವುದು, ಉಪ್ಪಿಟ್ಟು ಕೇಸರಿ ಬಾತ್ ಮೆಂದು ಆಮೇಲೆ ಇಷ್ಟ ಇಲ್ಲ ಅಂತ ಬರುವುದು, ಅವರಿಗೆ ಸಮಾದಾನ ಆಗೋ ಹುಡುಗಿ ಸುಲಬಕ್ಕೆ ಸಿಗೋದಿಲ್ಲ, ಹಾಗೆ ಹೆಣ್ಣು ಹೆತ್ತೋರ ಕಣ್ಣಿರು ಇಂಗೋದಿಲ್ಲ ಕೂಡ.

ಚಂದ ದ ಲೇಖನ. :)

ರಾಜೀವ said...

ಪ್ರಭು,

ಇದು ನಿಮ್ಮ ಕತೆಯೋ ಅಥವಾ ನಿಮ್ಮ ಬ್ರದರ್-ಇನ್-ಲಾ ಕತೆಯೋ? ನನಗೆ ಯಾಕೋ ಸಂಶಯ. ;)
ಏನೇ ಇರಲಿ, ಲೇಖನ ಸೂಪರ್.

ನಮ್ಮ ಮನೇಲಿ ಮಾಡ್ತಿರೋ ಒತ್ತಾಯ ನೋಡ್ತಿದ್ರೆ, ನನಗೂ ಕೂಡ ಇಂತಹ ಅನುಭವಗಳು ಸದ್ಯದಲ್ಲಿ ಆಗಬಹುದೇನೋ!!
ಸಿಹಿ ಸುದ್ದಿ ಏನಾದ್ರು ಇದ್ದರೆ ತಿಳಿಸ್ತೀನಿ ;)

Prabhuraj Moogi said...

sunaath ಅವರಿಗೆ
"ಹುಡುಕಾಟ"ದ ಅನುಭವ ಇನ್ನೂ ಆಗಿಲ್ಲ ಸರ್, ಹುಡುಕದೇ ಸಿಕ್ಕರೆ ಹೇಗೆ ಅಂತ ಯೋಚನೆ... ನಿಮಗೆ ಇಷ್ಟ ಆಗಿದ್ದು ನನಗೂ ಖುಶಿ...

ಬಾಲು ಅವರಿಗೆ
ಹೊಂದಾಣಿಕೆ ಇಲ್ಲದಿದ್ದರೆ ಸಮಿಶ್ರ ಸರ್ಕಾರದಂತೆ ಉರುಳಿ ಬೀಳುವುದಂತೂ ಸತ್ಯ. ಈ ಉಪ್ಪಿಟ್ಟು ಕೇಸರಿಬಾಥ ಮೇದು ಬರುವ ಐಡಿಯಾ ಚೆನ್ನಾಗಿದೆ... ಈಗೀಗ ಹೆಣ್ಣು ಹೆತ್ತವರೂ ಬುದ್ಧಿವಂತರಾಗಿದ್ದಾರೆ, ಬರೀ ಟೀ ಬಿಸ್ಕಿಟ್ಟು ಕೊಟ್ಟು ಕಳಿಸುತ್ತಾರೆ!!!

ರಾಜೀವ ಅವರಿಗೆ
ಕಲ್ಪನೆ ಅಂತ ಅಂದ ಮೇಲೆ ಯಾರ ಕಥೆಯಾದರೆ ಏನು ಬಿಡಿ... ಒಹ್ ನಿಮ್ಮ "ಹುಡುಕಾಟ" ಶುರುವಾಗಲಿದೆಯೇ... ಜೀವನದ ಪಶ್ನೆ "ಹುಡುಗಾಟ" ಮಾಡದಿರಿ, ಗುಡಲಕ್ ಇಂಥ ಸ್ವಾರಸ್ಯಕರ ಘಟನೆಗಳೆನಾದರೂ ನಡೆದರೆ ಖಂಡಿತ ನಮ್ಮೊಂದಿಗೆ ಹಂಚಿಕೊಳ್ಳಿ :) ಬೇಗ ಬರಲಿ ಸಿಹಿ ಸುದ್ದಿ...

shivu.k said...

ಪ್ರಭು,

ಹುಡುಕಾಟ ಲೇಖನದಲ್ಲಿ ಹೆಂಡತಿ ತಮ್ಮನಿಗೆ ವಧು ಹುಡುಕುವ ಪಕ್ಕಾ ಅನುಭವಸ್ಥನಂತೆ ಬರೆದಿದ್ದೀರಿ....ಲೇಖನ ಸೂಪರಾಗಿದೆ. ನಿಮ್ಮಾಕೆ ಕೂದಲು ಈಗ ಸ್ವಲ್ಪ ಉದ್ದವಾಗಿದ್ದರೇ..ನನ್ನಾಕೆಯ ಕೂದಲು "ಸಿಂಗಾರಮನೆ"ಗೆ[ನಮ್ಮ ಮನೆ ಬಳಿಯೇ ಇರುವ ಮಹಿಳೆಯರ ಬ್ಯುಟಿ ಪಾರ್ಲರ್ ಹೆಸರು. ಚೆನ್ನಾಗಿದೆಯೆಲ್ವಾ]ಜೊತೆಯಲ್ಲೇ ಹೋಗಿ ಕಟ್ ಮಾಡಿಸಿದ್ದೆ. ಈಗ ಬಲು ಚೆನ್ನಾಗಿದೆ...

ಧನ್ಯವಾದಗಳು.

Ittigecement said...

ಪ್ರಭು....

ಎಂದಿನಂತೆ ಬಹಳ ಸೊಗಸಾದ ಲೇಖನ...

ಖುಷಿಯಾಯಿತು..

ನಿಮ್ಮ ಕಲ್ಪನೆಗಳು ವಾಸ್ತವದಂತಿವೆ...

ಇನ್ನು ಈ ಕಲ್ಪನೆಗಳು ನಿಮಗೆ ವಾಸ್ತವ ಆದಲ್ಲಿ ಇನ್ನೆಷ್ಟು ಸುಂದರವಾಗಿ ಬರೆಯಬಹುದು...?
ಇದು ನನ್ನ ಕಲ್ಪನೆ...!!

ಹಾಹ್ಹ್..ಹ್ಹಾ...

ನಿಮ್ಮ ಬರಹಗಳಿಗೆ ಮಾರು ಹೋಗಿದ್ದೇನೆ...

ಪ್ರಕಾಶಣ್ಣ..

Prabhuraj Moogi said...

shivu ಅವರಿಗೆ
ಅನುಭವಸ್ಥನಂತೆ ಅಂದಿದ್ದು ಸರಿ ಇನ್ನೂ ಅನುಭವ ಆಗಿಲ್ಲ. ಉದ್ದ ಆಗಿದೆ ಅಂತ ಕಲ್ಪಿಸಿದ್ದೇನೆ ಅಷ್ಟೇ... ಸಿಂಗಾರ ಮನೆ ಚೆನ್ನಾಗಿದೆ ಹೆಸರು...
ಸಿಮೆಂಟು ಮರಳಿನ ಮಧ್ಯೆ ಅವರಿಗೆ
ಮೊದಲೇ ಒಂದು ಸಾರಿ ಹೇಳಿದಂತೆ, ಕಲ್ಪನೆಗಳು ವಾಸ್ತವದ ತಳಹದಿಯ ಮೇಲೆ ಕಟ್ಟಿದ ಸುಂದರ ಮಂಜಿಲಗಳು, ಅದಕ್ಕೆ ವಾಸ್ತವಕ್ಕೆ ಅಷ್ಟು ಹತ್ತಿರ.. ವಾಸ್ತವದಲ್ಲಿ ಆದಾಗ ಕಲ್ಪನೆಗಳೂ ಇನ್ನೂ ಮೀರಿ ಹೋಗಬಹುದು ಅಂತ ಅನಿಸತ್ತೆ. ನೀವು ಮಾರು ಹೋದರೆ ನನ್ನ ಕಲ್ಪನೆಗಳು ಇನ್ನೂ ಮಾರುದ್ದ ದೂರ ಬೆಳೆಯುತ್ತವೆ.

ನವೀನ್ said...

Hi ಪ್ರಭು,

ಮತ್ತೊಂದು ಸಿಕ್ಸರ್ ಹೊಡೆದಿದ್ದೀರ.
ಓದುವುದಕ್ಕೆ ಖುಷಿಯಾಯಿತು ಮತ್ತು ಒಂದಿಷ್ಟು
ಚಿಂತನೆಗೂ ಆಹಾರ ಒದಗಿಸಿತು.
ನಿಮ್ಮ ಮುಂದಿನ ಬರಹಕ್ಕೆ ಎದುರು ನೋಡುತ್ತಿದ್ದೇನೆ.

ನವೀನ್

Greeshma said...

ಯಾರೂ perfect ಅಲ್ಲ, ನಮ್ಮನ್ನೂ ಸೇರಸಿ. ಹಾಗಾಗಿ expectations ಲಿ ಸ್ವಲ್ಪ compromise ಮಾಡಿದರೆ ನಿಮ್ಮ ಭಾವ ನ ಹುಡುಕಾಟ ಮುಗಿಯಬಹುದು.
real life ಲಿ ನೀವೇನಾದರೂ ಹುಡುಕಾಟ ಶುರು ಮಾಡಿದ್ರೆ, ಪ್ರಭು ಸರ್.. ನಿಮಗೂ all the best! ;)

Prabhuraj Moogi said...

ನನ್ನ ಹೆಸರು ನವೀನ್ ಅವರಿಗೆ
ಸಿಕ್ಸರೊ, ಫೊರೊ ಒಟ್ಟಿನಲ್ಲಿ ಹೀಗೆ ಓಡ್ತಾ(Run) ನೀವು ಓದ್ತಾ ಇದ್ರೆ ಸಾಕು... ಚಿಂತನೆಯಾದರೆ ಖುಷಿ.. ಚಿಂತೆಗೂ ಎಡೆ ಮಾಡುವ ವಿಷಯವಿದು, ಹೀಗೇ ಬರುತ್ತಿರಿ...

Greeshma ಅವರಿಗೆ
ಯಾರೂ perfect ಅಲ್ಲ, ನಮ್ಮನ್ನೂ ಸೇರಸಿ, ಅಂದಿದ್ದು ಬಹಳ ಸರಿ, ನನ್ನನ್ನೂ ಸೇರಿಸಿಕೊಂಡದ್ದಕ್ಕೆ... ಸ್ವಲ್ಪ compromise ಮಾಡಿಕೊಂಡರೆ ಎಲ್ಲ ಸರಿಯಾಗುತ್ತದೆ, ಬದುಕೇ ಹೊಂದಾಣಿಕೆ ಮೇಲೆ ನಿಂತಿದೆ... ನಿಜ ಜೀವನದ ಹುಡುಕಾಟ ಶುರುವಾದ್ರೆ, ನಿಮಗೆ ಖಂಡಿತ ಇನ್ನೂ ಸ್ವಾರಸ್ಯಕರ ಘಟನೆಗಳ ಉಣಬಡಿಸುತ್ತೇನೆ :) ತಮ್ಮ ಹಾರೈಕೆಗೆ ತುಂಬಾ ಧನ್ಯವಾದಗಳು.. All... ಎಲ್ಲವೂ the best ಆಗಲಿ.

ವಿನುತ said...

ಪ್ರವಾಸದಿ೦ದಾಗಿ ತು೦ಬ ದಿನಗಳಿ೦ದ ಮಿಸ್ ಆಗಿತ್ತು ನಿಮ್ಮ ವಾಸ್ತವಿಕ ಕಲ್ಪನಾ ಬರಹಗಳು. ಹುಡುಗಾಟವೋ, ಹುಡುಕಾಟವೋ ಅ೦ತೂ ಜೀವನ ಪಯಣದ ಒ೦ದು ಪ್ರಮುಖ ನಿಲ್ದಾಣವೇ ಇದು. ಸು೦ದರವಾಗಿ ಮೂಡಿಬ೦ದಿದೆ ನಿಮ್ಮ ಮಾತುಗಳಲ್ಲಿ.

Prabhuraj Moogi said...

ವಿನುತ ಅವರಿಗೆ
ಪ್ರವಾಸದಿಂದ ಬಂದು ಎಲ್ಲ್ ಬರಹಗಲನ್ನೂ ಓದಿದ್ದಲ್ಲದೇ ಪ್ರತಿಕ್ರಿಯೆ ಕೂಡ ನೀಡಿದ್ದಕ್ಕೆ ತುಂಬಾ ಧನ್ಯವಾದಗಳು.. ಜೀವನದ ಪ್ರಮುಖ ಘಟ್ಟ ಅನ್ನೂದಂತೂ ನಿಜ... ಸರಿಯಾದ ಪಯಣಿಗ ಸಿಕ್ಕರೆ ಪ್ರಯಾಣ ಸುಖಕರ, ಅದಕ್ಕೆ ಹುಡುಕಾಟ...

Shruthikumar TD said...

GURU SAKATH ISTAAYTHU .
THANKS