ಇಂದೇ ಯುಗಾದಿಯಲ್ವ... ಯುಗ ಯುಗ ಕಳೆದರೂ ಮತ್ತೆ ಮತ್ತೆ ಬರುತಿದೆ ಅಂತ ಅಸಡ್ಡೆಯೇನೊ?.. ಮರೆತುಬಿಟ್ಟವರ ಹಾಗೆ ಕೇಳಿದೆ... ಹಾಗೆ ಅಲ್ವೇ ಮತ್ತೆ.. ನಮ್ಮ ಹೊಸ ವರ್ಷ ಯುಗಾದಿಯಿಂದ ಶುರು, ಎಲ್ರಿಗೂ ಜನೇವರಿ ಒಂದು ಗೊತ್ತು, ಯುಗಾದಿ ಮರೆತೇ ಬಿಟ್ಟಿರೊ ಹಾಗಿದೆ. ಹಬ್ಬಕ್ಕೆ ರಜೆ ಸಿಕ್ಕಿತ್ತು ಊರಲ್ಲಿದ್ದೆ ಒಬ್ಬನೇ... ಇವಳು ತವರುಮನೆಗೆ ಹೋಗೀದಾಳೆ...
ಬೇಡ ಬೇಡ ಈಗಲೇ ಕರಿದ ಹಪ್ಪಳದ ಹಾಗಿದೀನಿ ಅಂದ್ರೂ ಕೇಳದೇ ಅಮ್ಮ ಎಣ್ಣೆ ಸುರಿದು ಅಭ್ಯಂಜನ ಸ್ನಾನ ಮಾಡಿಸಿ ಆರತಿ ಮಾಡಿ, ಊಟಕ್ಕಿಟ್ಲು. ತರಹೇವಾರಿ ತಿಂಡಿ ಮಾಡಿಟ್ಟಿರ್ತಾಳೆ ಅಮ್ಮ, ತಿನ್ನೋಕೆ... ಎರಡು ಕಣ್ಣು, ಎರಡು ಕಿವಿ, ಕೊಟ್ಟ ದೇವ್ರು ಎರಡು ಹೊಟ್ಟೆ ಯಾಕೆ ಕೊಡಲಿಲ್ಲ ಅಂತ ಬಯ್ಕೋಬೇಕು ಅಷ್ಟು ಚೆನ್ನಾಗಿತ್ತು ಲಿಮಿಟ್ಟು ಮೀರಿ ತಿಂದೆ, ಹೊಟ್ಟೆ ಪಾಡಿನ ಚಿಂತೆಯಿಲ್ದೇ. ಬೇವು ಬೆಲ್ಲ ಜತೆಗೆ ತುಪ್ಪ ಶಾವಿಗೆ ಸೇರಿಸಿ ತಿಂದಿದ್ದು, ಬೇವು ಹಾಕಿ ಕಾಸಿದ ಬಿಸಿ ಬಿಸಿ ನೀರು ತಲೆ ಮೇಲೆ ಬಿದ್ದದ್ದು ಎಲ್ಲ ಸೇರಿ ಕೂತಲ್ಲೇ ತೂಕಡಿಸುತ್ತಿದ್ದೆ, ಇವಳ ಫೋನು ಬಂತು, ಬೆಲ್ಲದಂತ ಸಿಹಿ ನಿದ್ದೇಲಿ ಬೇವಿನಂತಾ ಕಹಿ ಕನಸು ಬಿದ್ದ ಹಾಗೆ.
ಅದೆಲ್ಲಿತ್ತೊ ಮೊಬೈಲು, ಊರಿಗೆ ಹೋದ್ರೆ ಎಲ್ಲಾದ್ರೂ ದೂರ ಬೀಸಾಡಿ ಬಿಟ್ಟಿರ್ತೇನೆ, ಅಮ್ಮ ಹುಡುಕಿ ಮಾತಾಡುತ್ತಿದ್ಲು, ಅವರಿಬ್ಬರ ಮಾತು ಮುಗಿಯೋ ಹೊತ್ತಿಗೆ ನನ್ನ ಇನ್ನೊಂದು ಜೊಂಪು ನಿದ್ದೆ ಮುಗಿಸಬಹುದು. ಅಂತೂ ಮೊಬೈಲು ಕೈಗೆ ಬಂತು, "ಯುಗಾದಿ ಹಬ್ಬದ ಹಾರ್ಧಿಕ ಶುಭಾಶಯಗಳೂಊಊ..." ನರಿ ಊಳಿಟ್ಟಂಗೆ! ಚೀರಿದ್ಲು. "ನಿಂಗೂ ನಂದು ಒಂದು ಅಂಥದ್ದೆ ಶುಭಾಶಯ ಇಟ್ಕೊ" ಅಂದೆ. "ಬಾಯಿಬಿಟ್ಟು ಶುಭಾಶಯ ಹೇಳಿದ್ರೆ ಏನು ಗಂಟು ಹೊಗತ್ತೇ, ನಾನೇ ಫೋನು ಮಾಡ್ಬೇಕು, ಆವಾಗ್ಲೂ ಹೀಗೆ" ಅಂತ ದಬಾಯಿಸಿದ್ಲು, "ಗಂಟು ಖರ್ಚಾಗತ್ತೆ, ಮೊಬೈಲು ಬಿಲ್ಲು ಬರತ್ತಲ್ಲ" ಅಂದೆ, ಇಂಥ ಹಬ್ಬ ಹರಿದಿನಗಳಂದು ಹತ್ತಿಪ್ಪತ್ತು ಫೋನು ಮಾಡಿರ್ತಾಳೆ, ಮೊಬೈಲು ಬಿಲ್ಲು ಬರದೇ ಏನು.
ಮಾತು ಸಾಗಿತ್ತು, "ಮತ್ತೆ ಏನು ಊಟ ಆಯ್ತಾ?" ಅಂದ್ಲು, "ಇಲ್ಲ ಈವತ್ತು ಉಪವಾಸ" ಅಂದೆ, ಮತ್ತಿನ್ನೇನು ಹಬ್ಬ ಊಟ ಮಾಡದೇ ಇರೋಕಾಗುತ್ತಾ, ಕೇಳೊದು ನೋಡಿ... "ನಿಮ್ಮ ಉಪವಾಸ ನಂಗೆ ಗೊತ್ತಿಲ್ವ, ಅಮ್ಮ ಮಾಡಿದ್ದು ಅಂತ ಗಡದ್ದಾಗಿ ತಿಂದು ಹೊಟ್ಟೆ ಇನ್ನಷ್ಟು ಊದಿಸಿಕೊಂಡು ಬರ್ತೀರ, ಬೆಂಗಳೂರಲ್ಲಿ ನೋಡ್ತೀನಿ" ಅಂದ್ಲು "ಇಲ್ಲ ಹಾಗೇನಿಲ್ಲ ಬಿಡು, ಎನ್ ಹೊಟ್ಟೆ ಅಳತೆನಾ ಮಾಡಿಟ್ಟುಕೊಂಡೀದೀಯಾ, ನಿಂಗೆ ಹೇಗ್ ಗೊತ್ತಾಗತ್ತೆ" ಅಂದ್ರೆ, "ಓಹ್ ಅಳತೆ ಇದೆಯಲ್ಲ, ಹಿಂದಿನಿಂದ ತಬ್ಬಿಕೊಂಡ್ರೆ, ಎರಡೂ ಕೈ ಸೇರಿ ಮೇಲೆ ನಾಲ್ಕು ಬೆರಳು ಜಾಗ ಉಳಿಯತ್ತೆ, ಒಂದೇ ಲೆಕ್ಕ ತಪ್ಪಿದ್ರೆ ನಾಲ್ಕು ದಿನಾ ಊಟಾನೇ ಹಾಕಲ್ಲ" ಅಂದ್ಲು ಊರಿಗೆ ಹೊದಮೇಲೆ ಇದ್ದೆ ಇದೆಯಲ್ಲ ನಿನ್ನ ಕೈ ಕಿರಿದಾಗಿವೆ ಅಂತ ವಾದಕ್ಕಿಳಿಯೋದು ಅಂತ ಸುಮ್ಮನಾದೆ. "ರೀ ಬೇವು ಬೆಲ್ಲ ತಿಂದ್ರಾ" ಅಂದ್ಲು. "ಒಹ್ ಅಮ್ಮ ಮಾಡಿದ್ಲು ಸೂಪರ್" ಅಂದೆ, "ನಾನೂ ಮಾಡೀದೀನಿ ಆದ್ರೆ ನೀವಿಲ್ಲಿ ಇಲ್ಲ ಕೊಡಬೇಕೆಂದ್ರೆ" ಅಂದ್ಲು. "ಇಷ್ಟೊತ್ತು ಬಯ್ದು ಬಯ್ದು ಬೇವು ಕೊಟ್ಟೀದೀಯಾ, ಇನ್ನು ಮುದ್ದೊಂದು ಕೊಡು ಬೆಲ್ಲದಂತೆ, ಬೇವು ಬೆಲ್ಲ ಸರಿಯಾಗತ್ತೇ" ಅಂದೆ, "ಛೀ ತುಂಟ" ಅಂತ ನಾಚಿ ಫೋನಿಟ್ಟವಳು ಮತ್ತೊಂದಿಷ್ಟು ಹೊತ್ತಿಗೆ ಮತ್ತೆ ಫೋನು ಮಾಡಿ ಬೆಲ್ಲ ಕೊಟ್ಲು!!!
ಹೀಗೆ ಬೇವು ಬೆಲ್ಲದಂತೆ ನಮ್ಮ ಜೀವನ ಸಾಗಿದೆ, ಮೊದಲೇ ವಿರೋಧಿ ನಾಮ ಸಂವತ್ಸರ, ವಿರೋಧಿಗಳು ಹೆಚ್ಚಾಗದಿರಲಿ, ನಮ್ಮಿಬ್ಬರ ನಡುವೆಯಂತೂ ಯಾವ ವಿರೋಧ ಬರದೇ ಹೀಗೆ ಚೆನ್ನಾಗಿರಲಿ ಎಂಬ ಆಶಯದೊಂದಿಗೆ,
ನಿಮಗೆಲ್ಲರಿಗೂ, ಯುಗಾದಿಯ ಹಾರ್ಧಿಕ ಶುಭಾಶಯಗಳುಊಊ!!!....
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...
17 comments:
ಪ್ರಭುರಾಜ್
ನಮಸ್ಕಾರ. ಯುಗಾದಿ ಹಬ್ಬದ ಶುಭಾಶಯಗಳು. ನಿಮ್ಮ ಲೇಖನ ಚೆನ್ನಾಗಿದೆ. ನಾನು ನಿಮ್ಮ ಬ್ಲಾಗ್ ಅನುಸರಿಸುತ್ತಿದ್ದೇನೆ. ನೀವು ನನ್ನ ಬ್ಲಾಗಿಗೆ ಬನ್ನಿ, ನನ್ನ ಬ್ಲಾಗನ್ನು ಓದಿ, ಅನುಸರಿಸಿ , ಪ್ರೋತ್ಸಾಹಿಸಿದಲ್ಲಿ ಸ೦ತೋಷ.
ಯುಗಾದಿ ಹಬ್ಬದ ಶುಭಾಶಯಗಳು. ಈ ಬಾರಿಯ ಲೇಖನ ಬೇವು ಬೆಲ್ಲವನ್ನು ಸ್ವಲ್ಪವೇ ತಿನ್ನುವಂತೆ ತೀರ ಚಿಕ್ಕದಾಗಿ ಬರೆದಿದ್ದೀರಿ. ಆದರು ಕುಶಿಯಾಯಿತು. ನಿಮ್ಮಿಂದ ಇನ್ನಷ್ಟು ಬರವಣಿಗೆ ನಿರೀಕ್ಷಿಸುತ್ಹಿರುವ ನಿಮ್ಮ ಅಭಿಮಾನಿಗಳು.
ಪ್ರಭು,
ಲೇಖನದ ಜೊತೆ ಬೇವು-ಬೆಲ್ಲ ಎಲ್ಲವು ಚೆನ್ನಾಗಿದೆ... ನಿಮಗೂ ಹಾಗು ನಿಮ್ಮ ಲೇಖನಿಯ ಸಂಗಾತಿಗೆ ಯುಗಾದಿ ಹಬ್ಬದ ಶುಭಾಶಯಗಳು..
ವಂದನೆಗಳು..
Prabhu avare, lekhana chennagittu aadare tumbaa niraase ayitu..!! Yaakendare lekhana tumbaa chikkadaagittu adakke.
(Hindina sala yaro comment nalli nimma lekhana tumbaa doddadu anta commentisiddakke eega motaku maadiddeera hyage?)
Ee comment galu BEVU BELLA idda haage! Adu bevirali athava bellavirali (eradu idde iruttade) Aaddarinda neenu nimma baravanige sheily enitto haage munduvaresi please.....
Idu nanna manavi.
ಅಯ್ಯೊ ಪ್ರಭುರಾಜ,
ಹೆಂಡತಿ ಕೊಟ್ಟಿದ್ದಕ್ಕೆ ಬೇವು ಅನ್ನಬಹುದೆ? ಮುದ್ದನ್ನೇ ಕೊಡಲಿ, ಗುದ್ದನ್ನೇ ಕೊಡಲಿ,
ಅದೆಲ್ಲವೂ ಬೆಲ್ಲವೇ!
ಪ್ರಭುರವರೇ,
ಬೆಲ್ಲ-ಬೇವು ಅಂತ ಬಹುಶಃ ಯಾರೂ ಹೇಳೋದಿಲ್ಲ...ಮೊದಲು ಬೇವನ್ನು ತಿಂದು ಅದರ ಕಹಿಯನ್ನು ಅಳಿಸಲು ಮತ್ತು ತದನಂತರ ಜಿಹ್ವಾ ರುಚಿ ಬುಡ್ಡೆಗಳು (taste buds)ಬೆಲ್ಲದ ಸಿಹಿಯನ್ನೇ ಉಳಿಸಿಕೊಳ್ಳಲು ಇಚ್ಛಿಸುವುದು ನಮ್ಮ ಮನೋಧರ್ಮಕ್ಕೆ ಅನುಗುಣವಾಗೇ ಇರುತ್ತೆ, ಬರಹ ಬಹಳ ಚೆನ್ನಾಗಿ ಬಂದಿದೆ...
ಯುಗಾದಿಯ ಶುಭಾಷಯಗಳು..ನಿಮಗೆ ಮತ್ತು ನಿಮ್ಮೆಲ್ಲ ಆಪ್ತರಿಗೆ.
PARAANJAPE K.N ಅವರಿಗೆ:
ನಮಸ್ಕಾರ,ತಮಗೂ ಯುಗಾದಿಯ ಶುಭಾಶಯಗಳು,ಖಂಡಿತ ನಿಮ್ಮ ಬ್ಲಾಗಗೆ ಬರುತ್ತೇನೆ... ಹೀಗೆ ಬರುತ್ತಿರಿ...
Nisha ಅವರಿಗೆ:
ತಮಗೂ ಯುಗಾದಿಯ ಶುಭಾಶಯಗಳು, ಬರಹ ಚಿಕ್ಕದಾಗಲು ಎರಡು ಕಾರಣಗಳಿವೆ, ಒಂದು ಹುಟ್ಟೂರಿಗೆ ಹೋಗಿದ್ದೆ,ಮನೆಯಲ್ಲಿ ಧೀರ್ಘ ಲೇಖನ ಬರೆಯಲು ಕಾರಣಾಂತರಗಳಿಂದ ಸಮಯ ಸಿಗಲಿಲ್ಲ,ಎರಡು SSK ಅವರು ಊಹಿಸಿದಂತೆ ಲೇಖನ ಮೊಟಕುಗೊಳಿಸಲು ಪ್ರಯತ್ನಿಸಿದ್ದೆ, ಇನ್ನೂ ಬರೆಯಲು ಬಹಳ ಇತ್ತು ಆದರೆ ಬರೆಯಲಿಲ್ಲ, ಮುಂದೆ ಹೆಚ್ಚಿಗೆ ಬರೆಯುತ್ತೇನೆ, ನಿಮ್ಮ ಪ್ರೊತ್ಸಾಹಕ್ಕ್ಕೆ ಚಿರಋಣಿ...
ಮನಸು ಅವರಿಗೆ:
ತಮಗೂ ತಡವಾಗಿಯದರೂ ಸರಿ ಯುಗಾದಿಯ ಶುಭಾಶಯಗಳು, ನನ್ನವಳೂ ಶುಭಾಶಯಗಳೂಊಊಊ! ಅಂತಿದಾಳೆ...
SSK ಅವರಿಗೆ:
ನಿರಾಸೆಯಾಗಬೇಡಿ, ಇನ್ನೂ ಹೆಚ್ಚು ಹೆಚ್ಚು ಬರೆಯುತ್ತೇನೆ... ನೀವು ಊಹಿಸಿದ್ದು ಸರಿ ಮೊಟಕುಗೊಳಿಸುವ ಒಂದು ಪ್ರಯತ್ನ ಮಾಡಿದ್ದೆ,ಹಾಗೂ ಊರಲ್ಲಿ ಸಮಯ ಸಿಕ್ಕಿರಲಿಲ್ಲ ಬಹಳ ಬರೆಯಲು.. ಅದರೆ ನನಗೂ ಇನ್ನೂ ಏನೊ ಬರೆಯದೆ ಬಿಟ್ಟ ಹಾಗೆ ಅನಿಸುತ್ತಿದೆ, ಮತ್ತೆ ನನ್ನ ಹಳೆಯ ಶೈಲಿಗೇ ಮರಳುತ್ತೇನೆ... ಪ್ರತೀ ಲೇಖನವನ್ನೂ ಅಷ್ಟೊಂದು ಸಮಯ ವ್ಯಯಿಸಿ ಓದುವ ನಿಮಗೆ ತುಂಬಾ ಧನ್ಯವಾದಗಳು...
sunaath ಅವರಿಗೆ:
ಕೆಲವೊಮ್ಮೆ ಮುದ್ದು ಕೆಲವೊಮ್ಮೆ ಗುದ್ದು ಕೊಡುವ ನನ್ನವಳ ನಡೆ ನನಗೆ ಬೇವು ಬೆಲ್ಲದ ಮಿಶ್ರಣವಾಗಿತ್ತು... ಬೇವು ಕೂಡ ಬೆಲ್ಲದಂತೆ ರುಚಿಯಾಗಿತ್ತು ಅಂದರೆ ಚೆನ್ನಾಗಿರುತ್ತದಲ್ವಾ!
ಜಲನಯನ ಅವರಿಗೆ:
ಮೊಟ್ಟ ಮೊದಲಿಗೆ, ನಿಮ್ಮ ಹೆಸರು ಬಹಳ ಚೆನ್ನಾಗಿದೆ,ನನ್ನ ಬ್ಲಾಗಗೆ ಸುಸ್ವಾಗತ... ನಿವಂದಿದ್ದು ನೂರಕ್ಕೆ ನೂರು ಸರಿ, ಬೇವುಬೆಲ್ಲವೆನ್ನುತ್ತೇವೆ ವಿನಹ ಬೆಲ್ಲಬೇವು ಅನ್ನಲ್ಲ, ಜೀವನದಲ್ಲಿ ಬೇವು ಬೆಲ್ಲ ಎಲ್ಲ ಇದೆ ಆದರೆ, ಬೆಲ್ಲದ ರುಚಿಗೆ ನಾಲಗೆ ಪಳಗಿದೆ, ನಾಲಗೆಗೆ ರುಚಿಯೆನಿಸದ್ದು, ಹೊಟ್ಟೆಗೆ ಒಳ್ಳೇದು ಅಂತಾರಲ್ಲ ಹಾಗೆ ಬೇವು ಬೆಲ್ಲ(ಬೆಲ್ಲ ಬೇವು ಹೇಗಾದರೊ ಸರಿ)ಎಲ್ಲ ಒಟ್ಟಗಿ ರುಚಿಸೊಣ... ಹೀಗೆ ಬರುತ್ತಿರಿ..
ಯುಗಾದಿಯ ಶುಭಾಶಯಗಳನ್ನು ಈ ರೀತಿ ಒಂದು ರೋಮ್ಯಾಂಟಿಕ್ ಲೇಖನದ ಜೊತೆಗೆ ಹೇಳುವುದು ಒಂದು ಕಲೆ....ಅದಕ್ಕಾಗಿ ನಿಮಗೆ ಅಭಿನಂದಿಸುತ್ತೇನೆ...ನಾನು ಹಾರೈಸುವುದೇನೆಂದರೆ ನೀವು ಇದುವರೆಗೆ ಬರೆದ ಲೇಖನದ ವಿಚಾರಗಳೆಲ್ಲಾ ಮುಂದೆ ನಿಮ್ಮ ನಿಜ ಜೀವನದಲ್ಲೂ ಆಗಲಿ....all the best.
shivu ಅವರಿಗೆ:
ಶುಭಾಶಯಗಳನ್ನೂ ಲೇಖನದೊಂದಿಗೆ ಸೇರಿಸಿ ಬರೆದೆ, ಇಷ್ಟ ಆಗಿದ್ದು ಖುಶಿಯಾಯ್ತು. ಹಾರೈಕೆ ನಿಜವಾದ್ರೆ ನನಗಿಂತ ಅದೃಷ್ಟವಂತ ಬೇರೆ ಯಾರೂ ಇರಲಿಕ್ಕಿಲ್ಲ, ಆಗದಿದ್ರೆ ಜೀವನ ಬೇವು ಬೆಲ್ಲದ ಮಿಶ್ರಣ ಅಂದರಾಯಿತು...
ಪ್ರಭು ಅವರೇ,
ನಿಮಗೂ ಹಾಗು ನಿಮ್ಮ ಕುಟುಂಬದವರಿಗೂ ಯುಗಾದಿ ಹಬ್ಬದ ಶುಭಾಶಯಗಳು,
ಹೊಸ ವರುಷ, ಹೊಸ ಹರುಷವನ್ನು ತರಲಿ
ಧನ್ಯವಾದಗಳು...
ಶಿವಪ್ರಕಾಶ್ ಅವರಿಗೆ:
ತಮಗೂ ತಡವಾಗಿಯದರೂ ಸರಿ ಯುಗಾದಿಯ ಶುಭಾಶಯಗಳು
ನಿಮಗೂ ಮತ್ತು ನಿಮ್ಮ ಕುಟುಂಬದ ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು, ಚೆನ್ನಾಗಿದೆ ಈ ಬೇವು ಬೆಲ್ಲದ ಪುಟ್ಟ ಬರಹ, ಈ ಹೊಸವರ್ಷ ನಿಮಗೆ ಸುಖ ಸಂತೋಷ ನೆಮ್ಮದಿ ನೀಡಲಿ... ಇವತ್ತಿನ ಈ ಜೀವನಕ್ಕೆ ಇವಷ್ಟೇ ಮುಖ್ಯ ಅಲ್ವ.. ಎಲ್ಲಾ ಕಡೆ ರೆಸೆಶನ್ ದೇ ಕಾಲ.. ಈ ವರ್ಷ ಮದುವೆ ಆಗಿ ಇಲ್ಲ ನಿಮ್ಮ ಅಪ್ಪ ಅಮ್ಮ ಹೇಳಿದ ಹಾಗೆ ನಾಯಿ ಬೆಕ್ಕು ಎಮ್ಮೆ ಕೊಳಿನಾದ್ರು ಸಾಕಿ... ಒಳ್ಳೆ ಕಂಪನಿ ನಿಮಗೆ ನಿಮ್ಮ ಮಾನಸಿ ಸಿಗೋವರೆಗೂ..
ಹೇಮಾ
To: maaya
ತಮಗೂ ಯುಗಾದಿಯ ಶುಭಾಶಯಗಳು,ಮದುವೆಯಾಗೊವರೆಗೆ ಕಲ್ಪನೆಯ ನನ್ನವಳು ಇದ್ದಾಳಲ್ಲ ಅಷ್ಟೇ ಸಾಕು
ಬಹಳ ಚೆನ್ನಾಗಿದೆ...
guruve ಅವರಿಗೆ:
ಥ್ಯಾಂಕ್ ಯೂ..
ide reeti nija jeevanadalli nimage ugaadi dina bella sigali anta haraistini :)
To: Raghavendra
nimma haaraikege dhanyvaadagaLu, noDONa muMdin yugaadige...
Post a Comment