Sunday, August 23, 2009

ಮದುವೆ ಯಾಕಾಗಬೇಕು?

ಮಧ್ಯರಾತ್ರಿ ಹನ್ನೆರಡಾಗಿತ್ತು, ಕರೆಂಟ ಬೇರೆ ಇಲ್ಲ, ನರಿ ಊಳಿಟ್ಟಹಾಗೆ ಶಬ್ದ, ನಡನಡುವೆ ಸಿಳ್ಳೆ ಹಾಕಿದ ಸದ್ದು, ಒಳ್ಳೆ ಹಾರರ(ಭಯಾನಕ) ಫಿಲ್ಮ ಹಿನ್ನೆಲೆ ಸಂಗೀತದಂತೆ... ಮಲಗಿದಲ್ಲೇ ಬೆವರಿದೆ, ಆದರೂ ಪಕ್ಕದಲ್ಲಿ ಇವಳಿದ್ದಾಳಲ್ಲ ಅಂತ ಖಾತ್ರಿ ಮಾಡಿಕೊಂಡು ಪುಕ್ಕುಲು ಮನಸ್ಸಿಗೆ ಧೈರ್ಯ ತಂದುಕೊಂಡು, ಏನದು ನೋಡೇ ಬಿಡುವಾ ಅಂತ ಮೇಲೆದ್ದೆ, ಹಾಸಿಗೆಯಿಂದಿಳಿದು ಶಬ್ದಬರುವ ದಿಕ್ಕಿನೆಡೆಗೆ ನಡೆಯುತ್ತಿದ್ದರೆ ಒಮ್ಮೆಲೇ ಅಕಸ್ಮಾತ "ಏನಾಯ್ತು" ಯಾರೊ ಕರೆದ ಹಾಗಾಯ್ತು, ಮೋಹಿನಿ ಹಾಗೆ! ಬೆಚ್ಚಿದೆ... ಎದೆ ಢಬ್ ಢಬ ಬಡ್ಕೊತಾ ಇದ್ರೆ... ಕರೆದವ್ಳು ಬೇರೆ ಯಾರೂ ಅಲ್ಲ ನನ್ನ ಮನಮೋಹಿನಿ, ನನ್ನಾಕೆಯೇ, ಅಬ್ಬ ಬದುಕಿದೆಯಾ ಬಡಜೀವಾ ಅಂತಂದುಕೊಂಡು, ಸಾವರಿಸಿಕೊಂಡು "ಸದ್ದು ಕೇಳಿಸ್ತಾ ಇದೆಯ" ಅಂದೆ, ಯಾವುದೊ ಮೋಹಿನಿ ನನ್ನಷ್ಟೇ ಕಾಡುತ್ತಿದ್ದರೆ ಎನ್ ಮಾಡೊದು, "ಹಾಂ ಕೇಳಿಸ್ತಿದೆ", ಒಹ್ ಹಾಗಾದ್ರೆ ಅವಳಿಗೂ ಕೇಳ್ತಿದೆ, "ಅದೇ ಏನು ಅಂತ ನೋಡೊಣ ಅಂತ ಹೊರಟಿದ್ದೆ ಬ್ಯಾಟರಿ ಎಲ್ಲಿದೆ" ಅಂದೆ. "ರೀ ಅದು ನಮ್ಮಪ್ಪ ಗೊರಕೆ ಹೋಡೀತಾ ಇದಾರೆ" ಅಂದ್ಲು, ಮನಸ್ಸು ನಿರಾಳವಾಯ್ತು. ಹೀಗೆ ರಾತ್ರಿ ಎಚ್ಚರವಾದ್ರೆ ಮತ್ತೆ ನಿದ್ರೆ ಬರಲು ಘಂಟೆ ಸಮಯವೇ ಬೇಕು, ಮರಳಿ ಮಲಗಿದ್ದೆ, ಇವಳು ತಿವಿದೆಬ್ಬಿಸಿ ಕೇಳಿದ್ಲು "ರೀ ಮದುವೆ ಯಾಕಾಗಬೇಕು?". #$@*%*@$# ಎಲ್ಲ ಕಣ್ಣ ಮುಂದೆ ತಿರುಗಾಡಿತು.

ಅಲ್ಲಾ ಮಧ್ಯರಾತ್ರಿ ನಿದ್ರೆ ಬರದೇ ಹೊರಳಾಡುತ್ತಿರಬೇಕಾದ್ರೆ, ಮಡದಿ ಎಬ್ಬಿಸಿ ಹೀಗೆ ಕೇಳಿದ್ರೆ ಇನ್ನೇನಾಗಬೇಡ. "ಹಾಂ!! ಏನಿಲ್ಲ ಮದುವೆ ಆಗಿ, ಮಾವ ಮನೇಲಿ ಬಂದು ಮಲಗಿ, ಹೀಗೆ ಗೊರಕೆ ಹೊಡೀಲಿ ಅಂತ ಆಗಬೇಕು" ಅಂದೆ. "ರೀ ನಿಜ ಹೇಳ್ರೀ" ಅಂತ ಗೋಗರೆದಳು. "ಲೇ ಮೊದಲೇ ನಿದ್ರೆ ಬರ್ತಾ ಇಲ್ಲ ಅಂತ ನಾನು, ಮಧ್ಯರಾತ್ರಿ ನಿಂದೊಳ್ಳೆ ಕಾಟ ಆಯ್ತಲ್ಲ" ಅಂತ ತಿರುಗಿ ಮಲಗಿದೆ, ತಲೇಲಿ ಹುಳು ಬಿಟ್ಟ ಹಾಗೆ ಆಗಿತ್ತು, ಅದೇ ವಿಷಯ ಕೊರೆತ ಶುರುವಾಯಿತು. ಇವಳಪ್ಪನ ಗೊರಕೆ ಒಂದೇ ಅಲ್ದೇ ಇದೂ ನಿದ್ರೆ ಹಾಳು ಮಾಡಲು ಸೇರಿಕೊಂಡಿತು. ಅವಳೆಡೆಗೆ ತಿರುಗಿ ನಾನೂ ಕೇಳಿದೆ "ಹೌದು ಯಾಕಾಗಬೇಕು" ಅಂತ, ಅವಳು ಗಲ್ಲಕ್ಕೆ ಕೈಕೊಟ್ಟು ಮೊಣಕೈ ಮೇಲೂರಿ ಮಲಗಿದಲ್ಲಿಂದಲೇ, "ನಾನೂ ಅದನ್ನೇ ಕೇಳಿದ್ದು" ಅಂದ್ಲು.

ಹಾಗೂ ಹೀಗೂ ಯೋಚಿಸಿ ಯೋಚಿಸಿ ಮಲಗಿರಬೇಕು, ಮುಂಜಾವು ಇನ್ನೇನು ಸ್ವಲ್ಪ ನಿದ್ರೆ ಬಂದಿರಬೇಕು, ಎಬ್ಬಿಸಿದವಳ ಮೊದಲ ಪ್ರಶ್ನೆ ಮತ್ತದೇ, ನಾನೇನು ಎಲ್ಲ ಪ್ರಶ್ನೆಗಳಿಗೆ ಉತ್ತರ ಸಂಚಿಯಲ್ಲಿ ಕಟ್ಟಿಕೊಂಡು ತಿರುಗುತ್ತಿದ್ದೇನೆ ಅನ್ನೊ ಹಾಗೆ, ಇಕೊ ತೆಗೆದುಕೊ ಅಂತ ತೆಗೆದು ಕೊಡಬೇಕೇನೊ. "ಗೊತ್ತಿಲ್ಲ ಹೋಗೆ" ಅಂದೆ, "ಮತ್ತೆ ನೀವ್ಯಾಕೆ ಮದುವೆ ಆಗಿದ್ದು" ಅಂದ್ಲು, ಮೊದಲೇ ರಾತ್ರಿಯೆಲ್ಲ ನಿದ್ರೆಯಿಲ್ಲ ಹೀಗೆ ಜೊಂಪು ತೆಗೆದುಕೊಳ್ಳುವಾಗ ಎಬ್ಬಿಸಿದ್ರೆ, ರೇಜಿಗೆದ್ದು "ನಿಜವಾಗ್ಲೂ ಮದುವೆ ಆಗಲೇಬಾರದು, ದೊಡ್ಡ ತಪ್ಪು ಆಯ್ತು ಕಣೇ, ಆಗಲೇಬಾರದಿತ್ತು, ನನ್ನೀ ಮಹಾಪರಾಧವನ್ನು ಮನ್ನಿಸಿಬಿಡು ಮಹಾತಾಯಿ, ಮಲಗಲು ಬಿಡು" ಅಂತ ಬೇಡಿಕೊಂಡೆ. "ಆಗಿದ್ದು ಆಗಿ ಹೋಯ್ತು, ಈಗ ಯಾಕೆ ಆಗಬೇಕು ಅದನ್ನ ಹೇಳಿ" ಮತ್ತದೇ ರಾಗ. "ಆಗಿ ಹೋದ ಮೇಲೆ ಆ ಮಾತ್ಯಾಕೆ,
ಈಗೇನು ನಿನಗೆ ಡಿವೊರ್ಸ್ ಬೇಕಾ, ಪೇಪರು ಕೊಡು ಎಲ್ಲಿ ಸೈನ್ ಬೇಕೊ ಅಲ್ಲಿ ಮಾಡ್ತೀನಿ, ಹೆಬ್ಬೆಟ್ಟು ಒತ್ತಬೇಕಾ, ಹೆಬ್ಬೆಟ್ಟು ಯಾಕೆ ಇಡೀ ಕೈ ಒತ್ತುತ್ತೀನಿ ಬೇಕಿದ್ರೆ" ಅಂತ ಹಾರಾಡಿದೆ, "ನಾನ್ ನಿಮ್ಮನ್ನ ಬಿಟ್ಟು ಕೊಡ್ತೀನಾ, ಅದೆಲ್ಲ ಏನೂ ಬೇಡ ನನ್ನ ಪ್ರಶ್ನೆಗೆ ಉತ್ತರಕೊಡಿ ಸಾಕು" ಅಂದ್ಲು, ಒಳ್ಳೆ ಜಿಡುಪು ಜಿಗಣೆ ತರಹ ಒಂದಕ್ಕೆ ಅಂಟಿಕೊಂಡರೆ ಬಿಡಲೊಲ್ಲಳು.

ನಿದ್ರೆಯಂತೂ ಹಾರಿ ಹೋಗಿತ್ತು, ಮಲಗಿದರೂ ಪ್ರಯೋಜನ ಇಲ್ಲವೆಂದು ಮೇಲೆದ್ದೆ, ಇವಳಪ್ಪ ಆಗಲೇ ಎದ್ದಿದ್ದರು, ಅವರ ತಲೆ ಕೂಡ ಸ್ವಲ್ಪ ಕೆಡಿಸಿದರಾಯ್ತು ಅಂತ, "ಒಳ್ಳೇ ನಿದ್ರೆಯಾಯ್ತು ಅಂತ ಕಾಣತ್ತೆ, ಟೀ ಆಯ್ತಾ" ಅಂದೆ, ಮತ್ತೆ ಗೊರಕೆ ಹೊಡೀತಿರಲಿಲ್ವಾ ಚೆನ್ನಾಗಾಯ್ತಾ ನಿದ್ರೆ ಅಂತೇನು ಕೇಳೊದು!. ಅಷ್ಟರಲ್ಲೇ ಅವಳು ಟೀ ಕೊಟ್ಲು, "ನಿಮ್ಮ ಮಗಳು ಮದುವೆ ಯಾಕಾಗಬೇಕು ಅಂತ ಕೇಳ್ತಿದಾಳೆ ನೋಡಿ" ಅಂದೆ, ಹಿರಿಯರು ಎನಾದ್ರೂ ಒಳ್ಳೆ ಉತ್ತರ ಕೊಟ್ಟಾರು ಅನ್ನೊ ಭರವಸೆಯೊಂದಿಗೆ, ಮುಗುಳ್ನಗುತ್ತ "ನಾವು ಮದುವೆ ಮಾಡಿಕೊಟ್ಟಾಯ್ತು, ಅವಳ ಪ್ರಶ್ನೆಗಳಿಗೆಲ್ಲ ಉತ್ತರ ನಿಮ್ದೇ" ಅಂತ ತಲೆಭಾರ ಕಳಚಿಕೊಂಡವರ ಹಾಗೆ ಹೊರಟು ಹೋದ್ರು. ಅವಳ ತರಲೆಗಳಲ್ಲಿ ಇದೂ ಒಂದು ಅಂದುಕೊಂಡಿರಬೇಕು.

ನನ್ನ ಹೆಗಲೇರಿದ ಈ ಪ್ರಶ್ನೆ ಕೆಳಗಿಳಿಯದಾಯಿತು, ಅವಳಪ್ಪ ಹೊರಟಾದ ಮೇಲೆ, ಅವಳು ಪಾಕಶಾಲೆಯಲ್ಲಿದ್ದಳು ಹೋಗಿ ಹಿಂದಿನಿಂದ ತಬ್ಬಿಕೊಂಡು, "ಇಂಥಹ ಮಧುರ ಕ್ಷಣಗಳಿಗಾಗಿ ಮದುವೆ ಆಗಬೇಕು" ಅಂದೆ, ಎನೂ ಮಾತಾಡಲಿಲ್ಲ, ಕೈಯಲ್ಲಿ ಸ್ಟೀಲಿನ ಪಾತ್ರೆಯಿತ್ತು ಅದನ್ನೇ ತೆಗೆದುಕೊಂಡು ಬಾರಿಸಿಯಾಳು ಅಂತ ದೂರ ಸರಿದು, ಅಂತೂ ಅವಳ ಬಾಯಿ ಮುಚ್ಚಿಸುವ ಉತ್ತರ ಕೊಟ್ಟೆನಲ್ಲ ಅಂತ ಹೆಮ್ಮೆಯಿಂದ "ಹೀಗೆ ನನ್ನ ಪತ್ನಿಯನ್ನು ನಾ ತಬ್ಬಿದರೆ ಯಾರೂ ಕೇಳಲ್ಲ, ಅದೇ ಪಕ್ಕದ ಮನೆ ಪದ್ದುಗೆ ಹೀಗೇ ಮಾಡೋಕೆ ಹೋದ್ರೆ ಅಷ್ಟೇ" ಅಂತ ವಿವರಣೆ ಬೇರೆ ಕೊಟ್ಟೆ. ತಿರುಗಿ "ಇಷ್ಟಕ್ಕೇ ಮದುವೆ ಆಗಬೇಕಾ?" ಅಂದ್ಲು. ನಾ ಹಲ್ಲು ಕಿರಿದು "ಕೈಲಿದೆಯಲ್ಲ, ಆ ಸ್ಟೀಲ ಪಾತ್ರೆ ಕೊಡು ನನ್ನ ತಲೆಗೆ ನಾನೇ ನಾಲ್ಕು ಕೊಟ್ಕೊತೀನಿ" ಅಂತಂದು ಹೊರಬಂದೆ.

ಇದರ ಉತ್ತರ ಯಾರು ಕೇಳಿದ್ರೆ ಸಿಗಬಹುದು ಅಂತ ಯೋಚಿಸಿದ್ರೆ, ಜೀವನದಲ್ಲಿ ಎಂಥಾ ಕಷ್ಟ ಬಂದ್ರೂ ಅಲುಗದೇ, ಕಲ್ಲಿನಂತೆ ನಿಂತು ಮುಂದೆ ಬಂದ ಗೆಳೆಯ ಕಲ್ಲೇಶಿ ನೆನಪಾದ, ಜೀವನ ಸಾಕಷ್ಟು ಪಾಠ ಕಲಿಸಿದೆ ಅವನಿಗೆ ಉತ್ತರ ಖಂಡಿತ ಗೊತ್ತಿರುತ್ತದೆ ಅಂತ ಅನಿಸಿತು, ಅವನಿಗೇ ಕರೆ ಮಾಡಿದೆ, ಕಲ್ಲೇಶಿ ಹೇಗಿದೀಯೋ ಅಂದ್ರೆ, ಗುಂಡುಕಲ್ಲು ಇದ್ದಹಾಗೆ ಇದೀನಿ ಅಂದ, ಸರಿ ಅವನು ಹಾಗೇ ಅದೇನೂ ಹೊಸದಲ್ಲ ಬಿಡಿ, ಹೆಸರೇ ಕಲ್ಲೇಶಿ ಬೇರೆ. "ಲೋ ಮದುವೆ ಯಾಕೊ ಆಗಬೇಕು" ಅಂದೆ, "ನಿಂದ್ ಮದುವೆ ಆಯ್ತಲ್ಲೊ, ಈಗ್ಯಾಕೆ ಈ ಪ್ರಶ್ನೇ" ಅಂದ, "ಕೇಳಿದ್ದಕ್ಕೆ ಉತ್ತರ ಹೇಳೊ ಅಂದ್ರೆ ನೀನೊಳ್ಳೆ, ಈಗ್ ನೀನ್ಯಾಕಪ್ಪ ಮದುವೆ ಆದೆ" ಅಂದೆ, ಹೀಗೆ ಕೇಳಿದ್ರೆ ಉತ್ತರ ಸಿಗಬಹುದು ಅಂತ. "ನಮ್ಮವ್ವ ಮದುವೆ ಆಗು ಅಂದ್ಲು ಆದೆ" ಅಂದ, ಒಳ್ಳೆ ಅಮ್ಮನ ಮಗ. "ಅದೆ ಯಾಕೆ ಆಗು ಅಂದಿದ್ದು", ಹೋಗಿ ಆಕೇನೇ ಕೇಳು, ಅನ್ಲಿಲ್ಲ ಸಧ್ಯಕ್ಕೆ. ಅವನೇ ಹೇಳಿದ "ಜೀವನದಲ್ಲಿ ಒಂದು ಹಂತ ತಲುಪಿದ್ನಾ, ಕೆಲ್ಸ ಮನೆ ಅಂತ ಇದ್ನಾ, ಅವ್ವ, ಮಗಾ ಕಷ್ಟ ಪಟ್ಟು ಮೇಲೆ ಬಂದೆ, ಇನ್ನು ಮದುವೆ ಆಗಿ ಸುಖವಾಗಿರು ಅಂದ್ಲು, ಅದಕ್ಕೇ ಆದೆ" ಅಂದ, ಛೆ ಎಷ್ಟು ಕರೆಕ್ಟ ಅಲ್ವಾ, ಇದು ನನಗೆ ಹೊಳೀಲೇ ಇಲ್ಲ, ಉತ್ತರ ಸಿಕ್ತು ಅಂತ, "ಮತ್ತೇನೊ ಸುಖವಾಗಿದೀಯಾ ಅನ್ನು" ಅಂದೆ. "ಅಯ್ಯೋ ಮದುವೆ ಆದಮೇಲೆ, ಹೆಂಡ್ತಿ ಮಕ್ಳು ಅಂತ ಆಗಿ, ಇನ್ನೂ ಕಷ್ಟ ಜಾಸ್ತಿ ಅಗಿದೇ ಕಣಲೋ" ಅಂದ. ಮತ್ತೆ ತಲೆ ಎತ್ತದಂತೆ ಕಲ್ಲು ಚಪ್ಪಡಿ ಎಳೆದು ಮುಚ್ಚಿದ್ದ ಪ್ರಶ್ನೇನಾ, ಕಲ್ಲೇಶಿಯೇ ಎಳೆದು ಹೊರತೆಗೆದ.

ಕಲ್ಲೇಶಿ ಕಥೆ ಕೇಳಿ ಬೇಜಾರಾಗಿ, ಕೂತವನಿಗೆ, ಕಲ್ಯಾಣಿ ನೆನಪಾದಳು, ಅದೇ ಕಲ್ಯಾಣ ಮಂಟಪದ(ಮದುವೆ ಛತ್ರ) ಮ್ಯಾನೇಜರ! ಇವಳ ಫ್ರೆಂಡ್ ಬೇರೆ, ಎಷ್ಟ ಮದುವೆ ನೋಡಿರಲಿಕ್ಕಿಲ್ಲ ಅವಳು, ಮದುವೆ ಕೂಡ ಮಾಡಿಸ್ತಾಳೆ, ಅವಳಿಗಲ್ಲದೇ ಬೇರೆ ಯಾರಿಗೆ ಗೊತ್ತಿದ್ದೀತು ಅಂತ, ಪಕ್ಕದ ರೋಡಿನಲ್ಲೆ ಛತ್ರ ಇದೆಯಂತ ಖುದ್ದು ಅಲ್ಲಿಗೇ ಹೋದೆ. "ಎನ್ ಸರ್ ಮದುವೆ ಆದ ಮೇಲೆ ಅಪರೂಪ ಆಗಿದೀರ, ಬಂದೇ ಇಲ್ಲ, ಯಾರ ಮದುವೆಗೆ ಛತ್ರ ಬುಕ್ ಮಾಡೊಕೆ ಬಂದಿರಿ" ಅಂತ ಬರಮಾಡಿಕೊಂಡಳು. "ಮದುವೆ ಯಾಕಾಗಬೇಕು ಅಂತ ಹೇಳಿದ್ರೆ, ನಾನೇ ಇನ್ನೊಂದು ಆಗೋಣ ಅಂತ" ಅಂದೆ. "ಎಲ್ರೂ ಆಗ್ತಾರೆ ಅದಕ್ಕೆ" ಅಂದ್ಲು "ಅದೇ ಯಾಕೆ", ನಾ ಅದನ್ನೇ ಕೇಳಲು ಬಂದದ್ದಲ್ಲವೇ. "ಸರ್ ಹೆಣ್ಣು ಎಷ್ಟು ದಿನ ಅಂತ ಒಬ್ಬಂಟಿಯಾಗಿ ಇರೋಕೆ ಸಾಧ್ಯ ಹೇಳಿ, ಸಮಾಜ ಮಾತಾಡತ್ತೆ, ಈಗೆಲ್ಲ ಹಾಗೂ ಇರ್ತಾರೆ, ಆದ್ರೂ ಮದುವೆಯಾಗಿ ಗಂಡನಮನೆ ಸೇರಿದ್ರೆ, ಸುರಕ್ಷಿತ, ಅಲ್ಲದೇ ಆರ್ಥಿಕವಾಗಿಯೂ ಬಲ ಸಿಗ್ತದೆ, ಅದಕ್ಕೆ ಮದುವೆ" ಅಂದ್ಲು, ಅವಳು ಹೇಳಿದ್ದೂ ಸರಿ ಅನ್ನಿಸಿತು "ಮತ್ತೆ ನೀವು ಅದಕ್ಕೆ ಆದದ್ದು, ಹಾಗಾದ್ರೆ" ಅಂದೆ, "ಆಗಿದ್ದೇನೊ ಹಾಗೆ ಅಂತ ಕನಸು ಹೊತ್ತು, ನಿಮ್ಮಲ್ಲೇನು ಮುಚ್ಚು ಮರೆ, ನಿಮ್ಮಾಕೆ ನಿಮ್ಮನ್ನು ಬಿಟ್ರೆ ನನಗೂ ಇಲ್ಲಿ ಹೇಳಿಕೊಳ್ಳೊಕೆ ಯಾರಿದಾರೆ, ಮನೆಗೆ ಹೋಗೊಕೆ ಹೆದರಿಕೆ ಆಗತ್ತೆ ಈಗೀಗ, ಕುಡಿದು ಮನೆಗೆ ಬರ್ತಾರೆ, ಸುಮ್ನೇ ಜಗಳ, ಹೊಡೆಯೋಕೆ ಬರ್ತಾರೆ, ಎಲ್ಲಿ ಸುರಕ್ಷಿತ ಸರ್, ನಾನು ಗಳಿಸಿದ್ದೂ ಅವರ ಕೈಗೇ ಕೊಡಬೇಕು, ಮನೆ ನಡೆಸೊದೇ ಕಷ್ಟ" ಅಂದ್ಲು. ಮದುವೆ ಯಾಕೆ ಆಗಬೇಕು ಅಂತ ಇದ್ದ ನನ್ನ ಪ್ರಶ್ನೆ ಈಗ, ಮದುವೆ ಯಾಕಾದ್ರೂ ಆಗಬೇಕು ಅಂತ ಆಗಿತ್ತು.

ಹೆದರಬೇಡ, ನಾವಿಲ್ವಾ, ಇನ್ನೊಮ್ಮೆ ಹಾಗೇನಾದ್ರೂ ಆದರೆ ನಮಗೆ ಫೊನು ಮಾಡು, ನನಗೆ ಸಾಧ್ಯ ಆದಷ್ಟು ಹೆಲ್ಪ ಮಾಡ್ತೀನಿ ಅಂತ ಹೇಳಿ ಮನೆಗೆ ಮರಳಿದೆ, ಬಟ್ಟೆ ಒಣಗಲು ಬಿಸಿಲಿಗೆ ಹಾಕುತ್ತ ಟೆರೆಸಿನಿಂದಲೇ ನನ್ನ ನೋಡಿರಬೇಕು ಇವಳು, ತಲೆ ಕೆಳಗೆ ಮಾಡಿಕೊಂಡು ಅದೇ ಕಲ್ಯಾಣಿ ಕಥೆಯ ಯೋಚನೆಯಲ್ಲೇ ಮನೆ ಸೇರಿದೆ, ಒಳಗೆ ಬಂದು "ರೀ, ನಾನೇನು ನಿಮ್ಗೆ ಡಿವೊರ್ಸ್ ಕೊಟ್ಟು ಎಲ್ಲೂ ಹೋಗಲ್ಲ, ಯಾಕೆ ಅಷ್ಟು ಬೇಜಾರಾಗಿದೀರಾ" ಅಂದ್ಲು. ಸುಮ್ನೇ ಕೂತಿದ್ದೆ... "ರೀ ಏನಾಯ್ತು?" ಅಂದ್ಲು, ಆಗಿದ್ದೆಲ್ಲ ಹೇಳಿದೆ, ಅವಳೂ ಮರುಕಪಟ್ಟಳು. "ರೀ ನಿಮ್ಮ ಫ್ರೆಂಡ್ ಕಲ್ಲೇಶಿ ನನ್ನ ಫ್ರೆಂಡ ಕಲ್ಯಾಣೀನಾ ಮದುವೆ ಆಗಿದ್ರೆ ಎಷ್ಟು ಚೆನ್ನಾಗಿ ಇರ್ತಿತ್ತಲ್ವಾ, ಇಬ್ರೂ ಒಳ್ಳೆ ಜೋಡಿ ಆಗಿರೋರು" ಅಂದ್ಲು, ಬ್ರಹ್ಮ ಬೆಸೆಯೋ ಬಂಧಗಳೇ ವಿಚಿತ್ರ,
ಒಮ್ಮೆಲೇ, ಬದುಕನ್ನು ರಿವೈಂಡ ಮಾಡಿ ಮೂರುವರ್ಷ ಹಿಂದೆ ತೆಗೆದುಕೊಂಡು ಹೋಗಿ, ರೀಲು ಕತ್ತರಿಸಿ ಅವರಿಬ್ಬರನ್ನೂ ಜೋಡಿಸಿಬಿಡಲೇ ಅನ್ನಿಸಿತು, ಬದುಕು ಸಿನಿಮಾ ರೀಲಲ್ಲವಲ್ಲ!

ಮಾಡಿದ ಊಟ ರುಚಿಸಲಿಲ್ಲ, "ಯಾಕೇ ನಿನಗೆ ಆ ಪ್ರಶ್ನೆ ತಲೇಲಿ ಬಂದದ್ದು" ಅಂದೆ, "ರೀ, ನನ್ನ ತಮ್ಮ ಇದಾನಲ್ಲ, ಹುಡುಗಿ ನೋಡಿ ನೋಡಿ ಬೇಸತ್ತು, ಸಾಕಾಗಿ ಮದುವೆ ಯಾಕೆ ಆಗಬೇಕು ಅಂತ ಕೇಳಿದ, ಹೌದಲ್ವಾ ಯಾಕೆ ಆಗಬೇಕು? ಅಂತ ನನಗೂ ಅನ್ನಿಸಿತು ಅದಕ್ಕೇ ನಿಮ್ಗೂ ಕೇಳಿದೆ" ಅಂದ್ಲು. ಇದೆಕ್ಕೆಲ್ಲ ಮೂಲ ಕಾರಣ ಅಲ್ಲಿದೆ, ಒಂದಿಲ್ಲೊಂದು ತೊಂದ್ರೆ ತಂದಿಡ್ತಾನೆ ನನಗೆ, ಆಮೇಲೆ ನೋಡ್ಕೊತೀನಿ ಅವನನ್ನ. "ನಾನೂ ಇಂಥದ್ದೇ ಪ್ರಶ್ನೆ ಕೇಳಿದ್ದೆ, ಅದಕ್ಕೆ ಸೋದರ ಮಾಮ, ಯಾಕೆ ಆಗಬೇಕು ಅಂತ ಕೇಳ್ತಿದಾನೆ ಅಂದ್ರೆ, ಎಲ್ಲೊ ಸನ್ಯಾಸಿ ಆಗಿ ಎಲ್ಲಿ ಮಠ ಸೇರಿಕೊಂಡು ಬಿಡ್ತಾನೆ ಏನೊ ನೋಡು ಅಂತ, ಅಮ್ಮನ ಕಿವಿಯೂದಿದ ಮದುವೆ ಮಾಡಿ ಬಿಟ್ಟರು" ಅಂದೆ. "ಒಹ್ ಅದಕ್ಕಾ ಮದುವೆ ಆಗಿದ್ದು" ಅಂದ್ಲು, "ಅಷ್ಟೇ ಏನಲ್ಲ, ಈ ನನ್ನಾಕೆ ಅಂತ ಬ್ಲಾಗ, ಲೇಖನ ಬರೀತಿದ್ನಾ, ಹುಡುಗೀರ ಕಾಟ ಜಾಸ್ತಿ ಆಯ್ತು! ಮದುವೆ ಯಾವಾಗ ಆಗ್ತೀರ ಅಂತಾ ಬೇರೆ ಕೇಳತೊಡಗಿದ್ರು, ನನಗೂ ಬ್ಯಾಚುಲರ ಲೈಫ್ ಸಾಕಾಗಿ, ಹೊರಗೆ ಹೊಟೇಲಲ್ಲಿ ತಿಂದು ತಿಂದು ಬೇಜಾರಾಗಿ, ಮದುವೆಗೆ ಓಕೇ ಅಂದುಬಿಟ್ಟೆ" ಅಂದೆ. ಮನೇಲಿ ತೂಫಾನು ಎದ್ದಿತು "ಒಹೋ ಯಾರೊ ಹೇಳಿದ್ರು ಅಂತ ಮದುವೆ ಆದಿರಿ, ಅಡುಗೆ ಮಾಡೊಕೆ ಅಡುಗೆಯಾಕೆ ಬೇಕಿದ್ಲು, ಯಾರೊ ಕೆಲಸದಾಕೆನಾ ಮದುವೆ ಆಗಬೇಕಿತ್ತು" ಅಂತ ಬಯ್ಯುತ್ತ ಎದ್ದು ಹೋದವಳು ಮೂರು ದಿನ ಮಾತಾಡಲಿಲ್ಲ ಮುನಿಸಿಕೊಂಡು.

ಮಾನವ ಮೂಲತಃ ಸಂಘಜೀವಿ, ಒಬ್ಬಂಟಿ ಒಂಟಿ ಸಲಗಗಳೂ ಇದ್ದಾರೆ, ಸಾಧನೆ ಮಾಡಿದ ಸನ್ಯಾಸಿಗಳೂ ಇದ್ದಾರೆ. ಅದ್ರೆ ಸಾಮಾನ್ಯ ಮನುಷ್ಯ ತನಗೆ ತಾನೆ ಕಟ್ಟಿಕೊಂಡು ನಿರ್ಧಿಷ್ಟ ನೀತಿ ನಿಯಮಗಳೇ ಸೇರಿ ಸಮಾಜ ಆಗಿದೆ, ಮದುವೆ ಅದರಲ್ಲೊಂದು ಅಂಗ, ಮಾನವ ಜನಾಂಗದ ಮುಂದುವರಿಕೆಗೆ ಸಂತಾನೋತ್ಪತ್ತಿ ಅಂತ ಅದರ ಮೂಲ ಉದ್ದೇಶ ಕೂಡ, ನಾಯಿ ನರಿಗಳಂತೆ ಜೀವಿಸದೇ ಮೌಲ್ಯಗಳೊಂದಿಗೆ ಜೀವಿಸಲು ಕಟ್ಟಿಕೊಂಡ ಕಟ್ಟುಪಾಡುಗಳು. ನನ್ನ ಜತೆ ನೀನು, ನಿನಗೆ ನಾನು, ಅಂತ ಭಾವನಾತ್ಮಕ ಬೆಂಬಲ ಕೂಡ ಅದೇ, ದೈಹಿಕ, ಆರ್ಥಿಕ, ಸಾಮಾಜಿಕ, ಮಾನಸಿಕ ಎಲ್ಲರೀತಿಯಿಂದಲೂ ಅಗತ್ಯ ಮತ್ತು ಸಬಲತೆಯೇ ಇದರ ಸೂತ್ರ. ಹಾಗೊ ಹೀಗೊ ಎಲ್ಲರೂ ಮದುವೆ ಆಗುತ್ತಾರೆ ಏನೋ ಒಂದು ಕಾರಣದಿಂದ. ಊರಲ್ಲಿ ಖಾಲಿ ಅಲೆಯುವವನಿಗೆ ಮದುವೆ ಮಾಡಿದರೆ ಜವಾಬ್ದಾರಿ ಬರುತ್ತದೆಂದು ಮದುವೆ ಮಾಡಿದರೆ, ವಯಸ್ಸಾಯ್ತು ನಮ್ಮ ಜವಾಬ್ದಾರಿ ಕಳೆದುಕೊಳ್ಳೊಣ ಅಂತ ತಂದೆ ತಾಯಿ ಮಗಳ ಮದುವೆ ಮಾಡಿ ಹಾಕುತ್ತಾರೆ, ಇನ್ನೋ ದೊಡ್ಡ ದೊಡ್ಡ ಶ್ರೀಮಂತರೂ, ಬಿಸಿನೆಸ ಮ್ಯಾನಗಳ ಮಕ್ಕಳ ಮದುವೆ ಹಿಂದೆ ದೊಡ್ಡ ವ್ಯಾಪಾರಿ ತಂತ್ರವೇ ಅಡಗಿರುತ್ತದೆ, ಮದುವೆ ಮಾಡಿ ಹೊಸ ಕಂಪನಿಯ ಜವಾಬ್ದಾರಿ ಹೆಗಲಿಗೇರಿಸುತ್ತಾರೆ. ಹೀಗೇ ಮದುವೆ ಯಾಕೆ ಆಗಬೇಕು ಅನ್ನೊದಕ್ಕೆ ನಿರ್ಧಿಷ್ಟ ಕಾರಣಗಳಿಲ್ಲ ಅಂತ ನನ್ನನಿಸಿಕೆ, ಏನೊ ಕಾರಣ ಒಟ್ಟಿನಲ್ಲಿ ಮದುವೆ ಮಾತ್ರ ಅಗುತ್ತಾರೆ.

ಅವಳ ತಮ್ಮ ಒಬ್ಬನೇ ಸಿಕ್ಕ, "ಎನೊ ನನ್ನಾಕೆಗೆ ಎನೇನೊ ಪ್ರಶ್ನೆ ಕೇಳಿ, ತಲೆ ಕೆಡಿಸ್ತ ಇದೀಯ, ನನ್ನೊಂದಿಗೆ ಮಾತಾಡ್ತಾ ಇಲ್ಲ ಅವಳು ನಿನ್ನಿಂದಾಗಿ" ಅಂದೆ. "ಸಾರಿ ಭಾವ ನನ್ನಿಂದ ಎಷ್ಟು ತೊಂದ್ರೆ ನಿಮಗೆ" ಅಂತ ಚಡಪಡಿಸಿದ. "ಇನ್ನೊಮ್ಮೆ ಎನಾದ್ರೂ ಇಂಥ ತರಲೆ ಪ್ರಶ್ನೆ ಕೇಳಿದ್ರೆ, ಪ್ರಶ್ನೇನೆ ಕೇಳದ ಹಾಗೆ, ಬಾಬ್ ಕಟ್ ರೋಜಿ ಜತೆ ಮದುವೆ ಮಾಡಿಸಿಬಿಡ್ತೀನಿ" ಅಂತ ಧಮಕಿ ಹಾಕಿದೆ. "ಅವಳ್ನೆ ಮದುವೆ ಆಗಿಬಿಡ್ತೀನಿ, ನನಗೂ ಹುಡುಗಿ ಹುಡುಕಿ ಸಾಕಾಗಿದೆ" ಅಂತ ನಿರಾಸೆಯಿಂದ ನುಡಿದ, ಪಾಪ ಅನ್ನಿಸಿತು "ಏಯ್, ನಾನ್ ಜೊಕ್ ಮಾಡಿದ್ದೊ ಮಾರಾಯ, ಈಗ್ಲೆ ಹೀಗೆ ಸೋತರೆ ಹೇಗೆ ಇನ್ನೂ ಮದುವೆ ಆಗಬೇಕಿದೆ, ಎನೂ ಬೇಜರಾಗಬೇಡ, ನಾನು ನನ್ನಾಕೆ ಇಲ್ವಾ, ಒಳ್ಳೆ ಹುಡುಗಿ ತಂದು ಮದುವೆ ಮಾಡ್ತೀವಿ" ಅಂತ ಭರವಸೆ ತುಂಬಿದೆ ಹುಡುಗ ಚೇತರಿಸಿಕೊಂಡ, "ಎನಾದ್ರೂ ಲವ್... ಇದ್ರೆ ಹೇಳಪ್ಪ" ಅಂತ ಹುಬ್ಬು ಹಾರಿಸಿದೆ, ನಾಚಿ "ಇಲ್ಲ, ಎನೂ ಇಲ್ಲ ಭಾವ" ಅಂದ. "ನೀವೇ ನೋಡಿ, ನೀವು ಅಕ್ಕನೇ ಹುಡುಕೋದು" ಅಂದ. "ಬಿಡು ಮತ್ತೆ" ಅಂತ ಬೆನ್ನು ತಟ್ಟಿ ಹುರಿದುಂಬಿಸಿದೆ. "ಭಾವ ಅಕ್ಕ ಮಾತಾಡಿಸ್ತಾ ಇಲ್ವಲ್ಲ" ಅಂದ "ಏ, ಅದೇನು ಪ್ರಾಬ್ಲಂ ಅಲ್ಲ ಬಿಡು,
ಅವಳು ನನ್ನಾಕೆ ಕಣೊ, ಮದುವೆ ಆಗು ನಿನಗೂ ಗೊತ್ತಾಗತ್ತೆ" ಅಂದೆ, ನಗುತ್ತಿದ್ದ.

ಮತ್ತೊಂದು ದಿನ ಹೀಗೇ ಮಲಗಿದ್ದೆ, ಅವರಪ್ಪನ ಗೊರಕೆ ಸದ್ದು ಇರಲಿಲ್ಲ, ನಿದ್ರೆ ಬರುವುದಿತ್ತು. ಮೌನ ವೃತದಲ್ಲಿದ್ದವಳು ಬಾಯಿ ಬಿಟ್ಟಳು "ರೀ" ಅಂತ ಅಲುಗಿಸಿದಳು, ಅಯ್ಯೋ ಮತ್ತಿನ್ಯಾವ ಪ್ರಶ್ನೇ ಹೊತ್ತು ತಂದಿದಾಳೊ ಅಂತ ಭಯ ಬಿದ್ದೆ. ಅವಳೆಡೆಗೆ ತಿರುಗಿದರೆ "ನಾ ಮಾತಾಡಿಸಲಿಲ್ಲ ಅಂದ್ರೆ, ನೀವೂ ಮಾತು ಬಿಡೊದಾ" ಅಂದ್ಲು, ಆ ಹೊದ್ದ ಹೊದಿಕೆಯ ಚುಂಗದಂತೆ ಬಂದ ದಾರಗಳನ್ನು ಕೈಯಲ್ಲಿ ಹೊಸೆಯುತ್ತ, ತಿರುಗಿಸುತ್ತ. ಇನ್ನೇನು ಇವಳು ಶಿಲಾಬಾಲಿಕೆಯ ಹಾಗೆ ಕಲ್ಲಿನಂತೆ ನಿಂತಿದ್ದರೆ ನಾ ಮುಂದೆ ನಿಂತು ಪೂಜಾರಿ ಮಂತ್ರ ಹೇಳಿದಂತೆ ಮಾತಾಡುತ್ತಿರಬೇಕೆ. ಗದ್ದ ಹಿಡಿದು, ಬಾಗಿದ್ದ ಅವಳ ಮುಖ ಮೇಲೆತ್ತಿದರೂ ನನ್ನಡೆಗೆ ದೃಷ್ಟಿಯಿಟ್ಟು ಮಾತಾಡುತ್ತಿರಲಿಲ್ಲ "ಕಲ್ಯಾಣಿ ಫೋನು ಮಾಡಿದ್ಲು", ಅಂದ್ಲು, "ಏನಾಯ್ತು" ಗಾಬರಿಯಾದೆ. "ಏನಿಲ್ಲ... ನಿನ್ನ ಗಂಡ ಏನ್ ಜಾದೂ ಮಾಡಿದ್ರೆ, ನಮ್ಮವರು ಪೀಡಿಸೋದು ದೂರದ ಮಾತು, ಕುಡಿಯೋದು ಕಮ್ಮಿಯಾಗಿದೆ, ಮೊನ್ನೆ ಫಿಲಂಗೆ ಕೂಡ ಕರ್ಕೊಂಡು ಹೋಗಿದ್ರು, ತುಂಬ ಥ್ಯಾಂಕ್ಸ ಕಣೇ, ನಿಮ್ಮ ಮದುವೆನೇನೊ ನಾನು ಮಾಡಿಸಿದೆ, ನನ್ನ ಮದುವೆನಾ ನೀವು ಕಾಪಾಡಿದ್ರಿ ಅಂತೆಲ್ಲ ಏನೇನೊ ಹೇಳಿದ್ಲು" ಅಂದ್ಲು. ನಿರಮ್ಮಳ ಭಾವ ಬಂತು, ಅಂತೂ ಒಳ್ಳೇದಾಯ್ತಲ್ಲ ಅಂತ. "ರೀ ಎನ್ ಮ್ಯಾಜಿಕ್ ಮಾಡಿದ್ರಿ" ಅಂದ್ಲು, "ಎನಿಲ್ಲ ಕಣೆ ಸ್ವಲ್ಪ ರಿಸ್ಕ ತೆಗೆದುಕೊಂಡೆ, ಆ ಏರಿಯ ಇನಸ್ಪೆಕ್ಟರ ನನ್ನ ಫ್ರೆಂಡ, ಹೆಲ್ಪ ಮಾಡು ಅಂದೆ, ಒಕೇ ಅಂದ, ಕಲ್ಯಾಣಿ ಗಂಡನ್ನ ಕರಿಸಿ 'ಕುಡಿದು ಗಲಾಟೆ ಮಾಡ್ತೀಯಾ, ಹೆಂಡ್ತಿ ಹೊಡೀತೀಯಾ, ಅಂತ ಕಂಪ್ಲೆಂಟ್ ಬಂದಿದೆ, ವಿಚಾರಣೆಗೆ ಹೋದ್ರೆ ನಿನ್ನ ಹೆಂಡ್ತಿ ನನ್ನ ಗೆಳೆಯನ ಕೈಲಿ ಫೊನು ಮಾಡಿಸಿ ಹೇಳಿಸಿದ್ಲು, ಅವನೂ ಹಾಗೇನಿಲ್ಲ ಅಂದಿದ್ದಕ್ಕೆ ಬಿಡ್ತಿದೀನಿ, ಅಷ್ಟೊಳ್ಳೆ ಹೆಂಡ್ತಿ ಇದಾಳೇ ಯಾಕೆ ಇದೆಲ್ಲ ನಿನಗೆ, ಇನ್ನೊಮ್ಮೆ ಕಂಪ್ಲೇಂಟ್ ಬಂದ್ರೆ.. ಗೊತ್ತಲ್ಲ..' ಅಂತ ಹೆದರಿಕೆ ಹಾಕಿಸಿದೆ, ಆಕೆ ಗಂಡನೂ ಹೆದರಿದ ಅನ್ಸತ್ತೆ ಎಲ್ಲ ಸರಿಯಾಗಿದೆ, ಸಮಾಧಾನ" ಅಂದೆ. ಅದಕ್ಕೆ ಪ್ರತಿಯಾಗಿ ನನ್ನಾಕೆಯಿಂದ ಹಣೆಗೊಂದು ಪಪ್ಪಿ ಸಿಕ್ತು, "ರೀ ಕಲ್ಲೇಶಿ" ಅಂದ್ಲು, "ವಿಮಾ ಏಜೆಂಟ ಕೊರ್ಸ್ ಮಾಡು ಅಂತ ಹೇಳಿದೀನಿ, ನನ್ನ ಕಾಂಟ್ಯಾಕ್ಟ್ಸ್ ಎಲ್ಲ ಕೊಟ್ಟಿದೀನಿ, ಆಗಲೇ ನಾಲ್ಕು ಜನ ಕಾಲ್ ಮಾಡಿ ಪಾಲಸಿ ಕೊಟ್ಟೀದಾರೆ ಅಂತಿದ್ದ, ಮುಂದೆ ಮ್ಯೂಚುವಲ ಫಂಡ ಮಾಡಿಸು ಅಂತ ಹೇಳಿದೀನಿ, ಕಮೀಷನ್ ಅಂತ ಆದರೆ ಜೀವನಕ್ಕೆ ಆಧಾರ ಅಗತ್ತೆ, ಮೊದಲೇ ಶ್ರಮಜೀವಿ, ಮಾಡ್ಕೊತಾನೆ ಅನ್ನೊ ನಿರೀಕ್ಷೆ ಇದೆ" ಅಂದೆ, ಈ ಸಾರಿ ಮುತ್ತಿನಮಳೆ ಸುರಿಯಿತು, "ಲೇ ಮದುವೆ ಯಾಕಾಗಬೇಕು?" ಅಂತ ಕೇಳಿದೆ. "ಯಾವ ಕಾರಣಕ್ಕೆ?, ಯಾಕೆ?... ನನಗೆ ಬೇಕಿಲ್ಲ, ಅದೇನೇ ಇರಲಿ ನೀವು ನನ್ನ ಮದುವೆ ಆದ್ರಲ್ಲ, ಅಷ್ಟ ಸಾಕು" ಅಂತಿದ್ದಳು. ಯಾಕೆ ಆದೆ ಅನ್ನೊಕಿಂತ, ಆಗಿದ್ದು ಒಳ್ಳೆದೇ ಆಯ್ತು ಅನಿಸುತ್ತಿತ್ತು ನನಗೂ... ನಿಮ್ಮಲ್ಲೂ ಹೀಗೆ ಅನೇಕ ಕಾರಣಗಳಿರಬಹುದು, ಹೊಸದಿದ್ದರೆ ಹಂಚಿಕೊಳ್ಳಿ, ಮತ್ತೆ ಮಂಥನದೊಂದಿಗೆ ಸಿಕ್ತೀವಿ. ನಾನು ನನ್ನಾಕೆ...

ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಷಯಗಳು... ವಿಘ್ನನಿವಾರಕ ಎಲ್ಲರ ಬಾಳಲ್ಲೂ ವಿಘ್ನಗಳನ್ನ ಹೊಡೆದೋಡಿಸಿ ಹರ್ಷ ತರಲೆಂದು ಆಶಿಸುತ್ತೇನೆ.


ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.


ಈ ಲೇಖನ ಬರೆಯುವಾಗ, ಯಾಕೆ ಆಗಬೇಕು ಅನ್ನೊಕಿಂತ ಅಗಿದ್ದು ಒಳ್ಳೇದೆ ಅನ್ನೊ ಭಾವದಲ್ಲಿ ಬರೆಯಲಾಗಿದೆ, ಕೆಲವರಿಗೆ ಯಾಕಾದ್ರೂ ಆದೆವೊ ಅನ್ನೋ ಭಾವನೆಯೂ ಇರಬಹುದು, ಅವರವರು ಬದುಕು ನೋಡುವ ಭಾವದಲ್ಲಿ ಅಡಗಿದೆ, ನಿಜವಾಗಿಯೂ ಮದುವೆ ಅನುಭವವಂತೂ ಇಲ್ಲ, ಆ ಮಟ್ಟಿಗೆ ನಾನು ಅನನುಭವಿ, ಎನದ್ರೂ ತಪ್ಪು ಬರೆದಿದ್ರೆ, ಅನುಭವಿಗಳು ಮನ್ನಿಸಿ. ಮದುವೆ ಅಂತಿದ್ದಂಗೆ ಬೆಚ್ಚಿಬೀಳುವವರ ನಡುವೆ ವಿಭಿನ್ನ ದೃಷ್ಟಿಕೋನದಲ್ಲಿ ನೋಡುವ ಪ್ರಯತ್ನ ನನ್ನದು, ಆದರೆ ಎಲ್ಲ ಒಳ್ಳೇದೆ ಆಗುತ್ತದೆ ಅಂತೇನೂ ನಾನು ರುಜುವಾತು ಮಾಡಿ ತೋರಿಸುತ್ತಿಲ್ಲ, ಅದಕ್ಕೆ ನಾ ತೆಗೆದುಕೊಂಡ ಉದಾಹರಣೆಗಳೇ ಸಾಕ್ಷಿ, ಅಲ್ಲದೇ ಅವನ್ನು ಬಗೆಹರಿಸಲು ನಾ ಕೊಟ್ಟ ಪರಿಹಾರಗಳೂ ಸಿನಿಕತೆಯಿಂದ ಕೂಡಿವೆ, ನಿಜ ಜೀವನದಲ್ಲಿ ಎಲ್ಲ ಹಾಗಾಗಲಿಕ್ಕಿಲ್ಲ, ಅಷ್ಟು ಸುಲಭವಾಗಿ ಕ್ಲಿಷ್ಟ ಸಮಸ್ಯೆಗಳ ಬಿಡಿಸಲು ಆಗುವುದಿಲ್ಲ ಆದರೂ... ಕಲ್ಪನೆಯಲ್ಲಾದರೂ ಸರಿ... ಬದುಕಿನತ್ತ ಆಶಾಭಾವನೆಯಿಂದ ನೋಡುವ ತುಡಿತ...

ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...


PDF format www.telprabhu.com/maduve-yaakaagabeku.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು

33 comments:

sunaath said...

ಪ್ರಭುರಾಜ,
ಎಂಥಾ ಸಂಕಷ್ಟ ತಂದಿಟ್ರಿ. ನಿಮ್ಮ ಲೇಖನ ಓದಿದ ನನ್ನ ಹೆಂಡತಿ
ಮಧ್ಯರಾತ್ರಿ ನನ್ನ ಎಬ್ಬಿಸಿ ಇದೇ ಪ್ರಶ್ನೆಯನ್ನ ನನ್ನ ಎದುರಿಗಿಟ್ಟಳು. ಪ್ರಭುರಾಜರನ್ನೇ ಕೇಳು ಅಂತಾ ಹೇಳಿ ಮಗ್ಗಲಾದೆ!

Prabhuraj Moogi said...

sunaath ಅವರಿಗೆ
ಸರ್, ಸರಸ "ಸಲ್ಲಾಪ"ಕ್ಕೆ ಮದುವೆ ಆಗಬೇಕು, ಅಂತ ಉತ್ತರ ಹೇಳಬೇಕಿತ್ತು, ಸಂಕಷ್ಟಹರ ಗಣಪತಿಗೆ ಮೊರೆ ಹೋಗಿ ಎಲ್ಲಾ ಸರಿಯಾಗುತ್ತದೆ!!!

Geethashri Ashwathaiah said...

Hello Prabhu,

Very very creative, superb imagination, mixed feelings...overall cherish to read and laugh!!! was just thinking if i could ever write something like you (imaginary...) wish to....

Gr8 work...hearty wishes to you too on this gowri and ganesha festival..Keep up the great job...really really nice

ವಿನುತ said...

ಮತ್ತೊ೦ದು ತೂಕದ ಬರಹ. ಇದಮಿತ್ಥಮ್ ಉತ್ತರ ಸಿಗದಿದ್ದರೂ, ಎಲ್ಲರಲ್ಲೂ ಈ ಪ್ರಶ್ನೆ ಇದೆ ಎ೦ದು ತಿಳಿದು ಸ೦ತೋಷವಾಯಿತು :)
ಒ೦ದು ಪ್ರಶ್ನೆಯನ್ನೋ, ಸ೦ದರ್ಭವನ್ನೋ, ಆದರ್ಶವನ್ನೋ, ಸಲಹೆಯನ್ನೋ ರೂಪಿಸಿಕೊ೦ಡು ಅದರ ಸುತ್ತ ದ೦ಪತಿಗಳ ಮೂಲಕ ಸುತ್ತಾಡಿಸುವ ನಿಮ್ಮ ಶೈಲಿ ಮುದ ನೀಡುತ್ತದೆ.

Unknown said...

ಪ್ರಭು ಅವರೆ,
ನಿಮ್ಮ ಪ್ರಶ್ನೆ ಈಗ ನನ್ನನ್ನೂ ಕಾಡುತ್ತಿದೆ ? ಯಾಕೆ ಬೇಕು ? ಬಹಳ ಹಿ೦ದೆಯೆ ನನಗೆ ಈ ಪ್ರಶ್ನೆ ಕಾಡಿ ಉತ್ತರ ಸಿಕ್ಕದೆ .ಏಲ್ಲೂ ಆ ಪ್ರಶ್ನೆ ಕಳೆದು ಹೋಗಿತ್ತು .. ಈಗ ಮತ್ತೆ ನೆನಪಾಯಿತು .
ನಿಮ್ಮ ಶೈಲಿ ಸು೦ದರವಾಗಿ ಇದೆ .. ನಿಮ್ಮ ಬರಹವನ್ನು ಓದುವಾಗ ನಾವು ಅದರಲ್ಲಿ ಒ೦ದು ಪಾತ್ರವಾಗಿ ಇದ್ದೇವೆ ಎ೦ಬ ಭಾವ ಬರುತ್ತದೆ .. ನಾವು ಒ೦ದು ಬರಹವನ್ನು ಓದುತ್ತಿದ್ದೇವೆ ಎ೦ದು ಅನ್ನಿಸುವುದಿಲ್ಲ .. ಅದು ನಿಮ್ಮ ಬರವಣಿಗೆಯ ಹೆಚ್ಚು ಗಾರಿಕೆ . ಇಲ್ಲಿಯ ಬರಹದಲ್ಲಿ ಸಹ ಆ ಭಾವ ಮು೦ದುವರಿದೆದೆ .ಹೀಗೆ ಮು೦ದುವರಿಸಿ ನಿಮ್ಮ ಬರಹವನ್ನು ..

shivu.k said...

ಪ್ರಭು,

ಎಂಥ ಪೇಚಿಗೆ ತಂದಿಟ್ಟುಬಿಟ್ರಿ ನೀವು. ನನಗೂ ಈ ಪ್ರಶ್ನೆ ಕಾಡುತ್ತಿತ್ತು. ನಿನ್ನೆ ಹಬ್ಬದ ದಿನ ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ಸ್ನಾನ ಹಬ್ಬದ ತಯಾರಿ, ಪೂಜೆ ಇತ್ಯಾದಿಗಳಲ್ಲಿ ನಿರತಳಾಗಿದ್ದ ನನ್ನ ಶ್ರೀಮತಿಗೆ ಇದೇ ಮಾತನ್ನು ಕೇಳಿದೆ.

ಒಮ್ಮೆ ಮೇಲಿಂದ ಕೆಳಗೆ ನನ್ನನ್ನು ನೋಡಿ, "ಬನ್ನಿ ಇಲ್ಲಿ ಕೂತ್ಕೊಳ್ಳಿ, ನಾಲ್ಕು ಒಬ್ಬಟ್ಟು ತಟ್ಟಿಕೊಡಿ ಆಮೇಲೆ ಹೇಳ್ತೀನಿ" ಅಂದುಬಿಡಬೇಕೆ.

ಆರೆರೆ...ಇದ್ಯಾಕೋ ನಾನು ಕೇಳಿದ ಪ್ರಶ್ನೆಗೆ ಉತ್ತರ ಸರಿಯೋಗಲಿಲ್ಲ, ಅದಕ್ಕೆ ಉತ್ತರವೂ ಬೇಕಿಲ್ಲ, ಆಡಿಗೆ ಮನೆ ಸಹವಾಸವೂ ಬೇಕಿಲ್ಲ, ಸುಮ್ಮನೆ ಕ್ಯಾಮೆರಾ ಹಿಡಿದು ಓಡಾಡುವುದೇ ಮೇಲು ಅಂತ ಕ್ಯಾಮೆರಾ ತೆಗೆದುಕೊಂಡು ಹೊರಗೆ ಹೊರಟೆ.

ಏನಂತೀರಿ.....

ಮನಸು said...

prabhu,
hahaha bahaLa oLLeya, yochanegeedu maaduva lekhana,

bahaLa adhubutavagi tiLisiddeeri.. ee prashne ellarallu mooduvudu sahaja..

Veena A said...

Hey Prabhu...

Good One...

I think i should ask this question when i am interviewed [ marriage interview :):):)]...

I shall marry the one who gives the convincing answers.

And if so happens then thanks to you for putting across this question in your blogs...

Cheers...

Veena

ಸವಿಗನಸು said...

Prabhu,
ಮತ್ತೊಂದು ಸೂಪರ್ ಬರವಣಿಗೆ......ನಮಗೂ ಈ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ ಪ್ರಭು....ಎನೆ ಆಗಲಿ.....ಆದ್ದದ್ದು ಒಳ್ಳೆಯದ್ದಕ್ಕೆ....ಆಗೋದು ಒಳ್ಳೆಯದ್ದಕ್ಕೆ...... ಅಂತ ಅಂದು ಕೊಂಡು ನಡೆಯೋದು ಜೇವನ...ನಿಮ್ಮ ಬರವಣಿಗೆ ತುಂಬ ಇಷ್ಟವಾಯಿತು....ಬರೀತಾ ಇರಿ

ರವಿಸೂರ್ಯ said...

ನನವ್ವ ದಿನ ಜಗಳ ಆಡ್ತಾಳೆ, ಮದುವೆ ಮಾಡ್ತಿನಿ ನಿಂಗೆ ಮಗ ಅಂತ. ನಾನು ಹಾಗಳವ್ವ ಅಂತ..

ನನ್ನ ಗೆಳಯ 'ಮದುವೆಯಾದ ಮಲ್ಲೇಶ' ಹೇಳಿದ್ದು -- ನೀನು ಮದುವೆಯಾದರೆ ಲಗ್ನ ಒಂದೇ, ಆದ್ರೆ ನೀನು ಹೇಳೋ ವಿಗ್ನ ೧೦೮ ಕಣೋ..

ರಾಜೀವ said...

"ಮದುವೆ ಯಾಕಾಗಬೇಕು" ಅನ್ನುವುದು ಒಂದು ಮಿಲಿಯನ್ ಡಾಲರ್ ಪ್ರಶ್ನೆಯೇ ಸೆರಿ. ಯಾರೂ ಹೇಳುದ್ರು, ಜೀವನದಲ್ಲಿ ಬರಿ ಸುಖ ಮಾತ್ರ ಇದ್ದರೆ ಹೇಗೆ? ದುಃಖವೂ ಇರಬೇಕು. ಅದಕ್ಕಾದ್ರೂ ಮದುವೆ ಆಗ್ಬೇಕು ಅಂದ್ರು ;-)

ಇನ್ನು ತಡ ಮಾಡದೆ, ಯಾಕೆ ಅಂತ ಕೇಳ್ದೆ, ಬೇಗ ಊಟ ಹಾಕ್ಸಿ.

Ajay said...

Hi Prabhu,
ಗೌರಿ ಗಣೇಶ ಹಬ್ಬದ ಶುಭಾಷಯಗಳು.....

Prabhuraj Moogi said...

To: Geethashri Ashwathaiah
Just some random thoughts and fantasies make their way out through writing... try out you can also write...
Wish you too Happy Ganesh fest, keep visiting.

ವಿನುತ ಅವರಿಗೆ
ಉತ್ತರ ಹುಡುಕಲು ಪ್ರಯತ್ನಿಸಿದೆ ಕೊನೆಗೆ ಸಿಗದಾದಾಗ ಅದು ಪ್ರಶ್ನೆಯಾಗೇ ಉಳಿಯಿತು, ಇಷ್ಟಕ್ಕೂ ಉತ್ತರ ಸಿಕ್ಕರೂ ಅದೇ ಸರಿ ಅಂತ ಯಾರು ಹೇಳುವವರು! ಎಲ್ಲರಲ್ಲೂ ಇದೇ ಪ್ರಶ್ನೆ ಇರುವಾಗ...
ಈ ದಂಪತಿ ಶೈಲಿ ಅದಕ್ಕೆ ಬಂದಿರಬೇಕು, ಗಂಡು ಹೆಣ್ಣು ಇಬ್ಬರದೂ ಪರವಾಗಿ ವಾದಿಸಬಹುದು, ಅಲ್ಲದೇ ಹುಡುಗರು ಹುಡುಗಿಯ ಹತ್ತಿರವೇ ಜಾಸ್ತಿ ಮನ ತೆರೆದು ಮಾತಾಡುವುದೇನೋ, ನನಗೆ ಗೊತ್ತಿಲ್ಲ ಆದರೂ ಅನಿಸಿಕೆ.

roopa ಅವರಿಗೆ
ಅದೂ ಸರಿಯೇ, ದಂಪತಿಗಳಂತೆ ಬರೆದು ಬರೆದು ನಲವತ್ತು ಲೇಖನವಾದರೂ ನನಗಿನ್ನೂ ದಂಪತಿಗಳೇ ಯಾಕೆ ಆಗಬೇಕು ಅಂತ ತಿಳಿದಿಲ್ಲ, ತಿಳಿದರೂ ಅದಕ್ಕೆ ನಿರ್ದಿಷ್ಟ ಕಾರಣ, ಅಥವಾ ಉತ್ತರಗಳಿಲ್ಲ. ಬರವಣಿಗೆ ಇಷ್ಟವಾಗಿದ್ದು ಖುಷಿ, ಬರೆಯುವಾಗ ನಾನು ಕೂಡ ಪಾತ್ರವಾಗಿಯೆ ಬರೆಯೋದು, ನನ್ನಲಿರುವ ಈ ಹಲವು ಪಾತ್ರಗಳು ಸೇರಿ ಲೇಖನ ಬರೆಸಿಬಿಡುತ್ತವೆ, ಅದಕ್ಕೆ ಓದುಗರಿಗೂ ಹಾಗೇ ಅನಿಸಬಹುದು.

shivu ಅವರಿಗೆ
ಸರ್ "ನನ್ನ ಬರೀ ಅಡುಗೆ ಮಾಡಲಿಕ್ಕೆ ಮದುವೆಯಾಗಿದ್ದೀರಿ" ಅಂತ ಹೇಳುತ್ತಿದ್ದಾರೋ ಏನೋ ನೋಡಿ :) ಒಬ್ಬಟ್ಟು ತಿಂದು ನಿಮ್ಮಿಬ್ಬರ ಪ್ರೀತಿ ದುಪ್ಪಟ್ಟು ಆಗಲಿ, "ಯಾಕೆ?" ಅನ್ನೋದು ತೆಗೆದುಕೊಂಡು ಏನಾಗಬೇಕಿದೆ, ಮದುವೆಯಾಗಿದೆ ಖುಷಿಯಾಗಿರಿ...
ಸರ್ ನಿಮ್ಮ ಕ್ಯಾಮರದಲ್ಲಿ ಫೋಟೊ ಕ್ಲಿಕ್ಕಿಸಿಕೊಳ್ಳಲು ಮದುವೆ ಆಗುತ್ತಾರೆ ಅಂತ ಗೊತ್ತಿಲ್ಲವೇ ನಿಮಗೆ!!!(ತರಲೇ ಉತ್ತರ)

ಮನಸು ಅವರಿಗೆ
ಮನಸ್ಸಿನಲ್ಲಿ ಮೂಡಿದ ಪ್ರಶ್ನೆ ಇದು, ಮನಸು ಅವರೇ ಸಹಜ ಅಂದ ಮೇಲೆ, ಮೆದುಳಿಗೆ ಜಾಸ್ತಿ ಯೋಚಿಸಬೇಡ ಅಂತ ಹೇಳಿಬಿಡುತ್ತೀನಿ ಬಿಡಿ :)
ಸಹಜ ಪ್ರಶ್ನೆ ಆದರೆ ಸರಳ ಉತ್ತರವಿಲ್ಲ.

To: veenz
Hummm... Asking question is fine, but answering is bit difficult :) so better to get convinced as soon as possible :)
... and... and... even if someone is able to convince, its not the correct answer, its the convincing answer... not the hundred percent agreeable answer... now it's too much confusing... :)

ಸವಿಗನಸು ಅವರಿಗೆ
ಮದುವೆ ಆದರೂ ನಿಮಗೆ ಉತ್ತರ ಸಿಕ್ಕಿಲ್ಲ ಅಂದರೆ ನನಗೆಲ್ಲಿ ಸಿಕ್ಕೀತು ಬಿಡಿ :) ಹಾಂ.. ಮದುವೆ ಒಂದು ಸವಿಗನಸು ಎಚ್ಚರಾಗೊವರೆಗೆ(ಅದೇ ಮದುವೆಯಾಗೋವರೆಗೆ) ಅಂದರೆ... ಕನಸುಗಳನ್ನು ಕಂಡಿದ್ದು ಸಾಕು ಎದ್ದೇಳಬೇಕು, ಅದಕ್ಕೆ ಮದುವೆ ಆಗಬೇಕು ಅಂತಲೂ ಹೇಳಬಹುದು!

ರವಿಸೂರ್ಯ ಅವರಿಗೆ
"ರವಿ","ಸೂರ್ಯ" ಅವರೇ ನೀವೇನಿದ್ದರೂ ಮನೆ ಬೆಳಗಲು "ಹಣತೆ" ಹಚ್ಚಲು ಹೆಣ್ಣು ಬೇಕು ಅಂತ ಅವ್ವ ಹೇಳುತ್ತಿರಬೇಕು, ಹೇಳಿದ್ದು ಕೇಳಿ ಸರ್ :)
'ಕಲ್ಯಾಣವಾದ ಕಲ್ಲೇಶಿ' ಕೂಡ ಅದನ್ನೇ ಹೇಳಿದ್ದು, ಆಗುವಾಗ ಅದು ವಿವಾಹ ಆಮೇಲೆ ವಿವಾದ, ಕಲಹ...

ರಾಜೀವ ಅವರಿಗೆ
ಮಿಲಿಯನ ಡಾಲರ ಕೊಟ್ಟರೆ ನಾನು ಉತ್ತರ ಹೇಳುತ್ತೇನೆ, ಕೊಟ್ಟು ನೋಡಿ!
ಸರ್ ಮದುವೆ ಮಿಲಿಯನ ಡಾಲರ ಲಾಟರಿ, ಅದೃಷ್ಟ ಇದ್ದರೆ ಮಿಲಿಯನ, ಇಲ್ಲದಿದ್ರೆ ಮನೆಯಲ್ಲಿ 'ಇಲಿ'ಯನ, ಹೊರಗೆ 'ಹುಲಿ'ಯನ್!!!
ಸರ್ ಇನ್ನೂ ಸ್ವಲ್ಪ ತಾಳಿ, ತಾಳಿ ಕಟ್ಟೊ ಮಹೂರ್ತ ಸಿಕ್ಕಿಲ್ಲ, ಯಾಕೆ ಅಂತ ಕೇಳ್ಬೇಡಿ ಪ್ಲೀಜ್ :)

Ajay ಅವರಿಗೆ
ನಿಮಗೂ ಗೌರಿ ಗಣೇಶ ಹಬ್ಬದ ಶುಭಾಷಯಗಳು...

ಗಿರಿ said...

ನಮಸ್ಕಾರ ಪ್ರಭುರಾಜ್,

ವಾವ್... ಕಲ್ಪನೆಯಲ್ಲೇ ಅರಮನೆಯ ಕಟ್ಟುವಿರಲ್ಲಾ?
ಮಹಾರಾಣಿಯವರನ್ನೂ, ಅವರ ತುಂಟತನವನ್ನೂ ಸಾಂದರ್ಭಿಕವಾಗಿ ಹೇಳಿ ಮನಸ ತಟ್ಟುತ್ತೀರಲ್ಲಾ...
ಬದುಕು ಜಟಕಾ ಬಂಡಿ... ಆದ್ರೆ ಪ್ರಶ್ನೆಗಳು ಮಾತ್ರ ಬಂಡಿಯ ಓಡಿಸುವಾತನದ್ದು...

ಗಹನವಾದ, ಉತ್ತರವಿಲ್ಲದ ಪ್ರಶ್ನೆಗಳನ್ನು ಸರಳವಾದ, ರಮ್ಯವಾದ(Romantic) ರೀತಿಯಲ್ಲಿ ಸೊಗಸಾಗಿ ಹೇಳುತ್ತೀರಲ್ಲ... ಬರಹ ಮುದ ನೀಡಿತು...

ಪ್ರೀತಿಯಿಂದ,
-ಗಿರಿ

Unknown said...

Hi Prabhu...

Superb imaginations... really cute one!!!

Keep going with some other interesting imaginations....

Shwetha

Roopa said...

ಪ್ರಭು
ತುಂಬಾ ಒಳ್ಳೇ ಪ್ರಶ್ನೆ ಉತ್ತರ
ಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ಪ್ರಶ್ನೆ ಇದು
ಮದುವೆ ಎಂಬೊದೊಂದು ನಾವೆ ನೇಯುವ ಬಲೆ ಇದ್ದ ಹಾಗೆ
ಪ್ರೀತಿಯ ರೇಷಿಮೆ,ಅಂಡರ್‌ಸ್ಟಾಂಡಿಂಗ್ ಎಂಬ ನೂಲಿನ ಜೊತೆ ಬಲೆ ನೇದರೆ ಬಲೆಗೆ ಸಿಕ್ಕಿ ಬೀಳುವುದರಲ್ಲೂ ಖುಷಿ ಇರುತ್ತದೆ. ಬಲೆಯಲ್ಲಿಯೇ ಸದಾ ಸೆರೆಯಾಗಿ ಇರುವ ಎನಿಸುತ್ತದೆ
ಆದರೆ ಅನುಮಾನದ , ಅಸಹನೆಗಳ ಜೊತೆಗೆ ನೇದರೆ ಬಲೆಯಿಂದ ಹೊರಗಡೆ ಬಂದರೆ ಸಾಕು ಎಂಬ ತವಕ ಮೂಡುತ್ತದೆ

Prabhuraj Moogi said...

ಗಿರಿ ಅವರಿಗೆ
ರಾಣಿಯಂಥಾ ಹೆಂಡತಿಗೆ ಅರಮನೆ ಕಟ್ಟಲೇಬೇಕಲ್ಲ :) ಅವಳು ಕೇಳುವುದೂ ಉತ್ತರವಿಲ್ಲದೇ ಪ್ರಶ್ನೆಗಳನ್ನೇ, ಕೊಡುವುದೂ ತರಲೆ ಉತ್ತರಗಳನ್ನೇ ಅದನ್ನೇ ಬರೆಯೋದು.

To: Shwetha
It's something like Imaginations Un-Limited Company! Keep visiting lot more fantasies are under production.

ರೂಪಾ ಅವರಿಗೆ
ಪ್ರೀತಿಯಿಂದ ನಾವೇ ನೇಯ್ದ ಬಲೆಯಲ್ಲಿ ಜೇಡನ ಹಾಗೆ ಜಿಗಿದಾಡಲು ಖುಷಿ, ಅನುಮಾನ ಅಸಹನೆ ಸೇರಿದರೆ ಬಲೆಯಲಿ ಭಂದಿಗಳು ಅನಿಸಿಬಿಡುತ್ತದೆ ನಿಜ... ಒಳ್ಳೆ ರೇಶಿಮೆ ನೂಲು ತೆಗೆದಿಟ್ಟಿದ್ದೇನೆ, ನನ್ನಾಕೆ ಬಂದರೆ ಬಲೆ ಜತೆಗೆ ಅವಳಿಗೊಂದು ಸೀರೆ ಕೂಡ ನೇಯ್ದರಾಯ್ತು ಅಂತ...

Unknown said...

Wow!!!! what a imagination anna.....wonderful.... As a reader starts reading he/she go into their dream world....Keep on giving us more 2 read.....
GOOD MORNING.HAVE A SWEET DAY

ALL THE BEST

shridhar said...

ಪ್ರಭು ,
ನೀವೇ ಹೇಳಿದಂತೆ , ಮದುವೆ ಅನ್ನುವುದು ಸಮಾಜದ ಒಂದು ಅಂಗ ..
ಇದು ಒಂದು ಸಂಪೂರ್ಣವಾಗಿ ಅರ್ಥೈಸಲಾಗದ ಪ್ರಶ್ನೆ ..
ನೂರು ಬಾರಿ ಕೇಳಿದರು ಬರುವುದು ಮೂರೇ ಅಕ್ಷರ " ಮದುವೆ "...

ಶ್ರೀಧರ ಭಟ್ಟ

Prabhuraj Moogi said...

To: Poornima
Hey, you also read it... sure sure.. I will keep writing... If my dreams come true then you can see some live incidents too in future!!! :) (once married)

shridhar ಅವರಿಗೆ
ಮದುವೆ ಸಮಾಜದ ಅಂಗ, ಸದೃಢ ಸಮಾಜದ ತಳಹದಿ...
ಮೂರೇ ಅಕ್ಷರವಾದರೂ ನೂರಾರು ಅರ್ಥಗಳು... ಹೇಗೆ ಅರ್ಥೈಸಬೇಕೆಂದು ಹೇಳಲಾಗದು.

ಬಾಲು said...

ಪ್ರಭುರಾಜರೆ,

ಮದುವೆ ಯಾಕೆ ಆಗಬೇಕು ಅ೦ದರೆ ಕೊಟಿ ಕೋಟಿ ಉತ್ತರಗಳು. ಆದರೆ ಅದೆಲ್ಲವು ಸತ್ಯವೇ ಅ೦ತ ನೊಡೊದಕ್ಕೆ ಮದುವೆ ಆಗಲೆಬೇಕು.

ಹೋಗಲಿ ಬಿಡಿ, ಎಲ್ಲರೂ ಮದುವೆ ಆಗಲೇ ಬೇಕು. ಯಾಕೆ೦ದರೆ ಜೀವನದಲ್ಲಿ ಸುಖವಾಗಿ ಇರುವುದೊ೦ದೆ ಉದ್ದೆಶವಲ್ಲ.

ಮದುವೆ ಎ೦ದರೆ: ಮನಸ್ಸು ದುಡುಕಿದ್ದಕ್ಕೆ ವೇದನೆ.!!! ಉತ್ತರ ಸಾಕಲ್ಲ?

ಜಲನಯನ said...

ಸೂರ್ಯನ ಕಿರಣ ತೂರೋ ಸೂಚನೆ ಮಟ್ಟಿಗೆ ರಾತ್ರಿಕಳೆದಿತ್ತು, ಬ್ಲಾಗುಗಳ ಬ್ಯಾಕ್ ಲಾಗು ಮುಗಿಸಿ ಇನ್ನೇನು ಹಡಪದ ಪೆಟ್ಟಿಗೆ (ನನ್ನ ಚಿಕ್ಕಮ್ಮ ಕರೆಯೋದು ನನ್ನ ಲ್ಯಾಪ್ ಟಾಪ್ ನೋಡಿ) ಕ್ಲೋಸ್ ಮಾದಬೇಕು ಅನ್ನೋವಾಗ ’ಅರೆ ನನ್ನಾk’ ನ ನೋಡಿ ಬಹಳ ದಿನಾ ಅಯ್ತು ಅಂತ ಪ್ರಭು ಬ್ಲಾಗ್ ಓಪನ್ ಮಾಡಿದ್ದೇ ಗ್ರಹಚಾರವೋ ಏನೋ...ರಂಜಾನ್ ಉಪವಾಸದ ಬೆಳ್ಳಂ-ಬೆಳಗಿನ ಫಲಾಹಾರ ಮುಗಿಸಿ ಬರದೇ ಇದ್ದ ಕೋಳೀ ನಿದ್ದೆನೂ ಮುಗಿಸಿ, ಎದ್ದವನೇ ತನಗೆ ಮತ್ತು ಇನ್ನೂ ನಿದ್ದೆಯಲ್ಲಿದ್ದ ತನ್ನ ಮಗಳಿಗೆ ಬೆಳಗಿನ breakfast ರೆಡಿಮಾಡುತ್ತಿದ್ದ ನನ್ನವಳ ಬಳಿ ಹೋಗಿ "ಲೇ ನಾವು ಯಾಕೆ ಮದುವೆ ಆಗಬೇಕು?" ನನ್ನನ್ನು ಕಾಡುತ್ತಿದ್ದ ಕೊಶ್ನೆ (ಪ್ರಶ್ನೆ ಮತ್ತು ಕೊಶ್ವನ್ ನ ಮಿಶ್ರತಳಿ ಪದ ನಮ್ಮ ಕಾಲೇಜ್ ದಿನಗಳದ್ದು) ಕೇಳೇಬಿಟ್ಟೆ...
ನನ್ನ ೨೦ ವರ್ಷದ ಮದುವೆ ಜೀವನದಲ್ಲಿ ಮೊದಲ ಬಾರಿಗೆ ಮೇಲಿಂದ ಕೆಳಗೆ ನೋಡಿ..."ರಾತ್ರಿಯೆಲ್ಲಾ ಹ.ಪೆ. ನೋಡ್ತಾ ಕೂತಿರ್ತೀರ..ಅದರ ಮೇಲೆ ನಿದ್ರೆ ಸರಿಯಾಗಿ ಮಾಡಲ್ಲ..ಉಪವಾಸ ಬೇರೆ..!! ಏನಾಗಿದೆ ನಿಮ್ಗೆ...?? ಈ ಬ್ಲಾಗ್-ಗೀಗ್ ನೋಡ್ಬ್ಯಾಡಿ ಅದ್ರ್ ಸಹವಾಸ ಬ್ಯಾಡ ಅಂತ ಗಿಣೀಗೆ ಹೇಳೋ ಹಾಗೆ ಹೇಳ್ದೆ ಈ ವಾಗ ನೋಡಿ..ಅದ್ಯಾವ್ದೋ ದೆವ್ವ ಮೆಟ್ಕಂಡೋರ್ ಥರ ೨೦ ವರ್ಷದ ನಂತರ ಈ ಪ್ರಶ್ನೆ ಕೇಳ್ತಿದ್ದೀರಾ...ಕನಸಲ್ಲೇನಾದರೂ ಸರ್ದಾರ್ಜಿ ಬಂದಿದ್ದನಾ ..???, ಹೋಗಿ, ಆಫೀಸಿಗೆ ಟೈಮಾಯ್ತು" ಅಂತ ಒಂದೇ ಉಸಿರಿಗೆ ದಬಾಯಿಸಿ ಬಚ್ಚಲು ಮನೆಕಡೆ ದೌಡಾಯಿಸೋ ಹಾಗೆ ಮಾಡಿಬಿಡೋದೆ ನನ್ನಾk.
ಇದು...ನನ್ನಾk ಬ್ಲಾಗ್ ನ ಪ್ರಭಾವ.....!!!
ನನ್ನ ವೈವಾಹಿಕ ಜೀವನದ ಸಿಲ್ವರ್ ಜ್ಯುಬಿಲಿಗೆ ಮುಂಚೆ ಏನದರೂ ಎಡವಟ್ಟು ಆದ್ರೆ....ಪ್ರಭು...ನಿಮ್ಮನ್ನ ನಿಮ್ಮಾk ನೂ ಸುಮ್ಮನೆ ಬಿಡೊಲ್ಲ...ನೆನೆಪಿರಲಿ...ಹಾಂ...

Ranjita said...

ತುಂಬಾ ಚಂದದ ಬರವಣಿಗೆ .. ಲಘು ಹಾಸ್ಯದ ಜೊತೆ ಕಠಿಣವಾದ ಪ್ರಶ್ನೆ ಕೂಡ ಇದೆ ... ತುಂಬಾ ಇಷ್ಟವಾಯ್ತು..keep up the good work ..good luck

Prabhuraj Moogi said...

ಬಾಲು ಅವರಿಗೆ
ಸರ್, ಸತ್ಯ ಶೊಧನೆಗೆ ಮದುವೆ ಆಗಲೇಬೇಕು ಬಿಡಿ ಆಗಲೇ ಗೊತ್ತಾಗೋದು. ಅಲ್ಲೀವರೆಗೆ, ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ!

ಸುಖನೊ ದುಖಃನೋ ಒಂದಾಗಿರುವುದಕ್ಕೇ ಮದುವೆ.

ಹೀಗೂ ಹೇಳಿದರೆ ಹೇಗೆ...ಮದುವೆ ಅಂದರೆ ಮನಸ್ಸು 'ದುಡುಕಿದವರಿಗೆ' ವೇದನೆ, ಅಂದರೆ ಹುಚ್ಚು ಪ್ರೀತಿ, ಪ್ರೇಮ ಅಂತ ಆಕರ್ಷಣೆಗೆ ದುಡುಕಿ ಮದುವೆಯಾದವರಿಗೆ ವೇದನೆಯೇ ಸರಿ.

ಜಲನಯನ ಅವರಿಗೆ
ಲ್ಯಾಪಟಾಪ್ ಹೆಸರು ಚೆನ್ನಾಗಿದೆ :)
ಹಹಹ... ಚೆನ್ನಾಗಿದೆ ನಿಮ್ಮ ಕಥೆ, ಅಲ್ಲಾ ಸರ್, ಅಪರಾತ್ರಿ ಈ ಪ್ರಶ್ನೆ ನನ್ನ ತಲೆ ತಿಂದರೆ... ಮುಂಜಾನೆ ಮುಂಜಾನೆ ನಿಮ್ಮನ್ನ ಬೆಂಬತ್ತಿದೆ ಅನ್ನಿ, ನಿಮ್ಮ ಬೇತಾಳನ ಕಥೆಗಳ ಹಾಗೆ. ಪ್ರಶ್ನೆಗೆ ಉತ್ತರ ಗೊತ್ತಿಲ್ಲದೆ ಇಪ್ಪತ್ತು ವರ್ಷ ಸಂಸಾರ ಸುಸೂತ್ರವಾಗಿ ನಡೆದಿದೆ ಅಂದರೆ, ಇನ್ನು ಉತ್ತರವ್ಯಾಕೆ ಬೇಕು ಹೇಳಿ...
ಸರ್ ಸಿಲ್ವರ ಜ್ಯುಬಿಲಿ ಏನು, ಗೊಲ್ಡನ ಜ್ಯುಬಲಿ ಆಚರಿಸಿ ಅಂತ ನಾನು ಹಾರೈಸ್ತೀನಿ, ಎಲ್ಲಾ ನನ್ನಾಕೆ ಕೆಲಸ, ಹೀಗೇ ಎನಾದ್ರೂ ಎಡವಟ್ಟು ಪ್ರಶ್ನೇ ಕೇಳ್ತಾ ಇರ್ತಾಳೆ.

Ranjita ಅವರಿಗೆ
ಕಠಿಣ ಪ್ರಶ್ನೆಗಳನ್ನು ಕೇಳುವ ತುಂಟಿ ನನ್ನಾಕೆ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು, ಹೀಗೆ ಬರ್ತಾ ಇರಿ.

ಜಲನಯನ said...

ತಮಾಶೆ ಗೆ ಬರೆದೆ, ಪ್ರಭು ನಿಮ್ಮಂತಹ ಎಷ್ಟೋ ಸ್ನೇಹಿತರ ಹಿತೈಷಿಗಳ ಹಾರೈಕೆಗಳು ನಮ್ಮ ಪಾರ್ಟ್ನರ್-ಶಿಪ್ ಕ್ವಾರ್ಟರ್ ಸೆಂಚುರಿ, ಫಾಫ್-ಸೆಂಚುರಿಗೆ ಸದಾ ಇರುತ್ವೆ ಅಂತ ಗೊತ್ತಿದೆ. ನಿಮ್ಮ ಲೇಖನದ ವಿಶ್ಲೇಷಣೆಗೆ ಹೋದರೆ ಬಹಳ ಗಹನ ವಿಷಯಗಳು ಹೊರಬರುತ್ತವೆ. ಸಂಸಾರದ ಬಂಡಿ ಸರಾಗವಾಗೇ ನಡೆಯುತ್ತೆ, ಎಲ್ಲವೂ ಸುಸೂತ್ರ..ಮನು-ಮನ ಎಂತಹ ವಿಚಲಿತ ಚಂಚಲಿತ ನೋಡಿ.. ಸ್ವಲ್ಪ ಎಲ್ಲೋ ಚೂರು ಕಷ್ಟ ಅಥವಾ ಮನಘಾಸಿ ಆದ್ರೆ ಮೂಲ ಪ್ರಶ್ನೆ ಕಾಡುತ್ತೆ. ಉದಾ ನಿಮ್ಮ ನಾನ್ಯಾಕೆ ಮದುವೆ ಆದೆ? ಆ ಕ್ಷಣ ಕಳೆದರೆ (ಕೆಲವೊಮ್ಮೆ ಆ ಕಷ್ಟ ಇನ್ನೂ ಇದ್ದರೂ) ಛೇ ಎಂಥ ಆಲೋಚನೆ ನನ್ನದು ಅನ್ನಿಸುತ್ತೆ..ಅಲ್ಲವೇ??. ನಿಮ್ಮ ಲೇಖನದ ವಿಷಯಗಳು (ಸಾಧಾರಣ ಆದರೂ ಬಹು ಮಹತ್ವೀ) ಮತ್ತು ಅವನ್ನು ಮಂಡಿಸುವ ವಿಧಾನ ನನ್ನ ಮೆಚ್ಚಿನ ಅಂಶಗಳು. ಮತ್ತೆ ಇನ್ನೋನೋ ಪ್ರಶ್ನೆ ತಂದುಬಿಡಬೇಡಿ..!!! ಹಹಹ

ಸಾಗರದಾಚೆಯ ಇಂಚರ said...

ಪ್ರಭುರಾಜ್,
ಮದುವೆಗಿಂತ ಮುಂಚೆನೇ ಹೆಂಡ್ತಿ ಜೊತೆ ಎಲ್ಲ ಸಂಭಾಷಣೆ ನು ಮುಗಿಸ್ಕೊತಿದಿರ,
ತುಂಬಾ ಒಳ್ಳೆಯ ಬರಹ, ಎಲ್ಲ ಹೆಂಡತಿಯರು ರಾತ್ರಿ ಎದ್ದು ಇದೆ ಪ್ರಶ್ನೆ ಕೇಳಿದ್ರೆ ಕಷ್ಟ ಸರ್

Prabhuraj Moogi said...

ಜಲನಯನ ಅವರಿಗೆ
ಹಾರೈಕೆಗಳು ನಿಜವಾಗುತ್ತವೆ. ಹೌದು ಸರ್ ಇದೊಂದು ಜಟಿಲ ಪ್ರಶ್ನೆ, ಉತ್ತರಗಳೊ ಹಲವು ಆದರೆ ಯಾವುದೂ ಪರಿಪೂರ್ಣ ಅನಿಸದು.
ಮದುವೆ ಯಾಕಾಗಬೇಕು ಅಂತ ಗೊತ್ತಾಗದೇ, ಮದುವೆ ಆದ ಮೇಲೆ ಕೆಲವೊಮ್ಮೆ ಮದುವೆ ಯಾಕಾದ್ರೂ ಆದೆನೊ ಅಂತ ಕೂಡ ಅನಿಸುತ್ತದೆ, ಅನಿಸಿದ ಮಾತ್ರಕ್ಕೆ ಎನೂ ಬದಲಿಸಲಾಗಲ್ಲ, ಏನೋ ಒಂದು ಸುಂದರ ಪಯಣ ಅಂತ ಬಂಡಿ ಮುಂದೆ ಸಾಗುತ್ತಲೇ ಇರಬೇಕು. ನಿಮ್ಮ ಮೆಚ್ಚುಗೆಯೇ ಮತ್ತೆ ಮತ್ತೆ ಬರೆಯಲು ಪ್ರೇರಣೆ.

ಸಾಗರದಾಚೆಯ ಇಂಚರ ಅವರಿಗೆ
ಮದುವೆಯಾದ ಮೇಲೂ ಮಾತುಗಳಿಗೆಗೇನೊ ಕೊರತೆಯಿಲ್ಲ, ಮಧ್ಯರಾತ್ರಿ ಇಂಥ ಪ್ರಶ್ನೆಗಳು ಬಂದರೆ ತೊಂದರೆ ನಿಜ, ಮಲಗಬೇಕೆನ್ನೊ ಮನಸಿಗೆ ಮುಖಕ್ಕೆ ನೀರೆರೆಚಿ ಎಬ್ಬಿಸಿದ ಹಾಗಾಗುತ್ತದೆ.

ರೂpaश्री said...

ನಿಮ್ಮ ಲೇಖನ ಓದಿ ಅದರಲ್ಲಿರುವ ಸರಸ, ಕೀಟಲೆ ಇತ್ಯಾದಿಗಳನ್ನು ಅನುಭವಿಸಲಾದರೂ ಮದುವೆ ಆಗಲೇಬೇಕು ಅಂತ ಈಗಾಗ್ಲೆ ನಿಮ್ಮ ವಿವಾಹೇತರ ಓದುಗರಿಗೆ ಅನಿಸಿರಬೇಕು..!!

ನಿಮ್ಮ ಬರವಣಿಗೆ ಮುದ ಕೊಡುತ್ತದೆ:) ಪ್ರತಿಯೊಂದು ಪ್ರಶ್ನೆಯನ್ನು, ನೀವು ಮತ್ತು ನಿಮ್ಮಾKಯ ಸುತ್ತಾ ಸುಂದರವಾಗಿ ಹೆಣೆದು ಹೇಳುವ ಶೈಲಿ ಚೆನ್ನಾಗಿದೆ.

Prabhuraj Moogi said...

ರೂpaश्री ಅವರಿಗೆ
ಹೌದು ಹಾಗೆ ಅನಿಸಿದೆ ಕೆಲವರಿಗೆ, ಮೇಲ ಮಾಡಿದ ಕೆಲವರು ಹಾಗೆ ಹೇಳಿಕೊಂಡಿದ್ದಾರೆ. ನನಗೆ ಬಹಳ ಖುಶಿಯಾಗಿದ್ದೆಂದರೆ, ಒಬ್ರು ಹೇಳಿದ್ರು ದಿನಾ ನನ್ನ ಗಂಡನ ಜತೆ ಜಗಳಾಡ್ತಾ ಇದ್ದೆ, ಈಗೀಗ ಬಹಳ ಕಮ್ಮಿ ಆಗಿದೆ, ನಿಮ್ಮ ಲೇಖನಗಳ ಓದಿ ನಮ್ಮವರ ಬಗ್ಗೆ ನನಗೆ ಪ್ರೀತಿ ಜಾಸ್ತಿ ಆಗಿದೆ, ಅವರನ್ನ ಅರ್ಥ ಮಾಡ್ಕೊತಾ ಇದೀನಿ ಅಂತ... ಬರೆದದ್ದಕ್ಕೆ ತೃಪ್ತಿಯಾಯ್ತು.
ಏನೊ ಕಲ್ಪನೆಗಳು ಕಟ್ಟಿ ಬರೆದು ಹಾಕುತ್ತೇನೆ, ಹೀಗೆ ಬರುತ್ತಿರಿ.

Unknown said...

hi ಪ್ರಭು
ನಿಮ್ಮ ಲೇಖನ ಚೆನ್ನಾಗಿ ಮುಡಿ ಬರ್ತಾ ಇದೆ ಓದಿ ತುಂಬಾನೇ ಆನಂದ ಆಗತ್ತೆ.
ತುಂಬಾ ತುಂಬಾ ಥ್ಯಾಂಕ್ಸ್
ಸಂದೀಪ್ ಪಾಟೀಲ್ ಪುಣೆ.

Prabhuraj Moogi said...

sandeep ಅವರಿಗೆ
ತುಂಬಾ ಥ್ಯಾಂಕ್ಸ ಸಂದೀಪ್, ಏನೇನೊ ಗೀಚುತ್ತಾ ಇರ್ತೀನಿ, ನೀವೆಲ್ಲ ಇಷ್ಟಪಟ್ಟು ಓದ್ತೀರಿ, ಅದೇ ನನಗೆ ಖುಷಿ ಆಗುತ್ತದೆ. ಹೀಗೇ ಓದುತ್ತಿರಿ.

niharika said...

ಮದುವೆ ಅನ್ನೋದು ನೋಡುವ ಭಾವಕ್ಕಿಂತ ನಮ್ಮ ಜೀವನ ಹೇಗಿದೆ ಅನ್ನೋದರ ಮೇಲೆ ಅವಲಂಬಿಸಿರುತ್ತೆ, ಕೆಲವೊಮ್ಮೆ ಏನನ್ನು ಬದಲಾಯಿಸೋಕೆ ಆಗೋಲ್ಲ, ಕೇವಲ nammnne paristitige takkante ಬದಲಾಯಿಸಿಕೊಳ್ಳಬೇಕು ಅಸ್ಟೆ nemmadiyinda ಬದುಕೋಕೆ

Anonymous said...

ashwini


nimm baravanige mana muttuvantidhe
nanu adhe yochane madtidini chikk age inda study madtidivi yak madtidive gottila ade reti colleage day nali love madtivi love yak madtivi gottila after 20 maduve madtare yak maduve agbheku gottila amele maklu awarn yak sakbheku gottila eghe estu gottildhe navuella adhe madtidivi agadre evella gottila antalla gottidru obrinda obrige adra arta bhavane abhipraya bhere bhere eruthe elrigu onede reason erala it is fact personal difference..alwa..nanu ega maduve ago stage nimm e lekhana nangu anistide yak maduve agbheku.....