Sunday, August 2, 2009

ಸ್ನೇಹ ಸಂದೇಶ...

ರಾತ್ರಿ ಎಷ್ಟೊತ್ತೊ ಏನೊ, ಕುಟು ಕುಟು ಅಂತ ಸದ್ದು ಕೇಳ್ತಾ ಇತ್ತು, ಮುಂಜಾನೆಯಿಂದ ಸಂಜೆವರೆಗೆ ಕೀಬೋರ್ಡ ಕುಟ್ಟಿ ಕುಟ್ಟಿ ಅದೇ ಸದ್ದು ಕಿವಿಯಲ್ಲಿ ಗುಂಯ್‍ಗುಡುತ್ತಿದೆಯೇನೊ ಅಂತ ಕಿವಿಯಲ್ಲಿ ಕಿರುಬೆರಳು ತೂರಿಸಿ ಕಟ್ಟಾಡಿಸಿಕೊಂಡೆ, ಕಿವಿಯಿನ್ನೂ ಚುರುಕಾಗಿ ಸದ್ದು ಜಾಸ್ತಿಯಾಯ್ತು. ಕಣ್ಣು ತೀಡುತ್ತ ಎದ್ದು ಸಮಯನಾದ್ರೂ ಎಷ್ಟು ನೋಡೊಣ ಅಂದ್ರೆ, ವಾಣಿನೂ (ಮೊಬೈಲೂ) ಕೈಗೆ ಸಿಗಲಿಲ್ಲ, ಅಲ್ಲೆ ಪಕ್ಕದಲ್ಲೇ ಬಿದ್ಕೊಂಡು ಕಣ್ಣುಹೊಡೀತಾ ಇರ್ತಿದ್ಲು (ಪಿಳಿ ಪಿಳಿ ಅನ್ನುವ ಮೊಬೈಲಿನ ಎಲ್.ಈ.ಡಿ ಲೈಟು ಇರುತ್ತಲ್ಲ). ಎಲ್ಲಿ ಕಾಣೆಯಾದ್ಲು ಅಂತ ಹುಡುಕಿದೆ, ಸಿಗಲಿಲ್ಲ, ಈ ಪಕ್ಕ ನನ್ನಾಕೆ ಮುಖ ಕಾಣದಂತೆ ಸೆರಗು ಹೊದ್ದಿರುವ ನವವಧುವಿನಂತೆ, ಮುಸುಕು ಹಾಕಿಕೊಂಡು ಮಲಗಿದ್ಲು, ಅವಳನಾದ್ರೂ ಎಬ್ಬಿಸಿ ಕೇಳೊಣ ಅಂತ ಅಲುಗಿಸಿದರೆ, "ಹೂಂ..." ಅಂದ್ಲು, ಅರೆ! ಇನ್ನೂ ಎಚ್ಚರವಾಗೇ ಇರೊ ಹಾಗೆ ಇದೆ ಅಂತ ಮುಸುಕೆಳೆದರೆ, "ರಾತ್ರಿ ಹನ್ನೆರಡಕ್ಕೆ ಏನ್ರೀ ನಿಮ್ದು" ಅಂತೆದ್ದಳು, ನನ್ನೆಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ತು, ನನ್ನಾಕೆ ಜತೆ, ವಾಣಿ ಕೂಡ ಅಲ್ಲೇ ಇದ್ಲು, ಸದ್ದು ಕೂಡ ಅಲ್ಲಿಂದಲೇ ಬರುತ್ತಿತ್ತು, ಸಮಯ ಹನ್ನೆರಡಾಗಿತ್ತು.

"ಅದನ್ನೇ ಈಗ ನಾನು ಕೇಳಬೇಕು, ರಾತ್ರಿ ಹನ್ನೆರಡಕ್ಕೆ ಏನೇ ನಿಂದು, ಮೊಬೈಲನಲ್ಲಿ ಏನು ನೋಡ್ತಾ ಇದೀಯಾ, ಯಾರಾದ್ರೂ ಹುಡುಗಿಯರ ಎಸಎಂಎಸ್ ಸಿಗುತ್ತಾ ಅಂತ ಹುಡುಕ್ತಾ ಇದೀಯ, ಯಾರೂ ಇಲ್ಲ ಅನ್ನೊದಷ್ಟೇ ಅಲ್ಲ, ಕಳಿಸಿದ್ರೂ ಡಿಲೀಟಂತೂ ಮಾಡಿರ್ತೀನಿ, ನಿನಗೇನೂ ಸಿಗಲ್ಲ ಅಲ್ಲಿ" ಅಂತಂದೆ. "ಅದನ್ನ ಕಟ್ಕೊಂಡು ನನಗೇನು ಆಗ್ಬೇಕು, ಯಾವೊದೋ ಕಸ್ಟಮರ ಕೇರ್ ಹುಡುಗಿ ಕಾಲ್ ಬಂದಿದ್ರೂ ಕುಣಿದಾಡಿಬಿಡ್ತೀರ ಇನ್ನು ಹುಡುಗಿಯಿಂದ ಸ್ಪೇಷಲ್ ಎಸಎಂಎಸ್ ಎಲ್ಲಾ ಬಂದ್ರೆ ನಂಗೆ ಗೊತ್ತಾಗದೇ ಇರ್ತಾದಾ, ಮುಖದಲ್ಲೇ ಗೊತ್ತಾಗಿಬಿಡ್ತದೆ ನಂಗೆ.... ಮತ್ತೇನಿಲ್ಲ ನಾನು ಸ್ವಲ್ಪ ಎಸಎಂಎಸ್ ಕಳಿಸ್ತಾ ಇದ್ದೆ, ಸುಮ್ನೆ ಮಲ್ಕೊಳ್ಳಿ, ನಿಮಗೆ ಎಚ್ಚರಾಗಬಾರದು ಅಂತಾನೇ ಮುಸುಕು ಹಾಕಿಕೊಂಡಿದ್ದೆ" ಅಂದ್ಲು, ಅಲ್ಲಾ ನನ್ನ ಏನ್ ಚೆನ್ನಾಗಿ ಅರ್ಥ ಮಾಡಿಕೊಂಡಿದಾಳೆ ಇವ್ಳು ಅಂತೀನಿ, ಇನ್ನು ಮೇಲೆ ಯಾವ ಫೋನು ಬಂದ್ರೂ ಏನೂ ಮುಖದಲ್ಲಿ ತೋರಿಸಿಕೊಳ್ಳಬಾರದು ಅನ್ಕೊಂಡು, "ಅದ್ಯಾರಿಗೆ ಅದೂ ಇಷ್ಟೊತ್ತನಲ್ಲಿ" ಅಂತ ರಾಗ ಎಳೆದೆ. ದುರುಗುಟ್ಟಿ ನೋಡಿದ್ಲು, ಏನೋ ಕೇಳಬಾರದ್ದು ಕೇಳಿದಂತೆ. ಹೇಳದಿದ್ರೆ ಬಿಡು ಅಂತ, ಅವಳೆಡೆಗೆ ಬೆನ್ನು ಮಾಡಿ ಮಲಗಿದೆ. ನಿಧಾನವಾಗಿ, ಪಕ್ಕಕ್ಕೆ ಒರಗಿದ್ದ ಕೈತೋಳಿನ ಮೇಲೆ ಕತ್ತು ಇಟ್ಟು ಕೇಳಿದ್ಲು "ಎನ್ ಸಿಟ್ಟು ಬಂತಾ" ಅಂತ "ಇಲ್ಲಾ ಆನಂದ ಉಕ್ಕಿ ಬರ್ತಿದೆ" ಅಂದೆ, "ಅಯ್ಯೊ ಆನಂದನನ್ನೇ ಮರ್ತಿದ್ದೆ" ಅಂತನ್ನುತ್ತ ಇನ್ನೊಂದೇನೊ ಕುಟ್ಟಿ, ಕಳಿಸಿ ಮತ್ತೆ ಮರಳಿ, "ರೀ, ಯಾಕೆ ಬೇಜಾರು, ಫ್ರೆಂಡಶಿಪ್ ಡೇ ಅಲ್ವಾ ಮೆಸೇಜು ಕಳಿಸ್ತಾ ಇದ್ದೆ" ಅಂದ್ಲು. "ರಾತ್ರಿ ಹನ್ನೆರಡಕ್ಕೆ" ಅಂದೆ "ಮತ್ತೆ ನಾನೇ ಫಸ್ಟ್ ಎಲ್ರಿಗೂ ವಿಷ್ ಮಾಡಿದ್ದು ಗೊತ್ತಾ" ಅಂತ ಹೆಮ್ಮೆಯಿಂದ ನುಡಿದಳು. "ನಿಮ್ಮಿಂದಾಗೇ ಈ ಹೊಸಾ ವರ್ಷದ ರಾತ್ರಿ ಎಲ್ಲ ಫೋನು ನೆಟವರ್ಕ ಜಾಮ್ ಆಗೋದು" ಅಂದೆ. "ನೆಟವರ್ಕ ಜಾಮ್ ಆಗತ್ತೆ ಅಂತ ಮೆಸೆಜೇ ಕಳಿಸಬಾರದಾ" ಅಂದ್ಲು. "ಎಷ್ಟು ಕಳಿಸಿದೆ" ಅಂದೆ "ಜಾಸ್ತಿ ಏನಿಲ್ಲ ಒಂದಿಪ್ಪತ್ತು ಇರಬೇಕು" ಅಂತ ಮೊಬೈಲು ಆಕಡೆ ಇಟ್ಟಳು, "ನಿನ್ನ ಮೊಬೈಲ್ನಲ್ಲೇ ಕಳಿಸೊದು ತಾನೆ" ಅಂದೆ. "ರೀ ನಿಮ್ಮ ಮೊಬೈಲ್ನಲ್ಲಿ ಮೆಸೇಜು ಫ್ರೀ ಅದಕ್ಕೆ ಕಳಿಸಿದೆ" ಅಂದ್ಲು. "ಮೆಸೇಜು ಫ್ರೀ ಇಲ್ದೇ ಇದ್ರೆ?" ಅಂತ ಕೆದಕಿದೆ, "ನಾನೇನು ನಿಮ್ಮ ದುಡ್ಡು ಹಾಳು ಮಾಡಲ್ಲ ಬಿಡಿ, ಹಾಗಿದ್ರೆ ನಾಲ್ಕು ಕ್ಲೋಜ್ ಫ್ರೆಂಡ್ಸಗೆ ಮಾತ್ರ ಕಳಿಸ್ತಾ ಇದ್ದೆ" ಅಂತ ರೇಜಿಗೆದ್ದಳು. "ಪ್ರಶ್ನೇ ದುಡ್ಡಿನದಲ್ಲ, ಈಗ ನೀನು ಕಳಿಸಿದ ಮೆಸ್ಸೆಜಿನಲ್ಲಿ ನಾಲ್ಕು ಜನ ಮಾತ್ರ ಕ್ಲೋಜ್ ಫ್ರೆಂಡ್ಸ್, ಉಳಿದವರು ಹಾಗೆ ಸುಮ್ನೇ" ಅಂದೆ. "ಹಾಗೇನಿಲ್ಲ ಅವರೂ ಫ್ರೆಂಡ್ಸ, ಆದ್ರೆ ಅಷ್ಟು ಕ್ಲೋಜ ಅಲ್ಲ" ಅಂತಂದಳು "ಹೋಗ್ಲಿ ಆ ನಾಲ್ಕು ಜನರಲ್ಲಿ ಎಷ್ಟು ಜನರೊಂದಿಗೆ ಆಗಾಗ ಮಾತಾಡ್ತಾ ಇರ್ತೀಯಾ" ಅಂತ ಮತ್ತೆ ತನಿಖೆಗಿಳಿದೆ "ರೀ, ಎನ್ ಪೋಲಿಸ ವಿಚಾರಣೆ ಮಾಡಿದ ಹಾಗೆ ಮಾಡ್ತಾ ಇದೀರ" ಅಂತ ತಿರುಗಿ ಬಿದ್ದಳು, "ಈಗ ಹೇಳ್ತೀಯ ಇಲ್ವಾ" ಅಂದೆ, "ಇಬ್ರು" ಅಂತ ಹುಬ್ಬು ಗಂಟಿಕ್ಕಿದಳು. "ಹಾಗಾದ್ರೆ ಇಷ್ಟೊತ್ತು
ಮೆಸೇಜ ಕಳಿಸಿದ್ದರಲ್ಲಿ, ಎರಡು ಮಾತ್ರ ಇಷ್ಟದಿಂದ ಕಳಿಸಿದ್ದು, ಉಳಿದದ್ದು ಎನೋ ಕಳಿಸಬೇಕಲ್ಲ ಅಂತ ಕಳಿಸಿದ್ದು" ಅಂದೆ. ಅವಳು ಮರು ಮಾತಾಡಲಿಲ್ಲ, ಏನೊ ಮನಸಿನಲ್ಲಿ ತಾಕಲಾಟ ನಡೆದಿತ್ತು.

ಬಹಳ ಹೊತ್ತು ಹಾಗೆ ಕೂತಿದ್ದಳು, ಇರಲಿ ಮಲಗು ನಾಳೆ ನೋಡೋಣ ಅಂತ ಉರುಳಿದರೆ, ಬೆನ್ನ ಮೇಲೊಂದು ಗುದ್ದಿ "ರೀ ಏಳ್ರೀ ಮೇಲೆ, ಇಷ್ಟೊತ್ತು ಏನೇನೊ ಹೇಳಿ, ತಲೆ ಕೆಡಿಸಿ ನಿದ್ದೆ ಹಾಳು ಮಾಡಿ, ನೀವ ಹಾಯಾಗಿ ನಿದ್ದೆ ಮಾಡಬೇಕು ಅಂತೀದೀರ" ಅಂದ್ಲು. ಅವಳ ಏಟಿಗೆ, ಇರೊ ಬರೊ ನಿದ್ರೆ ಎಲ್ಲ ಹಾರಿ ಹೋಗಿ ಕಣ್ಣು ನಿಚ್ಚಳಾದವು. "ನೀವು ಯಾರಿಗೂ ವಿಷ್ ಮಾಡಲ್ವೇ" ಅಂತ ಅಪರಾಧಿ ಜಡ್ಜನನ್ನು ತರಾಟೆಗೆ ತೆಗೆದುಕೊಂಡಂತೆ ಕೇಳಿದ್ಲು. "ಮಾಡ್ತೀನಲ್ಲ, ಹ್ಯಾಪಿ... ಫ್ರೆಂಡಶಿಪ್ ಡೇ...." ಅಂತ ಮಧ್ಯರಾತ್ರಿ ನರಿ ನಾಯಿ ಊಳಿಟ್ಟಂಗೆ ಉಸುರಿದೆ. "ರೀ ನೀವೇನ ಆಕಾಶವಾಣಿ ಧಾರವಾಡಾನಾ ಇಲ್ಲಿ ಕೂತು ಹೇಳಿದ್ರೆ ಊರೆಲ್ಲ ಕೇಳೋಕೆ, ದೊಡ್ಡ ಕಂಜ್ಯೂಸ ಕಣ್ರೀ ನೀವು, ಮೆಸೇಜ ಮಾಡೋಕೆ ಆಗಲ್ವಾ." ಅಂತ ಬಯ್ದಳು. "ಮೆಸೇಜೇನು ಕರೆ ಮಾಡಿ ಮಾತಾಡ್ತೀನಿ, ಆದ್ರೆ ಸುಮ್ನೇ ಹತ್ತು ಜನರಿಗೆ ಎಸಎಂಎಸ್ ಕಳಿಸಲ್ಲ, ನಾನೀಗ ವಿಷ್ ಮಾಡಿದ್ದು ನಿನಗೆ" ಅಂದೆ. "ಏನ್ರೀ ನಾನು ಫ್ರೆಂಡಾ, ನಾನು ನಿಮ್ಮ ಹೆಂಡತಿ, ಯಾಕೇ ತಾಳಿ ಕಟ್ಟಿದ್ದು ಮರೆತುಹೋಯ್ತಾ" ಅಂತಂದಳು. "ತಾಳಿ ಕಟ್ಟಿದಾಕ್ಷಣ, ಹೆಂಡ್ತಿ ಅಂದ್ರೆ ಫ್ರೆಂಡ ಆಗಿರಬಾರದಾ, ಪ್ರಾಣಸಖಿ ಅಂತ ಹೆಂಡ್ತಿ ಯಾಕೆ ಆಗಬಾರದು, ಫ್ರೆಂಡ ಇಸ್ ಸೆಕೆಂಡ ವೈಫ್ ಅಂತಾರೆ, ಅಂದ್ರೆ ಸ್ನೇಹಿತ ಎರಡನೇ ಹೆಂಡ್ತಿ ಇದ್ದಂತೆ" ಅಂದ್ರೆ "ನಂಗೂ ಇಂಗ್ಲೀಷ ಬರತ್ತೆ ಕನ್ನಡಾನುವಾದ ಎನ್ ಬೇಕಿಲ್ಲ ಗೊತ್ತು ಗೊತ್ತು" ಅಂತ ಮುನಿಸಿಕೊಂಡ್ಲು. "ಗೊತ್ತಿದ್ದ ಮೇಲೆ ಹೆಂಡತಿಯೇ ಸ್ನೇಹಿತೆ ಯಾಕೆ ಆಗಬಾರದು"... ನಿಶಬ್ದ ಸ್ವಲ್ಪ ಹೊತ್ತು...

"ಆಗಬಹುದು" ಅಂತನ್ನುತ್ತ ಹಾಗೇ ಕಾಲ ಮೇಲೆ ತಲೆಯಿರಿಸಿದಳು, ಆ ತಲೆ ನೇವರಿಸುತ್ತ "ಆಗಬಹುದು, ಅಲ್ಲ ನೀನು ಆಗಿದ್ದೀಯಾ, ಒಬ್ಬ ಸ್ನೇಹಿತ ಅಥವಾ ಸ್ನೇಹಿತೆಯ ಹತ್ತಿರ ಎನೂ ಮುಚ್ಚು ಮರೆಯಿಲ್ಲದೇ ಹಾಗೆ ಹೇಳಿಕೊಳ್ಳೊದು ಅಂತಿದ್ದರೆ ಅದು ನಿನ್ನೊಂದಿಗೆ ಮಾತ್ರ, ಬರೀ ನನ್ನ ಜೀವನ ಸಂಗಾತಿ ಅಲ್ಲ, ಜೀವದ ಗೆಳತಿ ಕೂಡ ಆಗೀದೀಯ" ಅಂತಿದ್ದರೆ, "ರೀ ಡೈಲಾಗು ಹೊಡೆದದ್ದು ಸಾಕು" ಅಂತ ತರಲೆಗಿಳಿದಳು "ಇದೇ... ಇದೇ ತುಂಟೀನೇ ನನ್ನ ಫ್ರೆಂಡ್" ಅಂದೆ. "ಅದಿರಲಿ, ಈಗ ನೀವು ಯಾರಿಗೂ ಶುಭಾಷಯ ಹೇಳಲ್ಲ ಹಾಗಿದ್ರೆ?" ಮತ್ತೆ ವಿಷಯಕ್ಕೆ ಮರಳಿದಳು "ಹೇಳಿದೆನಲ್ಲ ನಿಂಗೆ" ಅಂದೆ, ಮುಂದೆ ಹೇಳು ಅನ್ನುವಂತೆ ಓರೆ ನೋಟದಲ್ಲಿ ನೋಡಿದ್ಲು, "ಹೇಳ್ತೀನಿ ಇಲ್ಲ ಅಂತ ಅಲ್ಲ, ಈ ದಿನ ಶುಭಾಷಯ ಹೇಳೊದು ಗೆಳೆಯರೊಂದಿಗೆ ಮಾತಾಡಲು ಒಂದು ನೆಪಮಾತ್ರ ನನಗೆ, ನಾನು ಶುಭಾಷಯ ಹೇಳಲಿ ಬಿಡಲಿ ಅವರು ಗೆಳೆಯರಾಗೆ ಇರ್ತಾರೆ. ಹಾಗೇ ಕೆಲವು ಗೆಳೆಯರಿಗೆ ಖುದ್ದು ನಾನೇ ಏನೊ ಬರೆದು ಮೇಲ್ ಕಳಿಸ್ತೀನಿ, ವೈಯಕ್ತಿಕವಾಗಿ ಫೋನು ಮಾಡಿ ಮಾತಾಡ್ತೀನಿ, ಅದು ನನ್ನ ಶುಭಾಷಯ,
ಯಾರೋ ಕಳಿಸಿದ ಮೆಸೇಜ ಇಪ್ಪತ್ತು ಮಂದಿಗೆ ಕಳಿಸಿ, ಫ್ರೆಂಡಶಿಪ ಡೇ ಆಯ್ತು ಅಂತ ಕೈತೊಳೆದುಕೊಂಡ್ರೆ, ಅಂಥ ಗೆಳೆಯರು ಮತ್ತೆ ಮುಂದಿನ ಫ್ರೆಂಡಶಿಪ ಡೇಗೆ ಮಾತ್ರ ನೆನಪಾಗುತ್ತಾರೆ." ಅಂದೆ. ಸುಮ್ಮನೇ ಕೇಳುತ್ತಿದ್ದವಳು. "ನಿಮ್ಮ ಭಾಷಣ ಮುಗೀತಾ" ಅಂತ ಆಕಳಿಸಿದ್ಲು, "ಕೇಳೊವರೆಗೆ ಕೇಳಿ ಈಗ ಭಾಷಣ ಅಂತೀಯ" ಕೆನ್ನೆ ಹಿಡಿದೆಳೆದೆ, "ರೀ, ನಿಮ್ಮ ಕ್ಲೋಜ ಫ್ರೆಂಡ್ಗೆ, ಫ್ರೆಂಡಶಿಪ್ ಡೇ ಗಿಫ್ಟ ಇದನ್ನಾ ಕೊಡೊದು" ಅಂತಂದಿದ್ದಕ್ಕೆ, ಕೆನ್ನೆಗೆ... ... ... "ಸರಿಹೊತ್ತಾಯ್ತು ಮಲಗಬೇಕು ಬಿಡ್ರೀ" ಅಂತ ಚೀರುತ್ತಿದ್ಲು...

ಯೋಚಿಸಿ ನೋಡಿ, ನಿಜವಾಗ್ಲೂ ಈ ಗೆಳೆತನಕ್ಕೆ ಆ ಎಸಎಂಸ್ಸು, ಕಾರ್ಡು, ಮೇಲ್ ಬೇಕಾ, ಅದಿಲ್ಲದಿದ್ದಾಗ ಗೆಳೆತನವೇ ಇರಲಿಲ್ವಾ, ಹೋಗ್ಲಿ ಶುಭಾಷಯ ಹೇಳಲೇ ಬೇಕಿದ್ದರೆ ನನಗೆ ಬಂದ ಮೆಸೇಜು ಹತ್ತಿಪ್ಪತ್ತು ಜನರಿಗೆ ಕಳಿಸಿಬಿಟ್ರೆ ಆಯ್ತಾ, ಇಲ್ಲ ಯಾರೊ ಫಾರವರ್ಡ ಮಾಡಿದ ಈ-ಮೇಲನಲ್ಲೇ ಹೆಸರು ಬದಲಿಸಿ, ಹತ್ತು ಜನರಿಗೆ ಸಿಸಿ(ಕಾರ್ಬನ್ ಕಾಪಿ, ಬಹಳ ಜನರಿಗೆ ಈ-ಮೇಲ ಕಳಿಸುವ ವಿಧಾನ) ಮಾಡಿ ಕಳಿಸಿದ್ರೆ ಶುಭಾಷಯ ಹೇಳಿದ ಹಾಗೆ ಆಯ್ತಾ, ಬಿಸಿಸಿ(ಬ್ಲೈಂಡ ಕಾರ್ಬನ್ ಕಾಪಿ, ಬಹಳ ಜನರಿಗೆ ಒಬ್ಬರಿಗೆ ಕಳಿಸಿದ್ದು ಇನ್ನೊಬ್ಬರಿಗೆ ಕಾಣದ ಹಾಗೆ ಈ-ಮೇಲ್ ಕಳಿಸುವ ವಿಧಾನ) ಮಾಡಿದ್ರು ಎಷ್ಟು ಜನರಿಗೆ ಕಳಿಸಿದ್ದು ಗೊತ್ತಾಗಲ್ಲವಾದರೂ ನನಗೆ ವೈಯಕ್ತಿಕವಾಗಿ ಕಳಿಸಿದ್ದು ಅಲ್ಲ ಅಂತನಾದ್ರೂ ಗೊತ್ತಾಗಿಬಿಡುತ್ತದೆ, ಹೀಗೆ ಹತ್ತು ಜನರಲ್ಲಿ ಒಬ್ಬರೆಂದಾದಾಗ ಅದು ಶುಭಾಷಯವೆಂದು, ನನಗೆ ಬಂದದ್ದು, ನನ್ನ ಗೆಳೆಯ ಕಳಿಸಿದ್ದು ಅಂತನಾದ್ರೂ ಅನಿಸೋದು ಹೇಗೆ. ಇಂಥ ಶುಭಾಷಯ ನಿಜಕ್ಕೂ ಬೇಕಾ, ನನಗೆ ಗೊತ್ತಿಲ್ಲ. ಆದರೆ ಹಾಗೆ ಮಾಡುವುದು ನನಗೆ ಇಷ್ಟವಿಲ್ಲ, ಅಷ್ಟೇ.

ಮುಂಜಾನೆ ಏಳಕ್ಕೆ ವಾಣಿ(ಮೊಬೈಲು) ಕಿರುಚುತ್ತಿದ್ಲು, ರಾತ್ರಿ ಇಪ್ಪತ್ತು ಮೆಸೇಜ ಕಳಿಸಿದ್ದಳಲ್ಲ, ಅದಕ್ಕೆ ಗೆಳೆಯರು ಅವರಿಗೂ ಗೆಳೆತನ ನೆನಪಾಗಿ ಎದ್ದು ತಮಗೆ ಯಾರೊ ಕಳಿಸಿದ ಮೆಸೇಜು ಫಾರವರ್ಡ ಮಾಡುತ್ತಿದ್ದರು, ಕೈಗೆತ್ತಿಕೊಂಡು ಸುಮ್ನಿರು ಅಂತ ಸುಮ್ಮನಾಗಿಸಿ, "ನಿನ್ನ ಗೆಳೆಯರು ಗೆಳತಿಯರು ಶುಭಾಷಯ ತಿಳಿಸ್ತಾ ಇದಾರೆ ನೋಡು, ಮೆಸೆಜ ಬಾಕ್ಸ್ ತುಂಬಿದೆ" ಅಂದೆ. "ನೀವೇ ನೋಡಿ ಡಿಲೀಟ್ ಮಾಡ್ರೀ, ಎನಾದ್ರೂ ವಿಶೇಷ ಇದ್ರೆ ಓದಿ ಹೇಳಿ" ಅಂದ್ಲು. ಒಂದೊಂದಾಗಿ ಡಿಲೀಟ ಮಾಡತೊಡಗಿದೆ, ಇವಳು ಕಳಿಸಿದ ಮೆಸೇಜುಗಳೂ ಹೀಗೆ ಎಲ್ಲೋ ಡಿಲೀಟ ಆಗಿ ಹೋಗುತ್ತಿರಬೇಕು ಅಂತಂದುಕೊಳ್ಳುತ್ತ... ಮತ್ತೆ ಸಿಗೋಣ ಹೀಗೆ ಏನೊ ಮೆಸೇಜು ಕಳಿಸುತ್ತ...



ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.

ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

PDF format www.telprabhu.com/sneha.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದು

23 comments:

ಬಾಲು said...

Yes, i totally agree with u.
ತುಂಬಾ ಕ್ಲೋಸ್ ಫ್ರೆಂಡ್ ಗಳ ಜೊತೆ ನಾನು ಯಾವಾಗಲು ಸಂಪರ್ಕ ದಲ್ಲಿ ಇರ್ತಿನಿ. ವರ್ಷಕ್ಕೊಂದು ಸಲ ನೆನಪ್ ಮಾಡಿಕೊಳ್ಳೋ ತರ ಇದ್ದಾರೆ ಅದು ಸ್ನೇಹ ಹೇಗೆ ಆಗುತ್ತೆ? ಸುಮ್ನೆ ಕಲಿಸಬೇಕಲ್ಲ ಅಂತ ಕಳ್ಸೋದು, ಅಥವಾ ಅವರಿಗೆ ಯಾಕೆ ಬೇಜಾರು ಅಂತ ಒಂದು ಫಾರ್ವರ್ಡ್ ಹಾಕಿದ್ರೆ ಅಲ್ಲಿ ಸ್ನೇಹ ಎಲ್ಲಿ ಇರುತ್ತೆ?
ಒಂದು ಸಕಾಲಿಕ ಲೇಖನ!!!

sunaath said...

ಎಲ ಎಲಾ!!
Happy Friendship Day, ಪ್ರಭುರಾಜ!

Anonymous said...

hi...
HaappY FrienDShiP DaY.
FriEndshiP DaY bagGe,ForWard SMS bagge,Nan Anisike enU andrE, Naavu IrO FrienDs joTegeLla close aaGi iraKagalla.AdaKke Friens lli, Close frIends, Just FriEnds anta Divide AagoDu.Aa ulida Just frienDs ge Naavu iNnu Nimmanna Maretilla antA ToriSoke VarshAkke 1 ForWard messAge athava Wish Kalsidre Tappilla alwa?
Blog Chennagide.NiMge sms Free ideyallA,EllA FrienDs gu mEssage Maadri,Close FriEnds jote,JusT friends sahita khushiyagtarE.
Bye...

Regards,
Veenashree.G

Ittigecement said...

ಪ್ರಭು...

ಸಕಾಲಿಕ.. ಸೊಗಸಾದ ಬರಹ....

ನಿನ್ನೆ ನಾನು ನನ್ನಾಕೆಯಸಂಗಡ "ಸ್ನೇಹಿತರ ದಿನ" ಆಚರಿಸಿದೆವು...
ಅವಳು ನನ್ನ ...
ದಿನದ ಇಪ್ಪತ್ತುನಾಲ್ಕು ಗಂಟೆ ನನ್ನ ಯಶಸ್ಸನ್ನು ಬಯಸುವ...
ಸದಾ ಹಸಿರು....
ದಿನ ಕಳೆದರೂ ಹಳತಾಗದ... ಜೀವನದ...
ಗೆಳತಿ....!!

ನಿಮ್ಮ ಬರಹಗಳು ಸೊಗಾಸಾಗಿರುತ್ತದೆ...
ನಿಮ್ಮದೇ ಶೈಲಿ, ಸಣ್ಣ ಚೇಷ್ಟೆ..
ನವಿರಾದ ಹಾಸ್ಯ ಇಷ್ಟವಾಗಿಬಿಡುತ್ತದೆ...
ಹದಿ ಹರೆಯದ ಪ್ರೇಮದ ಹಾಗೆ....

ಅಭಿನಂದನೆಗಳು...

Anonymous said...

ನಮ್ಮ ಕ್ಲೋಸ್ ಫ್ರೆಂಡ್ಸ್ ಅನ್ನು ಫ್ರೆಂಡ್ಸ್‌ಶಿಪ್ ದಿನದಂದು ಮಾತ್ರ ನೆನಪಿಸಿಕೊಂಡು ವಿಶ್ ಮಾಡಿಬಿಡೋದು ಸರಿಯಲ್ಲ ಎಂಬುದು ನನ್ನದೂ ಭಾವನೆ. ನಾನು ಹಾಗೆ ಮಾಡುವುದೂ ಇಲ್ಲ. ಸ್ನೇಹದ ದಿನದ ಬಗೆಗಿನ ನಿಮ್ಮ ಅಭಿಪ್ರಾಯ ನಿಜವಾಗಲೂ ನನಗೆ ಇಷ್ಟವಾಯಿತು... ಸುಂದರ ಲೇಖನ...

ಏಕಾಂತ said...

ನಿರೂಪಣೆ ಹಿಡಿಸಿತು. ಹಾಗೇ ವಿಷಯಗಳು ಕೂಡಾ. ಮತ್ತೆ ಬರೆಯಿರಿ...

Prabhuraj Moogi said...

ಬಾಲು ಅವರಿಗೆ
ಕರಕ್ಟಾಗಿ ಹೇಳಿದ್ದೀರಿ, ವರ್ಷಕ್ಕೊಂದು ಸರಿ ನೆನಪು ಮಾಡಿಕೊಳ್ಳೊದಾದ್ರೆ ಅದು ಸ್ನೇಹ ಹೇಗೆ ಆಗುತ್ತೆ?... ಸುಮ್ನೇ ಕಳಿಸಬೇಕು ಅಂತ ಕಳಿಸಿದರೆ ಓದಿ ಡಿಲೀಟ ಮಾಡ್ತಾರೆ ಅಷ್ಟೆ.

sunaath ಅವರಿಗೆ
:) ನಿಮಗೂ ಕೂಡ

Anonymous ಅವರಿಗೆ
ವೀಣಶ್ರೀ, ಕಳಿಸಲು ಬೇಡ ಅಂತ ನಾನೇನು ಹೇಳುತ್ತಿಲ್ಲ ಕಳಿಸುವುದೇ ಆದರೆ, ವೈಯಕ್ತಿಕವಾಗಿ ಏನಾದ್ರೂ ಬರೆದರೆ ಚೆನ್ನ ಅಲ್ವಾ, ಆ ಫ್ರೆಂಡ ಕೂಡ ನನ್ನನ್ನು ಹತ್ತರಲ್ಲಿ ಹನ್ನೊಂದನೆಯವನಾಗಿ ಮಾಡಲಿಲ್ಲ ಅಂತ ಖುಷಿ ಆಗುತ್ತಾರಲ್ವೇ. ಹಾಗೆ ನಾನು ಮರೆತಿಲ್ಲ ಅಂತ ಹೇಳೊಕೆ ಮೈಲ ಫಾರವರ್ಡ್ ಮಾಡೊದು ನನಗೆ ಸರಿ ಎನಿಸಲಿಕ್ಕಿಲ್ಲ, ಅಂತಹ ಮೇಲ್ ಬಂದ್ರೆ, ಓ ಇನ್ನೂ ಅದೇ ಮೇಲ್ ಐಡಿ ಇದೆ ಎಕ್ಸಪೈರ್ ಆಗಿಲ್ಲ ಅಂತ ಖಾತ್ರಿ ಮಾತ್ರ ಆಗುತ್ತೆ ಅವರಿಗೆ ಅಂತ ನನ್ನನಿಸಿಕೆ, ಎಲ್ಲರಿಗೂ ಇದೇ ಸರಿ ಎನಿಸಬೇಕಿಲ್ಲ.
ನಾನು ಕೆಲ ಫ್ರೆಂಡ್ಸಗೆ ಎಸಎಂಎಸ್ ಮಾಡ್ತೀನಿ, ಯಾವಾಗಲೂ, ಹಾಗೆ ಶುಭಾಶಯ ಕೂಡ ತಿಳಿಸ್ತೀನಿ ವೈಯಕ್ತಿಕವಾಗಿ.
ನನಗೆ ಬರುವ ಪ್ರತೀ ಮೇಲ್ ಗೆ(forwards & bulk ಬಿಟ್ಟು) ಕೂಡ ನಾನು ವೈಯಕ್ತಿಕವಾಗಿ ಸರಿ ಎನಿಸುವ ಪ್ರತ್ಯುತ್ತರ ಬರೆಯುತ್ತೇನೆ, ಹಾಗೆ ಬರೆದಾಗ ಆ ಮತ್ತೊಬರಿಗೆ ಮಹತ್ವ ನೀಡಿದಂತೆ ಆಗುತ್ತದೆ ಅಂತ ನನ್ನ ಭಾವನೆ, ಕೆಲವೊಮ್ಮೆ ಬ್ಲಾಗ ಪ್ರತಿಕ್ರಿಯೆಗಳಿಗೆ ದಿನಕ್ಕೆ ಹೀಗೆ ಮೂವತ್ತು ನಲವತ್ತು ಸಾರಿ ಮೈಲ್ ಬರೆದೆದಿದ್ದೇನೆ, ಎಲ್ಲರಿಗೂ ವೈಯಕ್ತಿಕವಾಗಿ.

ಸಿಮೆಂಟು ಮರಳಿನ ಮಧ್ಯೆ ಅವರಿಗೆ
ನೀವು ನಿಮ್ಮಾಕೆ ಆಚರಿಸಿದ್ದು ಬಹಳ ಒಳ್ಳೇದು ಸರ್, ಜೀವನ ಸಂಗಾತಿಗಿಯೇ ಒಳ್ಳೇ ಗೆಳತಿಯಾದರೆ ಜೀವನದಲ್ಲಿ ಇನ್ನೇನು ಬೇಕು ಹೇಳಿ.
ಸಣ್ಣ ಚೇಷ್ಟೆಗಳೊಂದಿಗೆ ಚಿಕ್ಕ ಪುಟ್ಟ ಸಂದೇಶಗಳು ನಿರಂತರ, ಹದಿ ಹರೆಯದ ಪ್ರೇಮಕ್ಕೆ ಹೋಲಿಸಿದ್ದು ಬಹಳೇ ಚೆನ್ನಾಗಿದೆ...

Anonymous ಅವರಿಗೆ
ಪ್ರತೀ ದಿನದ ಗೆಳೆತನದ ಜತೆಗೆ ಸ್ನೇಹಿತರ ದಿನದಂದು ಪುಟ್ಟ ಶುಭಾಷಯ, ಅದೇ ಒಳ್ಳೇದು ಅಂತ... ನಿಮಗೆ ಇಷ್ಟವಾಗಿದ್ದು ನನಗೂ ಖುಷಿ.

‘ಏಕಾಂತ’ ಅವರಿಗೆ
ಎನೇ ಮನಸಿಗನಿಸಿದ್ದು ಗೀಚೊದು, ಹೀಗೆ ಬರ್ತಾ ಇರಿ, ಇನ್ನೂ ಹೊಸ ಹೊಸ ವಿಷ್ಯಗಳು ಬರಲಿವೆ.

ರಾಜೀವ said...

ಪ್ರಭು,

ನನ್ನದೂ ಅದೇ ಪಾಲಿಸಿ. ಸುಮ್ನೆ ಯಾವ್ಯಾವ್ದೋ ಫಾರ್ವರ್ಡ್ ಮಾಡಲ್ಲ. ಅದರಲ್ಲಿ ನಂಬಿಕೆ ಇಲ್ಲ. ದಿನಾ ಸಿಗುವ ಸ್ನೇಹಿತರ ಜೊತೆ ವರುಷಕ್ಕೆ ಒಂದು ದಿನ ಫ್ರೆಂಡ್ಶಿಪ್ ಡೇ ಆಚರಿಸುವುದು ಯಾಕೆ? ಒಳ್ಳೆ ಬರಹ.

ಆದರೆ ಹೀಗೆ ಮಾಡುವುದು ಹುಚ್ಚು ಎಂದು ಯಾರಿಗೂ ಸಲಹೆ ನೀಡಲು ಧೈರ್ಯ ಬರಲಿಲ್ಲ. ಅವರವರ ಭಾವಕ್ಕೆ ಅವರವರ ಬಕುತಿಗೆ ಎಂದು ಸುಮ್ಮನೇ ಇದ್ದುಬಿಡುತ್ತೇನೆ.

Unknown said...

ಪ್ರಭು ಅವರೆ,
ನವಿರಾದ ನಿರೂಪಣೆ ..ತು೦ಬಾ ಪ್ರಭುದ್ದ ಲೇಖನ .. ಸ್ನೇಹ ಎ೦ದರೆ ಹೇಗಿರಬೇಕು ಎ೦ದು ತು೦ಬಾ ಸೊಗಸಾಗಿ ಹಾಗು ಮನಮುಟ್ಟುವ೦ತೆ ಎ೦ದಿನ ನಿಮ್ಮ ಹಾಸ್ಯ ಶೈಲಿ ಯಲ್ಲಿ ಹೇಳಿದ್ದಿರಿ ..
ಒಂದು ಸಕಾಲಿಕ ಹಾಗು ಚಿ೦ತನ ಯೋಗ್ಯ ಲೇಖನ ...

ಸಾಗರದಾಚೆಯ ಇಂಚರ said...

ಪ್ರಭುರಾಜ,
ನಿಮ್ಮ ಮಾತಿಗೆ ನನ್ನ ಸಂಪೂರ್ಣ ಸಮ್ಮತಿ ಇದೆ, ಅದಿರಲಿ, ಫ್ರೆಂಡ್ ಶಿಪ್ ದಿನದ ಶುಭಾಷಯ ನಿಮಗೆ, ಒಳ್ಳೆಯ ಬರಹ

Rajesh Manjunath - ರಾಜೇಶ್ ಮಂಜುನಾಥ್ said...

ಪ್ರಭು,
ಒಳ್ಳೆಯ ಮತ್ತು ಸಮಯೋಚಿತ ಬರಹ ಅದರಲ್ಲೂ ಸರಸ-ಸಲ್ಲಾಪದ ಲೇಪನದೊಂದಿಗೆ. ತುಂಬಾ ಚೆನ್ನಾಗಿ ಮೂಡಿ ಬಂದಿದೆ.

shivu.k said...

ಪ್ರಭು,

ಲೇಖನ ತುಂಬಾ ಚೆನ್ನಾಗಿದೆ. ಎಲ್ಲಾ ವಿಶೇಷ ದಿನಗಳು ಮಾತ್ರ ನೆನಪಿಸಿಕೊಂಡು ಯಾರೋ ಕಳಿಸಿದ sms ಕಳಿಸುತ್ತಿದ್ದರೇ ಅದರಲ್ಲಿ ವಿಶೇಷವೇನಿರುವುದಿಲ್ಲ. ಮತ್ತು ನಿಜಕ್ಕೂ ಪ್ರೆಂಡ್ ಆಗಿರುವುವರು ಅಂಥ ದಿನಗಳಿಗೆ ಕಾಯುವುದಿಲ್ಲ. ನಿಮ್ಮದೇ ಶೈಲಿಯಲ್ಲಿ ಇದ್ದರೂ ವಿಚಾರ ಅರ್ಥವತ್ತಾಗಿದೆ. ಮತ್ತೆ ಹೆಂಡತಿಯೇ ಮೊದಲ ಪ್ರೆಂಡ್ ಅನ್ನುವುದು ನನ್ನ ವಿಚಾರದಲ್ಲಿ ಖಂಡಿತ ಸತ್ಯ. ನಾವು ಅದನ್ನು ಇಬ್ಬರೂ ನಿತ್ಯ ಆ ಗೆಳೆತನವನ್ನು enjoy ಮಾಡುತ್ತೇವೆ. ಆದ್ರೆ ನಿನ್ನೆ ನಾವು ವಿಶ್ ಮಾಡಿಕೊಳ್ಳಲ್ಲಿಲ್ಲ. ನೀವೆ ಹೇಳಿದಂತೆ ಈ ದಿನ ವಿಶ್ ಮಾಡಿಕೊಳ್ಳುವ ಅವಶ್ಯಕತೆಯಿರಲ್ಲಿಲ್ಲ.

ಧನ್ಯವಾದಗಳು.

Prabhuraj Moogi said...

ರಾಜೀವ ಅವರಿಗೆ
ದಿನ ನಿತ್ಯ ಸ್ನೇಹ ಇರಲಿ ಎನ್ನುವುದೇ ನನ್ನ ಆಶಯ ಕೂಡ...
ಹೀಗೇ ಮಾಡಿ ಅಂತ ನಾನು ಕೂಡ ಹೇಳಲ್ಲ, ಯಾಕೆಂದ್ರೆ ಎಲ್ರಿಗೂ ಇದೇ ಸರಿ ಎನಿಸಬೇಕಿಲ್ಲವಲ್ಲ, ಅದಕ್ಕೆ ನನ್ನನಿಸಿಕೆ ಮಾತ್ರ ಹೇಳಿದೆ, ನಿಮ್ಮನಿಸಿಕೆ ಕೂಡ ಇದೇ ಆಗಿದ್ದು ನನಗೆ ಖುಷಿ, ಆದರೆ ನನಗೆ ಬರುವ ಅಂಥ ಫಾರವರ್ಡ ವಿಶ್ ಗಳಿಗೆ ನಾನು ಮಹತ್ವ ಕೊಡುವುದಿಲ್ಲ.

roopa ಅವರಿಗೆ
ಸ್ನೇಹ ಹಾಗೂ ಅದಕ್ಕೆ ಒಂದು ಸಂದೇಶದ ಲೇಖನ, ಸುಮ್ನೇ ಮೇಲ್ ಮಾಡಿದರೇನು ಬಂತು ಅಂತ ಹೇಳುವ ಪ್ರಯತ್ನವಾಗಿತ್ತು... ನಿಮಗಿಷ್ಟವಾದರೆ ನನಗೂ ಖುಷಿ.

ಸಾಗರದಾಚೆಯ ಇಂಚರ ಅವರಿಗೆ
ತಮಗೂ ಸ್ನೇಹಿತರ ದಿನದ ಶುಭಾಷಯಗಳು, ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು.

Rajesh Manjunath - ರಾಜೇಶ್ ಮಂಜುನಾಥ್ ಅವರಿಗೆ
ಎನೊ ಹೀಗೆ ಸ್ನೇಹಿತರ ದಿನದ ವಿಶ್ ಎಂದು ಬಂದ ಮೇಲ್ ಒಂದು ಚಿಂತನೆಗೆ ಹಚ್ಚಿ ಇದನ್ನೆಲ್ಲ ಬರೆಸಿಬಿಟ್ಟಿತು.
ಹೀಗೇ ಬರುತ್ತಿರಿ.

shivu ಅವರಿಗೆ
ಅದು ಕರೆಕ್ಟ ಸರ್, ಯಾರೊ ಕಳಿಸಿದ ಸಂದೇಶ ಇಲ್ಲ ಮೇಲ್ ಬದಲಿಗೆ ಸ್ನೇಹ ಪೂರ್ವಕವಾಗಿ ನಾಲ್ಕು ಸಾಲು ಬರೆದರೂ ಅದು ಎಷ್ಟು ಒಳ್ಳೇ ಭಾವನೆ ಮೂಡಿಸುತ್ತದೆ ಅಲ್ಲವೇ. ನಿಜ ಸ್ನೇಹಿತರಿಗೆ ಇಂಥ ದಿನಗಳ ಅವಶ್ಯವಿಲ್ಲವೆನ್ನುವುದೂ ನಿಜ...
ಇನು ದಂಪತಿಗಳೇ ಸ್ನೇಹಿತರಾಗಿದ್ದರೆ ಅದಕ್ಕಿಂತ ಬೇರೆ ಏನು ಬೇಕು ಹೇಳಿ, ಅಂಥ ಸ್ನೇಹಿತೆ, ಗೆಳತಿಯನ್ನು ಪತ್ನಿಯಾಗಿ ಪಡೆದ ನೀವು ಧನ್ಯ, ಅದೃಷ್ಟವಂತ...

Umesh Balikai said...

ಹ್ಹ ಹ್ಹ.. ಯಾರೋ ಕಳಿಸಿದ ಮೆಸೇಜ ಇಪ್ಪತ್ತು ಮಂದಿಗೆ ಕಳಿಸಿ, ಫ್ರೆಂಡಶಿಪ ಡೇ ಆಯ್ತು ಅಂತ ಕೈತೊಳೆದುಕೊಂಡ್ರೆ, ಅಂಥ ಗೆಳೆಯರು ಮತ್ತೆ ಮುಂದಿನ ಫ್ರೆಂಡಶಿಪ ಡೇಗೆ ಮಾತ್ರ ನೆನಪಾಗುತ್ತಾರೆ." ಈ ಲೈನ್ ತುಂಬಾ ಇಷ್ಟವಾಯಿತು. ಆದ್ರೆ, ಇಡೀ ವರ್ಷ ಒಂದು ಫೋನ್ ಒತ್ತಟ್ಟಿಗಿರಲಿ, ಒಂದು ಮೆಸೇಜ್ ಸಹ ಕಳಿಸದ ಫ್ರೆಂಡ್ಸ್, ಆ ದಿನ ಒಂದು ಮೆಸೇಜ್ ಆದ್ರೂ ಕಳಿಸ್ತಾರಲ್ಲ ಅಂತ ಖುಷಿ ಆಗುವುದಂತೂ ನಿಜ. ಕಡೆ ಪಕ್ಷ ಅವತ್ತಾದ್ರೂ ನಮ್ಮ ನೆನಪಾಗುತ್ತಲ್ಲ ಅನ್ಸುತ್ತೆ.

ನಿಜ ಹೇಳಬೇಕೆಂದ್ರೆ, ಈ ಫ್ರೆಂಡ್‌ಶಿಪ್ ಡೇ, ಮದರ್ಸ್ ಡೇ, ಫಾಥೆರ್ಸ್ ಡೇ, ಲವರ್ಸ್ ಡೇ ಎಲ್ಲ ವರ್ತಕರ ವ್ಯಾಪಾರ ವೃಧ್ಧಿಯ ಕುತಂತ್ರಗಳು. ಮಾರ್ಕೆಟಿಂಗ್ ಸ್ಟ್ರ್ಯಾಟಜೀಸ್ ಅಂತಾರಲ್ಲ ಅವು.

Prabhuraj Moogi said...

Umesh Balikai ಅವರಿಗೆ
ನಿಜ ಆಲ್ವಾ ಅದು ಹಾಗೇ ಆಗುತ್ತದೆ. ಬರೀ ಫ್ರೆಂಡಶಿಪ್ ಡೇ ಗೆ ನೆನಪಾಗುವ ಫ್ರೆಂಡಗಳಾಗಿಬಿಡ್ತಾರೆ. ಆ ದಿನ ಆದರೂ ಮೆಸೇಜು ಕಳಿಸ್ತಾರೆ ಅಂತ ಖುಷಿಯಾಗಬಹುದು ಆದರೆ ಅದು ಇಪ್ಪತ್ತು ಜನರ ನಡುವೆ CC ಮಾಡಿದ ಮೇಲ ಎಲ್ಲ ಆಗಿರದಿದ್ದರೆ.

ವರ್ತಕರ ವ್ಯಾಪಾರ ವೃಧ್ಧಿಯ ಕುತಂತ್ರ ಅನ್ನೋದಂತೂ ನಿಜ ಈಗೀಗ ದಿನಗಳನ್ನು ವೀಕ್ ಮಾಡಿ ಇನ್ನೂ ಜಾಸ್ತಿ ಆಚರಿಸುವಂತೆ ಮಾಡುವ ಪ್ರಚೋದನೆ ಕೂಡ ಅವರೇ ಮಾಡುತ್ತಿರುವದು.

ವಿನುತ said...

ಸಕಾಲಿಕ ಸರಸಮಯ ಬರಹ. ನನಗ೦ತೂ ಇ೦ತ ದಿನಗಳ ದಿನ ಏನು ಹೇಳಬೇಕ೦ತಲೇ ತೋಚುವುದಿಲ್ಲ. ಸ್ನೇಹಿತರೂ ಯಾವಾಗಲೂ ಇರ್ತಾರಲ್ಲ ಹಾಗಾಗಿ. ಅಬ್ಬಬ್ಬಾ ಅ೦ದ್ರೆ happy friendship day ಅ೦ದೇನು :)

Prabhuraj Moogi said...

ವಿನುತ ಅವರಿಗೆ
ಅದೂ ಸರಿಯೇ ಎನು ಹೇಳಬೇಕೆಂದು ತೋಚುವುದಿಲ್ಲ... ಅಲ್ಲದೇ ದಿನ ನಿತ್ಯ ಮಾತಾಡುತ್ತ ಹರಟುವ ಸ್ನೇಹಿತರಿಗೆ ಏನಾದ್ರೂ ವಿಷ್ ಮಾಡಿದರೆ ನಕ್ಕು ಬಿಡುತ್ತಾರೆ ಅಷ್ಟೇ, ಏನಪ್ಪ ಫ್ರೆಂಡ್ಶಿಪ್ ಡೇ ಎಲ್ಲ ವಿಷ್ ಮಾಡ್ತಾ ಇದೀಯಾ ಅಂತ... ಗೆಳೆಯರಿಗೆ ಶುಭಾಷಯಗಳೆಲ್ಲ ಬೇಕಾಗಿಲ್ಲ ಬಿಡಿ... ಯಾರಾದ್ರೂ ವಿಷ್ ಮಾಡಿದ್ರೆ ನಾನೂ ಅಷ್ಟೇ ವಿಷ್ ಮಾಡೋದು

Complicated.. said...

ಪ್ರಭು,
ನಿಮ್ಮ ಬರವಣಿಗೆ ಶೈಲಿ ಭಾಳ್ ಚೊಲೋ ಅದ,
ಒಂದು ಸಂದೇಶ , ಸನ್ನಿವೇಶ ಇಟ್ಟುಕೊಂಡು ಹೇಳೋದೇ ಭಲ ಮನಸ್ಸಿಗೆ ಹತ್ತತದ.
ಹಿಂಗೆ ಬರಿತಿರ್ರಿ, ನಾನು ಕನ್ನಡ ಬ್ಲಾಗ್ ಬರೀಬೇಕು ಅಂತ ೬ ತಿಂಗಳಿಂದ ಅನ್ನ್ಕೊಲಿಕತ್ತಿನಿ ಇನ್ನು ಆಗಿಲ್ಲ, ಬರದ್ಮ್ಯಲೇ ನಿಮಗೆ ಫಸ್ಟ್ ಕಳಿಸ್ತೀನಿ.
ಅದಸ್ತು ಜಲ್ದಿ ಮದುವಿನು ಆಗ್ರಿ

ಪವನ

Complicated.. said...

I have written few few blogs in English, But my interest is to write in Kannada, if U have time please go through....give some some inputs

http://mebidkar.blogspot.com/

Prabhuraj Moogi said...

Complicated.. ಅವರಿಗೆ
ಏನೋ ಸ್ವಲ್ಪ್ ಮನಸಿಗೆ ಬಂದದ್ದ ಬರೀತೀನ್ರಿ, ಒಂದ್ ನಾಕ ಜನಾ ಬಂದ್ ಓದ್ತಾರ ಅಷ್ಟ.
ಮೊದಲ ಹಂಗ ಏನೋ ಜೋಕ್ ಬರದಂಗ್ ಬರೀತಿದ್ನಿ ಆದರ ಸಂದೇಶ್ ಒಂದ ಇರಲಿ ಅಂತ ಯಾರೋ ಅಂದ್ರು ಚಲೋ ಅನಿಸ್ತು, ಅದಕ್ಕ ಅದನ್ನ ಬರವಣಿಗೆ ಶೈಲೀ ಅಂತ ಮಾಡೀನಿ.
ಶುರು ಮಾಡ್ರಿ, ಬರಿಯಾಕ ತಾನ ಬರ್ತದ. ಮದುವಿ ಆಗೂಣಂತ ಏನ್ ಅರ್ಜಂಟ್ ಐತ್ರಿ.
ಚಂದ ಇತ್ತ ನಿಮ್ಮ ಕಮೆಂಟ.

Complicated.. ಅವರಿಗೆ
Sure I will go through your blog in weekend and post comment. .

Anonymous said...

nanu thumba like madodu friendship

nanu like madodu nanna friendsna nanu ene helidru nanna friends jothe first elodu. nange ne bejaragli, ene kushi agli, entha problem edru first helodu friends jothe.....

I Love my friends

Sandeep, Naveen, Nagraj, Chaithra

A.M said...

I Love You Friends

Your's Friend

A.M

Prabhuraj Moogi said...

@Anonymous
ಹ್ಮ್ ಮತ್ತೆ ಫ್ರೆಂಡ್ಸ ಅಂತ ಅದಕ್ಕೆ ಅನ್ನೋದಲ್ವೇ... ಅಂಥ ಒಂದು ಒಳ್ಳೆ ಫ್ರೆಂಡ್ ನನ್ನಾk ನನಗೆ...

@A.M
ಅರ್ಥ ಆಗಿಲ್ಲ ನಿಮ್ಮ ಕಮೆಂಟ್..